ಹೊಟ್ಟೆಯ ಮೇಲ್ಭಾಗದಲ್ಲಿ ನೋವು-ಭಾರೀ ದೊಡ್ಡ ಕಾಯಿಲೆಯ ಮುನ್ಸೂಚನೆಯಾಗಿರಬಹುದು

Posted By: Arshad Hussain
Subscribe to Boldsky

ನೋವು ಮತ್ತು ಕಾಯಿಲೆ ಅನುಭವಿಸದ ಮನುಷ್ಯರೇ ಇಲ್ಲ! ಏಕೆಂದರೆ ನಮ್ಮ ದೇಹದ ಮೇಲೆ ಸತತವಾಗಿ ಕ್ರಿಮಿಗಳು, ವೈರಸ್ಸುಗಳು ಧಾಳಿಯಿಡುತ್ತಲೇ ಇರುತ್ತವೆ ಹಾಗೂ ಕೆಲವಾರು ಇತರ ಕಾರಣಗಳಿಂದ ಹುಟ್ಟಿದ ಬಳಿಕ ಕೆಲವಾರು ಕಾಯಿಲೆ ಅಥವಾ ಗಾಯಗಳು ಎದುರಾಗುತ್ತಲೇ ಇರುತ್ತವೆ. ಆದರೆ ಎಷ್ಟು ಬಾರಿ ಕಾಯಿಲೆ ಬಿದ್ದರೂ ಅಥವಾ ಗಾಯಗೊಂಡರೂ ದೇಹ ಇದಕ್ಕೆ ಹೊಂದಿಕೊಳ್ಳದೇ ಹೋಗಬಹುದು ಅಥವಾ ಇದಕ್ಕೆ ನಡೆಸುವ ಚಿಕಿತ್ಸೆಗೂ ಪ್ರತಿಕ್ರಿಯೆ ನೀಡದೇ ಹೋಗಬಹುದು.

ಕೆಲವೊಮ್ಮೆ ದೇಹದಲ್ಲಿ ಎದುರಾಗುವ ಕೆಲವು ನೋವುಗಳು ಸತತವಾಗಿ ಮರುಕಳಿಸುತ್ತಾ ಇರುತ್ತವೆ ಹಾಗೂ ನಿತ್ಯದ ಚಟುವಟಿಕೆಗಳಿಗೆ ಬಾಧೆಯುಂಟುಮಾಡುವ ಮೂಲಕ ಜೀವನವನ್ನು ಕಷ್ಟಕರವಾಗಿಸುತ್ತವೆ. ಒಂದು ಸಾಮಾನ್ಯ ತಲೆನೋವು ಅಥವಾ ಮೊಣಗಂಟಿನ ನೋವು ಚಲನೆಯನ್ನೇ ಬಾಧಿಸಬಲ್ಲುದಾದರೆ ಸತತವಾಗಿ ಮರುಕಳಿಸುವ ಭಾರೀ ನೋವು ಜೀವನವನ್ನು ಇನ್ನೆಷ್ಟು ಬಾಧಿಸಲಾರದು! ಕೆಲವರು ತಮಗೆ ಎದುರಾಗುವ ನೋವನ್ನು ತಾತ್ಕಾಲಿಕವೆಂದೇ ಪರಿಗಣಿಸಿ ಉಪೇಕ್ಷಿಸುತ್ತಾರೆ. ತಲೆನೋವು ಮತ್ತು ಹೊಟ್ಟೆನೋವುಗಳಿಗೆ ತಮ್ಮ ಮಾನಸಿಕ ಒತ್ತಡ ಅಥವಾ ತಿಂದಿದ್ದರಲ್ಲಿ ಏನೋ ತೊಂದರೆ ಇರಬಹುದೆಂದು ತಿಳಿದು ಉಪೇಕ್ಷಿಸಿಬಿಡುತ್ತಾರೆ. ಆದರೆ ಈ ನೋವು ಮತ್ತೆ ಮತ್ತೆ ಮರುಕಳಿಸುತ್ತಿದ್ದರೆ ಮಾತ್ರ ಇದನ್ನು ಸರ್ವಥಾ ನಿರ್ಲಕ್ಷಿಸಕೂಡದು. ಒಂದು ವೇಳೆ ಹೊಟ್ಟೆಯ ಮೇಲ್ಭಾಗದಲ್ಲಿ ಭಾರೀ ನೋವು ಎದುರಾಗಿದ್ದು ಇದರ ಜೊತೆಗೇ ಇನ್ನೂ ಕೆಲವು ಸೂಚನೆಗಳೂ ಕಂಡುಬಂದಿದ್ದರೆ ಇದು ಗಂಭೀರವಾದ ಕಾಯಿಲೆಯ ಸೂಚನೆಯಾಗಿರಬಹುದು. ಬನ್ನಿ, ಈ ಸೂಚನೆಗಳು ಯಾವ ಕಾಯಿಲೆಯ ಪರಿಣಾಮಗಳಾಗಿವೆ, ಇದು ಉಲ್ಬಣಿಸದಂತೆ ಏನು ಮಾಡಬಹುದು, ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬುದನ್ನು ನೋಡೋಣ:

1. ನೋವು ಎದುರಾದಾಗ ಬೆವರುವುದು

1. ನೋವು ಎದುರಾದಾಗ ಬೆವರುವುದು

ಒಂದು ವೇಳೆ ಹೊಟ್ಟೆಯ ಮೇಲ್ಭಾಗದಲ್ಲಿ ತೀಕ್ಷ್ಣವಾದ ನೋವು ಕಾಣಿಸಿಸಿಕೊಂಡು ಇದರೊಂದಿಗೆ ಪ್ರತಿ ಬಾರಿ ನೋವು ಎದುರಾದಾಗಲೂ ಮೈಯೆಲ್ಲಾ ಬೆವರಲು ತೊಡಗಿದರೆ ಇದು ಹೊಟ್ಟೆಯ ಮೇಲ್ಭಾಗದಲ್ಲಿ ಉಂಟಾಗಿರುವ ಸೋಂಕು ಅಥವಾ ಉರಿಯೂತದ ಪರಿಣಾಮವಾಗಿದೆ. ಅಲ್ಲದೇ ಈ ಸೂಚನೆ ಹೊಟ್ಟೆಯಲ್ಲಿ ಹುಣ್ಣುಗಳು, ಅತಿಯಾದ ಆಮ್ಲೀಯತೆ ಅಥವಾ ಹೊಟ್ಟೆಯ ಕ್ಯಾನ್ಸರ್ ನಿಂದಲೂ ಎದುರಾಗಿರಬಹುದು. ಆದ್ದರಿಂದ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

2. ಮಲವಿಸರ್ಜನೆಯಲ್ಲಿ ರಕ್ತ ಕಾಣಿಸಿಕೊಳ್ಳುವುದು

2. ಮಲವಿಸರ್ಜನೆಯಲ್ಲಿ ರಕ್ತ ಕಾಣಿಸಿಕೊಳ್ಳುವುದು

ನಮ್ಮ ದೇಹದ ಯಾವುದೇ ಭಾಗದಿಂದ ಕೊಂಚವೇ ರಕ್ತ ಹೊರಬರುವುದು ಕಂಡ ತಕ್ಷಣ ನಾವೆಲ್ಲಾ ಹೆದರಿಕೆಗೆ ಒಳಗಾಗುತ್ತೇವೆ. ಒಂದು ವೇಳೆ ಹೊಟ್ಟೆಯ ಮೇಲ್ಭಾಗದಲ್ಲಿ ಸತತ ನೋವು ಕಾಣಿಸಿಕೊಳ್ಳುವುದರ ಜೊತೆಗೇ ಮಲವಿಸರ್ಜನೆಯ ಸಮಯದಲ್ಲಿ ರಕ್ತವನ್ನೂ ಕಂಡರೆ ಇದು ಖಂಡಿತವಾಗಿಯೂ ಕಾಳಜಿವಹಿಸಬೇಕಾದ ವಿಚಾರವಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಹಾಗೂ ಕೇವಲ ವೈದ್ಯಕೀಯ ಪರೀಕ್ಷೆಯಿಂದ ಮಾತ್ರವೇ ಇದಕ್ಕೆ ಸೂಕ್ತ ಕಾರಣವನ್ನು ಕಂಡುಕೊಳ್ಳಬಹುದು. ಆದರೆ ಈ ತೊಂದರೆಯನ್ನು ಗಮನಿಸಿದ ತಕ್ಷಣವೇ ವೈದ್ಯರ ಬಳಿ ಸಾಗುವುದು ಅಗತ್ಯ.

3. ವಾಂತಿ

3. ವಾಂತಿ

ಒಂದು ವೇಳೆ ಸತತವಾದ ಮೇಲುಹೊಟ್ಟೆಯ ನೋವಿನ ಜೊತೆಗೇ ವಾಂತಿ ಅಥವಾ ವಾಕರಿಕೆ ಎದುರಾದರೆ ಇದು ಅಜೀರ್ಣತೆಯ ಪರಿಣಾಮವಾಗಿರಬಹುದು. ಸಾಮಾನ್ಯವಾಗಿ ಇದು ಎಲ್ಲರಿಗೂ ಆಗಾಗ ಎದುರಾಗುತ್ತಿರುತ್ತದೆ. ಆದರೆ ಇದು ಸತತವಾಗಿದ್ದರೆ ಮತ್ತು ಹೆಚ್ಚಿನ ಸಮಯ ವಾಂತಿಯಲ್ಲಿ ಪರ್ಯವಸಾನವಾಗುತ್ತಿದ್ದರೆ ಇದು ಹೊಟ್ಟೆಯ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್ ನ ಪರಿಣಾಮವಾಗಿರಬಹುದು ಹಾಗೂ ತಡಮಾಡದೇ ಈ ಸೂಚನೆಗಳನ್ನು ವೈದ್ಯರಲ್ಲಿ ವಿವರಿಸಿ ಸಲಹೆ ಪಡೆಯುವುದು ಅಗತ್ಯವಾಗಿದೆ.

4. ಹೊಟ್ಟೆಯಿಂದ ಅಕ್ಕಪಕ್ಕದ ಭಾಗಗಳಿಗೆ ಹರಡುವ ನೋವು

4. ಹೊಟ್ಟೆಯಿಂದ ಅಕ್ಕಪಕ್ಕದ ಭಾಗಗಳಿಗೆ ಹರಡುವ ನೋವು

ಒಂದು ವೇಳೆ ಮೇಲುಹೊಟ್ಟೆಯ ಭಾಗದಲ್ಲಿ ನೋವು ಪ್ರಾರಂಭವಾಗಿ ನಿಧಾನವಾಗಿ ಈ ನೋವು ಅಕ್ಕಪಕ್ಕದ ಭಾಗಗಳಿಗೆ ಅಂದರೆ ಬೆನ್ನು, ಹೊಟ್ಟೆಯ ಬದಿಗಳು ಮೊದಲಾದ ಕಡೆ ವ್ಯಾಪಿಸುವುದನ್ನು ಗಮನಿಸಿದರೆ ಇದು ಮೇದೋಜೀರಕ ಗ್ರಂಥಿಯಲ್ಲಿ ಹುಣ್ಣು ಅಥವಾ ಉರಿಯೂತವುಂಟಾಗಿರುವ ಸೂಚನೆಯಾಗಿದೆ. ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದು ಅಗತ್ಯವಾಗಿದೆ.

5. ನೋವಿನೊಂದಿಗೆ ಜ್ವರವೂ ಕಾಣಿಸಿಕೊಳ್ಳುವುದು

5. ನೋವಿನೊಂದಿಗೆ ಜ್ವರವೂ ಕಾಣಿಸಿಕೊಳ್ಳುವುದು

ಜ್ವರ ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಒಂದು ಸುರಕ್ಷಾ ಕ್ರಮವಾಗಿದ್ದು ಸೋಂಕು, ಶೀತ, ಫ್ಲೂ ಮೊದಲಾದ ಸೋಂಕುಗಳಿಂದ ಎದುರಿಸುವ ವ್ಯವಸ್ಥೆಯಾಗಿದೆಯೇ ಹೊರತು ಜ್ವರವೇ ರೋಗವಲ್ಲ. ಒಂದು ವೇಳೆ ಮೇಲುಹೊಟ್ಟೆಯ ಭಾಗದಲ್ಲಿ ನೋವಿನೊಂದಿಗೆ ಜ್ವರ, ಶೀತ, ಎದೆಯಲ್ಲಿ ಬಿಗಿತನ, ಕೆಮ್ಮು ಮೊದಲಾದವು ಕಾಣಿಸಿಕೊಂಡರೆ ಇದು ಹೊಟ್ಟೆಯಲ್ಲಿ ಒಂದು ಬಗೆಯ ವೈರಸ್ಸಿನ ಕಾರಣದಿಂದಾಗಿ ಸೋಂಕು ಉಂಟಾಗಿರುವ ಸೂಚನೆಯಾಗಿದೆ. ಈ ತೊಂದರೆಯನ್ನು ನಿವಾರಿಸಲು ವೈದ್ಯರು ನೀಡುವ ಪ್ರತಿಜೀವಕ ಔಷಧಿಗಳನ್ನು ಸೇವಿಸುವ ಮೂಲಕ ಈ ತೊಂದರೆ ಶೀಘ್ರವೇ ಇಲ್ಲವಾಗುತ್ತದೆ.

6.

6."ಹರಿದು ಹೋಗುವಂತಹ" ಅನುಭವ ನೀಡುವ ನೋವು

ನೋವು ಯಾವ ರೀತಿಯಲ್ಲಿ ಅನುಭವವಾಗುತ್ತಿದೆ ಎಂಬ ಮಾಹಿತಿ ವೈದ್ಯರಿಗೆ ನೋವಿನ ಮೂಲವನ್ನು ಅರಿಯಲು ತುಂಬಾ ಅಗತ್ಯವಾಗಿದೆ. ಒಂದು ವೇಳೆ ಮೇಲುಹೊಟ್ಟೆಯ ಭಾಗದಲ್ಲಿ ಎದುರಾಗುವ ನೋವು ಆ ಭಾಗ ಮೂಲದಿಂದ ಹರಿದು ಹೋಗುತ್ತಿರುವಂತೆ ಅನ್ನಿಸುತ್ತಿದ್ದರೆ ಇದು ಆ ಭಾಗದಲ್ಲಿರುವ ನರಗಳಲ್ಲಿ ಸೀಳು ಉಂಟಾಗಿರುವ ಸೂಚನೆಯಾಗಿದೆ ಹಾಗೂ ಇದು ಅತ್ಯಂತ ಅಪಾಯಕಾರಿಯಾಗಿದೆ. ತಕ್ಷಣವೇ ವೈದ್ಯರಲ್ಲಿ ಭೇಟಿ ನೀಡಿ ಈ ನೋವಿನ ಸರಿಯಾದ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿದೆ.

7.

7. "ಸುಡುವಂತಹ" ನೋವು

ಒಂದು ವೇಳೆ ಹೊಟ್ಟೆಯ ಭಾಗದಲ್ಲಿ ನೋವು ಎದುರಾಗುವ ಜೊತೆಗೇ ಬೆಂಕಿ ಬಿದ್ದಂತೆ ಉರಿಯಾಗುತ್ತಿದ್ದರೆ, ಅಲ್ಲದೇ ಪ್ರತಿಬಾರಿಯ ಊಟ, ಪೇಯ ಅಥವಾ ನೀರಿನ ಸೇವನೆಯ ಬಳಿಕ ಈ ಉರಿ ಭುಗಿಲೆದ್ದರೆ ಇದು ಅತಿ ಪ್ರಬಲ ಆಮ್ಲೀಯತೆಯ ಸೂಚನೆಯಾಗಿದೆ. ಪ್ರಬಲ ಆಮ್ಲೀಯತೆ ಸುಲಭವಾಗಿ ಬಗ್ಗದ ಕಾಯಿಲೆಯಾಗಿದ್ದು ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದೆ. ಜೊತೆಗೇ ರೋಗಿ ತನ್ನ ಜೀವನಕ್ರಮದಲ್ಲಿಯೂ ಕೆಲವಾರು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದಕ್ಕೆ ತಪ್ಪಿದರೆ ಇದು ಹೊಟ್ಟೆಯ ಹುಣ್ಣು ಮತ್ತು ಹೊಟ್ಟೆಯ ಕ್ಯಾನ್ಸರ್ ಗೂ ಕಾರಣವಾಗಬಹುದು.

8. ಹಳೆಯ ಕಾಯಿಲೆಗಳು

8. ಹಳೆಯ ಕಾಯಿಲೆಗಳು

ಒಂದು ವೇಳೆ ನಿಮಗೆ ಈಗಾಗಲೇ ಮಧುಮೇಹ, ಹೃದಯಸಂಬಂಧಿ ತೊಂದರೆಗಳು, ಘಾಸಿಗೊಂಡ ನರಗಳು (aneurysm) ಮೊದಲಾದ ಹಳೆಯ ಕಾಯಿಲೆ ಕಾಡುತ್ತಿದ್ದರೆ ಅಥವಾ ಈಗಾಗಲೇ ಶಸ್ತ್ರಕ್ರಿಯೆಗೆ ಒಳಗಾಗಿದ್ದರೆ ಈಗ ಎದುರಾಗಿರುವ ಮೇಲುಹೊಟ್ಟೆಯ ನೋವನ್ನು ಸರ್ವಥಾ ಕಡೆಗಣಿಸಕೂಡದು. ಆದ್ದರಿಂದ ತಕ್ಷಣವೇ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿಯೇ ಈ ಸೂಚನೆಗಳನ್ನು ವಿವರಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇದು ಬೇರಾವುದೋ ಆರೋಗ್ಯದ ತೊಂದರೆಯ ಸೂಚನೆಯಾಗಿರಬಹುದು.

9. ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು:

9. ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು:

ಒಂದು ವೇಳೆ ಮೇಲುಹೊಟ್ಟೆಯ ನೋವು ಸತತವಾಗಿದ್ದು ಇದರ ಜೊತೆಗೇ ಚರ್ಮದ ಬಣ್ಣವೂ ಕೊಂಚ ಹಳದಿ ಅಥವಾ ಹಳದಿವರ್ಣದ ಹೊಳಪು ಪಡೆದಂತೆ ಕಂಡುಬಂದರೆ ಹಾಗೂ ಇದರೊಂದಿಗೆ ಚಿಕ್ಕದಾಗಿ ಜ್ವರವೂ ಆಗಮಿಸಿದ್ದರೆ ಇದು ಯಕೃತ್ ನ ಕಾಯಿಲೆ ಅಥವಾ ಪಿತ್ತಕೋಶದಲ್ಲಿ ಕಲ್ಲುಗಳಿರುವ ಸೂಚನೆಯಾಗಿದೆ. ಇವೆರಡೂ ಮಾರಕ ಕಾಯಿಲೆಗಳಾಗಿದ್ದು ಇವನ್ನು ಸರ್ವಥಾ ಉಪೇಕ್ಷಿಸಬಾರದು. ಒಂದು ವೇಳೆ ಉಪೇಕ್ಷಿಸಿದರೆ ಗಂಭೀರವಾದ ತೊಂದರೆಗೆ ಸಿಲುಕಿಕೊಳ್ಳಬಹುದು.

Read more about: pain diseases
English summary

Signs That Show Your Upper Abdominal Pain Could Be A Symptom Of Dangerous Diseases!

Any type of body pain can make life rather difficult, especially if it is persistent. If you have been experiencing upper abdominal pain, along with a few other symptoms, it could indicate the presence of dangerous diseases. You shouldn't avoid the symptoms and get checked by the doctor whenever you experience upper abdomincal pain.