ಅಡುಗೆಮನೆಯ 'ಅಡುಗೆ ಸೋಡಾ' ದ ಆರೋಗ್ಯಕಾರಿ ಪ್ರಯೋಜನಗಳು

Subscribe to Boldsky

ಆಹಾರದಲ್ಲಿ ಬಳಸಲಾಗುವಂತಹ ಅಡುಗೆ ಸೋಡಾದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಅಡುಗೆ ಸೋಡಾವು ಹೊಟ್ಟೆಯ ಅಸಿಡಿಟಿ ತಟಸ್ಥಗೊಳಿಸಿ, ಕ್ಯಾನ್ಸರ್ ತಡೆಗಟ್ಟಿ, ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ ಕಿಡ್ನಿಯಲ್ಲಿ ಕಲ್ಲುಗಳು ನಿರ್ಮಾಣವಾಗದಂತೆ ತಡೆಯುವುದು. ಇದರ ಇತರ ಲಾಭಗಳೆಂದರೆ ಡಿಯೋಡ್ರೆಂಟ್, ಚರ್ಮದ ಕಾಂತಿ, ಚರ್ಮದ ಹಲವಾರು ಸಮಸ್ಯೆ, ಉರಿಯೂತ ಶಮನ, ಬಾಯಿಯ ಹುಣ್ಣನ್ನು ಬೇಗನೆ ಒಣಗಿಸುವುದು, ಕೀಟಗಳು ಕಡಿದಾಗ ಚಿಕಿತ್ಸೆ, ಮಕ್ಕಳಲ್ಲಿ ಡೈಪರ್ ಹಾಕಿದಾಗ ಉಂಟಾಗುವ ಕೆಂಪು ಕಲೆಗಳನ್ನು ಇದು ಮಾಯವಾಗಿಸುವುದು.

ಕೆಲವರು ಅಡುಗೆ ಸೋಡಾವನ್ನು ಖಾದ್ಯಗಳಿಗೆ ಅಪರೂಪಕ್ಕೆ ಒಮ್ಮೆ ಬಳಸುವರು. ಆದರೆ ಇದರ ಲಾಭಗಳು ಮಾತ್ರ ಅನೇಕ. ಅಡುಗೆ ಸೋಡಾವನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಅಡುಗೆ ಸೋಡಾವನ್ನು ಸೋಡಿಯಂ ಬೈಕಾರ್ಬ್ರೋನೇಟ್ ಎಂದು ಕರೆಯಲಾಗುತ್ತದೆ. ಕ್ಷಾರೀಯ ಗುಣ ಹೊಂದಿರುವಂತಹ ಅಡುಗೆ ಸೋಡಾವು ದೇಹದಲ್ಲಿ ನೈಸರ್ಗಿಕ ಸಮತೋಲನ ಕಾಪಾಡಲು ನೆರವಾಗುವುದು. ಸೋಡಿಯಂ ಬೈಕಾರ್ಬ್ರೋನೇಟ್ ತುಂಬಾ ಸುರಕ್ಷಿತ ಮತ್ತು ಇದರಲ್ಲಿ ಆರೋಗ್ಯ ಲಾಭಗಳು ಇವೆ. ಅಡುಗೆ ಸೋಡಾದಿಂದ ನಿಮಗೆ ಯಾವ ರೀತಿಯ ಲಾಭಗಳು ಆಗಲಿದೆ ಎಂದು ತಿಳಿಯಲು ನೀವು ಮುಂದೆ ಓದುತ್ತಾ ಸಾಗಿ.....

ಅಡುಗೆ ಸೋಡಾವು ಅಸಿಡಿಟಿ ವಿರೋಧಿ

ಅಡುಗೆ ಸೋಡಾವು ಅಸಿಡಿಟಿ ವಿರೋಧಿ

ಕ್ಷಾರೀಯ ಗುಣ ಹೊಂದಿರುವಂತಹ ಅಡುಗೆ ಸೋಡಾವು ಹೊಟ್ಟೆಯಲ್ಲಿ ಆಮ್ಲವನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುವುದು. ಎದೆಯುರಿ, ಆಮ್ಲದಿಂದ ಅಜೀರ್ಣ ಮತ್ತು ಆಮ್ಲ ಸ್ರವಿಸುವಿಕೆಯ ಇತರ ಸಮಸ್ಯೆಗಳನ್ನು ಇದು ಪರಿಣಾಮಕಾರಿಯಾಗಿ ನಿವಾರಿಸುವುದು. ಅಡುಗೆ ಸೋಡಾವು ಜಠರದ ಅಲ್ಸರ್ ನಿಂದ ಪರಿಹಾರ ನೀಡುವುದು.

Most Read: ಖರ್ಜೂರ ತಿಂದರೂ ಸಾಕು, ದೇಹದ ತೂಕ ಇಳಿಸಿಕೊಳ್ಳಬಹುದು!

ಕ್ಯಾನ್ಸರ್ ತಡೆಗಟ್ಟಲು ನೆರವಾಗುವುದು

ಕ್ಯಾನ್ಸರ್ ತಡೆಗಟ್ಟಲು ನೆರವಾಗುವುದು

ಆಮ್ಲೀಯವಾಗಿರುವಂತಹ ಪರಿಸ್ಥಿತಿಯಿಂದ ಕ್ಯಾನ್ಸರ್ ಬರುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕ್ಯಾನ್ಸರ್ ಬಂದವರನ್ನು ಗಮನಿಸಿದಾಗ ಈ ವಿಚಾರವು ಗಮನಕ್ಕೆ ಬಂದಿದೆ. ಪ್ರಾಣಿಗಳ ಮೇಲೆ ನಡೆಸಿರುವ ಸಂಶೋಧನೆಯ ಪ್ರಕಾರ ಅಡುಗೆ ಸೋಡಾವು ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುವುದು. ಇದು ಕ್ಯಾನ್ಸರ್ ಕೋಶಗಳು ತನ್ನಷ್ಟಕ್ಕೆ ಸಾಯುವಂತೆ ಮಾಡುವುದು. ಇದೊಂದು ಒಳ್ಳೆಯ ಸುದ್ದಿ. ಆದರೆ ಮನುಷ್ಯರ ಮೇಲೆ ಇದರ ಪ್ರಯೋಗ ಇನ್ನಷ್ಟೇ ಆಗಬೇಕಾಗಿದೆ. ಇದನ್ನು ಪರಿಗಣಿಸಿದಾಗ ಅಡುಗೆ ಸೋಡಾದಿಂದ ಯಾವುದೇ ತೊಂದರೆಯಿಲ್ಲ. ಇನ್ನು ಸೇವಿಸಲು ಅಡ್ಡಿಯಾಕೆ?

ಹಲ್ಲುಗಳನ್ನು ಬಿಳಿಯಾಗಿಸುವುದು

ಹಲ್ಲುಗಳನ್ನು ಬಿಳಿಯಾಗಿಸುವುದು

ಅಡುಗೆ ಸೋಡಾವನ್ನು ಹಿಂದಿನಿಂದಲೂ ಹಲ್ಲುಜ್ಜಲು ಬಳಸಲಾಗುತ್ತಿದೆ. ಇದನ್ನು ಹಲ್ಲಿನ ಮೇಲ್ಪದರದಲ್ಲಿ ಇರುವ ಕಲೆಗಳನ್ನು ತೆಗೆದುಹಾಕಿ ಬಿಳಿ ಹಲ್ಲುಗಳನ್ನು ನೀಡುವುದು. ಅಡುಗೆ ಸೋಡಾವನ್ನು ನೇರವಾಗಿ ಹಲ್ಲುಗಳಿಗೆ ಬ್ರಷ್ ಮಾಡಬಾರದು. ಇದರ ಒರಟುತನವು ಹಲ್ಲಿನ ಕವಚಕ್ಕೆ ಹಾನಿ ಮಾಡಬಹುದು. ಬೆರಳುಗಳನ್ನು ಬಳಸಿಕೊಂಡು ನೀವು ವಾರಕ್ಕೆ ಒಂದು ಸಲ ಅಡುಗೆ ಸೋಡಾ ಹಚ್ಚಿಕೊಂಡರೆ ಸಾಕು. ಕೆಲವು ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು

ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗದಂತೆ ತಡೆಯುವುದು

ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುವುದರಿಂದ ತುಂಬಾ ನೋವು ಉಂಟು ಮಾಡುವುದು. ಇದನ್ನು ತೆಗೆಯಲು ಕೆಲವೊಂದು ಸಲ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಅದಾಗ್ಯೂ, ಎಲ್ಲಾ ಕಲ್ಲುಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಆದರೆ ಇದರ ಗಾತ್ರವನ್ನು ನೋಡಿಕೊಂಡು ಅಡುಗೆಸೋಡಾವನ್ನು ಬಳಸಿ ಇದನ್ನು ತೆಗೆಯಬಹುದು. ಕಿಡ್ನಿಯ ಕಲ್ಲುಗಳಿಂದ ಮೂತ್ರನಾಳಗಳಲ್ಲಿ ಉಂಟಾಗುವ ಸೋಂಕನ್ನು ಅಡುಗೆ ಸೋಡಾವು ನಿವಾರಣೆ ಮಾಡುವುದು.

ಕೀಟಗಳು ಕಡಿದಾಗ

ಕೀಟಗಳು ಕಡಿದಾಗ

ಜೇನುನೊಣ ಹಾಗೂ ಸೊಳ್ಳೆಗಳು ಕಚ್ಚಿದಾಗ ಕೆಲವರಿಗೆ ಅದು ಅಲರ್ಜಿ ಉಂಟು ಮಾಡುವುದು. ಇದರಿಂದ ಕಡಿತವಾಗಿರುವ ಜಾಗಕ್ಕೆ ಅಡುಗೆ ಸೋಡಾವನ್ನು ಪೇಸ್ಟ್ ಮಾಡಿಕೊಂಡು ಹಚ್ಚಿಕೊಂಡರೆ ಅದು ತುಂಬಾ ಪರಿಣಾಮಕಾರಿಯಾಗಿರಲಿದೆ. ಇದು ಚರ್ಮ ಕೆಂಪಾಗಿರುವುದು ಮತ್ತು ತುರಿಕೆ ಕಡಿಮೆ ಮಾಡುವುದು. ಕಡಿತವಾಗಿರುವ ಜಾಗಕ್ಕೆ ರಾತ್ರಿ ವೇಳೆ ಇದನ್ನು ಹಚ್ಚಿಕೊಳ್ಳಿ.

Most Read: ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸಿ- ಆರೋಗ್ಯಕ್ಕೆ ಬಹಳ ಒಳ್ಳೆಯದು

ಹಲ್ಲುನೋವು ಅಥವಾ ಒಸಡುಗಳಲ್ಲಿ ಸೋಂಕು ಉಂಟಾಗಿದ್ದರೆ

ಹಲ್ಲುನೋವು ಅಥವಾ ಒಸಡುಗಳಲ್ಲಿ ಸೋಂಕು ಉಂಟಾಗಿದ್ದರೆ

ಹಲ್ಲುನೋವು ಅಥವಾ ಒಸಡುಗಳಲ್ಲಿ ಸೋಂಕು ಉಂಟಾಗಿದ್ದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕಚಮಚ ಅಡುಗೆ ಸೋಡಾ ಬೆರೆಸಿ ಬಾಯಿಯನ್ನು ದಿನದದಲ್ಲಿ ಒಂದು ಅಥವಾ ಎರಡು ಬಾರಿ ಚೆನ್ನಾಗಿ ಮುಕ್ಕಳಿಸಿ. ಇದರಿಂದ ಸೋಂಕು ಕಡಿಮೆಯಾಗುವುದು ಮಾತ್ರವಲ್ಲ, ಬಾಯಿಯ ದುರ್ವಾಸನೆಯೂ ಇಲ್ಲವಾಗುತ್ತದೆ

ಅಲ್ಲದೆ ರಾತ್ರಿ ಊಟದ ಬಳಿಕ ಒಂದು ಲೋಟ ನೀರಿನಲ್ಲಿ ಚಿಟಿಕೆ ಅಡುಗೆ ಸೋಡಾ ಬೆರೆಸಿ ಕುಡಿಯುವ ಮೂಲಕ ಅಜೀರ್ಣ ಮತ್ತು ಇತರ ಕರುಳು ಸಂಬಂಧಿತ ತೊಂದರೆಗಳಿಗೆ ಒಳಗಾಗದಂತೆ ನೋಡಿಕೊಳ್ಳಬಹುದು.

ಅಡುಗೆ ಸೋಡಾ ಬೆರೆಸಿದ ನೀರು

ಅಡುಗೆ ಸೋಡಾ ಬೆರೆಸಿದ ನೀರು

ಅಡುಗೆ ಸೋಡಾ ಬೆರೆಸಿದ ನೀರನ್ನು ಆಗಾಗ ಕುಡಿಯುತ್ತಿರುವ ಮೂಲಕ ದೇಹದಲ್ಲಿ ಉರಿಯೂತವಾಗುವುದನ್ನು ತಡೆಯಬಹುದು. ವಿಶೇಷವಾಗಿ ಕ್ರೀಡಾಪಟುಗಳು ಮತ್ತು ದೇಹದಾರ್ಢ್ಯ ಸ್ಪರ್ಧಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಮೂತ್ರದ ಸೊಂಕಿನ ಸಮಸ್ಯೆಗಳಿದ್ದರೆ

ಮೂತ್ರದ ಸೊಂಕಿನ ಸಮಸ್ಯೆಗಳಿದ್ದರೆ

ನೀವು ಮೂತ್ರದ ಸೊಂಕಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಯಮಿತವಾಗಿ ಅಡುಗೆ ಸೋಡಾವನ್ನು ನೀರಿಗೆ ಬೆರೆಸಿ ಸೇವಿಸಬೇಕು. ಆಗ ಸೋಂಕು ಬಹುಬೇಗ ನಿವಾರಣೆ ಹೊಂದಲು ಅನುಕೂಲವಾಗುವುದು. ಇದನ್ನು ಸೇವಿಸುವ ಮುನ್ನ ದೇಹದ ಇತರ ಆರೋಗ್ಯ ಸಮಸ್ಯೆಗೆ ಹೊಂದುವುದೇ ಎನ್ನುವುದನ್ನು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

Most Read: ಪೂಜಾ ರೂಮ್‌ನಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!

ಸಂದಿ ನೋವಿನ ನಿವಾರಣೆ

ಸಂದಿ ನೋವಿನ ನಿವಾರಣೆ

ಆಸಿಡ್ ವಿಪರೀತಕ್ಕೆ ತಲುಪಿದಾಗ ಸಂಧಿವಾತ/ಸಂಧಿನೋವು ಕಾಣಿಸಿಕೊಳ್ಳಲು ಸಹಾಯವಾಗುತ್ತದೆ. ನೀರಿನಲ್ಲಿ ಬೆರೆಸಿದ ಸೋಡಿಯಂ ಬೈಕಾರ್ಬನೇಟ್ ಕುಡಿಯುವುದರಿಂದ ಸಂಧಿಗಳ ನೋವು ನಿವಾರಣೆಯಾಗುತ್ತದೆ. ಅಡುಗೆ ಸೋಡವು ದೇಹದಲ್ಲಿ ಶೇಖರಣೆಯಾದ ಆಸಿಡ್ ತಡೆಯುತ್ತದೆ. ಅಡುಗೆ ಸೋಡಾ ಮತ್ತು ನೀರಿನ ಬೆರಕೆಯಿಂದ ಅಗ್ರಗಣ್ಯವಾದ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.

ತಲೆಗೂದಲಿನಿಂದ ವಾಸನೆ ಬರುತ್ತಿದ್ದರೆ

ತಲೆಗೂದಲಿನಿಂದ ವಾಸನೆ ಬರುತ್ತಿದ್ದರೆ

ಕೆಲವೊಮ್ಮೆ ಚರ್ಮದ ಸೂಕ್ಷ್ಮರಂಧ್ರಗಳು ಭರ್ತಿಯಾಗಿ ಇದರಲ್ಲಿರುವ ಬ್ಯಾಕ್ಟೀರಿಯಾಗಳು ರಂಧ್ರದಲ್ಲಿ ತುಂಬಿಕೊಂಡಿದ್ದ ಕೊಳೆಯನ್ನು ಕೊಳೆಸುವ ಮೂಲಕ ದುರ್ವಾಸನೆ ಸೂಸುತ್ತದೆ. (ತಲೆ ಸ್ನಾನ ಮಾಡದೇ ಕೆಲದಿನ ಹಾಗೇ ಇದ್ದರೆ ದುರ್ವಾಸನೆ ಸೂಸುವುದು ಇದೇ ಕಾರಣಕ್ಕೆ). ಒಂದು ವೇಳೆ ನಿಮಗೆ ಈ ತೊಂದರೆ ಕಾಡುತ್ತಿದ್ದರೆ ಅಡುಗೆ ಸೋಡಾ ನಿಮ್ಮ ನೆರವಿಗೆ ಬರುತ್ತದೆ. ಒಂದು ಚಿಕ್ಕ ಚಮಚ ಅಡುಗೆ ಸೋಡಾವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಗಾಢವಾದ ಲೇಪನ ತಯಾರಿಸಿ. ಈ ಲೇಪನವನ್ನು ತಲೆಗೂದಲ ಬುಡಕ್ಕೆ ತಗಲುವಂತೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

For Quick Alerts
ALLOW NOTIFICATIONS
For Daily Alerts

    English summary

    Surprising health benefits of Baking Soda

    In this article we sharing you surprising health benefits of baking soda, have a look...
    Story first published: Tuesday, October 23, 2018, 7:00 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more