For Quick Alerts
ALLOW NOTIFICATIONS  
For Daily Alerts

ಪುರುಷರ ಶಿಶ್ನದ ಮುಂದೊಗಲಿನ ಸಮಸ್ಯೆಗೆ ಒಂದಿಷ್ಟು ಸರಳ ಟಿಪ್ಸ್

|

ಮನುಷ್ಯನ ಪ್ರತಿಯೊಂದು ಅಂಗವು ಪ್ರಕೃತಿ ಸಹಜವಾಗಿ ಬೆಳವಣಿಗೆಯಾದಂತೆ ಅದು ಬೆಳವಣಿಗೆಯಾಗುತ್ತಾ ಹೋಗುವುದು. ಇದರಲ್ಲಿ ಮುಖವಾಗಿ ಜನನೇಂದ್ರೀಯವು ಪ್ರೌಢವಸ್ಥೆಗೆ ಬರುತ್ತಿರುವಂತೆ ಬದಲಾವಣೆ ಕಾಣುವುದು.

Mens Foreskin problems and care

ಇದರಲ್ಲಿ ಪ್ರಮುಖವಾಗಿ ಪುರುಷರ ಮುಂದೊಗಲು ಎಂದರೆ ಶಿಶ್ನದ ತುದಿಗೆ ಅಂಟಿಕೊಂಡಿರುವ ಚರ್ಮ. ಇದು ಬಾಲ್ಯದಲ್ಲಿ ಶಿಶ್ನದ ತುದಿಗೆ ಅಂಟಿಕೊಂಡಿರುವುದು. ಆದರೆ ಇದರ ಬಳಿಕ ಅಂದರೆ ಮಕ್ಕಳು ಬೆಳದಂತೆ ಇದು ಹಿಂದಕ್ಕೆ ಸರಿಯುವುದು. ಬನ್ನಿ ಈ ಲೇಖನದಲ್ಲಿ ಮುಂದೊಗಲಿನ ಬಗ್ಗೆ ಮತ್ತಷ್ಟು ತಿಳಿಯಿರಿ.

ಮುಂದೊಗಲು ಎಂದರೇನು?

ಮುಂದೊಗಲು ಎಂದರೇನು?

ಮುಂದೊಗಲು ಎಂದರೆ ಶಿಶ್ನವನ್ನು ಆವರಿಸಿಕೊಂಡಿರುವಂತಹ ಚರ್ಮದ ಪದರ. ಹುಟ್ಟಿದಾಗ ಮುಂದೊಗಲು ಮತ್ತು ಶಿಶ್ನದ ತಲೆಯು ಲಘುವಾಗಿ ಅಂಟಿಕೊಂಡಿರುವುದು. ಹೆಚ್ಚಿನ ಬಾಲಕರಲ್ಲಿ ಐದರ ಹರೆಯದ ವೇಳೆ ಮುಂದೊಗಲು ಹಿಂದಕ್ಕೆ ಸರಿಯುವುದು ಮತ್ತು ಪ್ರೌಢಾವಸ್ಥೆ ವೇಳೆ ಹತ್ತರಲ್ಲಿ 9 ಬಾಲಕರ ಶಿಶ್ನದ ಚರ್ಮವು ಸಂಪೂರ್ಣವಾಗಿ ಹಿಂದಕ್ಕೆ ಸರಿಯಲ್ಪಡುವುದು.

Most Read: ಪುರುಷರನ್ನು ಕಾಡುವ 'ಚಳಿಗಾಲದ ಶಿಶ್ನ'ದ ಸಮಸ್ಯೆ!

ಮುಂದೊಲಿನ ಚರ್ಮದ ಸಮಸ್ಯೆಗಳು

ಮುಂದೊಲಿನ ಚರ್ಮದ ಸಮಸ್ಯೆಗಳು

ಸುನ್ನತಿಗೊಳಿಸದ ಅಥವಾ ಸರಿಯಾಗಿ ಸುನ್ನತೀಕರಿಸದ ಪುರುಷರು ಹಾಗೂ ಹುಡುಗರಲ್ಲಿ ಎರಡು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದು ಫಿಮೊಸಿಸ್ ಮತ್ತು ಪಾರಾಫಿಮೊಸಿಸ್ ಎನ್ನುವುದು.

ಫಿಮೊಸಿಸ್

ಫಿಮೊಸಿಸ್

ಶಿಶ್ನದ ತಲೆಯಿಂದ ಮುಂದೊಗಲು ಹಿಂದಕ್ಕೆ ಸರಿಯದೆ ಇದ್ದಾಗ ಈ ಸಮಸ್ಯೆಯು ಕಾಣಿಸಿಕೊಳ್ಳುವುದು. ಇದನ್ನು ಫಿಮೊಸಿಸ್ ಎಂದು ಕರೆಯುವರು. ಇಂತಹ ಪರಿಸ್ಥಿತಿಯು ಮಕ್ಕಳಲ್ಲಿ ಕಂಡುಬರುವುದು ಮತ್ತು ಅಪರೂಪದ ಸಂದರ್ಭದಲ್ಲಿ ಪುರುಷರಲ್ಲಿ ಕಂಡುಬರುತ್ತದೆ. ಬಾಲ್ಯದಲ್ಲಿ ಅಂದರೆ ಮೊದಲ ಐದು ವರ್ಷಗಳಲ್ಲಿ ಚರ್ಮವು ಹಿಂದಕ್ಕೆ ಹೋಗದೆ ಇರುವುದು. ಈ ಪರಿಸ್ಥಿತಿಯನ್ನು ಸಾಮಾನ್ಯವಾಗಿ ಫಿಮೊಸಿಸ್ ಎಂದು ಕರೆಯಲಾಗುತ್ತದೆ. ಇದು ಐದರ ಕೆಳಹರೆಯದ ಬಾಲಕರಲ್ಲಿ ಕಂಡುಬರುವುದು. ಮೂರು ವರ್ಷದ ತನಕ ಇದು ಇರಬಹುದು. ಈ ಸಮಸ್ಯೆಯು ಜನ್ಮಜಾತ ಸಮಸ್ಯಯೇನಲ್ಲ. ಆದರೆ ಇದರಿಂದ ಕೆಲವೊಂದು ಸಮಸ್ಯೆಗಳು ಕಂಡುಬರಬಹುದು. ಇದರಲ್ಲಿ ಪ್ರಮುಖವಾಗಿ ಸೋಂಕು ಬರಬಹುದು. ಇದನ್ನು ಬಾಲನಿಟೀಸ್ ಎಂದು ಕರೆಯಲಾಗುತ್ತದೆ.

ಪ್ಯಾರಾಫಿಮೊಸಿಸ್

ಪ್ಯಾರಾಫಿಮೊಸಿಸ್

ಪ್ಯಾರಾಫಿಮೊಸಿಸ್ ಸಮಸ್ಯೆಯು ಫಿಮೊಸಿಸ್ ಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿರುವಂತದ್ದಾಗಿದೆ. ಮುಂದೊಲು ಹಿಂದಕ್ಕೆ ಸರಿಯಲ್ಪಟ್ಟು, ಇದು ಸಿಲುಕಿಕೊಂಡು ಶಿಶ್ನದ ತಲೆ ಭಾಗದಲ್ಲಿ ಊತ ಉಂಟಾಗುವುದು. ಈ ಊತದಿಂದಾಗಿ ಶಿಶ್ನಕ್ಕೆ ಸರಿಯಾಗಿ ರಕ್ತಸಂಚಾರವು ಆಗದೆ ಇರಬಹುದು. ಇದರಿಂದ ಶಿಶ್ನದ ಶಾಫ್ಟ್ ಮತ್ತು ತಲೆಯ ಹೊರಭಾಗದಲ್ಲಿ ಗ್ಯಾಂಗ್ರೀನ್ ಕಂಡುಬರಬಹುದು. ಪ್ಯಾರಾಫಿಮೊಸಿಸ್ ಸಮಸ್ಯೆಗೆ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬೇಕು. ಮುಂದೊಗಲಿನ ಶಸ್ತ್ರಚಿಕಿತ್ಸೆ ಅಥವಾ ಸುನ್ನತಿಯಿಂದಾಗಿ ಇಂತಹ ಪರಿಸ್ಥಿತಿಯನ್ನು ತಡೆಯಬಹುದಾಗಿದೆ.

Most Read: ಪುರುಷರ ಶಿಶ್ನದ ಆರೋಗ್ಯ ವೃದ್ಧಿಸುವ ಆಹಾರಗಳು

ಮುಂದೊಗಲಿನಿಂದ ಬರುವ ಸಮಸ್ಯೆಗಳು

ಮುಂದೊಗಲಿನಿಂದ ಬರುವ ಸಮಸ್ಯೆಗಳು

ಮುಂದೊಗಲಿನಿಂದಾಗಿ ಬರುವಂತಹ ಫಿಮೊಸಿಸ್ ನಿಂದ ಸೋಂಕು, ಸ್ವಚ್ಛತೆ ಇಲ್ಲದಿರುವುದು ಮತ್ತು ಮುಂದೊಗಲಿಗೆ ಹಾನಿಯಾಗುವುದು. ಯಾವುದೇ ರೀತಿಯ ಪರಿಸ್ಥಿತಿ ಅಥವಾ ಚಟುವಟಿಕೆಯು ದೀರ್ಘಕಾಲದ ಮುಂದೊಗಲಿನ ಹಿಮ್ಮುಖಕ್ಕೆ ಕಾರಣವಾಗಬಹುದು. ಇದರಿಂದಾಗಿ ಪ್ಯಾರಾಫಿಮೊಸಿಸ್ ಬರಬಹುದು.

• ಶಿಶ್ನದ ಸುನ್ನತೀಕರಣ ಸರಿಯಾಗಿ ಮಾಡದೆ ಇರುವುದು.

• ಬ್ಲೇಡರ್ ಕ್ಯಾಥರೇಟ್ಸ್ ಪದೇ ಪದೇ ಬಳಕೆ.

• ಹಸ್ತಮೈಥುನ ಸಹಿತ ಬಲವಾದ ಲೈಂಗಿಕ ಚಟುವಟಿಕೆ

• ಹಿಮ್ಮುಖವಾದ ಬಳಿಕ ಕೆಲವೊಮ್ಮೆ ಮುಂದೊಗಲು ಮರಳಿ ತನ್ನ ಸ್ಥಾನಕ್ಕೆ ಬರದೇ ಇರಬಹುದು. ವಯಸ್ಸಾದವರಲ್ಲಿ ಇದನ್ನು ಸ್ವಯಂ ಆಗಿ ಮಾಡಿಕೊಳ್ಳಬೇಕಾಗುತ್ತದೆ.

ಮುಂದೊಗಲಿನ ಸಮಸ್ಯೆಯ ಲಕ್ಷಣಗಳು

ಮುಂದೊಗಲಿನ ಸಮಸ್ಯೆಯ ಲಕ್ಷಣಗಳು

ಮುಂದೊಲಿನ ಸಮಸ್ಯೆಯನ್ನು ಎದುರಿಸಿದ್ದರೆ ಆಗ ಮುಂದೊಗಲು ಊತಗೊಂಡಿರುವುದು ಕಂಡುಬರುವುದು. ಇದರಿಂದ ನೀವು ಇದೊಂದು ಸಮಸ್ಯೆಯೆಂದು ಪರಿಗಣಿಸಬಹುದು.

ಫಿಮೊಸಿಸ್ ಇರುವಂತಹ ಹುಡುಗರಲ್ಲಿ ಯಾವುದೇ ಒಂದು ಅಥವಾ ಎಲ್ಲಾ ರೀತಿಯ ಲಕ್ಷಣಗಳು ಕಂಡುಬರುವುದು.

Most Read: ಪುರುಷರೇ, ಶಿಶ್ನದ ಬಗ್ಗೆ ನಿಮಗೆ ತಿಳಿದಿರದ 12 ಸಮಸ್ಯೆಗಳು

ಮೂತ್ರವಿಸರ್ಜನೆ ವೇಳೆ ತೊಂದರೆ

ಮೂತ್ರವಿಸರ್ಜನೆ ವೇಳೆ ತೊಂದರೆ

*ಮೂತ್ರವಿಸರ್ಜನೆ ವೇಳೆ ನೋವು

*ಮೂತ್ರದಲ್ಲಿ ರಕ್ತ ಬರುವುದು

*ಶಿಶ್ನದಲ್ಲಿ ನೋವು

ಪ್ಯಾರಾಫಿಮೊಸಿಸ್ ಇರುವಂತಹ ಪುರುಷರಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬರಬಹುದು

*ಶಿಶ್ನ ನೋವು(ವಿಶೇಷವಾಗಿ ಜನನಾಂಗದ ತುದಿ ಭಾಗದಲ್ಲಿ ಕಂಡುಬರುವುದು)

*ಶಿಶ್ನವು ಬಣ್ಣ ಕಳೆದುಕೊಳ್ಳುವುದು(ಈ ಪರಿಸ್ಥಿತಿಯು ಶಿಶ್ನಕ್ಕೆ ಸರಿಯಾಗಿ ರಕ್ತಸಂಚಾರವಾಗದೆ ಇರುವಾಗ ಕಂಡುಬರುವುದು) ಇದರಿಂದ ಶಿಶ್ನವು ತುಂಬಾ ಬಿಳಿ, ನೀಲಿ, ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುಗಬಹುದು.

ಮುಂದೊಗಲಿನ ಸಮಸ್ಯೆಗೆ ವೈದ್ಯಕೀಯ ನೆರವು ಪಡೆಯವುದು ಯಾವಾಗ?

ಮುಂದೊಗಲಿನ ಸಮಸ್ಯೆಗೆ ವೈದ್ಯಕೀಯ ನೆರವು ಪಡೆಯವುದು ಯಾವಾಗ?

ಫಿಮೊಸಿಸ್ ಗೆ ಯಾವುದೇ ರೀತಿಯ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಿಲ್ಲ. ವೈದ್ಯರ ನೆರವಿಲ್ಲದೆಯೂ ಇದು ನಿವಾರಣೆಯಾಗುವುದು. ಅದಾಗ್ಯೂ, ವ್ಯಕ್ತಿಗೆ ಯಾವುದೇ ರೀತಿಯ ಮೂತ್ರ ವಿಸರ್ಜನೆ ಸಮಸ್ಯೆಯಿದ್ದರೆ, ಉದಾಹರಣೆಗೆ ಮೂತ್ರ ವಿಸರ್ಜನೆ ವೇಳೆ ತೊಂದರೆ ಅಥವಾ ಮೂತ್ರ ವಿಸರ್ಜನೆ ಬಳಿಕ ಉರಿ ಇತ್ಯಾದಿ ಕಂಡುಬಂದರೆ ಆಗ ವೈದ್ಯರನ್ನು 12-24 ಗಂಟೆ ಒಳಗಡೆ ಭೇಟಿಯಾಗಿ. ಇಂತಹ ಪರಿಸ್ಥಿತಿಯಲ್ಲಿ ಫಿಮೊಸಿಸ್ ಗೆ ಚಿಕಿತ್ಸೆ ನೀಡದೆ ಇದ್ದರೆ ಆಗ ಅದು ಪ್ಯಾರಾ ಫಿಮೊಸಿಸ್ ಆಗಬಹುದು. ಇದಕ್ಕೆ ತಕ್ಷಣ ವೈದ್ಯರ ನೆರವು ಪಡೆಯಬೇಕು.

ಪ್ಯಾರಾಫಿಮೊಸಿಸ್

ಪ್ಯಾರಾಫಿಮೊಸಿಸ್

ಪ್ಯಾರಾಫಿಮೊಸಿಸ್ ನಲ್ಲಿ ವ್ಯಕ್ತಿಯ ಮುಂದೊಗಲು ಮೊದಲಿನ ಸ್ಥಾನಕ್ಕೆ ಮರಳದೆ ಇದ್ದರೆ, ಆಗ ಮುಂದೊಗಲು ಮತ್ತು ಶಿಶ್ನದ ತುದಿಯು ತುಂಬಾ ನೋವಿನಿಂದ ಕೂಡಿದ್ದರೆ, ಊತ ಅಥವಾ ಬಣ್ಣ ಕಳೆದುಕೊಂಡಿದ್ದರೆ ಆಗ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಪ್ಯಾರಾಫಿಮೊಸಿಸ್ ಎನ್ನುವುದು ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ನೀಡದೆ ಇದ್ದರೆ ಶಿಶ್ನದ ತುದಿ ಹಾಗೂ ಮುಂದೊಗಲು ಗ್ಯಾಂಗ್ರೀನ್ ಗೆ ಒಳಗಾಗಬಹುದು. ಶಿಶ್ನದ ಊತ ಕಡಿಮೆ ಮಾಡಲು ಐಸ್ ಇಡಿ. ಐಸ್ ನಿಂದಾಗಿ ಸಮಸ್ಯೆಯು ಕಡಿಮೆಯಾಗದೆ ಇದ್ದರೆ ಆಗ ನೀವು ತಕ್ಷಣವೇ ಹೋಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದುಕೊಳ್ಳಬೇಕು. ವೈದ್ಯರಲ್ಲಿಯೂ ಹೋಗಿ ನೀವು ಅವರಲ್ಲಿ ಪರಿಸ್ಥಿತಿ ಬಗ್ಗೆ ಹೇಳಿಕೊಂಡು ತುರ್ತು ಚಿಕಿತ್ಸೆ ಪಡೆಯಿರಿ.

ಮುಂದೊಗಲಿನ ಸಮಸ್ಯೆ ರೋಗನಿರ್ಣಯ

ಮುಂದೊಗಲಿನ ಸಮಸ್ಯೆ ರೋಗನಿರ್ಣಯ

ವೈದ್ಯರು ಮುಂದೊಗಲಿನ ಸಮಸ್ಯೆಯ ಬಗ್ಗೆ ಪರೀಕ್ಷೆ ಮಾಡಿಕೊಳ್ಳುವ ಮೊದಲು ಅದು ಹಿಂದೆ ಬಂದಿದೆಯಾ ಮತ್ತು ಪುರುಷರ ಲೈಂಗಿಕ ಇತಿಹಾಸವು ಯಾವ ರೀತಿಯಲ್ಲಿ ಇರಲಿದೆ ಎಂದು ತಿಳಿದುಕೊಳ್ಳುವರು. ಇದೆಲ್ಲವನ್ನು ತಿಳಿದುಕೊಂಡ ಬಳಿಕ ವೈದ್ಯರು ಈ ಕೆಳಗಿನ ಪರೀಕ್ಷೆಗಳನ್ನು ಮಾಡಿಕೊಳ್ಳುವರು.

ಇದು ಫಿಮೊಸಿಸ್ ಎಂದಾಗಿದ್ದರೆ ವೈದ್ಯರು ಆಗ ಎರಡು ಬಗೆಯ ಪರೀಕ್ಷೆ ನಡೆಸುವರು.

ಸಂಪೂರ್ಣ ಶಿಶ್ನದ ಪರೀಕ್ಷೆ-ಮೂತ್ರ ಸೋಂಕು ತಗಲಿದ್ದರೆ ಆಗ ಅದರ ಪರೀಕ್ಷೆ ಮಾಡಿಕೊಳ್ಳುವರು.

English summary

Mens Foreskin problems and tips to take care

The foreskin is the fold of skin that covers the glans penis (head of the penis). At birth, the foreskin and the glans penis are lightly joined. In most boys, by about five years of age the foreskin
X
Desktop Bottom Promotion