Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬಿಯರ್ ಕುಡಿದು ಹೊಟ್ಟೆಯ ಬೊಜ್ಜು ಬಂದಿದ್ದರೆ ಈ ಟಿಪ್ಸ್ ಅನುಸರಿಸಿ
ನೀವು ಬಿಯರ್ ಪ್ರಿಯರಾಗಿದ್ದು ಇದರ ಸೇವನೆ ವ್ಯಸನವಾಗಿದೆಯೇ? ಹಾಗಾದರೆ ನಿಮ್ಮ ಹೊಟ್ಟೆ ಮಾತ್ರ ಕೊಂಚ ಹೆಚ್ಚೇ ಊದಿಕೊಂಡಂತಿದ್ದು ಅಂಗಸೌಷ್ಟವವನ್ನೇ ಕುಂದಿಸುತ್ತಿದೆಯೇ? ನಿಮ್ಮ ಅಂಗಿಯ ಬೇರೆಲ್ಲಾ ಗುಂಡಿಗಳನ್ನು ಯಾವುದೋ ತೊಂದರೆ ಇಲ್ಲದೇ ಹಾಕಲು ಸಾಧ್ಯವಾಗುತ್ತಿದ್ದರೂ ಹೊಟ್ಟೆಯ ಬಳಿಯ ಗುಂಡಿ ಹಾಕಲು ಕಷ್ಟವಾಗುತ್ತಿದೆಯೇ ಅಥವಾ ಕುಳಿತುಕೊಳ್ಳುವಾಗ ಅಥವಾ ಬಗ್ಗುವಾಗ ಈ ಗುಂಡಿ ಟಪ್ಪೆಂದು ತುಂಡಾಗಿ ಹಾರಿಹೋಗುತ್ತಿದೆಯೇ? ಅಥವಾ ನಿಮ್ಮ ಹೊಸ ಉಡುಗೆಯನ್ನು ತೊಡಲು ಈ ಭಾಗದ ಬೊಜ್ಜು ಅಡ್ಡಿಯಾಗುತ್ತಿದೆಯೇ? ಹಾಗಾದರೆ ನಿಮಗೆ ಈ ಭಾಗದ ಬೊಜ್ಜನ್ನು ಕರಗಿಸಿ ಆರೋಗ್ಯ ಮತ್ತು ಅಂಗಸೌಷ್ಠವ ಎರಡನ್ನೂ ಉಳಿಸಿಕೊಳ್ಳಲು ಖಂಡಿತಾ ಬಯಕೆ ಇರುತ್ತದೆ. ಆದರೆ ಹೇಗೆ ಸಾಧಿಸುವುದು ಎಂದು ಗೊತ್ತಿಲ್ಲದಿದ್ದರೆ ಇಂದಿನ ಲೇಖನ ನಿಮಗೆ ಮಹತ್ವದ ಮಾಹಿತಿ ಒದಗಿಸಬಲ್ಲುದು.
ಬಿಯರ್ ಬೆಲ್ಲಿ ಎಂದು ಕರೆಯಲ್ಪಡುವ ಈ ಪುಟ್ಟ ಹೊಟ್ಟೆ ಪ್ರಾರಂಭದ ಹಂತದಲ್ಲಿದ್ದಷ್ಟೂ ಇದನ್ನು ಕರಗಿಸುವುದು ಸುಲಭ. ಹೆಚ್ಚು ಕಾಲದಿಂದ ಹೊಟ್ಟೆ ಇದ್ದರೆ ಕೊಂಚ ಹೆಚ್ಚಿನ ಕಾಲ ಬೇಕಾಗಬಹುದು. ಈ ಬೊಜ್ಜನ್ನು ಕರಗಿಸಲು ನೀವು ಈಗಾಗಲೇ ಕೆಲವಾರು ವಿಧಾನಗಳನ್ನು ಪ್ರಯತ್ನಿಸಿ ಕೈ ಚೆಲ್ಲಿರಲೂ ಬಹುದು. ಆದರೆ ಇದನ್ನು ನಿವಾರಿಸಲು ಕೆಲವು ಸಮರ್ಥ ವಿಧಾನಗಳಿವೆ. ನಿಮಗೆ ಸೂಕ್ತ ಎನಿಸಿದ ವಿಧಾನವನ್ನು ಸತತವಾಗಿ ಪ್ರಯತ್ನಿಸುವ ಮೂಲಕ ಶೀಘ್ರವೇ ಹೊಟ್ಟೆ ಕರಗುವುದನ್ನು ಗಮನಿಸತೊಡಗಬಹುದು.
ಕೂದಲಿಗೆ ಮತ್ತು ತ್ವಚೆಗೆ ಬಿಯರ್! ಕೇಳಿ ಅಚ್ಚರಿಯಾಯಿತೇ?
ಬಿಯರ್ ಸೇವನೆಯಿಂದ ಮಾತ್ರವೇ ಈ ಪುಟ್ಟ ಹೊಟ್ಟೆ ಏಕೆ ಬರುತ್ತದೆ? ಬಿಯರ್ ನಲ್ಲಿರುವ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟುಗಳು ಜೀರ್ಣಕ್ರಿಯೆಯ ಬಳಿಕ ಕೊಬ್ಬು ಮತ್ತು ಕ್ಯಾಲೋರಿಗಳಾಗಿ ಪರಿವರ್ತನೆಗೊಳ್ಳುತ್ತವೆ ಹಾಗೂ ಹೊಟ್ಟೆಯ ಮುಂಭಾಗದಲ್ಲಿ ಸಂಗ್ರಹಗೊಳ್ಳುತ್ತವೆ. ಈ ಸಂಗ್ರಹ ಹೆಚ್ಚಾದಂತೆಲ್ಲಾ ಹೊಟ್ಟೆ ಮುಂದೆ ಬರಲು ಪ್ರಾರಂಭವಾಗುತ್ತದೆ. ಈ ಬೊಜ್ಜನ್ನು ಎಷ್ಟು ಬೇಗನೇ ಕರಗಿಸಲು ಪ್ರಾರಂಭಿಸುತ್ತೀರೋ ಅಷ್ಟೂ ಒಳ್ಳೆಯದು. ಇದು ಹೆಚ್ಚುತ್ತಿದ್ದಂತೆಯೇ ಕೆಲವಾರು ಆರೋಗ್ಯಕರ ತೊಂದರೆಗಳು ಎದುರಾಗುವ ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ. ಸ್ಥೂಲಕಾಯ ಸಂಬಂಧಿ ತೊಂದರೆಗಳು, ಹೃದಯ ಸ್ತಂಭನದ ಸಾಧ್ಯತೆ ಮೊದಲಾದವು ಹೆಚ್ಚುತ್ತವೆ. ಈ ಬೊಜ್ಜನ್ನು ಕರಗಿಸಲು ಕೆಲವು ಮಾರ್ಗಗಳ ಬಗ್ಗೆ ನೋಡೋಣ..
ಸಮಪ್ರಮಾಣದ ನೀರು ಸೇರಿಸುವುದು
ಕೆಲವರಿಗೆ ಹೆಚ್ಚಿನ ಬಿಯರ್ ಕುಡಿಯುವ ಅಭ್ಯಾಸವಿರುತ್ತದೆ. ಈ ಪ್ರಮಾಣ ಹೆಚ್ಚಿದಷ್ಟೂ ಬೊಜ್ಜು ಆವರಿಸುವ ವೇಗವೂ ಹೆಚ್ಚುತ್ತದೆ. ಈ ಪ್ರಮಾಣವನ್ನು ಕಡಿಮೆ ಮಾಡಲು ನಡು ನಡುವೆ ನೀರನ್ನು ಕುಡಿಯಬೇಕು. ಇದು ಬಿಯರ್ ಸೇವನೆಯ ಪ್ರಮಾಣದ ಮೇಲೆ ಕಡಿವಾಣ ಹಾಕುವುದು ಮಾತ್ರವಲ್ಲ, ದೇಹ ನಿರ್ಜಲೀಕರಣಕ್ಕೆ ಒಳಗಾಗುವುದರಿಂದಲೂ ತಡೆಯುತ್ತದೆ. ಕಾಲಕ್ರಮೇಣ ಬೊಜ್ಜು ಸಹಾ ಕರಗುತ್ತದೆ.
ಸಮಪ್ರಮಾಣದ ನೀರು ಸೇರಿಸುವುದು
ಬಿಯರ್ ನಲ್ಲಿರುವ ಕಾರ್ಬೋಹೈಡ್ರೇಟುಗಳು ಮತ್ತು ಸಕ್ಕರೆ ಅತಿ ಹೆಚ್ಚಾಗಿರುವುದೇ ಬೊಜ್ಜಿನ ಪ್ರಮುಖ ಕಾರಣವಾಗಿದೆ. ಇದನ್ನು ನಿಯಂತ್ರಿಸಲು ನಿಮ್ಮ ಆಹಾರದಲಿ ಹೆಚ್ಚಿನ ಪ್ರೋಟೀನ್ ಸೇರಿಸಿಕೊಳ್ಳಬೇಕು. ದ್ವಿದಳ ಧಾನ್ಯಗಳು, ಬೀನ್ಸ್ ಮತ್ತು ಒಣಫಲಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವ ಮೂಲಕ ಕಾರ್ಬೋಹೈಡ್ರೇಟುಗಳು ಮತ್ತು ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಇವುಗಳು ಕೊಬ್ಬಾಗಿ ಪರಿವರ್ತನೆಗೊಳ್ಳುವ ಪ್ರಮಾಣ ತಗ್ಗುತ್ತದೆ. ಇದು ಹಸಿವೆಯನ್ನೂ ನೀಗಿಸುವ ಕಾರಣ ಇನ್ನಷ್ಟು ಬಿಯರ್ ಸೇವನೆಗೆ ತಡೆಯೊಡ್ಡುವ ಮೂಲಕವೂ ಪರೋಕ್ಷವಾಗಿ ನೆರವಾಗುತ್ತದೆ.
ಕ್ಯಾಲೋರಿ ಕರಗಿಸುವ ವ್ಯಾಯಾಮ ಮಾಡಿ
ಇಷ್ಟವಿಲ್ಲದಿದ್ದರೂ ಸರಿ, ಯಾವುದಾದರೂ ಹೊಟ್ಟೆ ಕರಗಿಸುವ ವ್ಯಾಯಾಮವನ್ನು ಮಾಡತೊಡಗಿ. ಮಲಗಿದ್ದಲ್ಲಿ ಬೆನ್ನನ್ನು ಎತ್ತುವ, ಬರ್ಪೀ ಮೊದಲಾದ ವ್ಯಾಯಾಮಗಳನ್ನು ನಿತ್ಯವೂ ಕನಿಷ್ಠ ಹತ್ತು ನಿಮಿಷ ಮಾಡಿದರೂ ಹೆಚ್ಚು ಕ್ಯಾಲೋರಿಗಳು ದಹಿಸಲ್ಪಟ್ಟು ಕೊಬ್ಬು ಕರಗುತ್ತದೆ.
ಎರಡು ವಾರವಾದರೂ ಬಿಯರ್ ಕುಡಿಯದಿರಿ
ಒಂದು ವೇಳೆ ನೀವು ಹೆಚ್ಚು ಬಿಯರ್ ಸೇವನೆಗೆ ದಾಸರಾಗಿದ್ದರೆ ಯಾವುದಾದರೊಂದು ನೆಪ ಹಾಕಿ ಎರಡು ವಾರವಾದರೂ ಬಿಯರ್ ಸೇವನೆಯನ್ನು ಕಟ್ಟುನಿಟ್ಟಾಗಿ ಸೇವಿಸದಿರಿ. ಇದು ಹೊಟ್ಟೆಯ ಕೊಬ್ಬಿನ ಸಂಗ್ರಹ ಏರಿಕೆ ಪ್ರಮಾಣವನ್ನು ನಿಯಂತ್ರಿಸಿ ಇಳಿಕೆಯ ನಿಟ್ಟಿನಲ್ಲಿ ಮುಂದುವರೆಯಲು ನೆರವಾಗುತ್ತದೆ. ತನ್ಮೂಲಕ ವ್ಯಾಯಾಮಗಳು ಹೆಚ್ಚು ಫಲ ನೀಡುತ್ತವೆ.
ಸಿದ್ಧ ಆಹಾರಗಳನ್ನು ಸೇವಿಸದಿರಿ
ಒಂದು ವೇಳೆ ನಿಮಗೆ ಹೊಟ್ಟೆಯ ಬೊಜ್ಜು ಕರಗಲೇ ಬೇಕೆಂದಿದ್ದರೆ ಸಿದ್ಧ ಅಹಾರಗಳನ್ನು ಆದಷ್ಟೂ ಸೇವಿಸದಿರುವುದು ಅನಿವಾರ್ಯ. ಏಕೆಂದರೆ ಇವುಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳು, ಕೊಬ್ಬು, ಹಾಗೂ ಸಕ್ಕರೆಗಳಿರುತ್ತವೆ. ಆಲೂಗಡ್ಡೆ ಚಿಪ್ಸ್, ಬರ್ಗರ್, ಸಿಹಿಪದಾರ್ಥಗಳು ಮೊದಲಾದವುಗಳನ್ನು ಕಡ್ಡಾಯವಾಗಿ ಸೇವಿಸಬಾರದು.
ಹಸಿ ತರಕಾರಿ ಹಣ್ಣುಗಳನ್ನು ತಿನ್ನಿ
ಹಸಿಯಾಗಿ ತಿನ್ನಬಹುದಾದ ತರಕಾರಿಗಳಾದ ಬ್ರೋಕೋಲಿ, ಎಲೆಕೋಸು ಮೊದಲಾದವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ. ಇದರಿಂದ ಯಕೃತ್ ಹಾಗೂ ಜೀರ್ಣಾಂಗಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗಲು ಹಾಗೂ ಹೊಟ್ಟೆಯ ಬೊಜ್ಜು ನಿವಾರಣೆಯಾಗಲು ನೆರವಾಗುತ್ತದೆ.
ಉಪಾಹಾರ ಕಡ್ಡಾಯವಾಗಿ ಸೇವಿಸಿ
ನಮ್ಮಲ್ಲಿ ಕೆಲವರು ಬೆಳಗ್ಗಿನ ಉಪಾಹಾರ ಸೇವಿಸದೇ ದೊಡ್ಡ ತಪ್ಪು ಮಾಡುತ್ತಾರೆ. ಇದು ಸಹಾ ಪರೋಕ್ಷವಾಗಿ ಹೊಟ್ಟೆಯ ಕೊಬ್ಬಿನ ಕಾರಣವಾಗುತ್ತದೆ. ದೈನಂದಿನ ಅಗತ್ಯಕ್ಕೆ, ರಕ್ತದಲ್ಲಿ ಅಗತ್ಯಪ್ರಮಾಣದ ಸಕ್ಕರೆ ಪಡೆಯಲು ಹಾಗೂ ಜೀವರಾಸಾಯನಿಕ ಕ್ರಿಯೆಗೆ ಬೆಳಗ್ಗಿನ ಉಪಾಹಾರ ಅತಿ ಅಗತ್ಯವಾಗಿದೆ. ಅಲ್ಲದೇ ದಿನದ ವ್ಯಾಯಾಮಗಳಿಗೂ ಉಪಾಹಾರದ ಮೂಲಕ ಅಗತ್ಯವಾದ ಪೋಷಕಾಂಶಗಳು ಲಭಿಸುತ್ತವೆ ಹಾಗೂ ಹೆಚ್ಚಿನ ಶ್ರಮ ವಹಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕೊಬ್ಬು ಕರಗಿ ಹೊಟ್ಟೆಯ ಗಾತ್ರವೂ ಇಳಿಯುತ್ತದೆ.