For Quick Alerts
ALLOW NOTIFICATIONS  
For Daily Alerts

ಪುರುಷರ ಹಸ್ತಮೈಥುನದ ಬಗ್ಗೆ ನೀವು ತಿಳಿದಿರದ ಐದು ಸಂಗತಿಗಳು

By Arshad
|

ಪುರುಷರಿಗೆ ಹಸ್ತಮೈಥುನ ಎನ್ನುವುದು ಅತ್ಯಂತ ವೈಯಕ್ತಿಕವಾದ ನಿಸರ್ಗದ ಬಯಕೆಯಾಗಿದ್ದು ಲೈಂಗಿಕ ಕಾಮನೆಯನ್ನು ಸ್ವತಃ ಪೂರೈಸಿಕೊಳ್ಳುವ ಒಂದು ಕ್ರಮವಾಗಿದೆ. ವೈದ್ಯವಿಜ್ಞಾನದ ಪ್ರಕಾರ ಪ್ರತಿಯೊಬ್ಬ ಪುರುಷನೂ ಹಸ್ತಮೈಥುನದ ಸಹಾಯ ಪಡೆದೇ ಇರುತ್ತಾರೆ. ಹದಿಹರೆಯದಲ್ಲಿ ನಿಸರ್ಗವೇ ಕಲಿಸುವ ಈ ವಿದ್ಯೆಯಲ್ಲಿ ದಿನಗಳೆದಂತೆ ಪಾರಾಂಗತರಾಗುವ ಪುರುಷರು ನಡುವಯಸ್ಸು ದಾಟುವಷ್ಟರಲ್ಲಿ ಎಲ್ಲಾ ಪಟುಗಳನ್ನೂ ಕಲಿತುಬಿಟ್ಟಿದ್ದೇವೆಂಬ ಹುಮ್ಮಸ್ಸಿನಲ್ಲಿರುತ್ತಾರೆ. ಆದರೆ ತಜ್ಞರ ಪ್ರಕಾರ, ಕೆಲವು ಸಂಗತಿಗಳು ಎಲ್ಲರಿಗೂ ತಿಳಿದೇ ಇರುವುದಿಲ್ಲ. ಈ ಐದು ಸಂಗತಿಗಳು ನಿಮ್ಮ ಈ ಭ್ರಮೆಯನ್ನು ಚೂರು ಮಾಡಿ ಅಚ್ಚರಿ ಮೂಡಿಸಬಹುದು.

1. ಲೈಂಗಿಕ ಕ್ರೀಡೆಯಲ್ಲಿ ದೊರಕುವ ಆರೋಗ್ಯಕರ ಪ್ರಯೋಜನಗಳು ಹಸ್ತಮೈಥುನದಿಂದ ದೊರಕುವುದಿಲ್ಲ

1. ಲೈಂಗಿಕ ಕ್ರೀಡೆಯಲ್ಲಿ ದೊರಕುವ ಆರೋಗ್ಯಕರ ಪ್ರಯೋಜನಗಳು ಹಸ್ತಮೈಥುನದಿಂದ ದೊರಕುವುದಿಲ್ಲ

"ಪ್ರತಿ ಬಾರಿಯ ಕಾಮಪರಾಕಾಷ್ಠೆಗಳು ಒಂದೇ ತೆರನಾಗಿರುವುದಿಲ್ಲ" ಎಂದು ಸ್ಪ್ರಿಂಗ್ ಫೀಲ್ಡ್ ರಾಜ್ಯದಲ್ಲಿರುವ ದಕ್ಷಿಣ ಇಲಿನಾಯ್ಸ್ ವೈದ್ಯಕೀಯ ಶಾಲಾ ವಿಶ್ವವಿದ್ಯಾಯಲದ ಸಹ ಪ್ರೊಫೆಸರ್ ಆಗಿರುವ ಡಾ. ಟೋಬಿಯಾಸ್ ಎಸ್ ಕೋಹ್ಲರ್, ಎಂಡಿ, ಎಂಪಿಎಚ್. ರವರು ತಿಳಿಸುತ್ತಾರೆ.

ಈ ವಿಷಯದ ಬಗ್ಗೆ ನಡೆದ ಹಲವಾರು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾದ ಅಂಶವೆಂದರೆ, ದಾಂಪತ್ಯ ಮಿಲದಿಂದ ಪುರುಷರಿಗೆ ಹಲವಾರು ಪ್ರಯೋಜನಗಳಿವೆ. ಪ್ರಮುಖವಾಗಿ ಅಧಿಕ ರಕ್ತದೊತ್ತಡ, ಹೃದಯ ಮತ್ತು ಪ್ರಾಸ್ಟೇಟ್ ಗ್ರಂಥಿಗಳ ಆರೋಗ್ಯ, ನೋವು ಮತ್ತು ಮುಖ್ಯವಾಗಿ ಮಾನಸಿಕ ತೃಪ್ತಿ. ಇವೆಲ್ಲವೂ ಹಸ್ತಮೈಥುನದ ಮೂಲಕವೂ ದೊರಕುತ್ತದೆ ಎಂದು ಈ ವಿದ್ಯೆಯ ಪಾರಾಂಗತರು ವಾದ ಮಾಡಿದರೂ ಇದು ವೈದ್ಯಕಿಯವಾಗಿ ನಿಜವಲ್ಲ.

ಅಷ್ಟಕ್ಕೂ ಸ್ಖಲನವೇ ಈ ಕ್ರಿಯೆಯ ಅಂತಿಮ ಫಲವಾಗಿದ್ದರೆ ಎರಡೂ ಕಡೆಗಳಲ್ಲಿ ಇದೇ ಪರಿಣಾಮ ವುಂಟಾಗುವುದರಿಂದ ವ್ಯತ್ಯಾಸವೇನು ಬಂತು? ಈ ಬಗ್ಗೆ ಯಾರಿಗೂ ಸ್ಪಷ್ಟವಾದ ವಿವರಣೆ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ, ಎರಡೂ ವಿಧಗಳಲ್ಲಿ ಪುರುಷನ ದೇಹ ಸ್ಪಂದಿಸುವ ಕ್ರಿಯೆಗಳಿಗೆ ಆಗಾಧವಾದ ವ್ಯತ್ಯಾಸವಿದೆ. ಅಲ್ಲದೇ ದಾಂಪತ್ಯಕ್ರಿಯೆಯಲ್ಲಿ ಸ್ಖಲಿಸಿದ ವೀರ್ಯಕ್ಕೂ ಹಸ್ತಮೈಥುನದ ವೀರ್ಯಕ್ಕೂ ಸೂಕ್ಷ್ಮವಾದ ಕೆಲವು ವ್ಯತ್ಯಾಸಗಳಿವೆ. ಸಾಮಾನ್ಯವಾಗಿ ಹೆಚ್ಚು ಹಸ್ತಮೈಥುನ ಮಾಡಿಕೊಳ್ಳುವವರು ಇದರಿಂದ ತಮ್ಮ ಪ್ರಾಸ್ಟೇಟ್ ಗ್ರಂಥಿಯ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂಬ ಭಾವನೆ ಹೊಂದಿರುತ್ತಾರೆ. ವಾಸ್ತವದಲ್ಲಿ ಇದು ನಿಜವಲ್ಲ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನಗಳಲ್ಲಿ ಸಾಬೀತಾಗಿರುವ ಪ್ರಕಾರ ಪ್ರಾಸ್ಟೇಟ್ ಗ್ರಂಥಿಗೆ ಕ್ಯಾನ್ಸರ್ ಆವರಿಸುವ ಸಾಧ್ಯತೆ ಈ ವ್ಯಕ್ತಿಗಳಲ್ಲಿ ಕಡಿಮೆ.

ಹಸ್ತಮೈಥುನದ ಕೆಟ್ಟ ಚಾಳಿ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದುಗಳು

2. ಹಸ್ತಮೈಥುನದಿಂದ ಅಪಾಯ ಇಲ್ಲವೇ ಇಲ್ಲವೆನ್ನುವಂತಿಲ್ಲ

2. ಹಸ್ತಮೈಥುನದಿಂದ ಅಪಾಯ ಇಲ್ಲವೇ ಇಲ್ಲವೆನ್ನುವಂತಿಲ್ಲ

ಈ ಕ್ರಿಯೆ ಅತ್ಯಂತ ಖಾಸಗಿಯಾಗಿ ನಡೆಯುವ ಕಾರಣ ಯಾರಿಗೂ ಇದರಿಂದ ತೊಂದರೆ ಇಲ್ಲ ಹಾಗಾಗಿ ಇದು ಅತ್ಯಂತ ಸುರಕ್ಷಿತವಾಗಿದೆ. ಈ ಕ್ರಿಯೆಯಿಂದ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಇಲ್ಲ ಅಥವಾ ಗರ್ಭಾಂಕುರವಾಗುವ ಸಾಧ್ಯತೆಯೂ ಇಲ್ಲ. ಅಪಾಯದ ಸಾಧ್ಯತೆ ಕಡಿಮೆ ಇರುವ ಇತರ ಕ್ರಿಯೆಗಳಂತೆಯೇ, ಉದಾಹರಣೆಗೆ ನಡಿಗೆ, ಜಗಿಯುವಿಕೆ ಇತ್ಯಾದಿ, ಈ ಕ್ರಿಯೆಯಲ್ಲಿಯೂ ಅಪಾಯದ ಸಾಧ್ಯತೆ ಇಲ್ಲವೇ ಇಲ್ಲವೆನ್ನುವಂತಿಲ್ಲ.

ಒಂದು ವೇಳೆ ಅತಿಯಾದ ಪ್ರಮಾಣದಲ್ಲಿ ಅಥವಾ ಅತಿ ಹೆಚ್ಚಿನ ಘರ್ಷಣೆಯನ್ನು ಪಡೆಯುವ ಮೂಲಕ ಚರ್ಮಕ್ಕೆ ಘಾಸಿಯುಂಟಾಗಬಹುದು. ಕೆಲವೊಮ್ಮೆ ಉದ್ರೇಕಿತ ಜನನಾಂಗವನ್ನು ಬಲವಂತವಾಗಿ ಬಾಗಿಸಲು ಯತ್ನಿಸಿದಾಗಲೂ ಜನನಾಂಗದೊಳಗಿನ ರಕ್ತತುಂಬಿದ ಅಂಗಾಂಶಗಳ ಮೇಲೆ ಅಪಾರ ಒತ್ತಡ ಬಿದ್ದು ಒಡೆಯಬಹುದು. ಇದೊಂದು ಅತ್ಯಂತ ನೋವಿನ ಹಾಗೂ ಅಪರೂಪದ ಅಪಘಾತವಾಗಿದ್ದು ಈ ಸ್ಥಿತಿಯನ್ನು penile fracture ಎಂದು ವೈದ್ಯರು ಗುರುತಿಸುತ್ತಾರೆ. ಡಾ. ಕೊಹ್ಲರ್ ರವರು ತಿಳಿಸುವ ಪ್ರಕಾರ ಅತಿ ಘರ್ಷಣೆಯ ಅಭ್ಯಾಸ ಹೊಂದಿರುವ ಪುರುಷರ ಜನನಾಂಗ ಸ್ಖಲನದ ಬಳಿಕ ಬದನೆಕಾಯಿಯಂತೆ ತೋರುತ್ತದೆ, ಅಂದರೆ ಇದು ನೇರಳೆ ಬಣ್ಣಕ್ಕೆ ತಿರುಗಿ ಊದಿಕೊಳ್ಳುತ್ತದೆ. ಈ ತೊಂದರೆ ಎದುರಾದರೆ ಇದಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಶಸ್ತ್ರಕ್ರಿಯೆಯ ಅಗತ್ಯ ಬೀಳುತ್ತದೆ.

3. ಹಸ್ತಮೈಥುನ ಸಾಮಾನ್ಯ ಎನ್ನಲು ಇಷ್ಟೇ ಎಂಬ ಮಾನದಂಡವಿಲ್ಲ

3. ಹಸ್ತಮೈಥುನ ಸಾಮಾನ್ಯ ಎನ್ನಲು ಇಷ್ಟೇ ಎಂಬ ಮಾನದಂಡವಿಲ್ಲ

ಎಷ್ಟು ಸಾರಿ ಮಾಡಿಕೊಂಡರೂ ಅಪಾಯವಿಲ್ಲ ಎಂದೇ ಹೆಚ್ಚಿನ ಪುರುಷರು ಅಂದುಕೊಂಡಿದ್ದಾರೆ. ಆದರೆ ದಿನಕ್ಕೆ ಅಥವಾ ವಾರದಲ್ಲಿ ಎಷ್ಟು ಬಾರಿ ಈ ಕ್ರಿಯೆಯನ್ನು ನಿರ್ವಹಿಸಿದ್ದೀರಿ ಎಂಬುದು ಪ್ರಮುಖವಾದ ಅಂಶವಾಗಿದೆ ಎಂದು ಲೈಂಗಿಕ ತಜ್ಞ ಡಾ. ಲೋಗಾನ್ ಲೆವ್ಕಾಫ್ ಪಿಎಚ್ ಡಿ. ರವರು ತಿಳಿಸುತ್ತಾರೆ. ನಿಮ್ಮ ಜೀವನಕ್ಕೆ ಎಷ್ಟು ಅಗತ್ಯ ಎಂಬ ಅಂಶವನ್ನು ಈ ಸಂಖ್ಯೆ ನಿರ್ಧರಿಸುತ್ತದೆ. ಒಂದು ವೇಳೆ ದಿನದಲ್ಲಿ ಕೆಲವಾರು ಬಾರಿ ನಿರ್ವಹಿಸಿಕೊಂಡೂ ಉತ್ತಮ ಆರೋಗ್ಯ ಹೊಂದಿದ್ದರೆ, ಅಭಿನಂದನೆಗಳು. ಆದರೆ ಇದು ವಿಪರೀತವಾಗಿ ಕೆಲಸಕ್ಕೇ ಹೋಗದಿದ್ದರೆ ಅಥವಾ ಒಂದು ವೇಳೆ ವಿವಾಹವಾಗಿದ್ದು ಪತ್ನಿಗೆ ನೀಡಬೇಕಾದ ಕರ್ತವ್ಯವನ್ನೇ ಮರೆತರೆ ಮಾತ್ರ ಇದು ಪರೋಕ್ಷ ತೊಂದರೆಗಳಿಗೆ ಕಾರಣವಾಗಬಹುದು. ಈ ವ್ಯಕ್ತಿಗಳಿಗೆ ಲೈಂಗಿಕ ಸಲಹಾಕಾರರನ್ನು ಭೇಟಿಯಾಗುವುದು ಅವಶ್ಯವಾಗಿದೆ. ಒಂದು ವೇಳೆ ಹೀಗೇನೂ ಇಲ್ಲದೇ ಇದ್ದರೂ ಒಂದು ಚಟವಾಗಿಸಿದರೆ ಇದು ವ್ಯಸನದಂತೆ ಜೀವನವನ್ನು ಬಾಧಿಸಬಹುದು. ಇಸ್ಪೀಟ್ ಆಡುವ ಚಟ ಅಥವಾ ಪ್ರತಿ ನಿಮಿಷಕ್ಕೊಮ್ಮೆ ಸಾಮಾಜಿಕ ಜಾಲತಾಣ ನೋಡುವ ವ್ಯಸನದಂತೆಯೇ ಈ ವ್ಯಸನವೂ ಅಪಾಯಕಾರಿಯೇ ಆಗಿದೆ.

4. ದಾಂಪತ್ಯದಲ್ಲಿ ತೊಂದರೆಯಿದ್ದುದಕ್ಕೇ ಹಸ್ತಮೈಥುನಕ್ಕೆ ಶರಣು

4. ದಾಂಪತ್ಯದಲ್ಲಿ ತೊಂದರೆಯಿದ್ದುದಕ್ಕೇ ಹಸ್ತಮೈಥುನಕ್ಕೆ ಶರಣು

ಡಾ. ಲೆವ್ಕಾಫ್ ರವರ ಪ್ರಕಾರ ಈ ನಂಬಿಕೆ ಅತ್ಯಂತ ದೊಡ್ಡ ಸುಳ್ಳಾಗಿದ್ದು ದಾಂಪತ್ಯಕ್ಕೂ ಹಸ್ತಮೈಥುನಕ್ಕೂ ನೇರವಾದ ಸಂಬಂಧವಿಲ್ಲ.

ಪ್ರತಿ ಪುರುಷನೂ ಹಸ್ತಮೈಥುನದ ಅಭ್ಯಾಸ ಹೊಂದಿರುತ್ತಾನೆ ಎಂಬುದು ವೈದ್ಯಕೀಯ ಸತ್ಯ. ಇದರಿಂದ ಇವರ ಸಂಗಾತಿಗೆ ಈ ವಿಷಯದಲ್ಲಿ ಸಂಬಂಧಿಸಿದ್ದೇನೂ ಇಲ್ಲ. ಆದರೆ, ಹಸ್ತಮೈಥುನವೇ ಎಲ್ಲವೂ ಅಲ್ಲ, ಕೆಲವರಿಗೆ ಇದು ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವ ವಿಧಾನ, ಕೆಲಸಕ್ಕೂ ಮುನ್ನ ನಿರಾಳತೆ ಪಡೆಯಲು ಅಥವಾ ನಿದ್ದೆ ಆವರಿಸಲು ಬೇಕಾದ ಒಂದು ಅಗತ್ಯತೆಯಾಗಿರಬಹುದು. ಹಾಗಾಗಿ ಇಂದು ಸಂತೃಪ್ತ ದಾಂಪತ್ಯ ನಡೆಸುತ್ತಿರುವ ಪುರುಷರೂ ಅಗತ್ಯಕ್ಕೆ ತಕ್ಕಷ್ಟು ಸ್ವಮೈಥುನ ಪಡೆಯುತ್ತಾರೆ ಎಂದು ಒಂದು ಸಮೀಕ್ಷೆ ತಿಳಿಸಿದೆ.

5. ಹಸ್ತಮೈಥುನದಿಂದ ದಾಂಪತ್ಯ ಜೀವನಕ್ಕೆ ಬಹುತೇಕ ಒಳ್ಳೆಯದೇ ಆಗುತ್ತದೆ

5. ಹಸ್ತಮೈಥುನದಿಂದ ದಾಂಪತ್ಯ ಜೀವನಕ್ಕೆ ಬಹುತೇಕ ಒಳ್ಳೆಯದೇ ಆಗುತ್ತದೆ

ಸ್ವಮೈಥುನದ ಮೂಲಕ ಪುರುಷರು ತಮಗೆ ಯಾವ ಕ್ರಿಯೆ ಇಷ್ಟವಾಗುತ್ತದೆ ಎಂದು ಕಂಡುಕೊಳ್ಳುತ್ತಾರೆ ಹಾಗೂ ಇದು ದಾಂಪತ್ಯಜೀವನವನ್ನು ಸುಖಕರವಾಗಿಸಲು ನೆರವಾಗುತ್ತದೆ. "ಪುರುಷರಿಗೆ ಹೇಗೆ ಇಷ್ಟವೂ ಅದೇ ರೀತಿ ಮಹಿಳೆಯರೂ ಹಸ್ತಮೈಥುನದ ಮೂಲಕ ಲೈಂಗಿಕ ಸುಖವನ್ನು ಪಡೆದರೆ ಹೆಚ್ಚು ಸಂತೃಪ್ತರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಡಾ. ಲೆವ್ಕಾಫ್ ರವರು ತಿಳಿಸುತ್ತಾರೆ. ಇದಕ್ಕೆ ಅಪವಾದಗಳೇನಾದರೂ ಇವೆಯೇ? ಹೌದು, ಕೆಲವು ಪುರುಷರಿಗೆ ಇಷ್ಟೇ ಒತ್ತಡ ಇದ್ದರೆ ಮಾತ್ರವೇ ಪರಿಪೂರ್ಣವಾದ ತೃಪ್ತಿ ದೊರಕುತ್ತದೆ ಹಾಗೂ ಇದು ಸಹಜಮಿಲನಕ್ರಿಯೆಯ ಮೂಲಕ ಪಡೆಯಲು ಸಾಧ್ಯವಾಗದೇ ಇದ್ದರೆ ಇವರು ಹಸ್ತಮೈಥುನವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಬಹುದು ಎಂದು ಲೈಂಗಿಕ ತಜ್ಞರಾದ ಡಾ. ಇಯಾನ್ ಕೆರ್ನರ್, ಪಿಎಚ್ಡಿ. ರವರು ತಿಳಿಸುತ್ತಾರೆ. ಆದರೂ, ಈ ಪ್ರಕ್ರಿಯೆ ಅಪರೂಪಕ್ಕೆಲ್ಲೋ ಕಾಣಬಹುದಷ್ಟೇ ಹೊರತು ವಿಶ್ವದ ಬಹುತೇಕ ಎಲ್ಲಾ ದಂಪತಿಗಳಲ್ಲಿ ಪುರುಷರ ಹಸ್ತಮೈಥುನ ಅವರ ದಾಂಪತ್ಯಕ್ಕೆ ಪೂರಕವೇ ಆಗಿದೆ. ಒಂದು ವೇಳೆ ಯಾವುದೋ ಒಬ್ಬ ಪುರುಷ ಈ ಕ್ರಿಯೆಯನ್ನು ನಿರ್ವಹಿಸದೇ ಇದ್ದಲ್ಲಿ ಅಥವಾ ನಿಲ್ಲಿಸಿದ್ದಲ್ಲಿ ಮಾತ್ರ ನನಗೆ ನಿಜವಾಗಿ ಚಿಂತೆಯ ವಿಷಯವಾಗುತ್ತಿತ್ತು. ಇದು ಆತನ ಮನಸ್ಸಿನ ಉದ್ವೇಗ ಅಥವಾ ಬೇರಾವುದೋ ಅನಾರೋಗ್ಯದ ಸೂಚನೆಯಾಗಿರಬಹುದು.

ಆರರಿಂದ ಏಳು ಸಲ ಹಸ್ತಮೈಥುನ ಮಾಡುವ ಪುರುಷರಿಗೆ ಇಂತಹ ಸಮಸ್ಯೆ ಕಾಡಲಿದೆ!

English summary

Male Masturbation: 5 Things You Didn't Know

If there's one thing that almost every guy is an expert at, it's masturbation. After years of extensive, hands-on experience, you think you know everything there is to know. But according to the experts, maybe you don't. Here are some that may surprise you.
Story first published: Wednesday, September 5, 2018, 9:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more