For Quick Alerts
ALLOW NOTIFICATIONS  
For Daily Alerts

ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ

By Manu
|

ಅನುಚಿತ ಆಹಾರ ಕ್ರಮ ಹಾಗೂ ಜೀವನ ಶೈಲಿಯಿಂದಾಗಿ ಅನೇಕರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಥೈರಾಯ್ಡ್ ಸಮಸ್ಯೆಯಿಂದಾಗಿ ತೂಕ ಹೆಚ್ಚುವುದು ಅಥವಾ ತೂಕ ಇಳಿಯುವ ಸಮಸ್ಯೆ ಉಂಟಾಗುವುದು. ಅದಕ್ಕಾಗಿ ಅನೇಕರು ಥೈರಾಯ್ಡ್ ಗಾಗಿ ಚಿಕಿತ್ಸೆ ಹಾಗೂ ಔಷಧಗಳ ಮೊರೆ ಹೋಗುವುದು ಕಾಣುತ್ತೇವೆ. ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದ ಗ್ರಂಥಿಯಿರುತ್ತದೆ. ಈ ಗ್ರಂಥಿಯಿಂದಾಗಿ ಹಾರ್ಮೋನ್ ಗಳ ವ್ಯತ್ಯಾಸ ಹಾಗೂ ಕೆಲವು ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುತ್ತವೆ.

ಥೈರಾಯ್ಡ್ ಸಮಸ್ಯೆಯು ಆನುವಂಶಿಕವಾಗಿ, ಜನ್ಮಜಾತ ದೋಷಗಳಿಂದ, ಔಷಧಿಯ ಪರಿಣಾಮ ಮತ್ತು ಆಂಟಿಥೈರಾಯ್ಡ್ ಪ್ರತಿಕಾಯಗಳ ಕಾರಣದಿಂದ ಉದ್ಭವಿಸಬಹುದು. ಕೆಲವು ವೈದ್ಯಕೀಯ ಅಧ್ಯಯನದ ಪ್ರಕಾರ 800 ಮಕ್ಕಳಲ್ಲಿ ಶೇ.79 ರಷ್ಟು ಮಕ್ಕಳು ಥೈರಾಯ್ಡ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುವುದು.

ದೇಹದಲ್ಲಿರುವ ಪ್ರತಿಯೊಂದು ಗ್ರಂಥಿ ಹಾಗೂ ಅಂಗಾಂಗಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅದರಲ್ಲೂ ಥೈರಾಯ್ಡ್ ಗ್ರಂಥಿಗಳು ಹಾರ್ಮೊನನ್ನು ಬಿಡುಗಡೆ ಮಾಡುವುದರಿಂದ ಚಯಾಪಚಾಯ, ದೇಹದ ಉಷ್ಣತೆ ಮತ್ತು ನಾಡಿಬಡಿತ ಕ್ರಿಯೆಯು ನಿಯಂತ್ರಣದಲ್ಲಿರುತ್ತದೆ. ಈ ಮೂರರಲ್ಲಿ ಯಾವುದೇ ರೀತಿಯ ಏರುಪೇರು ಆದರೂ ಅದರಿಂದ ಯಕೃತ್, ಕರುಳು, ಕಿಡ್ನಿ ಮತ್ತು ಸಂತಾನೋತ್ಪತ್ತಿಯ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುವುದು.

ಥೈರಾಯ್ಡ್ ನ ಈ ಲಕ್ಷಣಗಳನ್ನು ನಿರ್ಲಕ್ಷ್ಯಮಾಡಬೇಡಿ

ಕುತ್ತಿಗೆ ಎದುರುಭಾಗದಲ್ಲಿ ಹಾದು ಹೋಗುವಂತಹ ಈ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಣೆ ಮಾಡಲು ಐಯೋಡಿನ್ ಖನಿಜಾಂಶವು ಪ್ರಮುಖವಾಗಿ ಬೇಕಾಗಿದೆ. ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದಲಾವಣೆಯಾದರೆ ಅದರಿಂದ ಹೈಪೋಥೈರಾಯ್ಡಿಸಮ್ ಮತ್ತು ಥೈರಾಯ್ಡ್ಗೆ ಸಂಬಂಧಿಸಿದ ಇತರ ಸಮಸ್ಯೆಗಳು ಉಂಟಾಗಬಹುದು. ನಿಮಗೂ ಈ ಒಂದು ಬಗೆಯ ಆರೋಗ್ಯ ಸಮಸ್ಯೆ ಇದೆ, ಅದರ ನಿವಾರಣೆಗೆ ಅಥವಾ ಆರೈಕೆಯ ವಿಧಾನದ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

ಥೈರಾಯ್ಡ್ ಎಂದರೇನು?

ಥೈರಾಯ್ಡ್ ಎಂದರೇನು?

ಇದು ನಮ್ಮ ಕುತ್ತಿಗೆಯಲ್ಲಿ ಧ್ವನಿಪೆಟ್ಟಿಗೆಯನ್ನು ಸುತ್ತುವರೆದಿರುವಂತಿರುವ ಒಂದು ಗ್ರಂಥಿಯಾಗಿದ್ದು ನಮ್ಮ ದೇಹದ ಬೆಳವಣಿಗೆ ಮತ್ತು ಇತರ ಚಟುವಟಿಕೆಗೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುತ್ತದೆ. ಈ ಹಾರ್ಮೋನುಗಳ ಸ್ರವಿಕೆ ಏಕೆ ಅಗತ್ಯ? ನಮ್ಮ ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿಡುವುದು, ಜೀರ್ಣಕ್ರಿಯೆ, ಶಕ್ತಿಯ ಬಳಕೆ ಇತ್ಯಾದಿಗಳಿಗೆಲ್ಲಾ ಅಗತ್ಯ ಪ್ರಮಾಣದ ಹಾರ್ಮೋನುಗಳನ್ನು ಸ್ರವಿಸುವುದು ಈ ಗ್ರಂಥಿಯ ಕೆಲಸ. ಅಲ್ಲದೇ ನಮ್ಮ ದೇಹದ ಅತಿಮುಖ್ಯ ಅಂಗಗಳಾದ ಹೃದಯ ಮತ್ತು ಯಕೃತ್‪ಗಳ ಕಾರ್ಯವನ್ನು ನಿರ್ವಹಿಸಲೂ ಥೈರಾಯ್ಡ್ ಸ್ರವಿಕೆ ಅವಶ್ಯಕವಾಗಿದ್ದು ಒಂದರ್ಥದಲ್ಲಿ ಈ ಅಂಗಗಳನ್ನು ನಿಯಂತ್ರಿಸುವ ಚಾಲಕನಾಗಿದೆ.

ಥೈರಾಯ್ಡ್ ಗ್ರಂಥಿಯ ಅಪಾಯದ ಲಕ್ಷಣಗಳು

ಥೈರಾಯ್ಡ್ ಗ್ರಂಥಿಯ ಅಪಾಯದ ಲಕ್ಷಣಗಳು

ಹೃದಯಬಡಿತದಲ್ಲಿ ಬದಲಾವಣೆ ಥೈರಾಯ್ಡ್ ನ ಹಾರ್ಮೋನುಗಳು ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಗಳ ಮೇಲೆ ಪರಿಣಾಮ ಬೀರುವುದು ಮತ್ತು ಇದು ಹೃದಯಬಡಿತದ ಮೇಲೂ ಪರಿಣಾಮ ಉಂಟು ಮಾಡಬಹುದು. ಥೈರಾಯ್ಡ್ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳು ಯಾವಾಗಲೂ ತಮ್ಮ ಹೃದಯಬಡಿತವು ಸಾಮಾನ್ಯಕ್ಕಿಂತ ಕಡಿಮೆಯಾಗಿರುವ ಅನುಭವವಾಗಬಹುದು.

ಸಡನ್ ಆಗಿ ಕುತ್ತಿಗೆ ಊದಿಕೊಳ್ಳುವುದು

ಸಡನ್ ಆಗಿ ಕುತ್ತಿಗೆ ಊದಿಕೊಳ್ಳುವುದು

ಕುತ್ತಿಗೆ ಊದಿಕೊಳ್ಳುವುದು ಅಥವಾ ದೊಡ್ಡದಾಗುವುದು ಥೈರಾಯ್ಡ್ ಸಮಸ್ಯೆಯ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಇದರ ಬಗ್ಗೆ ತಕ್ಷಣ ಗಮನಹರಿಸಬೇಕು. ಇದು ಥೈರಾಯ್ಡ್ ಸಮಸ್ಯೆಯ ಲಕ್ಷಣವಾಗಿದೆ.

ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು

ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು

ದೇಹದ ವಿವಿಧ ಭಾಗದಲ್ಲಿನ ಸ್ನಾಯುಗಳು ಊದಿಕೊಳ್ಳುವುದು ಮತ್ತು ನರಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು. ಇದು ಥೈರಾಯ್ಡ್ ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.

ಆಗಾಗ ಸುಸ್ತು ಕಾಣಿಸಿಕೊಳ್ಳುವುದು

ಆಗಾಗ ಸುಸ್ತು ಕಾಣಿಸಿಕೊಳ್ಳುವುದು

ಸುಸ್ತು ಇಡಿಯ ದಿನ ಯಾವುದೇ ಸುಸ್ತಾಗುವಂತಹ ಕೆಲಸ ಮಾಡದೇ ಇದ್ದರೂ ಸುಸ್ತು ಅನ್ನಿಸುವುದು, ಇಡಿಯ ದಿನ ನಿದ್ದೆಯ ಜೊಂಪು ಆವರಿಸಿರುವುದು, ಕೊಂಚ ಅವಕಾಶ ಸಿಕ್ಕಿದರೂ ನಿದ್ದೆಗೆ ಜಾರುವುದು ಇದರ ಪ್ರಮುಖ ಲಕ್ಷಣವಾಗಿದೆ. ಏಕೆಂದರೆ ನಿಮ್ಮ ರಕ್ತದಲ್ಲಿ ಹಾರ್ಮೋನುಗಳ ಪ್ರಮಾಣ ಕಡಿಮೆಯಾದರೆ ಜಡತ್ವವೂ ಹೆಚ್ಚುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ಅಗತ್ಯವಿದ್ದರೂ ಇಲ್ಲದಿದ್ದರೂ ಶರೀರವನ್ನು ಸುಮ್ಮನಿರಲು ಬಿಡದೇ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು.

ಕ್ಯಾರೆಟ್ ಜ್ಯೂಸ್ ಕುಡಿಯಿರಿ

ಕ್ಯಾರೆಟ್ ಜ್ಯೂಸ್ ಕುಡಿಯಿರಿ

ನೈಸರ್ಗಿಕವಾಗಿ ಸಿಹಿಯಾಗಿರುವ, ಜಗಿಯುವಾಗ ಕುರುಕು ಶಬ್ದ ಬರುವ ಹಾಗೂ ನೋಡಲೂ ಕೇಸರಿ ಬಣ್ಣ ಹೊಂದಿರುವ ಕ್ಯಾರೆಟ್ಟುಗಳು ಯಾರಿಗೆ ಇಷ್ಟವಿಲ್ಲ? ರಸಭರಿತ ಹಾಗೂ ತಾಜಾ ಕ್ಯಾರೆಟ್ಟುಗಳನ್ನು ಹಸಿಯಾಗಿಯೂ ಬೇಯಿಸಿ ತಯಾರಿಸಿದ ಖಾದ್ಯಗಳನ್ನೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇವುಗಳ ಸಿಹಿ ಹಾಗೂ ಪೌಷ್ಟಿಕಾಂಶಗಳಿಂದಾಗಿ ಇದನ್ನೊಂದು ಅಪ್ಪಟ ಆರೋಗ್ಯಕರ ಆಹಾರವೆಂದು ಕರೆಯ ಬಹುದು. ಕ್ಯಾರೆಟ್ ಇದರಲ್ಲಿ ಅತಿ ಹೆಚ್ಚಿನ ಪ್ರಮಾನದ ಆಂಟಿ ಆಕ್ಸಿಡೆಂಟುಗಳು ಮತ್ತು ಬೀಟಾ ಕ್ಯಾರೋಟಿನ್ ಇದ್ದು ಇವು ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನುಗಳನ್ನು ನಿಯಂತ್ರಿಸಲು ನೆರವಾಗುತ್ತವೆ.

ಕ್ಯಾರೆಟ್ ಜ್ಯೂಸ್‌ ಮಾಡುವ ವಿಧಾನ ಒಂದು ಲೋಟ ಕ್ಯಾರೆಟ್ ಜ್ಯೂಸ್‌ನಲ್ಲಿ ತುಂಬಾ ಕಡಿಮೆ ಕ್ಯಾಲರಿಯಿದೆ ಮತ್ತು ಅದರಲ್ಲಿರುವ ಸಕ್ಕರೆಯಲ್ಲಿ ಪ್ರಮುಖ ಪೋಷಕಾಂಶ ಹಾಗೂ ಖನಿಜಾಂಶಗಳಿವೆ. ಇದರಿಂದ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ಸರಿಯಾಗಿಟ್ಟುಕೊಳ್ಳಲು ನೆರವಾಗುವುದು.

ಅಶ್ವಗಂಧ

ಅಶ್ವಗಂಧ

ಪುರಾತನ ಕಾಲದಿಂದಲೂ ಆಯುರ್ವೇದ ಪದ್ದತಿಯಲ್ಲಿ ಹೆಚ್ಚು ಉಪಯೋಗಿಸಲ್ಟಡುತ್ತಿದ್ದ ಔಷದೀಯ ಸಸ್ಯ ಅಶ್ವಗಂಧ. ಈಗಲೂ ಅನೇಕ ಔಷಧಿಗಳಲ್ಲಿ ಅಶ್ವಗಂಧವನ್ನು ಉಪಯೋಗಿಸಲಾಗುತ್ತಿದೆ. ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಉಂಟಾದರೆ ನೀವು ನೆನೆಸಿಕೊಳ್ಳಬೇಕಾದ ಮೊದಲ ಸಸ್ಯವೆಂದರೆ ಅಶ್ವಗಂಧ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಅಶ್ವಗಂಧದಲ್ಲಿ ಆರೋಗ್ಯಕ್ಕೆ ಹೇರಳವಾದ ಲಾಭವಿದೆ. ಸಾಮಾನ್ಯವಾಗಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡರೆ ಶೇ. 90ರಷ್ಟು ಮಹಿಳೆಯರಿಗೆ ತಲೆ ಸುತ್ತು, ಒತ್ತಡ, ನಿದ್ದೆ ಹೀನತೆ, ಕುತ್ತಿಗೆ ಬಳಿ ನೋವು ಕಾಣಿಸಿಕೊಳ್ಳುತ್ತದೆ. ಅಶ್ವಗಂಧ ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾದ ಔಷಧಿಯಾಗಿದೆ.

ಏನಿದು ಹೈಪೋಥೈರಾಯ್ಡ್?

ಏನಿದು ಹೈಪೋಥೈರಾಯ್ಡ್?

ಹೈಪೊ ಥೈರಾಯ್ಡಿಸಂ ಅಥವಾ ಲೋ ಥೈರಾಯ್ಡ್ ಎಂಬುದು ಒಂದು ಗುಪ್ತ ಸೊಂಕುರೋಗ. ಇದು ಬಂದ ಮೇಲೆ ಜನರು ಇದರಿಂದ ತುಂಬಾ ವರ್ಷ ನೋವನ್ನು ಅನುಭವಿಸುತ್ತಾರೆ. ಏಕೆಂದರೆ ಇದಕ್ಕೆ ವೈದ್ಯಕೀಯ ಶಾಸ್ತ್ರದಲ್ಲಿ ಯಾವುದೇ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಹಾಗಾದರೆ ಇದು ಅಷ್ಟು ಅಪಾಯಕಾರಿಯೇ? ಇಲ್ಲ. ಅಪಾಯ ಅಡಗಿರುವುದು ಥೈರಾಯ್ಡ್ ಸಮಸ್ಯೆಯಲ್ಲಿ ಅಲ್ಲ. ಬದಲಿಗೆ ಈ ಸಮಸ್ಯೆ ಬಂದರೆ ಅದು ನೇರವಾಗಿ ಥೈರಾಯ್ಡ್ ಮೇಲೆ ಪ್ರಭಾವ ಬೀರುವುದಿಲ್ಲ. ಬದಲಿಗೆ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಅದು ಆಕ್ರಮಣ ಮಾಡುತ್ತದೆ. ಹಲವಾರು ವೈದ್ಯರು ಈ ರೋಗ ನಿರೋಧಕ ಶಕ್ತಿಯ ಕುಸಿತಕ್ಕೆ ಕಾರಣವನ್ನು ಹುಡುಕುವಲ್ಲಿ ಎಡವಿದರೆ ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಹೈಪೊ ಥೈರಾಯ್ಡಿಗೆ ಚಿಕಿತ್ಸೆ ಪಡೆಯುವಾಗ ಮಾಡಬೇಕಾದ ಮೊದಲ ಕೆಲಸವೆಂದರೆ ಅದು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾದುದು ಅನಿವಾರ್ಯ. ಸಕ್ಕರೆ ಮತ್ತು ಕೇಫಿನ್‍ನಿಂದ ತೀವ್ರತರವಾದ ಆಯಾಸ ಮತ್ತು ಮನಸ್ಸಿಗೆ ಮಂಕು ಕವಿದಂತಹ ಅನುಭವವುಂಟಾಗುತ್ತದೆ. ಆದ್ದರಿಂದ ನಿಮಗೆ ಬಂದಿರುವ ಥೈರಾಯ್ಡ್ ಸಮಸ್ಯೆ ಅಥವಾ ರೋಗ ನಿರೋಧಕ ಶಕ್ತಿಯ ಕುಸಿತದ ಪರಿಸ್ಥಿತಿಯನ್ನು ಸುಧಾರಿಸಲು ನೀವು ಅದರ ಮೂಲವನ್ನು ತಿಳಿದು, ಅದಕ್ಕೆ ತಕ್ಕ ಪರಿಹಾರವನ್ನು ಹುಡುಕಿಕೊಳ್ಳಬೇಕು. ಇನ್ನು ಈ ಸಮಸ್ಯೆಯು ಸಾಕಷ್ಟು ಪ್ರಮಾಣದ ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯಿಂದ ಸಂಭವಿಸುತ್ತದೆ. ಈ ಆರೋಗ್ಯ ಸಮಸ್ಯೆ ಉಂಟಾಗಿದ್ದರೆ ಆಯಾಸ, ಶುಷ್ಕ ಚರ್ಮ, ಮಲಬದ್ಧತೆ, ಖಿನ್ನತೆ, ಸಂಧುನೋವು, ತೂಕದಲ್ಲಿ ಹೆಚ್ಚಳ ಉಂಟಾಗುವುದು. ಅಲ್ಲದೆ ಮಹಿಳೆಯರಿಗೆ ಮುಟ್ಟಿನ ಸ್ರಾವ ದೀರ್ಘಕಾಲದ ವರೆಗೆ ಮುಂದುವರಿಯುವುದು.

ಅಧಿಕ ಬೆವರು, ಏಕಾಗ್ರತೆಯ ಸಮಸ್ಯೆ..

ಅಧಿಕ ಬೆವರು, ಏಕಾಗ್ರತೆಯ ಸಮಸ್ಯೆ..

ಈ ಸಮಸ್ಯೆಯ ಹೈಪೋಥೈರಾಯ್ಡ್ ನ ತದ್ವಿರುದ್ಧ ಕಾರಣಗಳಿಂದ ಉಂಟಾಗುತ್ತದೆ. ಹಾರ್ಮೋನ್‌ಗಳ ಉತ್ಪಾದನೆಯು ಇದಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಯು ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುವುದು. ಈ ಸಮಸ್ಯೆ ಉಂಟಾದಾಗ ಚಯಾಪಚಯ ಕ್ರಿಯೆ ಹೆಚ್ಚುವುದು, ಅಧಿಕ ಬೆವರು, ಏಕಾಗ್ರತೆಯ ಸಮಸ್ಯೆ, ತೂಕ ನಷ್ಟ, ತಾಪಮಾನಗಳನ್ನು ಸಹಿಸಿಕೊಳ್ಳಲು ಕಷ್ಟವಾಗುವುದು.

ಚಿಕಿತ್ಸೆ ಏನು?

ಚಿಕಿತ್ಸೆ ಏನು?

ಈ ಆರೋಗ್ಯ ಸಮಸ್ಯೆಗೆ ಶಾಶ್ವತವಾಗಿ ಕಡಿಮೆ ಮಾಡುವ ಚಿಕಿತ್ಸೆ ಎಂದು ಏನೂ ಇರುವುದಿಲ್ಲ. ಕೆಲವು ಚಿಕಿತ್ಸೆ ವಿಧಾನದಿಂದ ನಿಯಂತ್ರಣಕ್ಕೆ ತರಬಹುದು. ಕೆಲವು ಅಭ್ಯಾಸ ಕ್ರಮಗಳಿಂದ ನಮ್ಮ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಆಗ ಸಮಸ್ಯೆಯು ನಿಯಂತ್ರಣಕ್ಕೆ ಬರುವುದು.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಪ್ರೋಟಿನ್‍ಗಳು ಥೈರಾಯ್ಡ್ ಹಾರ್ಮೋನುಗಳನ್ನು ನಿಮ್ಮ ದೇಹದ ಪ್ರತಿ ಕೋಶಗಳಿಗು ವರ್ಗಾವಣೆ ಮಾಡುತ್ತವೆ. ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಥೈರಾಯ್ಡ್ ನ ಚಟುವಟಿಕೆಯು ಸುಲಲಿತವಾಗಿ ನಡೆಯುತ್ತದೆ. ಒಣ ಕಾಳುಗಳು ಮತ್ತು ಬೆಣ್ಣೆ ಆಹಾರದಲ್ಲಿದ್ದರೆ ಉತ್ತಮ. ಹಾರ್ಮೋನ್ ಮತ್ತು ಆಂಟಿ ಬಯೋಟೀಕ್ ರಹಿತ ಪ್ರಾಣಿ ಜನ್ಯ ಉತ್ಪನ್ನಗಳು ( ಸಾವಯವ, ಮಾಂಸ, ಮೊಟ್ಟೆ ಮತ್ತು ಮೀನುಗಳು) ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ಅಣಬೆ, ಪಾಲಕ್ ಸೊಪ್ಪು, ಸಾಸಿವೆ ಕಾಳುಗಳನ್ನು ಸೇವಿಸಿ

ಅಣಬೆ, ಪಾಲಕ್ ಸೊಪ್ಪು, ಸಾಸಿವೆ ಕಾಳುಗಳನ್ನು ಸೇವಿಸಿ

ಎಲ್ಲರು ನಂಬುವಂತೆ ಹೈಪೋ ಥೈರಾಯ್ಡಿಸಂ ಬರಲು ಕಾರಣ ಐಯೋಡಿನ್‍ನ ಕೊರತೆಯೇ ಕಾರಣ. ಹಾಗಾಗಿ ಮುಖ್ಯವಾಗಿ ಸಮುದ್ರದ ತರಕಾರಿಗಳು ಮತ್ತು ಸಾಗರೋತ್ವನ್ನಗಳನ್ನು ಸೇವಿಸಿ. ಎರಡನೆಯದಾಗಿ ಮೊಟ್ಟೆಗಳು, ಹುರುಳಿ, ಅಣಬೆ, ಪಾಲಕ್ ಸೊಪ್ಪು, ಸಾಸಿವೆ ಕಾಳು ಮತ್ತು ಬೆಳ್ಳುಳ್ಳಿಗಳನ್ನು ತಿನ್ನಿ.

ತೂಕ ಹೆಚ್ಚುವುದು ಹೇಗೆ?

ತೂಕ ಹೆಚ್ಚುವುದು ಹೇಗೆ?

ಥೈರಾಯ್ಡ್ ಹಾಮೋನ್ ಗಳು ಮನುಷ್ಯನ ರಕ್ತದಲ್ಲಿ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಹೈಪೋಥೈರಾಯ್ಡ್ ಉಂಟಾದಾಗ ಥೈರಾಯ್ಡ್ ಗ್ರಂಥಿಯು ಕಡಿಮೆ ಪ್ರಮಾಣದ ಹಾರ್ಮೋನ್ಅನ್ನು ಉತ್ಪಾದಿಸುತ್ತದೆ. ಇದು ಮೆಟಾಬಾಲಿಕ್ ದರವನ್ನು ಕಡಿಮೆ ಮಾಡುವುದು. ಮೆಟಾಬಲಿಸಂ ಎನ್ನುವುದು ದೇಹವು ಆಹಾರದ ಮೂಲಕ ಪಡೆದುಕೊಳ್ಳುವ ಶಕ್ತಿ ಎಂದು ಪರಿಗಣಿಸಲಾಗಿದೆ. ಹೆಚ್ಚುವರಿ ಕ್ಯಾಲೋರಿಗಳು ನಮ್ಮ ದೇಹದಲ್ಲಿ ಕೊಬ್ಬಿನಂತೆ ಸಂಗ್ರಹಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ನಮ್ಮ ದೇಹದ ತೂಕವು ಹೆಚ್ಚಲು ಪ್ರಾರಂಭಿಸುವುದು.

ತೂಕ ಇಳಿಯುವುದು ಹೇಗೆ?

ತೂಕ ಇಳಿಯುವುದು ಹೇಗೆ?

ಥೈರಾಯ್ಡ್ ಸಮಸ್ಯೆಯಿಂದ ನಿಧಾನ ಚಯಾಪಚಯ ಕ್ರಿಯೆ ಉಂಟಾಗುವುದು. ಇದರಿಂದ ಶೀಘ್ರವಾಗಿ ತೂಕ ಇಳಿಯುವುದು. ಹೃದಯ ಬಡಿತವು ಸಹ ಕಡಿಮೆಯಾಗುವುದು. ದಣಿವು, ಖಿನ್ನತೆ ಉಂಟಾಗುವುದಲ್ಲದೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಲು ಪ್ರಾರಂಭಿಸುವುದು.

ನಿಶ್ಯಕ್ತಿ ಮತ್ತು ಕಿರಿಕಿರಿ

ನಿಶ್ಯಕ್ತಿ ಮತ್ತು ಕಿರಿಕಿರಿ

ಥೈರಾಯ್ಡ್ ನಿಂದ ನಮ್ಮ ಭಾವನೆಗಳು ಮತ್ತು ದೇಹದ ಶಕ್ತಿಯ ಮೇಲೆ ಪರಿಣಾಮ ಉಂಟಾಗುವುದು. ಹೈಪೋಥೈರಾಯ್ಡಿಸಮ್ ನಿಂದ ಆಯಾಸ ಮತ್ತು ದೇಹದ ಶಕ್ತಿಯಲ್ಲಿ ಕೊರತೆ ಕಾಣಿಸಿಕೊಳ್ಳುವುದು. ಇದರಿಂದ ಯಾವಾಗಲೂ ಮನಸ್ಸಿಗೆ ಕಿರಿಕಿರಿ ಮತ್ತು ನಿದ್ರೆಯ ಸಮಸ್ಯೆ ಉಂಟಾಗಬಹುದು.

ಹೃದಯ ಬಡಿತದ ಏರಿಳಿತ

ಹೃದಯ ಬಡಿತದ ಏರಿಳಿತ

ಥೈರಾಯ್ಡ್ ನ ಹಾರ್ಮೋನುಗಳು ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಗಳ ಮೇಲೆ ಪರಿಣಾಮ ಬೀರುವುದು ಮತ್ತು ಇದು ಹೃದಯಬಡಿತದ ಮೇಲೂ ಪರಿಣಾಮ ಉಂಟು ಮಾಡಬಹುದು. ಥೈರಾಯ್ಡ್ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗಳು ಯಾವಾಗಲೂ ತಮ್ಮ ಹೃದಯಬಡಿತವು ಸಾಮಾನ್ಯಕ್ಕಿಂತ ಕಡಿಮೆಯಾದಂತಹ ಅನುಭವ ಹೊಂದಬಹುದು.

ದೇಹದ ವಿವಿಧ ಭಾಗದಲ್ಲಿನ ಸ್ನಾಯುಗಳು ಊದಿಕೊಳ್ಳುವುದು

ದೇಹದ ವಿವಿಧ ಭಾಗದಲ್ಲಿನ ಸ್ನಾಯುಗಳು ಊದಿಕೊಳ್ಳುವುದು

ಹೈಪೋಥೈರಾಯ್ಡಿಸಮ್ ದೇಹದ ವಿವಿಧ ಭಾಗಗಳಲ್ಲಿ ನೋವು ಉಂಟು ಮಾಡಬಹುದು. ದೇಹದ ವಿವಿಧ ಭಾಗದಲ್ಲಿನ ಸ್ನಾಯುಗಳು ಊದಿಕೊಳ್ಳುವುದು ಮತ್ತು ನರಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು. ಇದು ಥೈರಾಯ್ಡ್ ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.

ಒಣ ಚರ್ಮ ಮತ್ತು ಒಡೆದ ಉಗುರು

ಒಣ ಚರ್ಮ ಮತ್ತು ಒಡೆದ ಉಗುರು

ಒಣ ಹಾಗೂ ತುರಿಕೆ ಉಂಟು ಮಾಡುವ ಚರ್ಮವು ಥೈರಾಯ್ಡ್ ಗ್ರಂಥಿಯ ಸಮಸ್ಯೆಯ ಪ್ರಮುಖ ಲಕ್ಷಣವಾಗಿದೆ. ಉಗುರು ಉದ್ದಗಿನ ಗೆರೆಯಂತೆ ಒಡೆದುಹೋಗಿದ್ದರೆ ಇದರ ಬಗ್ಗೆ ನೀವು ಚಿಂತಿಸಬೇಕು. ಇದು ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ಕೂದಲು ಉದುರುವ ಸಮಸ್ಯೆ

ಕೂದಲು ಉದುರುವ ಸಮಸ್ಯೆ

ಥೈರಾಯ್ಡ್ ರೋಗ, ಸ್ವರಕ್ಷಿತ ರೋಗ ದೇಹದ ಬೆಳವಣಿಗೆಗೆ ಅಗತ್ಯವಾದ ತ್ರಿಯಡೋಥೈರಾಯಿನ್ ಮತ್ತು ಥೈರಾಕ್ಸಿನ್ ಎಂಬ ಹಾರ್ಮೋನುಗಳು ಥೈರಾಯಿಡ್ ನಲ್ಲಿರುತ್ತವೆ.ಹೈಪೋ ಥೈರಾಯಿಡ್ ಕಂಡುಬಂದಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ.

ಸಂಶೋಧನೆ ಪ್ರಕಾರ

ಸಂಶೋಧನೆ ಪ್ರಕಾರ

ಸಂಶೋಧನೆ ಪ್ರಕಾರ ತುಂಬಾ ಗೆರೆ ಬಿದ್ದಂತಹ ನಾನ್ ಸ್ಟಿಕ್ ಬಾಣಲೆಯಲ್ಲಿ ಅಡುಗೆ ಮಾಡಿ ತಿಂದರೆ ನಾನ್ ಸ್ಟಿಕ್ ತಯಾರಿಸುವಾಗ ಪರ್ಫ್ಲೋರೊಟೇನ್ ಸಲ್ಫೇಟ್ನಂತಹ ರಾಸಾಯನಿಕ ದೇಹವನ್ನು ಸೇರು ತ್ತದೆ. ಇದರ ಪರಿಣಾಮವಾಗಿ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ.

ಗರ್ಭನಿರೋಧಕ ಮಾತ್ರೆ

ಗರ್ಭನಿರೋಧಕ ಮಾತ್ರೆ

ಸಂತಾನವನ್ನು ಮುಂದೂಡುವ ದೃಷ್ಟಿಕೋನದಿಂದ ಕೆಲವು ಮಹಿಳೆಯರು ಗರ್ಭ ನಿರೋಧಕ ಮಾತ್ರೆಯನ್ನು ಸೇವಿಸುತ್ತಾರೆ. ಈ ಕಾರಣದಿಂದ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುವುದು. ಗರ್ಭನಿರೋಧಕ ಮಾತ್ರೆ ಸೇವಿಸಲು ಪ್ರಾರಂಭಿಸಿದ ಒಂದು ತಿಂಗಳಲ್ಲಿಯೆ ತಲೆಸುತ್ತು, ಸುಸ್ತು ಕಾಣಿಸಿಕೊಂಡರೆ ಅದು ಥೈರಾಯ್ಡ್ ಸಮಸ್ಯೆ ಆಗಿರಬಹುದು. ಅಧಿಕ ಒತ್ತಡದ ಹಾರ್ಮೋನ್ಗಳು ಬಿಡುಗಡೆಯಾಗುವುದರಿಂದ ಕೂಡ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ಆದ್ದರಿಂದ ದಿನ ಅರ್ಧಗಂಟೆ ಪ್ರಾಣಯಾಮ ಅಥವಾ ವ್ಯಾಯಾಮ ಮಾಡುವುದರಿಂದ ದೇಹದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.

ಒತ್ತಡವೂ ಒಂದು ಕಾರಣ

ಒತ್ತಡವೂ ಒಂದು ಕಾರಣ

ಮಹಿಳೆಯರು ತಮಗೆ ತಾವು ಒತ್ತಡ ಹೇರಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಯಾಕೆಂದರೆ ಒತ್ತಡವು ಅವರ ದೇಹದಲ್ಲಿ ಹಲವು ರೀತಿಯ ಹಾರ್ಮೋನುಗಳ ವ್ಯತ್ಯಯಕ್ಕೆ ಕಾರಣವಾಗುತ್ತೆ. ಯಾವಾಗ ಮಹಿಳೆಯರು ಒತ್ತಡಕ್ಕೆ ಸಿಲುಕುತ್ತಾರೋ ಆಗ ಅವರು ಥೈರಾಯ್ಡ್ ಸಮಸ್ಯೆಗೆ ಬಲಿಯಾಗುತ್ತಾರೆ. ಒತ್ತಡ ನಿಮ್ಮ ಥೈರಾಯ್ಡ್ ಗ್ರಂಥಿಯನ್ನು ಬಲಹೀನಗೊಳಿಸುತ್ತೆ. ಆಗ ಥೈರಾಯ್ಡ್ ಗ್ರಂಥಿಯು ತಾನು ಮಾಡಬೇಕಾಗಿರುವ ಕೆಲಸವನ್ನು ಮಾಡಲು ಅಶಕ್ತವಾಗುತ್ತೆ. ಆಗ ಆರೋಗ್ಯ ಸಮಸ್ಯೆ ಒಂದಾದ ಮೇಲೊಂದರಂತೆ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಥೈರಾಯ್ಡ್ ತೂಕ ಸಮಸ್ಯೆಗೆ ಆರೈಕೆ

ಥೈರಾಯ್ಡ್ ತೂಕ ಸಮಸ್ಯೆಗೆ ಆರೈಕೆ

ಥೈರಾಯ್ಡ್ ಸಮಸ್ಯೆಯಿಂದ ದೇಹದ ತೂಕ ಹೆಚ್ಚುತ್ತಿದೆ ಎಂದಾದರೆ ಕೆಲವು ಆರೋಗ್ಯ ಪದ್ಧತಿಯನ್ನು ಅನುಸರಿಸುವುದರ ಮೂಲಕ ಸಮಸ್ಯೆಗಳನ್ನು ನಿಯಂತ್ರಿಸಬಹುದು.

- ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸುಮಾರು 7ಗಂಟೆಗೆ ಬಿಸಿ ನೀರಿಗೆ ನಿಂಬೆ ರಸ, ಜೇನುತುಪ್ಪ, ಸೇಬು ಸೈಡರ್ ವಿನೆಗರ್ ಅನ್ನು ಸೇರಿಸಿ ಮಿಶ್ರಗೊಳಿಸಿ, ಸೇವಿಸಿ.

- 8-9 ಗಂಟೆಯ ಒಳಗೆ ಬಾಳೆಹಣ್ಣು ಮತ್ತು ದಾಳಿಂಬೆ ಬೀಜದ ಸಲಾಡ್ ಅಥವಾ ಸೇಬು, ಬಾಳೆ ಮತ್ತು ಚಿಯಾ ಬೀಜಗಳ ಸಲಾಡ್ ಒಂದು ಬೌಲ್ ಅಥವಾ ಬೇಯಿಸಿದ ಕಾಳುಗಳನ್ನು ಸೇವಿಸಬೇಕು.

- 10.30 ಗಂಟೆಗೆ ಕಡಿಮೆ ಕೊಬ್ಬಿನಂಶ ಇರುವ ಮೊಸರು ಅರ್ಧಕಪ್, ದಾಳಿಂಬೆ ಬೀಜ, ನೆನೆಸಿದ ಚಿಯಾ ಬೀಜ ಮತ್ತು ಅಲಂಕಾರಕ್ಕೆ ತಾಜಾ ಸೊಪ್ಪುಗಳನ್ನು ಬಳಸಿ ಸೇವಿಸಿ.

- ಮಧ್ಯಾಹ್ನ 1-2 ಗಂಟೆಯ ವೇಳೆಗೆ 1 ಬೌಲ್ ಓಟ್ಸ್, 2 ಮಲ್ಟಿ ಗ್ರೇನ್ ಚಪಾತಿ, 1 ಬೌಲ್ ದಾಲ್/ಮೊಸರು, ಸೂಪ್, ಅನ್ನ, ಬೇಯಿಸಿದ ತರಕಾರಿಯನ್ನು ಸೇವಿಸಬಹುದು.

- ನಂತರ ಮಜ್ಜಿಗೆ ಅಥವಾ ಗ್ರೀನ್ ಟೀ ಸೇವಿಸಿ.

- 4ಗಂಟೆಯ ತಿಂಡಿಗಾಗಿ ಒಣ ಹಣ್ಣುಗಳು, ಮೊಳಕೆ ಬರಿಸಿದ ಕಾಳು ಸೇರಿಸಿದಂತೆ ಆರೋಗ್ಯಕರ ತಿಂಡಿಯನ್ನು ಸೇವಿಸಿ.

- ರಾತ್ರಿ ಊಟಕ್ಕೆ ಮೊದಲು ಒಂದು ಪ್ಲೇಟ್ ಹಸಿರು ತರಕಾರಿ ಸೇವಿಸಿ.

- ರಾತ್ರಿ ಊಟಕ್ಕೆ ಸೂಪ್, ಚಪಾತಿ, ಕಂದು ಅಕ್ಕಿ ಸೇರಿದಂತೆ ಆರೋಗ್ಯಕರ ಆಹಾರವನ್ನು ಸೇವಿಸಿ.

- ಮಲಗುವ ಮುನ್ನ 30 ನಿಮಿಷ ಮೊದಲು ಒಂದು ಕಪ್ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ, ಸೇವಿಸಿ.

ಸೂಕ್ತ ಕ್ರಮ ಅನುಕರಣೆ ಅಗತ್ಯ

ಸೂಕ್ತ ಕ್ರಮ ಅನುಕರಣೆ ಅಗತ್ಯ

- ವೈದ್ಯರಲ್ಲಿ ಆರೋಗ್ಯ ತಪಾಸಣೆ ಮಾಡಿಸಿ, ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಪಡೆಯಿರಿ.

- ಸಾಕಷ್ಟು ನೀರನ್ನು (10-12 ಕಪ್) ಕುಡಿಯಬೇಕು.

- ನಿತ್ಯವೂ ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು. 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಉತ್ತಮ ಹವ್ಯಾಸ ಆಗುವುದು.

- ನಿತ್ಯವೂ 7-8 ಗಂಟೆಗಳ ಕಾಲ ಉತ್ತಮ ನಿದ್ರೆಯನ್ನು ಮಾಡಿ.

ಯಾವ ಪದಾರ್ಥಗಳನ್ನು ಸೇವಿಸಬಾರದು?

ಯಾವ ಪದಾರ್ಥಗಳನ್ನು ಸೇವಿಸಬಾರದು?

ಹೈಪೋ ಅಥವಾ ಹೈಪರ್ ಥೈರಾಯ್ಡ್ ಕಾಯಿಲೆ ಇರುವವರು ಸೋಯಾ ಪದಾರ್ಥಗಳನ್ನು ತಿನ್ನಬಾರದು. ಸೋಯಾ ಸಾಸ್ ಮತ್ತಿತರ ಸೋಯಾ ಪದಾರ್ಥಗಳ್ನು ಸೇವಿಸಿದರೆ ಹಾರ್ಮೋನ್ ನಲ್ಲಿ ವ್ಯತ್ಯಾಸ ಉಂಟಾಗುತ್ತದೆ.

ಗಿಡಮೂಲಿಕೆಯ ಆರೈಕೆ

ಗಿಡಮೂಲಿಕೆಯ ಆರೈಕೆ

ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡರೆ ಶೇ. 90ರಷ್ಟು ಮಹಿಳೆಯರಿಗೆ ತಲೆ ಸುತ್ತು, ಒತ್ತಡ, ನಿದ್ದೆ ಹೀನತೆ, ಕುತ್ತಿಗೆ ಬಳಿ ನೋವು ಕಾಣಿಸಿಕೊಳ್ಳುತ್ತದೆ. ಅಶ್ವಗಂಧ ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾದ ಔಷಧಿಯಾಗಿದೆ.

ಬ್ರೊಕೋಲಿ

ಬ್ರೊಕೋಲಿ

ಬ್ರೊಕೋಲಿಯಲ್ಲಿ ಗ್ವಾಯಟ್ರೊಜಿನ್ ಅಂಶವಿದ್ದು ಇದು ಥೈರಾಯ್ಡ್ ಅಯೋಡಿನ್ ಹೀರಿಕೊಳ್ಳುವುದನ್ನು ತಡೆಗಟ್ಟುತ್ತದೆ. ಅಯೋಡಿನ್ ಇಲ್ಲ ಅಂದರೆ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ಆಗಲು ಸಾಧ್ಯವಿಲ್ಲ. ಆದ್ದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಬ್ರೊಕೋಲಿ ಒಳ್ಳೆಯ ಆಹಾರವಾಗಿದೆ.

ಐಯೋಡಿನ್ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು

ಐಯೋಡಿನ್ ಅಧಿಕವಿರುವ ಆಹಾರಗಳನ್ನು ಸೇವಿಸಬೇಕು

ಸಮುದ್ರ ಆಹಾರಗಳು, ಮೊಸರು, ಆಲೂಗೆಡ್ಡೆ, ಸ್ಟ್ರಾಬರಿ ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು.

ಆರೋಗ್ಯಕರ ಕೊಬ್ಬಿನ ಆಹಾರ:

ಒಮೆಗಾ 3 ಕೊಬ್ಬಿನಂಶವಿರುವ ಆಹಾರಗಳನ್ನು ತಿನ್ನಬೇಕು. ಒಳ್ಳೆಯ ಕೊಬ್ಬಿನಂಶ ಇರುವ ಎಣ್ಣೆ ಬಳಸುವುದು ಒಳ್ಳೆಯದು. ಅಧಿಕ ಕ್ಯಾಲೋರಿ ಇರುವ ಎಣ್ಣೆ ಬಳಸಿ ತಯಾರಿಸಿದ ಅಡುಗೆಯನ್ನು ತಿನ್ನಬಾರದು.

ಕ್ಯಾಲ್ಸಿಯಂ ಇರುವ ಆಹಾರಗಳು:

ಕ್ಯಾಲ್ಸಿಯಂ ಅಧಿಕ ಇರುವ ಆಹಾರಗಳನ್ನು ಸೇವಿಸಬೇಕು. ಬಾದಾಮಿ, ಮೊಸರು, ಹಾಲು ಇವುಗಳಲ್ಲಿ ಕ್ಯಾಲ್ಸಿಯಂ ಅಂಶವಿರುತ್ತದೆ. ಕೆಫೀನ್ ಇರುವ ಅಂಶ ಸೇವಿಸಬಾರದು: ಡಾರ್ಕ್ ಚಾಕಲೇಟ್, ಕಾಫಿ ಇವುಗಳನ್ನುಲ್ಲಿ ಕೆಫೀನ್ ಇರುತ್ತದೆ. ಆದ್ದರಿಂದ ಇಂತಹ ವಸ್ತುಗಳನ್ನು ಮುಟ್ಟಬಾರದು.

ನಿಂಬೆಹಣ್ಣು

ನಿಂಬೆಹಣ್ಣು

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ನಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ನಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ... ಅದರಲ್ಲೂ ಥೈರಾಯ್ಡ್ ಕಾಯಿಲೆಗೆ ಹೇಳಿ ಮಾಡಿಸಿದ ಹಣ್ಣು. ಒಂದು ವೇಳೆ ಥೈರಾಯ್ಡ್ ಕಾಯಿಲೆ ಇದ್ದರೆ ತಲೆಸುತ್ತು, ಒತ್ತಡ ಮುಂತಾದ ತೊಂದರೆಗಳು ಕಾಣಸಿಗುತ್ತದೆ. ನಿಂಬೆ ಹಣ್ಣಿನ ರಸ ದೇಹಕ್ಕೆ ಸೇರಿದರೆ ಥೈರಾಯ್ಡ್ ಸಮಸ್ಯೆ ಬಹು ಬೇಗ ನಿವಾರಣೆಯಾಗುವುದು.

ಬೀಟ್ರೂಟ್

ಬೀಟ್ರೂಟ್

ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್‌ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್‌ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು . ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಮತ್ತು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು- ಮೊದಲಾದ ರೀತಿಯಲ್ಲಿ ಈ ಕೆಂಪುಕೆಂಪಾದ ಗಡ್ಡೆ ನಮ್ಮ ನೆರವಿಗೆ ಬರುತ್ತದೆ. ಅತ್ಯಂತ ಮುಖ್ಯವಾಗಿ ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದಾಗಿ ಉಂಟಾಗುವ ಅನೀಮಿಯಾ ಸ್ಥಿತಿಗೂ ಬೀಟ್‌ರೂಟ್ ನೀಡುವ ನೆರವು ಯಾವುದೇ ಬೇರೆ ಆಹಾರದಲ್ಲಿಲ್ಲ! ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಕರಗುವ ನಾರು ಇದ್ದು ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ಮಧ್ಯಮ ಗಾತ್ರದ ಬೀಟ್ರೂಟನ್ನು ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಹಾಗೆಯೇ ಸೇವಿಸಬಹುದು. ಇಲ್ಲವೇ ಅದನ್ನು ಮಿಕ್ಸರ್ಅಲ್ಲಿ ರುಬ್ಬಿ ರಸ ತೆಗೆದು, ಕುಡಿಯಬಹುದು.

English summary

Signs and Symptoms of thyroid and Diet plan for weight loss

In this article we explain what is Thyroid, symtoms of thyroid, diet For weight loss,Read more to know about
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more