For Quick Alerts
ALLOW NOTIFICATIONS  
For Daily Alerts

ವಾಲ್ ನಟ್ಸ್ - ಜೇನು ಇದ್ದರೆ ಸಾಕು- ಥೈರಾಯ್ಡ್ ಸಮಸ್ಯೆ ಮಂಗಮಾಯ!

By Hemanth
|

ದೇಹದಲ್ಲಿ ಹಾರ್ಮೋನುಗಳು ಅತಿಯಾಗಿ ಉತ್ಪತ್ತಿಯಾಗಲು ಆರಂಭಿಸಿದಾಗ ಕಾಣಿಸಿಕೊಳ್ಳುವ ಸಮಸ್ಯೆಯೇ ಥೈರಾಯ್ಡ್ ಸಮಸ್ಯೆ. ಇದರಿಂದ ಹಲವಾರು ಸಮಸ್ಯೆಗಳು ದೇಹದ ಮೇಲೆ ಆಗುವುದು. ಥೈರಾಯ್ಡ್ ನಿಂದಾಗಿ ಕೆಲವು ಮಂದಿ ಅತಿಯಾದ ತೂಕ ಪಡೆದರೆ, ಇನ್ನು ಕೆಲವು ಮಂದಿಯ ತೂಕವು ಇಳಿಯುವುದು. ಥೈರಾಯ್ಡ್ ಗೆ ಹಲವಾರು ರೀತಿಯ ಚಿಕಿತ್ಸೆಗಳು ಕೂಡ ಇದೆ. ಆದರೆ ಕೆಲವು ಮನೆಮದ್ದುಗಳು ಥೈರಾಯ್ಡ್ ಗೆ ಪರಿಣಾಮಕಾರಿಯಾಗಿದೆ. ಥೈರಾಯ್ಡ್ ಗೆ ವಾಲ್ ನಟ್ ಮತ್ತು ಜೇನುತುಪ್ಪವು ತುಂಬಾ ಪರಿಣಾಮಕಾರಿ. ಥೈರಾಯ್ಡ್ ಒಂದು ನಿರ್ನಾಳ ಗ್ರಂಥಿಯಾಗಿದ್ದು, ಇದು ಹಾರ್ಮೋನುಗಳನ್ನು ಉತ್ಪತ್ತಿ ಮಾಡುವುದು. ಇದು ಚಯಾಪಚಯ, ಹೃಯದ ಮತ್ತು ಭಾವನೆಗಳಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಇದು ಕೆಲವು ಪ್ರಮುಖ ಚಟುವಟಿಕೆಗಳ ಲಯವನ್ನು ನಿಯಂತ್ರಣದಲ್ಲಿ ಇಡುವುದು.

ಆದರೆ ಇದು ಅಸಮಪರ್ಕವಾಗಿ ಕಾರ್ಯನಿರ್ವಹಿಸಲು ಆರಂಭಿಸಿದಾಗ ಪ್ರೋಟೀನ್ ಸಂಶ್ಲೇಷಣೆ, ಸರಬರಾಜು ಮತ್ತು ಆಮ್ಲಜನಕ ಪೂರೈಕೆ ಪ್ರಕ್ರಿಯೆಯ ಮೇಲೆ ಪರಿಣಾಮ ಬಿರುವುದು. ಕೆಲವೊಂದು ಸಲ ಥೈರಾಯ್ಡ್ ಗ್ರಂಥಿಗಳು ಹಾರ್ಮೋನುಗಳ ಅಸಮತೋಲನ ಉಂಟು ಮಾಡುವುದು. ಇದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವುದು.

what is thyroid

ಥೈರಾಯ್ಡ್ ಎಂದರೇನು?

ಇದು ನಮ್ಮ ಕುತ್ತಿಗೆಯಲ್ಲಿ ಧ್ವನಿಪೆಟ್ಟಿಗೆಯನ್ನು ಸುತ್ತುವರೆದಿರುವಂತಿರುವ ಒಂದು ಗ್ರಂಥಿಯಾಗಿದ್ದು ನಮ್ಮ ದೇಹದ ಬೆಳವಣಿಗೆ ಮತ್ತು ಇತರ ಚಟುವಟಿಕೆಗೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುತ್ತದೆ. ಈ ಹಾರ್ಮೋನುಗಳ ಸ್ರವಿಕೆ ಏಕೆ ಅಗತ್ಯ? ನಮ್ಮ ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿಡುವುದು, ಜೀರ್ಣಕ್ರಿಯೆ, ಶಕ್ತಿಯ ಬಳಕೆ ಇತ್ಯಾದಿಗಳಿಗೆಲ್ಲಾ ಅಗತ್ಯ ಪ್ರಮಾಣದ ಹಾರ್ಮೋನುಗಳನ್ನು ಸ್ರವಿಸುವುದು ಈ ಗ್ರಂಥಿಯ ಕೆಲಸ. ಅಲ್ಲದೇ ನಮ್ಮ ದೇಹದ ಅತಿಮುಖ್ಯ ಅಂಗಗಳಾದ ಹೃದಯ ಮತ್ತು ಯಕೃತ್‪ಗಳ ಕಾರ್ಯವನ್ನು ನಿರ್ವಹಿಸಲೂ ಥೈರಾಯ್ಡ್ ಸ್ರವಿಕೆ ಅವಶ್ಯಕವಾಗಿದ್ದು ಒಂದರ್ಥದಲ್ಲಿ ಈ ಅಂಗಗಳನ್ನು ನಿಯಂತ್ರಿಸುವ ಚಾಲಕನಾಗಿದೆ.

ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಥೈರಾಯ್ಡ್ ಅಸಮರ್ಪಕತೆಯ ಲಕ್ಷಣಗಳು ಯಾವುದು

ಥೈರಾಯ್ಡ್ ಅಸಮರ್ಪಕತೆಯ ಲಕ್ಷಣಗಳು ಸಮಸ್ಯೆಗಳ ಮೇಲೆ ಅವಲಂಬಿತವಾಗಿದೆ.

1. ಹೈಪರ್ ಥೈರಾಯ್ಡಿಸಮ್
2. ಗೋಯಿಟರ್
3. ಹೈಪರ್ ಥೈರಾಯ್ಡಿಸಮ್
4. ಥೈರಾಯ್ಡಿಸ್ಟ್
5. ಥೈರಾಯ್ಡ್ ಕ್ಯಾನ್ಸರ್
6. ಥೈರಾಯ್ಡ್ ಗಂಟುಗಳು

ಮೇಲಿನ ಯಾವುದಾದರೂ ಸಮಸ್ಯೆಗಳು ನಿಮಗೆ ಇದ್ದಲ್ಲಿ ಆಗ ನಿಮಗೆ ದೀರ್ಘ ಸಮಯದ ಬಳಲಿಕೆ, ಆತಂಕ ಮತ್ತು ಧೈರ್ಯಕುಂದುವಿಕೆ, ಲೈಂಗಿಕ ಆಸಕ್ತಿ ಕುಂದುವಿಕೆ, ಚರ್ಮ ಒಣಗುವುದು, ಕೂದಲು ಉದುರುವಿಕೆ, ಹಸಿವು ಮತ್ತು ಆಹಾರದ ರುಚಿ ಬದಲಾವಣೆ, ಸ್ನಾಯು ಮತ್ತು ಗಂಟು ನೋವು, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್, ಅನಿಯಮಿತ ಋತುಚಕ್ರ, ದೇಹದ ಉಷ್ಣತೆಯ ಅಸಮರ್ಪಕ ನಿಯಂತ್ರಣ

ಥೈರಾಯ್ಡ್ ಸಮಸ್ಯೆಗೆ ವಾಲ್ ನಟ್ಸ್ ಮತ್ತು ಜೇನುತುಪ್ಪ ಹೇಗೆ ನೆರವಾಗುವುದು?

ವಾಲ್ ನಟ್ಸ್(ಬೇರೆ ಯಾವುದೇ ಬೀಜ) ಮತ್ತು ಜೇನುತುಪ್ಪವು ತುಂಬಾ ಹಿಂದಿನ ವೈದ್ಯಕೀಯ ವಿಧಾನವಾಗಿದ್ದು, ಇದನ್ನು ಥೈರಾಯ್ಡ್ ಹಾರ್ಮೋನುಗಳ ಸಮತೋಲನ ಕಾಪಾಡಲು ಉತ್ತೇಜಿಸಲು ಬಳಸಲಾಗುವುದು. ನಿಯಮಿತವಾಗಿ ಇದನ್ನು ಸೇವನೆ ಮಾಡಿದರೆ ಅದರಿಂದ ಹಾರ್ಮೋನುಗಳ ಉತ್ಪತ್ತಿ ಕುಗ್ಗುವುದು ಮತ್ತು ಅತಿಯಾಗುವುದರಿಂದ ಸಮತೋಲ ಕಾಪಾಡುವುದು.

ಥೈರಾಯ್ಡ್ ಆರೋಗ್ಯಕ್ಕೆ ವಾಲ್ ನಟ್ಸ್ ಲಾಭಗಳು

ಬೀಜಗಳು ಥೈರಾಯ್ಡ್ ನ ಆರೋಗ್ಯವನ್ನು ಯಾವ ರೀತಿ ಕಾಪಾಡುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇವುಗಳಲ್ಲಿ ಪೋಷಕಾಂಶಗಳು ಮತ್ತು ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಬೇಕಾಗುವ ಗುಣಗಳು ಇವೆ.
ಐಯೋಡಿನ್ ಕಡಿಮೆಯಿದ್ದರೆ ಆಗ ಸೆಲೆನಿಯಂ ಮಟ್ಟವು ಕಡಿಮೆಯಾಗುವುದು. ಇದು ಹೈಪರ್ ಥೈರಾಯ್ಡಿಸಮ್ ಗೆ ಕಾರಣವಾಗುವುದು.
ಕೊಬ್ಬಿನಾಮ್ಲವನ್ನು ಹೊಂದಿರುವಂತಹ ಬೀಜಗಳು ಗ್ರಂಥಿಗಳಲ್ಲಿ ಉಂಟಾಗುವಂತಹ ಉರಿಯೂತದ ಅಸಮತೋಲನ ಕಡಿಮೆ ಮಾಡುವುದು, ರಕ್ತ ಸಂಚಾರ ಸುಧಾರಿಸುವುದು ಮತ್ತು ದೇಹಕ್ಕೆ ಶಕ್ತಿ ನೀಡುವುದು.

ಥೈರಾಯ್ಡ್ ನ ಆರೋಗ್ಯಕ್ಕೆ ಜೇನುತುಪ್ಪದ ಲಾಭಗಳು

ಜೇನುತುಪ್ಪದಲ್ಲಿ ಕಿಣ್ವಗಳು, ಖನಿಜಾಂಶಗಳು, ವಿಟಮಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಜೇನುತುಪ್ಪದಲ್ಲಿ ನೈಸರ್ಗಿಕ ಸಕ್ಕರೆಯಂಶವಿದ್ದು, ಇದು ಕೋಶಗಳಿಗೆ ಶಕ್ತಿ ನೀಡುವುದು. ದೇಹದಲ್ಲಿರುವ ವಿಷಕಾರಿ ಅಂಶಗಳು ಹಾಗೂ ಲೋಹಗಳಿಂದ ದೇಹವನ್ನು ಶುದ್ಧೀಕರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ವಿಷಕಾರಿ ಅಂಶಗಳು ಹಾಗೂ ಲೋಹಗಳು ಥೈರಾಯ್ಡ್ ಸಮಸ್ಯೆ ಉಂಟು ಮಾಡುವುದು.

ಈ ಮನೆಮದ್ದನ್ನು ತಯಾರಿಸಿಕೊಳ್ಳುವುದು ಹೇಗೆ?

ಸೆಲೆನಿಯಂ ಇರುವಂತಹ ಬೀಜಗಳಾದ ವಾಲ್ ನಟ್ಸ್, ಗೋಡಂಬಿ, ಬೀಜಗಳು, ಬ್ರೆಜಿಲ್ ನಟ್ಸ್ ಇತ್ಯಾದಿ ಬಳಸಬಹುದು.

ಬೇಕಾಗುವ ಸಾಮಗ್ರಿಗಳು

  • 40 ವಾಲ್ ನಟ್ಸ್
  • 3 ಕಪ್ ಸಾವಯವ ಜೇನುತುಪ್ಪ

ವಿಧಾನ

  1. ಬೀಜವನ್ನು ಅರ್ಧ ಮಾಡಿ ಸಣ್ಣ ತುಂಡುಗಳನ್ನಾಗಿಸಿ.
  2. ಒಂದು ಗಾಜಿನ ಲೋಟಕ್ಕೆ ಇದನ್ನು ಹಾಕಿ ಮತ್ತು ಜೇನುತುಪ್ಪ ಬೆರೆಸಿ.
  3. ಎರಡನ್ನು ಕಲಸಿಕೊಂಡು ಸರಿಯಾಗಿ ಬಾಯಿ ಮುಚ್ಚಿ.
  4. ಇದನ್ನು ತಂಪು ಹಾಗೂ ಕತ್ತಲೆಯ ಜಾಗದಲ್ಲಿ ಸುಮಾರು 7-10 ದಿನಗಳ ಕಾಲ ಇಡಿ.
  5. ಸೇವಿಸುವುದು ಹೇಗೆ?
  6. ಜೇನುತುಪ್ಪ ಮತ್ತು ಬೀಜಗಳ ಮಿಶ್ರಣವನ್ನು ಬೆಳಗ್ಗೆ ಉಪಾಹಾರಕ್ಕೆ ಮೊದಲು ಎರಡು ಚಮಚ ಸೇವಿಸಿ. ಇದನ್ನು ರಾತ್ರಿ ಕೂಡ ಸೇವಿಸಬಹುದು. ನಿಯಮಿತವಾಗಿ ಇದನ್ನು ಬಳಸಿಕೊಂಡರೆ ಆಗ ಥೈರಾಯ್ಡ್ ಸಮಸ್ಯೆಯು ಸರಿಯಾಗಿರುವುದು.

ಬೀಟ್ರೂಟ್ ರಸ ಕುಡಿಯಿರಿ

ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದಾಗಿ ಉಂಟಾಗುವ ಅನೀಮಿಯಾ ಸ್ಥಿತಿಗೂ ಬೀಟ್‌ರೂಟ್ ನೀಡುವ ನೆರವು ಯಾವುದೇ ಬೇರೆ ಆಹಾರದಲ್ಲಿಲ್ಲ! ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ಕರಗುವ ನಾರು ಇದ್ದು ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ಮಧ್ಯಮ ಗಾತ್ರದ ಬೀಟ್ರೂಟನ್ನು ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಹಾಗೆಯೇ ಸೇವಿಸಬಹುದು. ಇಲ್ಲವೇ ಅದನ್ನು ಮಿಕ್ಸರ್ಅಲ್ಲಿ ರುಬ್ಬಿ ರಸ ತೆಗೆದು, ಕುಡಿಯಬಹುದು.

ಐಯೋಡಿನ್ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

ಸಮುದ್ರ ಆಹಾರಗಳು, ಮೊಸರು, ಆಲೂಗೆಡ್ಡೆ, ಸ್ಟ್ರಾಬರಿ ಹಾಗೂ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು. ಆರೋಗ್ಯಕರ ಕೊಬ್ಬಿನ ಆಹಾರ: ಒಮೆಗಾ 3 ಕೊಬ್ಬಿನಂಶವಿರುವ ಆಹಾರಗಳನ್ನು ತಿನ್ನಬೇಕು. ಒಳ್ಳೆಯ ಕೊಬ್ಬಿನಂಶ ಇರುವ ಎಣ್ಣೆ ಬಳಸುವುದು ಒಳ್ಳೆಯದು. ಅಧಿಕ ಕ್ಯಾಲೋರಿ ಇರುವ ಎಣ್ಣೆ ಬಳಸಿ ತಯಾರಿಸಿದ ಅಡುಗೆಯನ್ನು ತಿನ್ನಬಾರದು. ಕ್ಯಾಲ್ಸಿಯಂ ಇರುವ ಆಹಾರಗಳು: ಕ್ಯಾಲ್ಸಿಯಂ ಅಧಿಕ ಇರುವ ಆಹಾರಗಳನ್ನು ಸೇವಿಸಬೇಕು. ಬಾದಾಮಿ, ಮೊಸರು, ಹಾಲು ಇವುಗಳಲ್ಲಿ ಕ್ಯಾಲ್ಸಿಯಂ ಅಂಶವಿರುತ್ತದೆ. ಕೆಫೀನ್ ಇರುವ ಅಂಶ ಸೇವಿಸಬಾರದು: ಡಾರ್ಕ್ ಚಾಕಲೇಟ್, ಕಾಫಿ ಇವುಗಳನ್ನುಲ್ಲಿ ಕೆಫೀನ್ ಇರುತ್ತದೆ. ಆದ್ದರಿಂದ ಇಂತಹ ವಸ್ತುಗಳನ್ನು ಮುಟ್ಟಬಾರದು. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಇದನ್ನು ಶೇರ್ ಮಾಡಿಕೊಳ್ಳಿ.

English summary

Honey And Nuts Home Remedy For Treating Thyroid

The thyroid is one of the endocrine glands that produce hormones. It plays a major role in metabolic, cardiovascular and emotional health. It has many functions like controlling the rhythm of many vital activities but when it malfunctions, it also interferes with protein synthesis, circulation and the oxygenation process. But sometimes, the thyroid gland can go out of whack by causing hormonal imbalances that subsequently produce disorders that affect the quality of life.
X
Desktop Bottom Promotion