For Quick Alerts
ALLOW NOTIFICATIONS  
For Daily Alerts

  ತುಟಿಗಳ ಸುತ್ತಲು ಬೀಳುವ ಗುಳ್ಳೆಗಳ ಸಮಸ್ಯೆಗೆ ಮನೆಮದ್ದುಗಳು

  |

  ನಿಮ್ಮ ತುಟಿಗಳ ಸುತ್ತಲೂ ಸಣ್ಣ ಕೆಂಪು ಗುಳ್ಳೆಗಳನ್ನು ನೋಡಿದ್ದೀರಾ? ಅವುಗಳು ನಿಮಗೆ ನೋವುಂಟು ಮಾಡುತ್ತದೆಯೇ? ಒಂದು ವೇಳೆ ಹೌದು ಎಂದಾದರೆ, ನೀವು ಶೀತಲ ಗುಳ್ಳೆ( ಕೋಲ್ಡ್ ಸೋರ್ಸ್) ಗಳಿಂದ ಬಳಲುತ್ತಿರುವಿರಿ. ಶೀತಲ ಗುಳ್ಳೆಗಳನ್ನು ಸಾಮಾನ್ಯವಾಗಿ ಜ್ವರದ ಗುಳ್ಳೆಗಳು ಎಂದು ಕರೆಯಲಾಗುತ್ತದೆ, ಅವು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (HSV) ನಿಂದ ಉಂಟಾಗುತ್ತವೆ. ಈ ಸೋಂಕು ನಿಮ್ಮ ತುಟಿಗಳ ಮೇಲೆ, ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಗುಳ್ಳೆಗಳನ್ನು ಉಂಟುಮಾಡಬಹುದು.

  ಶೀತಲ ಹುಣ್ಣುಗಳು ಅಥವಾ ಜ್ವರದ ಗುಳ್ಳೆಗಳು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ 1 ನಿಂದ (HSV-1) ಉಂಟಾಗುತ್ತವೆ. ಈ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಲಾಲಾರಸದಿಂದ ಅಥವಾ ಜೊಲ್ಲಿನ ಮೂಲಕ (ನೇರವಾಗಿ, ಒಬ್ಬರು ಕುಡಿದ ಲೋಟದಿಂದ ಇನ್ನೊಬ್ಬರು ಕುಡಿಯುವುದರಿಂದ) ಅಥವಾ ಚರ್ಮದ ಸಂಪರ್ಕದಿಂದ ಹರಡುತ್ತದೆ. ಶೀತಲ ಗುಳ್ಳೆಯು ಸಾಮಾನ್ಯವಾಗಿ ತುಟಿಯ ಮೇಲೆ ಸಣ್ಣ ಸಣ್ಣ ಗುಳ್ಳೆಗಳ ಗುಂಪುಗಳಾಗಿ ಗೋಚರಿಸುತ್ತದೆ. ಈ ಗುಳ್ಳೆಗಳು, ತುಟಿಗಳ ಸುತ್ತ ಕಾಣಿಸಿಕೊಳ್ಳುತ್ತವೆ ಮತ್ತು ನೀರು ಗುಳ್ಳೆಗಳಂತಿರುತ್ತವೆ. ಸಾಮಾನ್ಯವಾಗಿ 7 ರಿಂದ 10 ದಿನಗಳವರೆಗೆ ಇರುವ ಶೀತಲ ಗುಳ್ಳೆಗಳು ಒಂದು ಸಾಂಕ್ರಾಮಿಕ ರೋಗವಾಗಿದೆ. ಈ ಸೋಂಕು ಗಂಭೀರ ಸಮಸ್ಯೆ ಅಲ್ಲವಾದರೂ, ದುರ್ಬಲ ರೋಗನಿರೋಧಕ ಶಕ್ತಿ ಇರುವವರ ಮೇಲೆ, ಮಾರಕ ಪರಿಣಾಮ ಬೀರಬಹುದು. 

  ಶೀತಲ ಹುಣ್ಣುಗಳ ಚಿಕಿತ್ಸೆಗಾಗಿ ಮನೆಯ ಪರಿಹಾರಗಳು: ಬೆಳ್ಳುಳ್ಳಿ, ಲೆಮನ್ ಬಾಮ್( ಪುದೀನ ವರ್ಗಕ್ಕೆ ಸೇರಿದ ಔಷಧೀಯ ಸಸ್ಯ, ನಿಂಬೆಯ ಬಾಮ್/ಕ್ರೀಮ್ಎಂದುಕೊಳ್ಳದಿರಿ) ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಎಲ್ಲಾ ಆಹಾರಗಳು. ಶೀತಲ ಗುಳ್ಳೆಗಳು ಗುಣಮುಖವಾದರೂ, ಹರ್ಪಿಸ್ ವೈರಸ್ ಉಳಿಯಬಹುದು, ಮತ್ತು ಭವಿಷ್ಯದಲ್ಲಿ ಏಕಾಏಕಿಯಾಗಿ ತುಟಿಗಳ ಮೇಲೆ ಅಥವಾ ಮೊದಲಿದ್ದ ಪ್ರದೇಶದಲ್ಲಿ ಉಂಟಾಗಬಹುದು.

  ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, 50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರ, ಸುಮಾರು ಮೂರನೇ ಎರಡು ಭಾಗದಷ್ಟು ಜನರು ಶೀತಲ ಗುಳ್ಳೆಗಳಿಂದ ಬಳಲುತ್ತಿದ್ದಾರೆ. ಶೀತಲ ಗುಳ್ಳೆಗಳು ಜ್ವರ, ಗಂಟಲು ನೋವು, ಮತ್ತು ತಲೆನೋವುಗಳೊಂದಿಗೆ ಕೂಡಿರುತ್ತದೆ. ಒತ್ತಡ, ಹಾರ್ಮೋನುಗಳ ಏರಿಳಿತ, ಶಸ್ತ್ರಚಿಕಿತ್ಸೆ, ಜ್ವರ, ಅನಾರೋಗ್ಯ, ಅಥವಾ ಸೂರ್ಯನ ಬೆಳಕು ಮುಂತಾದ ವಿಷಯಗಳಿಂದ ಕೂಡಾ ಪ್ರಚೋದಿತಗೊಳ್ಳಬಹುದು. ಶೀತಲ ಹುಣ್ಣುಗಳಿಗೆ, ಇದುವರೆಗೆ ಯಾವುದೇ ಸಂಪೂರ್ಣ ಗುಣಪಡಿಸುವ ಚಿಕಿತ್ಸೆಯನ್ನು ಕಂಡುಹಿಡಿದಿಲ್ಲ. ಆದರೆ, ನಿಮ್ಮ ತುಟಿಗಳ ಸುತ್ತಲೂ ಇರುವ ಶೀತಲ ಗುಳ್ಳೆಗಳ, ತೀವ್ರತೆ, ಅವುಗಳು ಉಳಿಯುವ ಸಮಯ ಮತ್ತು ಆವರ್ತನಗಳನ್ನು, ಈ ಮನೆ ಮದ್ದುಗಳನ್ನು ಅನ್ವಯಿಸುವ ಮೂಲಕ ಕಡಿಮೆ ಮಾಡಲು ಸಾಧ್ಯವಿದೆ. ಹಾಗಾದರೆ ಬನ್ನಿ, ಅದು ಹೇಗೆ? ಯಾವುದರ ಮೂಲಕ ಎಂದು ನೋಡೋಣ..... 

  ಮಂಜುಗಡ್ಡೆ

  ಮಂಜುಗಡ್ಡೆ

  ಕೆಂಪಾದ, ನೋಯುತ್ತಿರುವ, ಊತಗೊಂಡಿರುವ ಜ್ವರದ ಗುಳ್ಳೆಗಳನ್ನು ಕಡಿಮೆ ಮಾಡಲು ಮಂಜುಗಡ್ಡೆ ಸಹಾಯ ಮಾಡುತ್ತದೆ ಮತ್ತು ಇದು ನಿಮಿಷಗಳೊಳಗೆ ನೋವನ್ನು ಶಮನಗೊಳಿಸುತ್ತದೆ.

  ಕೆಲವು ಮಂಜುಗಡ್ಡೆಗಳನ್ನು ಒಂದು ಶುಚಿಯಾದ ಬಟ್ಟೆಯಲ್ಲಿ ಸುತ್ತಿಕೊಳ್ಳಿ .

  10 ರಿಂದ 15 ನಿಮಿಷಗಳ ಕಾಲ ಅದನ್ನು ತೊಂದರೆಗೊಳಗಾದ ಜಾಗದಲ್ಲಿ ಇರಿಸಿ.

  ಪ್ರತಿ ಮೂರು ನಾಲ್ಕು ಗಂಟೆಗಳಿಗೊಮ್ಮೆ ಈ ವಿಧಾನವನ್ನು ಪುನರಾವರ್ತಿಸಿ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ಬೆಳ್ಳುಳ್ಳಿಯು, ಎನ್ ಝೈಮ್ ಗಳನ್ನು ಒಳಗೊಂಡಿರುತ್ತದೆ, ಅದು ಆಂಟಿ ಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ಇದು ಉರಿಯೂತವನ್ನು ಕಡಿಮೆಮಾಡುವ ಗುಣವನ್ನು ಒಳಗೊಂಡಿದೆ.

  ಬೆಳ್ಳುಳ್ಳಿಯ ಅರ್ಧಭಾಗವನ್ನು ಜಜ್ಜಿ, ಅದನ್ನು ಪೀಡಿತ ಪ್ರದೇಶದ ಮೇಲೆ ಹಚ್ಚಿ.

  10 ನಿಮಿಷಗಳ ಕಾಲ ಬಿಡಿ. ದಿನಕ್ಕೆ ಮೂರರಿಂದ ಐದು ಬಾರಿ ವಿಧಾನವನ್ನು ಪುನರಾವರ್ತಿಸಿ.

  ಬೆಳ್ಳುಳ್ಳಿಯನ್ನು ನೋವಿರುವ ಜಾಗದ ಮೇಲೆ ಹಚ್ಚುವಾಗ ನಿಮಗೆ ಸುಡುವ ಅನುಭವವಾಗಬಹುದು. ಆದ ಕಾರಣ ಜಾಗ್ರತೆಯಾಗಿರಿ.

  ಜೇಷ್ಠಮಧು ಬೇರುಗಳು

  ಜೇಷ್ಠಮಧು ಬೇರುಗಳು

  ಜೇಷ್ಠಮಧು ಬೇರುಗಳು ಶೀತಲ ಹುಣ್ಣುಗಳನ್ನು ತಡೆಗಟ್ಟುವ ಮತ್ತು ಅವುಗಳಿಗೆ ಚಿಕಿತ್ಸೆ ನೀಡುವ ಮೂಲಿಕೆಯಾಗಿದೆ. ಇದು ಗ್ಲೈಸಿರ್ರಿಜಿನ್ ಎಂಬ ಉರಿಯೂತ ನಿರೋಧಕ ಮತ್ತು ಆಂಟಿ ವೈರಲ್ ಗುಣಲಕ್ಷಣಗಳನ್ನು ಒಳಗೊಂಡ ಸಕ್ರಿಯ ಪದಾರ್ಥವನ್ನು ಹೊಂದಿದೆ.

  1 ಟೇಬಲ್ ಚಮಚ ಜೇಷ್ಠಮಧು ಬೇರಿನ ಹುಡಿ ಮತ್ತು 1/2 ಟೀ ಚಮಚ ನೀರನ್ನು ಮಿಶ್ರ ಮಾಡಿ.

  ಹತ್ತಿ ಅಥವಾ ನಿಮ್ಮ ಬೆರಳುಗಳನ್ನು ಬಳಸಿಕೊಂಡು ಈ ಮಿಶ್ರಣವನ್ನು ಗುಳ್ಳೆಗಳ ಮೇಲೆ ಲೇಪಿಸಿ

  ಕೆಲವು ಗಂಟೆಗಳ ಕಾಲ ಬಿಟ್ಟು, ತೊಳೆಯಿರಿ

  ದಿನದಲ್ಲಿ ಹಲವಾರು ಬಾರಿ ಪುನರಾವರ್ತಿಸಿ

  ನೀವು ಶೀತಲ ಗುಳ್ಳೆಗಳಿಂದ ಬಳಲುತ್ತಿದ್ದರೆ, ಇವು ಏಕಾಏಕಿ ಉಂಟಾಗುವುದನ್ನು ತಡೆಯಲು ನಿಯಮಿತವಾಗಿ ಜೇಷ್ಠಮಧು ಬೇರುಗಳನ್ನು ಬಳಸಿ.

  ಲೆಮನ್ ಬಾಮ್

  ಲೆಮನ್ ಬಾಮ್

  ಲೆಮನ್ ಬಾಮ್, ಗುಣವಾಗುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ, ಹಾನಿಗೊಳಗಾದ ಚರ್ಮವನ್ನು ಶಮನಗೊಳಿಸುತ್ತದೆ ಮತ್ತು ಸೋಂಕು ಬೇರೆಡೆ ಹರಡುವುದನ್ನು ತಡೆಯುತ್ತದೆ. ಲೆಮನ್ ಬಾಮ್ ನಲ್ಲಿರುವ ಟಾನಿನ್ ಗಳು ಮತ್ತು ಪಾಲಿಫಿನೋಲಿಕ್ ಸಂಯುಕ್ತಗಳು ಅದರ ಆಂಟಿವೈರಲ್ ಪರಿಣಾಮಗಳಿಗೆ ಕಾರಣವಾಗಿವೆ.

  2 ಟೀ ಚಮಚ ಒಣಗಿದ ಲೆಮನ್ ಬಾಮ್ ಎಲೆಗಳ ಚೂರುಗಳನ್ನು 10 ನಿಮಿಷಗಳ ಕಾಲ ಒಂದು ಕಪ್ ಬಿಸಿ ನೀರಿನಲ್ಲಿ ಸೇರಿಸಿ.ಅದನ್ನು ಸೋಸಿ ಕುಡಿಯಿರಿ.ಪ್ರತಿದಿನ ನಾಲ್ಕು ಕಪ್ ಈ ಗಿಡಮೂಲಿಕೆಯ ಚಹಾವನ್ನು ಸೇವಿಸಿ.

  ತಂಪಾದ ಹಾಲು (ಕೋಲ್ಡ್ ಹಾಲು)

  ತಂಪಾದ ಹಾಲು (ಕೋಲ್ಡ್ ಹಾಲು)

  ಹಾಲು ಇಮ್ಯುನೊಗ್ಲಾಬ್ಯುಲಿನ್ ಗಳನ್ನು ಹೊಂದಿರುತ್ತದೆ, ಅದು ಶೀತಲ ಗುಳ್ಳೆಗಳನ್ನು ಉಂಟುಮಾಡುವ ವೈರಸ್ ಅನ್ನು ತಡೆಯುತ್ತದೆ. ಜೊತೆಗೆ, ಇದು ಆಂಟಿವೈರಲ್ ಪರಿಣಾಮಗಳನ್ನು ಹೊಂದಿದೆ. ಪೀಡಿತ ಪ್ರದೇಶದಲ್ಲಿನ ಜುಮ್ಮೆನಿಸುವ ಸಂವೇದನೆ ಮತ್ತು ಅಸ್ವಸ್ಥತೆಯನ್ನು ಶಮನಗೊಳಿಸಲು ತಂಪಾದ ಹಾಲು ಸಹಾಯ ಮಾಡುತ್ತದೆ.

  ತಂಪಾದ ಹಾಲಿನಲ್ಲಿ ಹತ್ತಿಯನ್ನು ಅದ್ದಿ,ಪೀಡಿತ ಪ್ರದೇಶದ ಮೇಲೆ ಇದನ್ನು ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ.ದಿನದಲ್ಲಿ ಎರಡು ಬಾರಿ ಇದನ್ನು ಪುನರಾವರ್ತಿಸಿ.

   ಚಹಾ ಮರದ ತೈಲ (ಟೀ ಟ್ರೀ ತೈಲ)

  ಚಹಾ ಮರದ ತೈಲ (ಟೀ ಟ್ರೀ ತೈಲ)

  ಚಹಾ ಮರದ ತೈಲ ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ, ಅದು ಶೀತಲ ಗುಳ್ಳೆಗಳ ಚಿಕಿತ್ಸೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.ಅರ್ಧ ಕಪ್ ನೀರಿನಲ್ಲಿ ಒಂದು ಪ್ರಮಾಣ ಚಹಾ ಮರದ ಎಣ್ಣೆಯನ್ನು ಡೈಲ್ಯೂಟ್ ಮಾಡಿ.ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಮತ್ತು ದಿನಕ್ಕೆ ಮೂರು ಬಾರಿ ಶೀತಲ ಗುಳ್ಳೆಗಳ ಮೇಲೆ ಇದನ್ನು ಹಚ್ಚಿ.ಅಥವಾ ಚಹಾ ಮರದ ಎಣ್ಣೆಯನ್ನು ಸಮ ಪ್ರಮಾಣದ ಆಲಿವ್ ತೈಲ ಮತ್ತು ನೀಲಗಿರಿ ತೈಲದೊಂದಿಗೆ ಮಿಶ್ರಗೊಳಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಈ ಮಿಶ್ರಣವನ್ನು ಹಚ್ಚಿ.

  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು

  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು

  ದುರ್ಬಲ ರೋಗನಿರೋಧಕ ಶಕ್ತಿಯಿರುವವರು ತೀವ್ರವಾದ ಶೀತಲ ಹುಣ್ಣುಗಳನ್ನು ಹೊಂದಬಹುದು, ಮತ್ತು ಅದು ತುಂಬಾ ಗಂಭೀರವೂ ಆಗಬಹುದು. ಆದ್ದರಿಂದ, ರೋಗ ನಿರೋಧಕ ಶಕ್ತಿಯನ್ನು‌ ಹೆಚ್ಚಿಸುವ ಆಹಾರವನ್ನು ತಿನ್ನುವುದು ಬಹಳ ಒಳ್ಳೆಯದು.ನೈಸರ್ಗಿಕವಾಗಿ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೊಸರು, ಹಾಲು, ಮತ್ತು ಸೇಬು ಸೈಡರ್ ವಿನೆಗರ್ ನಂತಹ ಪ್ರೋಬಯಾಟಿಕ್ ಆಹಾರಗಳನ್ನು ಸೇವಿಸಿ. ತರಕಾರಿಗಳು ಸಹ ಜೀವಸತ್ವಗಳ ಉತ್ತಮ ಮೂಲಗಳಾಗಿವೆ, ಮತ್ತು ಸೋಂಕಿನಿಂದ ಹೋರಾಡಲು ನಿಮಗೆ ಸಹಾಯ ಮಾಡುವ ಖನಿಜಗಳನ್ನು ಹೊಂದಿದೆ.

  ಜಿಂಕ್(zinc) ಅಥವಾ ಸತು ಸೇವನೆಯನ್ನು ಹೆಚ್ಚಿಸಿ

  ಜಿಂಕ್(zinc) ಅಥವಾ ಸತು ಸೇವನೆಯನ್ನು ಹೆಚ್ಚಿಸಿ

  ಸತುವಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಅವಶ್ಯಕವಾದ ಖನಿಜಾಂಶವಿದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸತುವು ಸಾಮಾನ್ಯವಾಗಿ ಸಿರಪ್ ಗಳು ಮತ್ತು ಕ್ಯಾಪ್ಸುಲ್ ಸೇರಿದಂತೆ ವಿವಿಧ ರೂಪಗಳಲ್ಲಿ ಲಭ್ಯವಿದೆ. ಈ ಪೂರಕಗಳು ಸತು ಗ್ಲುಕೋನೇಟ್, ಸತು ಸಲ್ಫೇಟ್ ಅಥವಾ ಸತು ಅಸಿಟೇಟ್ ರೂಪದಲ್ಲಿ ಸತುವನ್ನು ಒಳಗೊಂಡಿರುತ್ತವೆ.ಜೊತೆಗೆ, ಸತುವಿನಿಂದ ಸಮೃದ್ಧವಾದ ಆಹಾರವನ್ನು, ಅಂದರೆ ಮೊಟ್ಟೆಗಳನ್ನು, ವಾಲ್ ನಟ್ಸ್(ಆಕ್ರೋಟ್), ಬಾದಾಮಿ, ಗೋಡಂಬಿ ಮತ್ತು ಇತರ ಒಣ ಹಣ್ಣುಗಳನ್ನು ಸೇವಿಸಬಹುದು.ಸೊಪ್ಪು ತರಕಾರಿಗಳು, ಕಲ್ಲಂಗಡಿ ಬೀಜಗಳು, ಕುಂಬಳಕಾಯಿ ಬೀಜಗಳು, ಇತ್ಯಾದಿಗಳು ಕೂಡ ಸತುವಿನಿಂದ ಸಮೃದ್ಧವಾಗಿವೆ.

  ವಿಟಮಿನ್ ಇ

  ವಿಟಮಿನ್ ಇ

  ವಿಟಮಿನ್ ಇ ತೊಂದರೆಗೊಳಗಾದ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಶೀತಲ ಗುಳ್ಳೆಗಳಿಂದ ಉಂಟಾಗಿರುವ ನೋವು ಮತ್ತು ಅಸ್ವಸ್ಥತೆಗಳಿಗೆ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಮತ್ತು ಹಾನಿಯನ್ನು ಕಡಿಮೆ ಮಾಡುವ ಆಂಟಿ ಓಕ್ಸಿಡೆನ್ಟ್ ಗುಣವನ್ನು ಹೊಂದಿದೆ. ಕ್ಯಾಪ್ಸುಲ್ಗಳ ರೂಪದಲ್ಲಿ ಕೂಡ ವಿಟಮಿನ್ ಇ ಯನ್ನು ತೆಗೆದುಕೊಳ್ಳಬಹುದು.ಅಥವಾ ಬಾದಾಮಿ, ಪಾಲಕ್, ಗೆಣಸು, ಬೆಣ್ಣೆ ಹಣ್ಣು (ಅವಕಾಡೊ), ಸೂರ್ಯಕಾಂತಿ ಬೀಜಗಳು ಮತ್ತು ಆಲಿವ್ ಎಣ್ಣೆ ಮುಂತಾದ ವಿಟಮಿನ್ ಇ-ಭರಿತ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ವಿಟಮಿನ್ ಇ ಮಟ್ಟವನ್ನು ಹೆಚ್ಚಿಸಬಹುದು.

  ವಿಟಮಿನ್ ಸಿ

  ವಿಟಮಿನ್ ಸಿ

  ವಿಟಮಿನ್ ಸಿ ಬಿಳಿ ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ, ಇದು ವೈರಸ್ ಅಥವಾ ಸೋಂಕುಗಳಿಂದ ನಿಮ್ಮ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಕ್ಯಾಪ್ಸೂಲ್ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ .ಇದು ಶೀತಲ ಗುಳ್ಳೆಗಳನ್ನು ಗುಣಪಡಿಸಲು ಕೂಡಾ ಸಹಾಯ ಮಾಡುತ್ತದೆ. ಆದ್ದರಿಂದ ಕಿತ್ತಳೆ, ಕೆಂಪು ಮೆಣಸಿನಕಾಯಿ, ಹಸಿರು ಮೆಣಸು, ಕೋಸುಗಡ್ಡೆ, ಸ್ಟ್ರಾಬೆರಿ, ದ್ರಾಕ್ಷಿಹಣ್ಣು ಮತ್ತು ಕೀವೀ ಹಣ್ಣು ಮುಂತಾದ ವಿಟಮಿನ್ ಸಿ ಇಂದ ಕೂಡಿದ ಆಹಾರಗಳನ್ನು ತಿನ್ನಬಹುದು.ಈ ಲೇಖನವನ್ನು ನೀವು ಇಷ್ಟಪಟ್ಟರೆ, ನಿಮ್ಮ ಪ್ರೀತಿಪಾತ್ರರ ಜೊತೆ ಹಂಚಿಕೊಳ್ಳಿ.

  English summary

  Home Remedies For Cold Sores Around Lips

  A cold sore appears like a blister around the lips, and it usually lasts for 7 to 10 days, during which it becomes contagious. Although a cold sore infection is generally not serious, it can be a major problem for people with a weak immune system due to disorders. Even after a cold sore heals, the herpes virus remains, and it can cause future outbreaks in the same area of the mouth or face.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more