For Quick Alerts
ALLOW NOTIFICATIONS  
For Daily Alerts

  ಎರಡು ಲೋಟ ವೈನ್ ನಿಮ್ಮ ನಿದ್ದೆಯ ಮೇಲೆ ಹೇಗೆ ಪರಿಣಾಮ ಬೀರುತ್ತೆ?

  By Sushma Charhra
  |

  ಹೆಚ್ಚಿನವರು ಪ್ರತಿದಿನ ರಾತ್ರಿ ಮಲಗುವಾಗ ಡ್ರಿಂಕ್ಸ್ ಸೇವನೆ ಇಲ್ಲವೇ ವೈನ್ ಸೇವನೆ ಮಾಡುವುದರಿಂದ ತಮ್ಮ ದೈನಂದಿನ ಜಂಜಾಟದಿಂದ ಆರಾಮವಾಗಬಹುದು, ಒಳ್ಳೆ ನಿದ್ದೆ ಬರುತ್ತದೆ, ಮೈಕೈ ನೋವೆಲ್ಲ ಹೋಗುತ್ತೆ, ಮಾರನೇ ದಿನ ಫ್ರೆಷ್ ಆಗಿ ಇರಬಹುದು ಎಂದು ಭಾವಿಸಿದ್ದಾರೆ.  ತಮ್ಮ ನೋವಿಗೆ ಪರಿಹಾರ ನೀಡುವ ಸಾಮರ್ಥ್ಯ ಆಲ್ಕೋಹಾಲಿಗಿದೆ ಅನ್ನೋದು ಅವರ ಭಾವನೆ. ಟೆಕ್ಷನ್ ಮಾಯ ಆಗ್ಬೇಕು, ನಮ್ಮ ದೈನಂದಿನ ಸಮಸ್ಯೆಗಳ ಪರಿಹಾರವೇ ವೈನ್ ಅಥವಾ ಆಲ್ಕೋಹಾಲ್ ಅಂತ ಭಾವಿಸಿರುವವರು ಖಂಡಿತ ಈ ಲೇಖನವನ್ನು ಓದಲೇಬೇಕು.

  ವಿಜ್ಞಾನಿಗಳಿಂದಾಗಿ ಮತ್ತು ಹಲವಾರು ವೈದ್ಯರ ಅಧ್ಯಯನದಿಂದಾಗಿ ವೈನ್ ನಿದ್ದೆಯ ಮೇಲೆ ಮಾಡುವ ವ್ಯತಿರಿಕ್ತ ಪರಿಣಾಮಗಳ ಬಗೆಗಿನ ಅಂಶವು ತಿಳಿದುಬಂದಿದೆ. ದೇಹದ ನಿದ್ದೆಯ ಸಮಯವನ್ನು ಇದು ಹಾಳು ಮಾಡುತ್ತದೆ ಮತ್ತು ಆಗಾಗ ಎಚ್ಚರಿಕೆ, ನಿದ್ದೆ ಬಂದಂತಾದರೂ ನಿಯಮಿತ ನಿದ್ದೆ ಬಾರದೇ ಇರುವುದು ಇಂತಹ ಸಮಸ್ಯೆಗೆ ಕಾರಣವಾಗಿ ಮುಂದೊಂದು ದಿನ ಇನ್ಸೋಮ್ನಿಯಾದಂತ ಕಾಯಿಲೆಯ ಅಪಾಯಕ್ಕೆ ನಿಮ್ಮ ಅಭ್ಯಾಸವು ನಿಮ್ಮನ್ನು ದೂಡುತ್ತದೆ. ಹಾಗಾಗಿ ಉತ್ತಮ ನಿದ್ದೆಗಾಗಿ ಯಾರೂ ಕೂಡ ವೈನ್ ಸೇವಿಸಬಾರದು ಎಂಬುದು ವೈದ್ಯರ ಸಲಹೆಯಾಗಿದೆ.

  ವೈನ್ ಮತ್ತು ನಿದ್ದೆ, ಆಲ್ಕೋಹಾಲ್ ಮತ್ತು ನಿದ್ದೆಯ ಅಭಾವ

  1. ವೈನ್ ಸೇವನೆಯಿಂದ ಆರಂಭವಾಗುವ ನಿದ್ದೆಯ ಸಮಸ್ಯೆಯ ಬಗ್ಗೆ ವೈದ್ಯಕೀಯ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳು

  ವೈದ್ಯಕೀಯ ಅಭ್ಯಾಸ ನಿರತರು ಹಾಗೂ ಹಲವಾರು ವಿಜ್ಞಾನಿಗಳು ಅಧ್ಯಯನ ಮಾಡಿರುವ ಪ್ರಕಾರ ಯಾರು ವೈನ್ ಸೇವಿಸುತ್ತಾರೋ, ಅಂತಹ ವ್ಯಕ್ತಿಗಳ ದೇಹದ ಯಾಂತ್ರಿಕ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತದೆ ಮತ್ತು ಅದು ಆತನ ನಿದ್ದೆಯನ್ನು ಹಾಳು ಮಾಡುತ್ತೆ ಮತ್ತು ಸಕ್ರಿಯ ಚಟುವಟಿಕೆಯಲ್ಲಿ ಭಾಗವಹಿಸಲು ಅಸಾಧ್ಯವಾಗುವಂತೆ ಮಾಡಿಬಿಡುತ್ತದೆ. ಯಾವಾಗ ಒಬ್ಬ ವ್ಯಕ್ತಿಯ ನಿದ್ದೆಗೆ ಅಡ್ಡಿಯಾಗುತ್ತೋ, ಆಗ ಆತನ ದೇಹವು ಅಡೆನೋಸಿನ್ ಅನ್ನೋ ನೈಸರ್ಗಿಕವಾದ ದ್ರವ್ಯದ ಹುಟ್ಟಿಗೆ ಕಾರಣವಾಗುತ್ತೆ ಮತ್ತು ಇದು ಆತನ ನಿತ್ಯದ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತೆ.

  ಯಾವಾಗ ಹೊತ್ತಲ್ಲದ ಹೊತ್ತಲ್ಲಿ ವ್ಯಕ್ತಿಯು ನಿದ್ದೆ ಮಾಡಲು ಆರಂಭಿಸುತ್ತಾನೋ, ಆಗ ಆತನ ಮೇಲೆ ಒತ್ತಡ ಆರಂಭವಾಗುತ್ತೆ. ಮುಂಜಾವಿನ ಹೊತ್ತಲ್ಲಿ ಎದ್ದು ಕೂರುವುದು, ಮಧ್ಯ ರಾತ್ರಿ ನಿದ್ದೆ ಬಾರದೇ ಇರುವುದು, ಹೀಗೆ ನಿದ್ದೆಯು ಪದೇ ಪದೇ ತೊಂದರೆಗೆ ಒಳಗಾಗಲು ಆರಂಭವಾಗುತ್ತದೆ. ಇದಕ್ಕೆ ಕಾರಣ ಅವರು ಪದೇ ಪದೇ ಸೇವಿಸಿದ ವೈನ್ ಕೂಡ ಆಗಿರಬಹುದು. ಅಷ್ಟೇ ಅಲ್ಲ, ಹೀಗೆ ವೈನ್ ಸೇವನೆಯು ಅವರಿಗೆ ರಾತ್ರಿಯ ವೇಳೆ ಅತಿಯಾಗಿ ಮೂತ್ರ ವಿಸರ್ಜನೆಗೆ ಹೋಗಬೇಕಾಗಿ ಬರಬಹುದು. ಮೂತ್ರ ವಿಸರ್ಜನೆಯೂ ಕೂಡ ಅವರನ್ನು ನಿದ್ದೆಯಿಂದ ಹಾಳು ಮಾಡುತ್ತೆ. ಒಮ್ಮೆ ಹೀಗೆ ಎಚ್ಚರವಾದರೆ ಮತ್ತೆ ನಿದ್ದೆಗೆ ಜಾರಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದನ್ನು ಅಧ್ಯಯನ ಮಾಡಿದವರು ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲ, ಯಾರು ರಾತ್ರಿ ಮಲಗುವ ಸಂದರ್ಬದಲ್ಲಿ ವೈನ್ ಸೇವಿಸುತ್ತಾರೋ ಅಂತವರಲ್ಲಿ ಇನ್ಸೋಮ್ನಿಯಾ ಎಂಬಂತ ನಿದ್ದೆಯ ಕಾಯಿಲೆ ಬಂದಿರುವುದು ಕೂಡ ಪತ್ತೆಯಾಗಿದೆ. ಹಾಗಾಗಿ ರಾತ್ರಿ ಮಲಗುವಾಗ ಇಲ್ಲವೇ ದಿನಕ್ಕೆ ಎರಡು ಲೋಟ ವೈನ್ ಸೇವನೆ ನಿಮ್ಮ ನಿದ್ದೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತೆ. ನೀವೂ ಕೂಡ ಒಂದು ವೇಳೆ ವೈನ್ ಅಥವಾ ಆಲ್ಕೋಹಾಲ್ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರೆ ಕೂಡಲೇ ಅದನ್ನು ಬಿಟ್ಟು ಬಿಡುವುದು ಸೂಕ್ತ ಮತ್ತು ಒಳ್ಳೆಯ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು.

  ವೈನ್ ಮತ್ತು ನಿದ್ದೆ, ಆಲ್ಕೋಹಾಲ್ ಮತ್ತು ನಿದ್ದೆಯ ಅಭಾವ

  2. ಒಳ್ಳೆಯ ನಿದ್ದೆಗಾಗಿ ವೈನ್ ಬದಲಾಗಿ ಈ ಕೆಳಗಿನ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ

  ಯಾರು ಪ್ರತಿದಿನ ವೈನ್ ಸೇವಿಸಿ ಉತ್ತಮ ನಿದ್ದೆ ಮಾಡಬಹುದು ಅಂದುಕೊಂಡಿದ್ದೀರೋ, ಅಂತವರು ಕೂಡಲೇ ವೈನ್ ಸೇವಿಸುವುದನ್ನು ಬಿಟ್ಟು, ಈ ಕೆಳಗೆ ನಾವು ಸೂಚಿಸುವ ಕೆಲವು ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು ಇಲ್ಲವೇ ಉತ್ತಮ ತಜ್ಞರ ಬಳಿ ಮಾಹಿತಿ ಪಡೆದು ಸಮತೋಲನ ಆಹಾರದ ಕಡೆಗೆ ಗಮನ ಹರಿಸಬಹುದು.

  1. ಪ್ರೋಟೀನ್, ಪೋಟಾಷಿಯಂಗಳನ್ನು ವಾಲ್ ನಟ್ ಹೊಂದಿದೆ. ನೈಸರ್ಗಿಕವಾಗಿ ನಿದ್ದೆ ತರಿಸುವ ಹಾರ್ಮೋನಿಗೆ ವಾಲ್ ನಟ್ ಉತ್ತಮವಾಗಿರುವುದರಿಂದಾಗಿ, ಪ್ರತಿದಿನ ವಾಲ್ ನಟ್ ಸೇವಿಸುವುದು ಉತ್ತಮ.

  2. ಸಲಾಡ್ ಗಳನ್ನು ರಾತ್ರಿ ಸೇವಿಸಿ. ನಿಮ್ಮ ಮೆದುಳನ್ನು ಆರಾಮಾಗಿಸಲು ಇದು ನೆರವಾಗುತ್ತೆ.

  3. ಮೆಲಟಾನಿನ್ ಮತ್ತು ಸೆರಟಾನಿನ್ ಗಳಿಗಾಗಿ ದೇಹಕ್ಕೆ ವಿಟಮಿನ್ ಬಿ6 ಬೇಕಾಗುತ್ತದೆ. ಬಾಳೆಹಣ್ಣು, ಬಿಸಿಬಿಸಿ ಹಾಲು ಸೇವಿಸುವುದರಿಂದಾಗಿ ನೈಸರ್ಗಿಕ ಕೆಮಿಕಲ್ ಗಳು ದೇಹದಲ್ಲಿ ಬಿಡುಗಡೆಯಾಗಿ ನಿಮ್ಮ ದೇಹಕ್ಕೆ ಆರಾಮ ಒದಗಿಸಲು ಸಹಾಯ ಮಾಡುತ್ತೆ.

  4. ಗ್ಲೈಕಾಮಿಕ್ ಇನ್ಡೆಕ್ಸ್ ಗಳನ್ನು ಹೊಂದಿರುವ ಕೆಲವು ಆಹಾರ ಪದಾರ್ಥಗಳು, ಉದಾಹರಣೆಗೆ ಬ್ರೆಡ್, ಪಾಸ್ತಾ ನಿದ್ದೆಗೆ ಸಹಾಯ ಮಾಡುತ್ತೆ. ಇದು ಯಾಕೆಂದರೆ ಇನ್ಸುಲಿನ್ ಲೆವೆಲ್ ಮತ್ತು ಬ್ಲಡ್ ಶುಗರ್ ಲೆವೆಲ್ ಗೆ ಇದು ಸಹಕಾರಿ. ನೈಸರ್ಗಿಕ ಸ್ಪರ್ ಗಳು ಇದರಲ್ಲಿದ್ದು, ಇವು ನಿಮ್ಮನ್ನು ಸುಸ್ತಾಗಿರುವವರಂತೆ ಮಾಡಿ ನಿದ್ದೆ ಬರುವಂತೆ ಮಾಡುತ್ತೆ.

  5. ಟಿವಿ, ಕಂಪ್ಯೂಟರ್, ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿದರೆ ನೀವು ಪ್ರತಿದಿನ ಸರಿಯಾದ ಸಮಯಕ್ಕೆ ನಿದ್ರಿಸಲು ನೆರವಾಗುತ್ತೆ.

  6. ಪ್ರತಿದಿನ ಯೋಗ ಮಾಡುವುದು, ವ್ಯಾಯಾಮ ಮಾಡುವುದರಿಂದ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತೆ.

  7. ಪ್ರತಿದಿನ ಬಿಸಿ ನೀರಿನ ಸ್ನಾನ ಮಾಡಿ, ತಾಯಿ ಮಾಡದ ಸೇವೆಯನ್ನು ನೀರು ಮಾಡಿದೆಯಂತೆ ಅಂತ ಗಾದೆಯೇ ಇದೆ. ಹಾಗೆ ಸ್ನಾನ ಮಾಡುವುದರಿಂದಲೂ ಕೂಡ ಉತ್ತಮ ನಿದ್ದೆ ಬರುತ್ತೆ.

  ವೈನ್ ಮತ್ತು ನಿದ್ದೆ, ಆಲ್ಕೋಹಾಲ್ ಮತ್ತು ನಿದ್ದೆಯ ಅಭಾವ

  ಒಟ್ಟಾರೆಯಾಗಿ, ರಾತ್ರಿ ಮಲಗುವಾಗ ವೈನ್ ಸೇವಿಸುವುದನ್ನು ಬಿಟ್ಟು ನಿದ್ದೆಗಾಗಿ ಬೇರೆ ಉತ್ತಮ ಅಭ್ಯಾಸಗಳನ್ನು ಪಾಲಿಸುವುದು ಒಳ್ಳೆಯದು. ಇಷ್ಟಕ್ಕೂ ಮೀರಿ ಯಾರಿಗಾದರೂ ಸರಿಯಾಗಿ ನಿದ್ದೆ ಬರುತ್ತಿಲ್ಲವಾದರೆ ಅವರು, ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು. ಒತ್ತಡ, ಮಾನಸಿಕ ಖಿನ್ನತೆ ಕೂಡ ನಿದ್ದೆಯ ಸಮಸ್ಯೆಗೆ ಕಾರಣವಾಗಿರಬಹುದು. ಖಿನ್ನತೆಯನ್ನು ವೈದ್ಯರು ನಿವಾರಿಸಬಹುದೇ ಹೊರತು ಯಾವುದೇ ವೈನ್ ಶಾಪ್ ಗಳಲ್ಲ ಅನ್ನುವುದು ಚೆನ್ನಾಗಿ ನೆನಪಿರಲಿ. ಬ್ಲಡ್ ಶುಗರ್ ಲೆವೆಲ್ ನಲ್ಲಿನ ವ್ಯತ್ಯಾಸವೂ ಕೂಡ ನಿಮ್ಮ ನಿದ್ದೆಯ ಸಮಸ್ಯೆಗೆ ಕಾರಣವಾಗಿರಬಹುದು. ಕೆಲವು ಸಂದರ್ಬದಲ್ಲಿ ವಯಸ್ಸೂ ಕೂಡ ನಿಮ್ಮ ನಿದ್ದೆಯ ಪ್ರಮುಖ ಪಾತ್ರ ವಹಿಸುತ್ತದೆ. ವೈನ್ ಸೇವಿಸುವ ಬದಲು ಸರಿಯಾದ ವೈದ್ಯಕೀಯ ಸಲಹೆ ಪಡೆದು ಮುನ್ನಡೆಯಿರಿ. ಪ್ರತಿದಿನ ವೈನ್ ಸೇವಿಸಿ ನಿದ್ದೆ ಮಾಡುವುದು ಮುಂದೊಂದು ದಿನ ನಿಮ್ಮನ್ನ ಅಲ್ಕೋಹಾಲಿಕ್ ಪರ್ಸನ್ ಆಗಿ ಬದಲಾಯಿಸುತ್ತೇ ಹೊರತು ನಿದ್ದೆಯ ಸಮಸ್ಯೆಗೆ ಪರಿಹಾರ ನೀಡುವ ಅಸ್ತ್ರ ಅದಾಗಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಕೂಡ ಈ ತಪ್ಪು ತಿಳುವಳಿಕೆಯಿಂದ ಹೊರಬರಬೇಕು ಮತ್ತು ಉತ್ತಮ ನಿದ್ದೆಯ ಅಭ್ಯಾಸವನ್ನು ಹೊಂದಬೇಕು. ವೈನ್ ಸೇವನೆಯು ನಿಮ್ಮ ನಿತ್ಯದ ಎಲ್ಲಾ ಕೆಲಸಗಳನ್ನು ಹಾಳು ಮಾಡುವ ಸಾಧ್ಯತೆ ಇರುತ್ತೆ ಅನ್ನೋದು ಚೆನ್ನಾಗಿ ನೆನಪಿರಲಿ.

  Read more about: ವೈನ್ health
  English summary

  how-do-2-glasses-of-wine-affect-your-sleep

  how-do-2-glasses-of-wine-affect-your-sleep
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more