For Quick Alerts
ALLOW NOTIFICATIONS  
For Daily Alerts

ಪೈಲ್ಸ್‌ಗೆ ಮನೆಯಲ್ಲಿಯೇ ಚಿಕಿತ್ಸೆ- ಒಂದೆರಡು ದಿನಗಳಲ್ಲಿಯೇ ಗುಣಮುಖವಾಗುವಿರಿ

By Hemanth
|

ಜೀವನದಲ್ಲಿ ಏನಾದರೂ ಬರಲಿ, ಆದರೆ ಪೈಲ್ಸ್ ಮಾತ್ರ ಬೇಡ ಎನ್ನುವ ದುಃಖದ ಮಾತು ಈ ಕಾಯಿಲೆಯಿಂದ ಬಳಲುತ್ತಿರುವವರ ಬಾಯಿಯಿಂದ ಬರುವುದು. ಯಾಕೆಂದರೆ ಪೈಲ್ಸ್ ಇರುವಂತಹ ವ್ಯಕ್ತಿಗೆ ಸರಿಯಾಗಿ ತನ್ನ ಚಟುವಟಿಕೆ ಮಾಡಿಕೊಳ್ಳಲು ಆಗಲ್ಲ. ಕುಳಿತುಕೊಳ್ಳಲು ಆಗದೆ, ನೆಟ್ಟಗೆ ನಿಲ್ಲಲು ಆಗದಂತಹ ಪರಿಸ್ಥಿತಿ. ಗುದನಾಳದ ಹೊರಗಡೆ ಅಥವಾ ಒಳಗೆ ಕಾಣಿಸಿಕೊಳ್ಳುವ ಊತವೇ ಪೈಲ್ಸ್. ಇದು ಪ್ರಾಣಹಾನಿಯನ್ನು ಉಂಟು ಮಾಡದೆ ಇದ್ದರೂ, ನೋವಿನಿಂದಾಗಿ ವ್ಯಕ್ತಿಯು ಹಲವಾರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ವಯಸ್ಸಾಗುತ್ತಾ ಹೋದಂತೆ ಪೈಲ್ಸ್ ಸಮಸ್ಯೆ ಜಾಸ್ತಿಯಾಗಿ ಕಾಡುತ್ತದೆ

ವಯಸ್ಸಾಗುತ್ತಾ ಹೋದಂತೆ ಪೈಲ್ಸ್ ಸಮಸ್ಯೆ ಜಾಸ್ತಿಯಾಗಿ ಕಾಡುತ್ತದೆ

45-65 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಪೈಲ್ಸ್ ಕಾಣಿಸಿಕೊಳ್ಳುವುದು. ಆದರೆ ಇಂದಿನ ದಿನಗಳಲ್ಲಿ ಜೀವನಶೈಲಿ ಪ್ರಭಾವದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಪೈಲ್ಸ್ ಕಾಣಿಸಿಕೊಳ್ಳುವುದು. ಗುದನಾಳದಲ್ಲಿ ಊತ ಮತ್ತು ಉರಿಯೂತ ಕಂಡುಬಂದಾಗ ಪೈಲ್ಸ್ ಸಮಸ್ಯೆಯಾಗುವುದು. ಅನುವಂಶೀಯತೆ, ಅಧಿಕ ಭಾರ ಎತ್ತುವುದು, ಮಲಬದ್ಧತೆ, ಆಹಾರದ ಅಲರ್ಜಿ, ನಾರಿನಾಂಶ ಕಡಿಮೆ ಇರುವ ಆಹಾರ ಸೇವನೆ, ಬೊಜ್ಜು, ಗರ್ಭಧಾರಣೆ, ದೈಹಿಕ ಚಟುವಟಿಕೆ ಕೊರತೆ ಮತ್ತು ದೀರ್ಘಕಾಲದ ತನಕ ಕುಳಿತು ಅಥವಾ ನಿಂತುಕೊಂಡಿರುವುದು ಪೈಲ್ಸ್ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಾಗಿವೆ. ವಯಸ್ಸಾಗುತ್ತಾ ಹೋದಂತೆ ಪೈಲ್ಸ್ ಬರುವಂತಹ ಸಾಧ್ಯತೆಯು ಹೆಚ್ಚಾಗುತ್ತಾ ಹೋಗುವುದು. ಗುದನಾಳದ ಸುತ್ತಲು ರಕ್ತಹೆಪ್ಪುಗಟ್ಟುವಿಕೆ, ಮಲವಿಸರ್ಜನೆ ವೇಳೆ ರಕ್ತಸ್ರಾವ, ಗುದನಾಳ ಸಮೀಪ ಕಿರಿಕಿರಿ ಇತ್ಯಾದಿಗಳು. ಈ ಲೇಖನದಲ್ಲಿ ಪೈಲ್ಸ್ ಗೆ ಕೆಲವೊಂದು ಮನೆಮದ್ದುಗಳನ್ನು ತಿಳಿಸಲಾಗಿದೆ. ಇದನ್ನು ಪೈಲ್ಸ್ ಇರುವವರು ಪ್ರಯತ್ನಿಸಿ ನೋಡಿ, ಪರಿಹಾರ ಕಂಡುಕೊಳ್ಳಬಹುದು.

1. ಅಲೋವೆರಾ

1. ಅಲೋವೆರಾ

ಅಲೋವೆರಾದಲ್ಲಿ ಉರಿಯೂತ ಶಮನಕಾರಿ ಮತ್ತು ಚಿಕಿತ್ಸಕ ಗುಣಗಳು ಇವೆ. ಪೈಲ್ಸ್ ನಿಂದ ಉಂಟಾಗಿರುವಂತಹ ಉರಿಯೂತವನ್ನು ಇದು ನಿವಾರಣೆ ಮಾಡುವುದು.

* ಗುದನಾಳಕ್ಕೆ ಸ್ವಲ್ಪ ಅಲೋವೆರಾ ಲೋಳೆ ಹಚ್ಚಿಕೊಳ್ಳಿ.

* ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.

* ಇದು ನೋವಿನಿಂದ ಪರಿಹಾರ ನೀಡುವುದು ಮತ್ತು ಉರಿ ಕಡಿಮೆ ಮಾಡುವುದು.

2. ಲಿಂಬೆರಸ

2. ಲಿಂಬೆರಸ

ಲಿಂಬೆರಸದಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಕ್ಯಾಪಿಲ್ಲರಿಸ್ ಮತ್ತು ರಕ್ತನಾಳದ ಗೋಡೆಗಳನ್ನು ಬಲಗೊಳಿಸಿ, ಪೈಲ್ಸ್ ನಿಂದ ಪರಿಹಾರ ನೀಡುವುದು.

*ಅರ್ಧ ಲಿಂಬೆ ರಸವನ್ನು ಒಂದು ಕಪ್ ಬಿಸಿ ನೀರಿಗೆ ಹಾಕಿ ಕುಡಿಯಿರಿ.

* ಮೂರು ಗಂಟೆಗೊಮ್ಮೆ ಹೀಗೆ ಕುಡಿಯಿರಿ.

Most Read:ಕಡ್ಲೆಹಿಟ್ಟು ಬೋಂಡಾ ಮಾಡುವುದಕ್ಕೆ ಮಾತ್ರವಲ್ಲ-ಆರೋಗ್ಯಕ್ಕೂ ಬಲು ಉಪಕಾರಿ!

3. ಆಲಿವ್ ತೈಲ

3. ಆಲಿವ್ ತೈಲ

ಆಲಿವ್ ತೈಲದಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಿ, ಉರಿಯೂತ ಕಡಿಮೆ ಮಾಡಲು ನೆರವಾಗುವುದು.

* ಪ್ರತಿದಿನ ಒಂದು ಚಮಚ ಆಲಿವ್ ತೈಲ ಸೇವಿಸಿ.

Most Read:ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ

4. ಬಾದಾಮಿ ಎಣ್ಣೆ

4. ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ಅಂಗಾಂಶಗಳನ್ನು ಆಳವಾಗಿ ಹೀರಿಕೊಳ್ಳುವ ಗುಣವಿದೆ ಮತ್ತು ಇದು ಪೈಲ್ಸ್ ಗೆ ಒಳ್ಳೆಯ ಮನೆಮದ್ದು.

* ಬಾದಾಮಿ ಎಣ್ಣೆಯಲ್ಲಿ ಹತ್ತಿ ಉಂಡೆ ಅದ್ದಿಡಿ ಮತ್ತು ಇದನ್ನು ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ.

* ದಿನದಲ್ಲಿ ಹಲವಾರು ಬಾರಿ ಇದನ್ನು ಮಾಡಿ.

5. ಇಡೀ ಧಾನ್ಯಗಳು

5. ಇಡೀ ಧಾನ್ಯಗಳು

ಇಡೀ ಧಾನ್ಯಗಳಲ್ಲಿ ಅಧಿಕ ಮಟ್ಟದ ನಾರಿನಾಂಶಗಳು ಇವೆ. ಇದು ಪೈಲ್ಸ್ ನ ಲಕ್ಷಣಗಳು ಮತ್ತು ರಕ್ತಸ್ರಾವ ಕಡಿಮೆ ಮಾಡುವುದು.

* ನಾರಿನಾಂಶ ಅಧಿಕವಾಗಿರುವಂತಹ ಓಟ್ಸ್, ಬಾರ್ಲಿ, ಕಂದುಅಕ್ಕಿ, ಮಿಲ್ಲೆಟ್, ಕ್ವಿನೊಯಾದಂತಹ ನಾರಿನಾಂಶ ಅಧಿಕವಾಗಿರುವುದನ್ನು ಸೇವನೆ ಮಾಡಿ.

6. ಆ್ಯಪಲ್ ಸೀಡರ್ ವಿನೇಗರ್

6. ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಸಂಕೋಚನ ಗುಣವಿದೆ. ಇದು ಊದಿಕೊಂಡಿರುವ ರಕ್ತನಾಳವು ಕುಗ್ಗುವಂತೆ ಮಾಡುವುದು ಮತ್ತು ಉರಿಯೂತ ಹಾಗೂ ಕಿರಿಕಿರಿಯಿಂದ ಪರಿಹಾರ ನೀಡುವುದು.

* ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ನ್ನು ಒಂದು ಲೋಟ ನೀರಿಗೆ ಹಾಕಿ.

* ಪ್ರತಿನಿತ್ಯ ಎರಡು ಸಲ ಕುಡಿಯಿರಿ.

7. ಹರಳೆಣ್ಣೆ

7. ಹರಳೆಣ್ಣೆ

ಹರಳೆಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್, ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಿ ಗುಣಗಳು ಇವೆ. ಪೈಲ್ಸ್ ನ ಗಾತ್ರ ತಗ್ಗಿಸಿ, ನೋವು ಕಡಿಮೆ ಮಾಡುವುದು.

* ಪ್ರತೀ ರಾತ್ರಿ 3 ಮಿ.ಲೀ. ಹರಳೆಣ್ಣೆಯನ್ನು ಒಂದು ಲೋಟ ಹಾಲಿಗೆ ಹಾಕಿ ಕುಡಿಯಿರಿ.

8. ತ್ರಿಫಲ ಹುಡಿ

8. ತ್ರಿಫಲ ಹುಡಿ

ತ್ರಿಫಲ ಹುಡಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಪೈಲ್ಸ್ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.

* 4 ಗ್ರಾಂ.ತ್ರಿಫಲ ಹುಡಿಯನ್ನು ಒಂದು ಕಪ್ ಬಿಸಿ ನೀರಿಗೆ ಹಾಕಿ ಸೇವಿಸಿ.

* ಪ್ರತಿದಿನ ಮಲಗುವ ಮೊದಲು ನೀವು ಇದರ ಸೇವನೆ ಮಾಡಿ.

9. ಬ್ಲ್ಯಾಕ್ ಟೀ(ಕಪ್ಪಚಹಾ) ಬ್ಯಾಗ್ ಗಳು

9. ಬ್ಲ್ಯಾಕ್ ಟೀ(ಕಪ್ಪಚಹಾ) ಬ್ಯಾಗ್ ಗಳು

ಚಹಾದಲ್ಲಿ ಟನ್ನಿಕ್ ಆಮ್ಲವಿದ್ದು, ಇದು ನೈಸರ್ಗಿಕ ಚಿಕಿತ್ಸಕಾರಿ. ಇದು ಪೈಲ್ಸ್ ನಿಂದ ಉಂಟಾಗಿರುವಂತಹ ಊತ ಮತ್ತು ನೋವು ಕಡಿಮೆ ಮಾಡುವುದು.

* ಬಿಸಿನೀರಿನಲ್ಲಿ ಬ್ಲ್ಯಾಕ್ ಟೀ ಬ್ಯಾಗ್ ಅದ್ದಿಡಿ.

* ಇದನ್ನು ನೀರಿನಿಂದ ತೆಗೆದು ತಣ್ಣಗಾಗಲು ಬಿಡಿ.

* 10 ನಿಮಿಷ ಕಾಲ ಸ್ವಲ್ಪ ಬಿಸಿಯಾಗಿರುವ ಟೀ ಬ್ಯಾಗ್ ನ್ನು ಊತದ ಜಾಗಕ್ಕೆ ಇಡಿ.

* ದಿನದಲ್ಲಿ ಎರಡು ಅಥವಾ ಮೂರು ಸಲ ಹೀಗೆ ಮಾಡಿ.

10. ನೀರು

10. ನೀರು

ಒಳಗಿನ ಅಥವಾ ಹೊರಗಿನ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ಸಾಕಷ್ಟು ನೀರು ಕುಡಿಯಬೇಕು. 8-10 ಲೋಟ ನೀರು ಪ್ರತಿನಿತ್ಯ ಕುಡಿಯಿರಿ.

ನೀರನ್ನು ಅತಿಯಾಗಿ ಸೇವಿಸಿದರೆ ಒಳಗಿನ ವ್ಯವಸ್ಥೆಯು ಶುದ್ಧೀಕರಿಸಲ್ಪಡುವುದು ಮತ್ತು ಸಂಪೂರ್ಣ ದೇಹಕ್ಕೆ ತೇವಾಂಶ ಸಿಗುವುದು. ಇದು ಕರುಳಿನ ಕ್ರಿಯೆ ಸರಾಗವಾಗಿಸಿ, ಮಲ ಮೃಧುವಾಗುವಂತೆ ಮಾಡುವುದು.

11. ಕಲ್ಲುಪ್ಪು

11. ಕಲ್ಲುಪ್ಪು

ಕಲ್ಲುಪ್ಪು ಹಾಕಿಕೊಂಡು ಸ್ನಾನ ಮಾಡಿಕೊಂಡರೆ ಪೈಲ್ಸ್ ನಿಂದ ಆಗುವಂತಹ ಕಿರಿಕಿರಿ ಕಡಿಮೆಯಾಗುವುದು. ಯಾಕೆಂದರ ಕಲ್ಲುಪ್ಪಿನಲ್ಲಿ ಮೆಗ್ನಿಶಿಯಂ ಸಲ್ಫೇಟ್ ಇದ್ದು, ನೋವು ಕಡಿಮೆ ಮಾಡಿ ಪರಿಹಾರ ನೀಡುವುದು.

* ಮಲವಿಸರ್ಜನೆ ಬಳಿಕ 20 ನಿಮಿಷ ಕಾಲ ಬಿಸಿ ನೀರಿನ ಸ್ನಾನ ಮಾಡಿದರೆ ಪರಿಣಾಮಕಾರಿ.

ಈ ಲೇಖನವನ್ನು ಶೇರ್ ಮಾಡಲು ಮರೆಯಬೇಡಿ. ನೀವೊಬ್ಬರು ಶೇರ್ ಮಾಡಿದರೆ ಅದು ಹಲವರಿಗೆ ಉಪಯೋಗವಾಗಬಲ್ಲದು.

12.ಬಾಳೆಹಣ್ಣು

12.ಬಾಳೆಹಣ್ಣು

ಬಾಳೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ 3 ಬಾರಿ ಕುಡಿಯಿರಿ. ಈ ರೀತಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು.

Most Read:ತಾನು ಕಷ್ಟದಲ್ಲಿದ್ದರೂ, ಇತರರಿಗೆ ಸಹಾಯ ಮಾಡುವ ರಾಶಿಯವರು...

13. ಮೂಲಂಗಿಯ ಜ್ಯೂಸ್ ಮಾಡಿ ಕುಡಿಯಿರಿ

13. ಮೂಲಂಗಿಯ ಜ್ಯೂಸ್ ಮಾಡಿ ಕುಡಿಯಿರಿ

ಒಂದೆರಡು ಮೂಲಂಗಿಯನ್ನು ಚೆನ್ನಾಗಿ ತೊಳೆದು, ಸಣ್ಣಗೆ ಕತ್ತರಿಸಿ ಮಿಕ್ಸಿಯಲ್ಲಿ ನೀರಿನೊಂದಿಗೆ ಗೊಟಾಯಿಸಿ ಇದಕ್ಕೆ ಕೊಂಚವೇ ಉಪ್ಪು ಸೇರಿಸಿ ದಿನಕ್ಕೆ ಎರಡು ಬಾರಿ ಒಂದೊಂದು ಲೋಟ ಕುಡಿಯಿದರೆ, ಮೂಲವ್ಯಾಧಿ ನಿಯಂತ್ರಣಕ್ಕೆ ಬರುವುದು.

14. ಬೀನ್ಸ್

14. ಬೀನ್ಸ್

ಹಸಿರು ಮತ್ತು ಎಳೆಯ ಬೀನ್ಸ್ (ಕನ್ನಡದಲ್ಲಿ ತಿಂಗಳಾವರೆ) ಕೋಡುಗಳನ್ನು ಹಸಿಯಾಗಿ ತಿಂದಷ್ಟೂ ಮೂಲವ್ಯಾಧಿಗೆ ಉತ್ತಮ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಹಾಗೂ ಪೋಷಕಾಂಶಗಳಿವೆ. ಇದನ್ನು ಮೂಲವ್ಯಾಧಿ ಪೂರ್ಣವಾಗಿ ಗುಣವಾಗುವವರೆಗೂ ನಿತ್ಯವೂ ಸೇವಿಸುವುದು ಉತ್ತಮ. ಇದರೊಂದಿಗೆ ಬೀನ್ಸ್ ಬೀಜಗಳು, ಚಪ್ಪರದಾವರೆ ಬೀಜಗಳು, ಅಲಸಂಡೆ ಕಾಳು ಮೊದಲಾದವು ಸಹಾ ಉತ್ತಮವಾದ ಪರಿಹಾರವನ್ನು ಒದಗಿಸುತ್ತವೆ.

15. ನೇರಳೆ ಹಣ್ಣು

15. ನೇರಳೆ ಹಣ್ಣು

ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೇರಳೆ ಹಣ್ಣು ಬಹಳ ಒಳ್ಳೆಯದು. ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಗುಣವಾಗುವುದು.

English summary

15 Natural Home Remedies For Piles

Piles, also called haemorrhoids, are swellings that occur inside and around the anus. Though piles are not considered a serious problem and generally they disappear on their own, they can be painful. However, sometimes, surgical procedures are required to remove piles. Piles can affect people at some point in their lives between ages 45 and 65. In this article, we will be discussing about the natural home remedies to treat piles.
X
Desktop Bottom Promotion