For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆ ಅಥವಾ ತುಂಬಿದ ಹೊಟ್ಟೆ? ಸೆಕ್ಸ್ ಗೆ ಯಾವುದು ಒಳ್ಳೆಯದು?

|

ಕಾಮನೆಗಳು ಕೆರಳಿದರೂ ಅದನ್ನು ಎಲ್ಲೆಂದರಲ್ಲಿ, ಯಾವಾಗ ಬೇಕೋ ಆಗ ಪ್ರದರ್ಶಿಸಲು ಸಾಧ್ಯವಿಲ್ಲ. ಯಾಕೆಂದರೆ ಎಲ್ಲದಕ್ಕೂ ಒಂದು ಚೌಕಟ್ಟು ಇದೆ. ಇದನ್ನು ಮೀರಿಕೊಂಡು ಹೋಗುವಂತಿಲ್ಲ. ಲೈಂಗಿಕ ಕ್ರಿಯೆಗೆ ಒಂದು ಸಮಯವೆನ್ನುವುದು ಇದ್ದೇ ಇದೆ. ಹೆಚ್ಚಾಗಿ ದಂಪತಿಗಳು ರಾತ್ರಿ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಹಜ. ಹಗಲಿನಲ್ಲೂ ಇದರಲ್ಲಿ ತೊಡಗುವವರು ಇಲ್ಲವೆಂದಲ್ಲ.

ಆದರೆ ಸಹಜವಾಗಿ ಅಂದರೆ ಅದಕ್ಕೆ ರಾತ್ರಿಯೇ ಸೂಕ್ತವಾದ ಸಮಯ. ಇದರ ಹೊರತಾಗಿ ನೀವು ಖಾಲಿ ಹೊಟ್ಟೆಯಲ್ಲಿ ಲೈಂಗಿಕ ಕ್ರಿಯೆ ತೊಡಗಿದರೆ ಒಳ್ಳೆಯದೇ ಅಥವಾ ಹೊಟ್ಟೆ ತುಂಬಿಸಿಕೊಂಡು ಇದರಲ್ಲಿ ಭಾಗಿಯಾಗಬಹುದೇ ಎನ್ನುವ ವಾದಗಳು ಇದೆ. ಛೇ, ಇದೇನು ಹೀಗೆ ಹೇಳುತ್ತಿದ್ದಾರೆಂದು ನಿಮಗೆ ಅನಿಸಬಹುದು. ಆದರೆ ನಿಜವಾಗಿಯೂ ಇದು ದೊಡ್ಡ ಮಟ್ಟದಲ್ಲಿ ನಿಮ್ಮ ಪರಾಕಾಷ್ಠೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ....

ಯಾವುದು ಒಳ್ಳೆಯದು?

ಯಾವುದು ಒಳ್ಳೆಯದು?

ಖಾಲಿ ಹೊಟ್ಟೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಅದರಿಂದ ಹಲವಾರು ರೀತಿಯ ಪರಿಣಾಮಗಳು ಉಮಟಾಗುವುದು ಎಂದು ಹೇಳಲಾಗುತ್ತದೆ. ಲೈಂಗಿಕ ಕ್ರಿಯೆ ವೇಳೆ ನಿಮ್ಮ ಮೆದುಳು, ದೇಹ ಮತ್ತು ಹೊಟ್ಟೆಯು ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆ ತುಂಬಿದ ವೇಳೆ ನೀವು ಲೈಂಗಿಕ ಕ್ರಿಯೆ ವೇಳೆ ತೊಡಗಿಕೊಂಡರೆ ಆಗ ಅದು ನಿಮ್ಮ ವಿಶೇಷ ಕ್ಷಣಗಳ ಮೇಲೆ ಪರಿಣಾಮ ಬೀರುವುದು.

ಪುರುಷರಲ್ಲಿ ಲೈಂಗಿಕತೆ ಮೇಲೆ ಇದು ಹೇಗೆ ಪರಿಣಾಮ ಬೀರುವುದು?

ಪುರುಷರಲ್ಲಿ ಲೈಂಗಿಕತೆ ಮೇಲೆ ಇದು ಹೇಗೆ ಪರಿಣಾಮ ಬೀರುವುದು?

ಇಂಟರ್ನೆಟ್ ನಲ್ಲಿ ಈ ಬಗ್ಗೆ ಪ್ರಕಟಗೊಂಡಿರುವಂತಹ ವರದಿಯೊಂದರ ಪ್ರಕಾರ ನೀವು ಊಟ ಮಾಡಿದ ಬಳಿಕ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ರಕ್ತವು ಬೇಕಾಗಿರುವುದು. ಪುರುಷರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ವೇಳೆ ಕೂಡ ಇದೇ ಎರಡು ಅಂಶಗಳು ಅತೀ ಅಗತ್ಯವಾಗಿರುವುದು.

ಪುರುಷರಲ್ಲಿ ಲೈಂಗಿಕತೆ ಮೇಲೆ ಇದು ಹೇಗೆ ಪರಿಣಾಮ ಬೀರುವುದು?

ಪುರುಷರಲ್ಲಿ ಲೈಂಗಿಕತೆ ಮೇಲೆ ಇದು ಹೇಗೆ ಪರಿಣಾಮ ಬೀರುವುದು?

ಹೊಟ್ಟೆ ತುಂಬಿದ ಬಳಿಕ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಉದ್ರೇಕಕ್ಕೆ ಬೇಕಿರುವಂತಹ ಶಕ್ತಿ ಹಾಗೂ ರಕ್ತವು ಜೀರ್ಣಕ್ರಿಯೆಗೆ ಬಳಸಲ್ಪಟ್ಟಿರುವುದು. ಇದರಿಂದ ಹೊಟ್ಟೆ ತುಂಬಿದ ವೇಳೆ ಸೆಕ್ಸ್ ನ್ನು ಆನಂದಿಸಲು ಸಾಧ್ಯವಾಗದು. ಈ ವೇಳೆ ನಿಮಗೆ ಸೆಕ್ಸ್ ನ ಅತ್ಯುತ್ತಮ ಸುಖವು ಸಿಗದೇ ಇರಬಹುದು.

Most Read:ಮೂತ್ರಕೋಶ ತುಂಬಿದಾಗಲೇ ಸೆಕ್ಸ್ ಕೆರಳುವುದೇಕೆ?

ಮಹಿಳೆಯರ ಲೈಂಗಿಕತೆ ಮೇಲೂ ಪರಿಣಾಮ

ಮಹಿಳೆಯರ ಲೈಂಗಿಕತೆ ಮೇಲೂ ಪರಿಣಾಮ

ತುಂಬಿರುವ ಹೊಟ್ಟೆ ಅಥವಾ ಹೊಟ್ಟೆ ಉಬ್ಬರವಿದ್ದರೆ ಆಗ ಖಂಡಿತವಾಗಿಯೂ ನಿಮಗೆ ಚಲನಶೀಲತೆ ಪಡೆಯಲು ಸಾಧ್ಯವಿಲ್ಲ. ಹೊಟ್ಟೆ ತುಂಬಿದ್ದರೆ ಅದರಿಂದ ಮಹಿಳೆಯ ಲೈಂಗಿಕ ಪ್ರದರ್ಶನದ ಮೇಲೆ ಪರಿಣಾಮ ಬೀರುವುದು. ನಿಮ್ಮಲ್ಲಿ ಕ್ರಿಯಾಶೀಲತೆ ಇಲ್ಲವಾದರೆ ಆಗ ನಿಮ್ಮ ಸಂಗಾತಿಯು ಹಾಸಿಗೆಯಲ್ಲಿ ದೂರವಾಗಬಹುದು.

Most Read:ಪುರುಷರ ಸೆಕ್ಸ್ ಲೈಫ್ ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಮಹಿಳೆಯರ ಲೈಂಗಿಕತೆ ಮೇಲೂ ಪರಿಣಾಮ

ಮಹಿಳೆಯರ ಲೈಂಗಿಕತೆ ಮೇಲೂ ಪರಿಣಾಮ

ಮಹಿಳೆಯರು ಯಾವಾಗಲೂ ಊಟಕ್ಕೆ ಮೊದಲು ಮತ್ತು ಹೊಟ್ಟೆಯು ಸಂಪೂರ್ಣವಾಗಿ ತುಂಬದೆ ಇರುವ ವೇಳೆ ಸೆಕ್ಸ್ ನ್ನು ಆನಂದಿಸುವರು ಎಂದು ಅಧ್ಯಯನಗಳು ಹೇಳಿವೆ. ಹೊಟ್ಟೆ ತುಂಬಿದ ಬಳಿಕ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಅವರಿಗೆ ಅದಾಗಲೇ ತೃಪ್ತಿಯು ಸಿಕ್ಕಿದಂತೆ ಆಗುವುದು ಮತ್ತು ಇದರಿಂದ ಯಾವುದೇ ಚಟುವಟಿಕೆ ಬೇಕಿರುವುದಿಲ್ಲ.

ನಿರ್ಣಯ

ನಿರ್ಣಯ

ಹೊಟ್ಟೆ ತುಂಬುವಷ್ಟು ತಿಂದ ಬಳಿಕ ಸೆಕ್ಸ್ ಆನಂದಿಸಲು ಆಗಲ್ಲ. ಇದರಿಂದ ಹೊಟ್ಟೆ ತುಂಬಿಸಿಕೊಂಡು ಇದರಲ್ಲಿ ತೊಡಗಿಕೊಳ್ಳಬೇಡಿ. ಹೊಟ್ಟೆಯು ಖಾಲಿ ಅಥವಾ ಹಸಿವಿನಿಂದ ಕಿರುಚುತ್ತಿರಲೂ ಬಾರದು. ನೀವು ಮಾನಸಿಕ ಹಾಗೂ ದೈಹಿಕವಾಗಿ ಒಳ್ಳೆಯ ಭಾವನೆಯನ್ನು ಹೊಂದಿರುವ ವೇಳೆ ಸೆಕ್ಸ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

English summary

Sex on empty stomach-which one is good for sex?

Ever thought when sex is better - before a meal or after food? Yes, it may seem like a no-brainer moment but doing it at the right time may prove to be a wise idea. Not only does your pleasure depend on it but it could also impact your health.
X
Desktop Bottom Promotion