For Quick Alerts
ALLOW NOTIFICATIONS  
For Daily Alerts

ಈ ಬೇಸಿಗೆಯ ಆಹಾರ ಕ್ರಮದಿಂದ ಭಯಾನಕ ಚರ್ಮದ ಕ್ಯಾನ್ಸರ್ ಬರದಂತೆ ತಡೆಯಬಹುದು!

By Sushma Charhra
|

ಬೇಸಿಗೆಯಲ್ಲಿ ನೀವು ತೆಳುವಾದ ಬಟ್ಟೆ ಧರಿಸಿ, ಸೆಖೆ ಎಂದು ಮೈ ಕಾಣುವಂತೆ ತುಂಡುಡುಗೆಯನ್ನು ಧರಿಸಿ ಆರಾಮಾಗಿರಲು ಬಯುಸುತ್ತೀರಾ.. ಹಾಗಾದರೆ ನೀವೊಮ್ಮೆ ಯೋಚಿಸಲೇ ಬೇಕು. ಬೇಸಿಗೆಯಲ್ಲಿ ಭಯಾನಕವಾಗಿ ಬರುವ ಸೂರ್ಯನ ನೇರಳಾತೀತ ಕಿರಣಗಳು ನೇರವಾಗಿ ನಿಮ್ಮ ಚರ್ಮದ ಮೇಲೆ ಬೀಳುವುದರಿಂದ ಹಲವು ಕಾಯಿಲೆಗಳಿಗೆ ಕಾರಣವಾಗಬಹುದು. ಅದರಲ್ಲಿ ಪ್ರಮುಖವಾಗಿ ಚರ್ಮದ ಕ್ಯಾನ್ಸರ್ ಗೆ ಕಾರಣವಾಗಬಹುದು ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ.

ಭಾರತದಂತ ದೇಶದಲ್ಲಿ ಬೇಸಿಗೆಯ ಬೇಗೆ ಹೇಗಿರುತ್ತೆ ಅಂದರೆ ಕೆಲವು ಪ್ರದೇಶದಲ್ಲಿ ಜನರು ಹೈರಾಣಾಗಿ ಹೋಗುತ್ತಾರೆ. ಕೆಲವರು ಶಾರ್ಟ್ಸ್, ಮಿಡಿ. ಸ್ಕರ್ಟ್,ಫ್ಲಿಫ್ ಫ್ಲಾಫ್ ಉಡುಗೆಗಳನ್ನು ತೊಡಲು ಬಯಸುತ್ತಾರೆ. ಯಾಕೆಂದರೆ ಅದು ಅವರಿಗೆ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಭಾವನೆ ನೀಡುತ್ತೆ.

ಆದರೆ ಬೇಸಿಗೆಯಲ್ಲಿ ಬರುವ ಸೂರ್ಯನ ನೇರಳಾತೀತ ಕಿರಣಗಳು ಬಹಳ ಕಠಿಣವಾಗಿರುತ್ತೆ. ಹಾಗಾಗಿ ಆದಷ್ಟು ನಿಮ್ಮ ಚರ್ಮವನ್ನು ಪೂರ್ಣ ಮುಚ್ಚುವಂತೆ ಬಟ್ಟೆಗಳನ್ನು ಧರಿಸುವುದು ಸೂಕ್ತ. ಸೂರ್ಯನ ಕಿರಣದಿಂದ ಚರ್ಮದ ಮೇಲಾಗುವ ದುಷ್ಪರಿಣಾಮವನ್ನು ತಡೆಯಬಹುದು. ಪ್ರಮುಖವಾಗಿ ಚರ್ಮದ ಬಣ್ಣ ಬದಲಾಗುವುದು, ಚರ್ಮದ ಕ್ಯಾನ್ಸರ್, ಪಾರ್ಶ್ವವಾಯು ತಡೆಗಟ್ಟಲು ಸಹಕಾರಿ.

ಚರ್ಮದ ಕ್ಯಾನ್ಸರ್ ಅಂದರೆ, ಇದೊಂದು ಚರ್ಮದ ಜೀವಕೋಶಗಳನ್ನು ಹಾನಿಗೊಳಿಸಿ, ಅಸಹಜ ಕ್ಯಾನ್ಸರ್ ಜೀವಕೋಶಗಳು ಬೆಳವಣಿಗೆ ಹೊಂದಿ ದಿನದಿಂದ ದಿನಕ್ಕೆ ಚರ್ಮ ತನ್ನ ಸಹಜ ಸ್ಥಿತಿಯನ್ನು ಕಳೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಸರಿಯಾಗಿ ಇದಕ್ಕೆ ಚಿಕಿತ್ಸೆ ಪಡೆಯದೇ ಹೋದರೆ ಮುಂದೆ ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಸರಿಯಾದ ಸಮಯಕ್ಕೆ ಇದನ್ನು ಗಮನಿಸುವುದು ಮತ್ತು ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ. ಇತ್ತೀಚಿನ ಅಧ್ಯಯನವೊಂದು ತಿಳಿಸಿರುವ ಪ್ರಕಾರ ಸೂರ್ಯನ ನೇರಳಾತೀತ ಕಿರಣಗಳ ಸಪರ್ಷವೂ ಕೂಡ ಚರ್ಮದ ಕ್ಯಾನ್ಸರ್ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಆದರೆ ಇಲ್ಲಿ ಕೆಲವೊಂದು ಆಹಾರಕ್ರಮಗಳನ್ನು ಪಟ್ಟಿ ಮಾಡಲಾಗಿದೆ.ಇವುಗಳನ್ನು ಬೇಸಿಗೆಯಲ್ಲಿ ಅಳವಡಿಸಿಕೊಂಡರೆ ಚರ್ಮದ ಕ್ಯಾನ್ಸರ್ ಬರದಂತೆ ತಡೆಯಲು ಸಾಧ್ಯವಿದೆ.

1. ಬೆಳಗಿನ ತಿಂಡಿಗೆ ಓಟ್ಸ್

1. ಬೆಳಗಿನ ತಿಂಡಿಗೆ ಓಟ್ಸ್

ಹೆಚ್ಚಿನವರಿಗೆ ಈಗಾಗಲೇ ತಿಳಿದಿದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿಯನ್ನು ಬಿಟ್ಟುಬಿಡುವಂತಿಲ್ಲ. ಬೆಳಗಿನ ತಿಂಡಿಯನ್ನು ಬಿಟ್ಟುಬಿಡುವುದು ಇಲ್ಲದೆ ಅನಾರೋಗ್ಯಕಾರಿಯಾಗಿರುವ ಸಮೋಸ,ಜಂಕ್ ಫುಡ್, ಸ್ಟೀಟ್ ಗಳು, ಮಫೀನ್ ಗಳು,ಬಾಗೆಲ್ ಗಳನ್ನು ಸೇವಿಸುವುದು ಸೂಕ್ತವಲ್ಲ. ಇವುಗಳು ನಿಮ್ಮ ಆರೋಗ್ಯಕ್ಕೆ ಮತ್ತಷ್ಟು ಹಾನಿಯನ್ನು ತಂದೊಡ್ಡಬಲ್ಲವು. ಯಾಕಂದರೆ ಇವು ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಎಣ್ಣೆಯ ಅಂಶವನ್ನು ಒಳಗೊಂಡಿರುತ್ತೆ. ಇವು ಚರ್ಮದ ಜೀವಕೋಶಗಳಿಗೆ ಒಳ್ಳೆಯ ಆಹಾರವಲ್ಲ. ಬೆಳಗಿನ ತಿಂಡಿಗೆ ಉತ್ತಮ ಆಹಾರ ಎನಿಸಿರುವ ಓಟ್ಸ್ ಸೇವನೆಯಿಂದ ಕ್ಯಾನ್ಸರ್ ಜೀವಕೋಶಗಳು ಹುಟ್ಟಿಕೊಳ್ಳುವುದನ್ನು ಇದು ತಡೆಯುತ್ತೆ. ಪ್ರಮುಖವಾಗಿ ಚರ್ಮದ ಅಡಿ ಭಾಗದಲ್ಲಿ ಹುಟ್ಟಿಕೊಳ್ಳುವುದು ನಿಲ್ಲುತ್ತೆ.

2. ಮೊಸರು ಸೇವಿಸುವುದು

2. ಮೊಸರು ಸೇವಿಸುವುದು

ಆಹಾರ ತಜ್ಞರು ಮೊಸರಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಪ್ರತಿದಿನವೂ ಮೊಸರು ಸೇವಿಸಲು ಸಲಹೆ ನೀಡುತ್ತಾರೆ. ಅದು ಭಾರತೀಯ ಗಟ್ಟಿ ಮೊಸರೇ ಆಗಿರಬಹುದು ಇಲ್ಲವೇ ವಿದೇಶಿ ಯೋಗರ್ಟ್ ಕೂಡ ಆಗಿರಬಹುದು. ಬೇಸಿಗೆಯಲ್ಲಿ ಡಯಟ್ ನ ಪ್ರಮುಖ ಭಾಗವಾಗಿರುತ್ತೆ ಇದು. ದೇಹದ ಕೆಲವು ಪ್ರಮುಖ ಭಾಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಬೆಳೆಸುವ ಸಾಮರ್ಥ್ಯ ಮೊಸರಿಗಿದೆ. ಅಧ್ಯಯನವು ತಿಳಿಸಿರುವ ಪ್ರಕಾರ ಉತ್ತಮ ಬ್ಯಾಕ್ಟೀರಿಯಾಗಳಿಂದಾಗಿ ನಮ್ಮ ಚರ್ಮದಲ್ಲಿ ಉಂಟಾಗುವ ಯಾವುದೇ ಸಮಸ್ಯೆ ಪ್ರಮುಖವಾಗಿ ಕ್ಯಾನ್ಸರ್ ನಂತ ಸಮಸ್ಯೆ ಬರಲು ಸಾಧ್ಯವೇ ಇಲ್ಲ. ಯಾಕೆಂದರೆ ಈ ಉತ್ತಮ ಬ್ಯಾಕ್ಟೀರಿಯಾಗಳು ಕೆಟ್ಟ ಕ್ಯಾನ್ಸರ್ ಸೆಲ್ ಗಳು ಹುಟ್ಟಿಕೊಳ್ಳದಂತೆ ತಡೆಯುತ್ತೆ.

3. ಕಾಫಿ ಕುಡಿಯಿರಿ

3. ಕಾಫಿ ಕುಡಿಯಿರಿ

ಆಶ್ಚರ್ಯ ಆಗಬಹುದು. ಯಾಕೆಂದಕೆ ಕಾಫಿ ಸೇವನೆಯ ವಿಷಯದಲ್ಲಿ ಹಲವು ವರ್ಷಗಳಿಂದ ಧನಾತ್ಮಕ ಮತ್ತು ಋಣಾತ್ಮಕ ಚರ್ಚೆಗಳು ನಡೆಯುತ್ತಲೇ ಇವೆ. ದಿನಕ್ಕೆ ಒಂದು ಅಥವಾ ಎರಡು ಕಪ್ ಕಾಫಿ ಸೇವನೆಯು ದೇಹಕ್ಕೆ ಯಾವುದೇ ದುಷ್ಪರಿಣಾಮವನ್ನುಂಟು ಮಾಡುವುದಿಲ್ಲ ಎಂದು ಹೇಳಲಾಗುತ್ತೆ. ಅದರ ಜೊತೆಗೆ ಮತ್ತೊಂದಿಷ್ಟು ಖುಷಿಯ ವಿಚಾರಗಳಿವೆ- ಅಧ್ಯಯನವೊಂದು ತಿಳಿಸಿರುವ ಪ್ರಕಾರ ನಿಮ್ಮನ್ನ ಶಕ್ತಿವಂತರನ್ನಾಗಿ ಭಾವಿಸುವಂತೆ ಮಾಡುವುದು ಮಾತ್ರವಲ್ಲ , ಕಾಫಿಯು ಚರ್ಮದ ಕ್ಯಾನ್ಸರ್ ತಡೆಗಟ್ಟಲು ಕೂಡ ನೆರವಾಗುತ್ತೆ. ನೇರಳಾತೀತ ಕಿರಣಗಳು ಚರ್ಮದಲ್ಲಿ ಉಂಟುಮಾಡುವ ಸಮಸ್ಯೆಯ ವಿರುದ್ಧ ಹೋರಾಡುವ ಮತ್ತು ತೊಡೆದುಹಾಕುವ ಸಾಮರ್ಥ್ಯವುಳ್ಳ ಆಂಟಿಆಕ್ಸಿಡೆಂಟ್ ಗಳನ್ನು ಕಾಫಿ ಒಳಗೊಂಡಿರುತ್ತೆ. ಹಾಗಾಗಿ ನಿಮಗೆ ಚರ್ಮದ ಕ್ಯಾನ್ಸರ್ ಬರಲು ಸಾಧ್ಯವಿಲ್ಲ.

4. ಹಸಿರು ಸೊಪ್ಪುಗಳ ಸೇವನೆ

4. ಹಸಿರು ಸೊಪ್ಪುಗಳ ಸೇವನೆ

ಬಾಲ್ಯದಿಂದಲೂ ಕೂಡ ಹಸಿರು ಸೊಪ್ಪುಗಳ ಸೇವನೆಯನ್ನು ಅಧಿಕವಾಗಿಟ್ಟುಕೊಳ್ಳಬೇಕು ಎಂದು ಹೇಳುವುದು ಸುಮ್ಮನೆ ಅಲ್ಲ, ಬದಲಾಗಿ ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಹೇರಳವಾಗಿರುತ್ತೆ ಮತ್ತು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತೆ. ಅದರಲ್ಲೂ ಪುದೀನಾ,ಪಾಲಕ್, ಇತ್ಯಾದಿಗಳು ಬಹಳ ಸಹಕಾರಿ. ಅದರಲ್ಲೂ ಬೇಸಿಗೆಯಲ್ಲಿ ಇದರ ಸೇವನೆಯಿಂದ ಚರ್ಮದ ಕ್ಯಾನ್ಸರ್ ಬರದಂತೆ ತಡೆಯಲು ಸಾಧ್ಯ., ವಿಟಮಿನ್ ಎ,ವಿಟಮಿನ್ ಸಿ, ಇದರಲ್ಲಿ ಹೇರಳವಾಗಿರುವುದರಿಂದ ಚರ್ಮದ ಜೀವಕೋಶಗಳ ಮೇಲೆ ಸೂರ್ಯನು ಮಾಡುವ ಹಾನಿಯನ್ನು ಇವು ತಡೆಗಟ್ಟುತ್ತೆ.

5. ಟೋಮೆಟೋ ಸೇವಿಸಿ

5. ಟೋಮೆಟೋ ಸೇವಿಸಿ

ಬೇಸಿಗೆಯ ಬಿಸಿ ಒಂದು ಲೋಟ ತಣ್ಣನೆಯ ಟೋಮೆಟೋ ಜ್ಯೂಸ್ ಬಹಳಷ್ಟು ಉಪಯೋಗಕಾರಿ. ಅಥವಾ ನೀವು ಪ್ರತಿದಿನ ಸಲಾಡ್ ತಯಾರಿಸಿ ಕೂಡ ಇದನ್ನು ಸೇವಸಬಹುದು. ಜೀರ್ಣಕ್ರಿಯೆ ಉತ್ತಮಗೊಳಿಸುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವಿಕೆಯಂತ ಲಾಭಗಳನ್ನು ಹೊರತುಪಡಿಸಿ ಇನ್ನಷ್ಟು ಆರೋಗ್ಯ ಲಾಭಗಳು ಇದರಲ್ಲಿದ್ದು, ಪ್ರಮುಖವಾಗಿ ಚರ್ಮದ ಕ್ಯಾನ್ಸರ್ ತಡೆಗಟ್ಟಲು ಇದು ನೆರವಾಗುತ್ತೆ. ಇದರಲ್ಲಿರುವ ಲೈಕೋಪೆನ್ ಮತ್ತು ಸಸ್ಯಜನ್ಯ ವಸ್ತುಗಳು ಚರ್ಮವೂ ಹೀರಿಕೊಳ್ಳುವ ಸೂರ್ಯನ ನೇರಳಾತೀತ ಕಿರಣಗಳ ದುಷ್ಪರಿಣಾಮವನ್ನು ತಡೆಯುತ್ತೆ ಮತ್ತು ಚರ್ಮದ ಕ್ಯಾನ್ಸರ್ ಬರದಂತೆ ತಡೆಯುತ್ತೆ.

6. ಬೀಜಗಳ ಸೇವನೆ

6. ಬೀಜಗಳ ಸೇವನೆ

ಬಾದಾಮಿ, ಗೇರುಬೀಜವು ಅತ್ಯಧಿಕ ಪೋಷಕಾಂಶಗಳನ್ನು ಒಳಗೊಂಡಿದ್ದು, ದೇಹದ ಆರೋಗ್ಯಕ್ಕೆ ಬಹಳ ಹಿತವಾದದ್ದು ಅನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ವಿಟಮಿನ್ಸ್, ಪ್ರೋಟೀನ್ಸ್, ಕಬ್ಬಿಣಾಂಶ, ಒಮೆಗಾ-3 ಫ್ಯಾಟಿ ಆಸಿಡ್ ಗಳನ್ನು ಇವು ಒಳಗೊಂಡಿರುತ್ತೆ. ಹಲವು ಆರೋಗ್ಯ ಲಾಭಗಳು ಇದರಲ್ಲಿ ಅಡಕವಾಗಿದೆ. ಬೀಜಗಳು ಕೂಡ ಚರ್ಮದ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ. ವಿಟಮಿನ್ ಇ ಅಂಶವು ಇದರಲ್ಲಿರುವುದರಿಂದ ರಕ್ಷಣಾ ತಡೆಗೋಡೆಗಳಂತೆ ಇವು ವರ್ತಿಸುತ್ತೆ. ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆಯನ್ನು ಒದಗಿಸುತ್ತೆ.

7. ಗ್ರೀನ್ ಟೀ ಸೇವಿಸಿ

7. ಗ್ರೀನ್ ಟೀ ಸೇವಿಸಿ

ಹಲವು ತಾವು ಯಾವಾಗಲೂ ಸೇವಿಸುತ್ತಿದ್ದ ಕಾಫಿ, ಮತ್ತು ಟೀ ಸೇವನೆಯಿಂದ ಮುಕ್ತರಾಗಿ ಗ್ರೀನ್ ಟೀ ಸೇವಿಸಲು ಶುರು ಮಾಡಿದ್ದಾರೆ. ಯಾಕೆಂದರೆ ಗ್ರೀನ್ ಟೀ ಸೇವನೆಯಿಂದ ಹಲವು ಆರೋಗ್ಯ ಲಾಭಗಳಿದೆ ಎಂಬುದು ಅವರಿಗೆ ಅರಿವಾಗಿದೆ. ಒತ್ತಡ, ತೂಕ ಇಳಿಸುವಿಕೆ.,ಇತ್ಯಾದಿ ಸಮಸ್ಯೆಗಳಿಗೆ ಮಾತ್ರವಲ್ಲ ಬದಲಾಗಿ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಫ್ರೀರ್ಯಾಡಿಕಲ್ ಗಳು ಚರ್ಮಕ್ಕೆ ಉಂಟುಮಾಡುವ ಹಾನಿಯನ್ನು ತಡೆಗಟ್ಟಲು ಸಹ ನೆರವಾಗುತ್ತವೆ., ಸೂರ್ಯನ ಕಿರಣಗಳಿಂದ ಉಂಟಾಗುವ ಚರ್ಮದ ಕ್ಯಾನ್ಸರ್ ತಡೆಗೆ ಇದು ಬಹಳ ಸಹಕಾರಿ.

English summary

Natural Remedies For Skin Cancer

Skin cancer is quite a raging variant of cancer. You will find a lot of people suffering from this cancer type in the modern world. Why is skin cancer caused? Most common cause of skin cancer is sun. When your skin is exposed to the sun for long hours, you will find that you are bound by skin cancer. You would see that despite having covered your body with various kinds of sun screen lotions, your body is tormented by skin cancer in some way.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more