For Quick Alerts
ALLOW NOTIFICATIONS  
For Daily Alerts

ನೀರು ಕುಡಿಯುವ ಮುನ್ನ ಈ ಎಂಟು ಸಂಗತಿಗಳನ್ನು ನೆನಪಿಡಿ

By Hemanth
|

ನಾಲಗೆಗೆ ರುಚಿಯಾಗಿರುವುದೆಲ್ಲವೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ನಮ್ಮ ನಾಲಗೆಗೆ ಯಾವುದೂ ರುಚಿಯಾಗಿಲ್ಲವೋ ಅದೇ ನಮ್ಮ ಆರೋಗ್ಯ ಕಾಪಾಡುವುದು. ಇದರಲ್ಲಿ ಪ್ರಮುಖವಾಗಿ ನೀರು. ನಾವು ಕುಡಿಯುವ ನೀರಿಗೆ ಯಾವುದೇ ರುಚಿಯಿಲ್ಲದೆ ಇದ್ದರೂ ಇದು ನಮ್ಮ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು ಮಾತ್ರವಲ್ಲದೆ ವಿವಿಧ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುವುದು. ದೇಹದಲ್ಲಿ ಶೇ.75ರಷ್ಟು ನೀರಿನಾಂಶವಿದೆ ಎಂದು ವೈದ್ಯಕೀಯ ವಿಜ್ಞಾನವು ಹೇಳುತ್ತದೆ. ಇದರಿಂದ ನೀರು ನಮ್ಮ ಜೀವಕ್ಕೆ ಅತೀ ಅಗತ್ಯ.

ನೀರು ನಮ್ಮ ದೇಹದ ಶೇ.60-70ರಷ್ಟು ತೂಕ ಒಳಗೊಂಡಿರುವುದು. ನೀರಿಲ್ಲದೆ ಬದುಕುವುದು ಅಸಾಧ್ಯ. ಚಯಾಪಚಯ ಕ್ರಿಯೆ, ಪೋಷಕಾಂಶಗಳು ಸರಬರಾಜು, ಕಲ್ಮಶ ತೆಗೆಯುವುದು, ಕಿಣ್ವಗಳ ಕಾರ್ಯಚಟುವಟಿಕೆ, ದೇಹದ ಉಷ್ಣಾಂಶ ಕಾಪಾಡುವುದು, ಉಸಿರಾಟ ಇತ್ಯಾದಿಗಳಿಗೆ ನೀರು ಪ್ರಮುಖವಾಗಿ ಬೇಕೇಬೇಕು. ಬೆವರು, ಉಸಿರಾಟ, ಕಲ್ಮಶ ಹೊರಹಾಕುವುದಕ್ಕೆ ನೀರು ಬೇಕಾಗುವುದು. ಇದರಿಂದ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ಈ ಲೇಖನದಲ್ಲಿ ನೀಡಲಾಗಿರುವ ನೀರಿನಿಂದ ದೇಹಕ್ಕೆ ಆಗುವಂತಹ ಲಾಭಗಳ ಬಗ್ಗೆ ನೀವು ತಿಳಿದುಕೊಂಡರೆ ತಕ್ಷಣ ನೀವು ನೀರು ಕುಡಿಯಲು ಮುನ್ನುಗ್ಗಬಹುದು. ನೀವು ನೀರು ಕುಡಿಯಲು ಆರಂಭಿಸುವ ಮೊದಲು ಕೆಲವು ಅಂಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಬೇಕು.

1. ಸಕ್ಕರೆಯುಕ್ತ ತಂಪುಪಾನೀಯಗಳನ್ನು ಬಿಟ್ಟು ನಿಧಾನವಾಗಿ ನೀರು ಸೇವಿಸಿ.
2. ನೀರಿನಾಂಶ ಹೆಚ್ಚಾಗಿರುವ ಆಹಾರ ಸೇವನೆ ಮಾಡಿ.
3. ದಿನಪೂರ್ತಿ ನೀರು ಕುಡಿಯಲು ಸರಿಯಾದ ಸಮಯ ನಿಗದಿ ಮಾಡಿ.
4. 2-3 ಲೀಟರ್ ನೀರು ಪ್ರತಿನಿತ್ಯ ಕುಡಿಯಿರಿ.
5. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಸಿ ಕುಡಿಯಬೇಡಿ.
6. ನೀರಿಗೆ ಬೇರೇನಾದರೂ ಬೆರೆಸಿಕೊಳ್ಳುವುದು ಒಳ್ಳೆಯದಲ್ಲ.
7. ತಾಜಾ ಹಣ್ಣುಗಳು ಮತ್ತು ತರಕಾರಿಗಳ ನೀರಿಗೆ ಹಾಕಿ ಸೇವನೆ ಮಾಡಬಹುದು.
8. ಅತಿಯಾಗಿ ನೀರು ಕುಡಿದರೆ ಅದರಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಹೊರಹೋಗುವುದು.

1. ಸಕ್ಕರೆಯುಕ್ತ ತಂಪುಪಾನೀಯಗಳನ್ನು ಬಿಟ್ಟು ನಿಧಾನವಾಗಿ ನೀರು ಸೇವಿಸಿ

1. ಸಕ್ಕರೆಯುಕ್ತ ತಂಪುಪಾನೀಯಗಳನ್ನು ಬಿಟ್ಟು ನಿಧಾನವಾಗಿ ನೀರು ಸೇವಿಸಿ

ನೀವು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಬಯಸುವಿರಾದರೆ ಸಂಪೂರ್ಣವಾಗಿ ಸಕ್ಕರೆ ಸೇವನೆ ಕಡೆಗಣಿಸಿ. ಸಕ್ಕರೆ ಕಡೆಗಣಿಸಲು ನಿಮಗೆ ಒಮ್ಮೆಲೇ ಸಾಧ್ಯವಾಗದು, ಇದರ ಬದಲಿಗೆ ನೀವು ನಿಧಾನವಾಗಿ ಇದನ್ನು ಅಳವಡಿಸಿಕೊಳ್ಳಿ. ನಿಧಾನವಾಗಿ ನೀವು ತಂಪು ಪಾನೀಯದಿಂದ ನೀರಿನತ್ತ ಸಾಗಿ. ನಿಧಾನವಾಗಿ ಬದಲಾವಣೆ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದು. ನೀರಿಗೆ ಹಣ್ಣುಗಳನ್ನು ಹಾಕಿ ಕುಡಿಯಿರಿ.

2. ನೀರಿನಾಂಶ ಹೆಚ್ಚಿರುವ ಹಣ್ಣು ಮತ್ತು ತರಕಾರಿಗಳ ಸೇವಿಸಿ

2. ನೀರಿನಾಂಶ ಹೆಚ್ಚಿರುವ ಹಣ್ಣು ಮತ್ತು ತರಕಾರಿಗಳ ಸೇವಿಸಿ

ಒಂದು ಲೋಟ ನೀರಿನಿಂದ ನೀವು ನೀರು ಸೇವನೆಯನ್ನು ಆರಂಭಿಸಬಹುದು. ಇದರೊಂದಿಗೆ ನೀವು ನೀರಿನಾಂಶ ಹೆಚ್ಚಾಗಿರುವಂತಹ ಕಲ್ಲಂಗಡಿಯಂತಹ ಹಣ್ಣುಗಳನ್ನು ಸೇವಿಸಬಹುದು. ಇದು ನಿಮ್ಮ ನೀರಿನ ಲೆಕ್ಕಕ್ಕೆ ಸೇರ್ಪಡೆಯಾಗುವುದು. ಗಿಡಮೂಲಿಕೆ ಚಹಾ ಕೂಡ ಕುಡಿಯಬಹುದು.

3. ದಿನದಲ್ಲಿ ನೀರು ಕುಡಿಯಲು ಸಮಯ ನಿಗದಿ ಮಾಡಿ

ಬಾಯಾರಿಕೆಯಾದಾಗ ನೀರು ಕುಡಿಯುವುದ ಸಹಜ. ಆದರೆ ಕೆಲವು ಸಲ ನೀವು ಸ್ವಲ್ಪ ಸ್ವಲ್ಪ ನೀರು ಸೇವನೆ ಮಾಡಿದರೆ ಅದು ದೇಹಕ್ಕೆ ತುಂಬಾ ಒಳ್ಳೆಯದು. ಎದ್ದ ತಕ್ಷಣ, ಸ್ನಾನಕ್ಕೆ ಮೊದಲು, ಊಟಕ್ಕೆ ಮೊದಲು ಮತ್ತು ಮಲಗುವ ಮೊದಲು ನೀವು ನೀರು ಸೇವಿಸಿ. ಇದರಿಂದ ನಿಮ್ಮ ರಕ್ತದೊತ್ತಡ ಸರಿಯಾಗಿರುವುದು ಮತ್ತು ತೂಕ ಕಳೆದುಕೊಳ್ಳುವವರಿಗೆ ಇದು ಸಹಕಾರಿಯಾಗಲಿದೆ.

4. ಪ್ರತಿನಿತ್ಯ 2-3 ಲೀಟರ್ ನೀರು ಸೇವಿಸಿ

4. ಪ್ರತಿನಿತ್ಯ 2-3 ಲೀಟರ್ ನೀರು ಸೇವಿಸಿ

ನೀವು ಹೆಚ್ಚು ನೀರು ಕುಡಿಯಬೇಕೆಂದು ಬಯಸಿದ್ದರೆ ಇದನ್ನು ನಿಧಾನವಾಗಿ ಆರಂಭಿಸಿ. ನೀವು ಒಮ್ಮೆಲೇ ಅತಿಯಾಗಿ ನೀರು ಕುಡಿದರೆ ಆಗ ಅನಗತ್ಯ ಬಯಕೆ ಉಂಟಾಗುವುದು ಮತ್ತು ನೀವು ನೀರು ಕುಡಿಯದೇ ಇರಬಹುದು. ನೀವು ನಿಧಾನವಾಗಿ ನೀರು ಕುಡಿಯುವುದನ್ನು ಹೆಚ್ಚಿಸಿ.

5. ಪ್ಲಾಸ್ಟಿಕ್ ಬಾಟಲಿ ಬಳಸಬೇಡಿ

ಪ್ಲಾಸ್ಟಿಕ್ ಬಳಕೆ ಮಾಡದೆ ಇರುವುದು ವಾತಾವರಣಕ್ಕೆ ಮಾತ್ರ ಒಳ್ಳೆಯದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಕೂಡ. ಪ್ಲಾಸ್ಟಿಕ್ ಬಾಟಲಿಗಳ ಉತ್ಪಾದನೆ ಮಾಡುವ ವೇಳೆ ಅವುಗಳಿಗೆ ಆಕಾರ, ಬಣ್ಣ ಮತ್ತು ಇತರ ಕೆಲವೊಂದು ವಿಚಾರಗಳಿಗಾಗಿ ರಾಸಾಯನಿಕ ಸೇರ್ಪಡೆ ಮಾಡಿರುವರು. ಈ ರಾಸಾಯನಿಕವು ನಿಮ್ಮ ಕಿಡ್ನಿಗೆ ದೀರ್ಘಕಾಲದ ಪರಿಣಾಮ ಬೀರುವುದು. ಬಿಪಿಎ ಮುಕ್ತ ಬಾಟಲಿಗಳು ಕೂಡ ಇದೇ ರೀತಿಯಾಗಿದೆ. ನೀವು ಸ್ಟೀಲ್ ಬಾಟಲಿ ಬಳಸಿದರೆ ತುಂಬಾ ಒಳ್ಳೆಯದು.

6. ನೀರಿಗೆ ಯಾವುದೇ ರೀತಿಯ ಬೆರೆಸುವಿಕೆ ಒಳ್ಳೆಯದಲ್ಲ

6. ನೀರಿಗೆ ಯಾವುದೇ ರೀತಿಯ ಬೆರೆಸುವಿಕೆ ಒಳ್ಳೆಯದಲ್ಲ

ಹೆಚ್ಚು ನೀರು ಕುಡಿಯಬೇಕೆಂದು ನೀವು ಬಯಸಿರುವಿರಾದರೆ ಆಗ ನೀವು ಹೋಗಿ ಮಾರುಕಟ್ಟೆಯಿಂದ ಯಾವುದಾದರೂ ರುಚಿಕರ ಹಣ್ಣಿನ ಜ್ಯೂಸ್ ತಂದು ನೀರಿಗೆ ಮಿಶ್ರಣ ಮಾಡಿಕೊಂಡು ಕುಡಿಯುವಿರಿ. ಆರಂಭಿಕರಿಗೆ ಇದು ಒಳ್ಳೆಯದೆಂದು ನಿಮಗನಿಸಬಹುದು. ಆದರೆ ಸಕ್ಕರೆ ಬೆರೆಸುವುದರಿಂದ ನೀರಿಗೆ ಒಳ್ಳೆಯದಲ್ಲ. ಸದಾ ನೀರನ್ನು ಕುಡಿದರೆ ತುಂಬಾ ಒಳ್ಳೆಯದು.

7. ತಾಜಾ ಹಣ್ಣುಗಳು ಹಾಗೂ ತರಕಾರಿ ಒಳ್ಳೆಯದು

7. ತಾಜಾ ಹಣ್ಣುಗಳು ಹಾಗೂ ತರಕಾರಿ ಒಳ್ಳೆಯದು

ನೀರಿಗೆ ಏನಾದರೂ ರುಚಿಕರವಾಗಿರುವುದನ್ನು ಸೇರಿಸಬೇಕೆಂದು ಬಯಸಿದರೆ ಆಗ ನೀವು ತಾಜಾ ಹಣ್ಣುಗಳು ಅಥವಾ ತರಕಾರಿಗಳನ್ನು ಸೇರಿಸಬಹುದು. ತಾಜಾ ಹಣ್ಣುಗಳು ಮತ್ತು ತರಕಾರಿಯ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ದೊಡ್ಡ ಬಾಟಲಿಗೆ ಹಾಕಿ ಬಳಿಕ ನೀರು ತುಂಬಿಸಿ. ಕೆಲವು ಗಂಟೆ ಹೀಗೆ ಬಿಡಿ. ಬಳಿಕ ನೀರು ಸೇವಿಸಿ.

8. ಅತಿಯಾಗಿ ನೀರು ಸೇವಿಸಿದರೆ ಪೋಷಕಾಂಶಗಳು ಹೊರಹೋಗುವುದು

8. ಅತಿಯಾಗಿ ನೀರು ಸೇವಿಸಿದರೆ ಪೋಷಕಾಂಶಗಳು ಹೊರಹೋಗುವುದು

ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು 2 ಲೀಟರ್ ನೀರಿದ್ದರೆ ಸಾಕು. ಆದರೆ ಅತಿಯಾಗಿ ಅಂದರೆ 4-5 ಲೀಟರ್ ನೀರು ಸೇವಿಸಿದರೆ ಅದರಿಮದ ದೇಹದಲ್ಲಿರುವ ಪ್ರಮುಖ ಪೋಷಕಾಂಶಗಳು ಮತ್ತು ವಿಟಮಿನ್‌ಗಳು ಹೊರಹೋಗುವುದು. ನೀರಿ ಹೀರಿಕೊಳ್ಳುವಂತಹ ವಿಟಮಿನ್ ಗಳಾದ ಬಿ1, ಬಿ2, ಬಿ3, ಬಿ6 ಮತ್ತು ಬಿ12 ಮತ್ತು ವಿಟಮಿನ್ ಸಿ ಅತಿಯಾಗಿ ನೀರು ಸೇವನೆ ಮಾಡಿದರೆ ದೇಹದಿಂದ ಹೊರಹೋಗುವುದು. ನೀರು ಸೇವನೆ ಮಾಡುವಾಗ ಈ ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವು ದೈಹಿಕವಾಗಿ ಎಷ್ಟು ಚಟುವಟಿಕೆ ನಡೆಸುತ್ತೀರಿ ಮತ್ತು ಹೊರಗಿನ ವಾತಾವರಣ ಕೂಡ ನೀರು ಸೇವನೆಯನ್ನು ಅವಲಂಬಿಸಿರುವುದು. ದೇಹವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.ಹೆಚ್ಚಿನವರು ಬಾಯಾರಿಕೆಯಾದಾಗ ಮಾತ್ರ ನೀರು ಸೇವಿಸುವ ತಪ್ಪು ಮಾಡುತ್ತಾರೆ. ಆದರೆ ದಿನವಿಡಿ ಸ್ವಲ್ಪ ಸ್ವಲ್ಪ ನೀರು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

Read more about: health
English summary

these 8 important Things To Know About Drinking More Water

Here are a few things to keep in mind before you start on your mindful-water-drinking journey: switch to a healthy lifestyle by cutting down on sugary beverages, eat foods rich in water, have 2-3 litres of water every day, and don't drink excess water as it can flush out nutrients from your body.Things To Know About Drinking More Water
X
Desktop Bottom Promotion