For Quick Alerts
ALLOW NOTIFICATIONS  
For Daily Alerts

ಎಚ್ಚರ! ಟೈಟಾದ ಒಳ ಚಡ್ಡಿ ಹಾಕಿದರೆ, ಇಂತಹ ಸಮಸ್ಯೆ ಕಾಡಬಹುದು!

|

ನಮ್ಮ ಆರೋಗ್ಯದ ರಕ್ಷಣೆಯ ವಿಚಾರದಲ್ಲಿ ನಾವು ಧರಿಸುವ ಒಳ ಉಡುಪು ಸಹ ವಿಶೇಷ ಸಂಗತಿಯಾಗಿರುತ್ತದೆ. ದೇಹದ ಸೂಕ್ಷ್ಮ ಭಾಗಗಳಲ್ಲಿ ಶುಚಿಯಾದ ಹಾಗೂ ಸಡಿಲವಾಗಿರುವಂತಹ ಬಟ್ಟೆಯನ್ನು ಧರಿಸಬೇಕು. ಇಲ್ಲವಾದರೆ ಅನೇಕ ಬಗೆಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುವುದು. ಕೆಲವರಿಗೆ ಬಿಗಿಯಾದ ಒಳ ಉಡುಪನ್ನು ಧರಿಸುವ ಹವ್ಯಾಸಗಳಿರುತ್ತವೆ. ಇದರಿಂದ ಸೂಕ್ತ ರೀತಿಯಲ್ಲಿ ರಕ್ತ ಸಂಚಾರ ಉಂಟಾಗದೆ ಇರಬಹುದು.

ಶುಚಿಯಾಗಿರದೆ ಇರುವುದು ಅಥವಾ ಬಿಗಿದಂತಿರುವ ಒಳ ಉಡುಪಿನಿಂದ ಸೋಂಕುಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ ಅಲ್ಲದೆ ಕ್ಯಾನ್ಸರ್ ನಂತಹ ಸಮಸ್ಯೆ ತಲೆದೂರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಕೆಲವು ಅಧ್ಯಯನಗಳು ದೃಢಪಡಿಸಿವೆ. ವೈದ್ಯಕೀಯ ಹೇಳಿಕೆಯ ಪ್ರಕಾರ ಬಿದಂತಿರುವ ಒಳ ಉಡುಪು ಧರಿಸುವುದರಿಂದ ಪುರುಷರಲ್ಲಿ ಸಂತಾನೋತ್ಪತ್ತಿಯ ಸಮಸ್ಯೆ ಉಂಟಾಗಬಹುದು.

ಬೇಸಿಗೆಯಲ್ಲಿ ಒಳ ಉಡುಪು ಧರಿಸದಿರುವುದೇ ಒಳ್ಳೆಯದಂತೆ!

ನರಗಳು ನಿಶ್ಚೇತನಗೊಳ್ಳಬಹುದು. ಸೂಕ್ತ ರೀತಿಯ ಒಳ ಉಡುಪನ್ನು ಧರಿಸದೆ ಇದ್ದರೆ ಯಾವೆಲ್ಲಾ ಅನಾರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ...

ವೀರ್ಯಾಣುಗಳ ಸಮಸ್ಯೆ

ವೀರ್ಯಾಣುಗಳ ಸಮಸ್ಯೆ

ಬಿಗಿಯಾದ ಒಳ ಉಡುಪು ಧರಿಸುವುದರಿಂದ ಅತ್ಯಂತ ಅಪಾಯಕಾರಿ ಆರೋಗ್ಯ ಸಮಸ್ಯೆಗಳಲ್ಲಿ ವೀರ್ಯಾಣುಗಳ ಸಮಸ್ಯೆಯು ಒಂದು. ಬಿಗಿಯಾದ ಒಳ ಉಡುಪುಗಳು ತೊಡೆ ಸಂಧಿಯಲ್ಲಿ ಸಂಕೋಚನವನ್ನು ಕಡಿಮೆ ಮಾಡುತ್ತದೆ. ವೀರ್ಯಾಣು ಉತ್ಪಾದನೆ ಮಾಡುವ ಸ್ಕ್ರೋಟಮ್ ಸುತ್ತಲೂ ತಾಪಮಾನ ಹೆಚ್ಚಾಗುತ್ತದೆ.

ರಕ್ತ ಪರಿಚಲನೆಯ ತೊಂದರೆ

ರಕ್ತ ಪರಿಚಲನೆಯ ತೊಂದರೆ

ದೀರ್ಘಕಾಲದ ವರೆಗೆ ಬಿಗಿಯಾದ ಒಳ ಉಡುಪು ಧರಿಸುವುದರಿಂದ ಸೂಕ್ತ ರೀತಿಯಲ್ಲಿ ರಕ್ತ ಪರಿಚಲನೆ ಉಂಟಾಗದು. ಬಿಗಿದಂತಾದ ಪ್ರದೇಶದಲ್ಲಿ ನರಗಳು ನಿಶ್ಚೇತನಗೊಳ್ಳುವುದು. ಸಾಕಷ್ಟು ಪ್ರಮಾಣದಲ್ಲಿ ರಕ್ತ ಪರಿಚಲನೆ ಉಂಟಾಗದಿದ್ದಾಗ ಅಂಗಾಂಶಗಳ ಕಾರ್ಯ ಸ್ಥಗಿತಗೊಳ್ಳಬಹುದು.

ಯೋನಿ ಸೋಂಕು

ಯೋನಿ ಸೋಂಕು

ತುಂಬಾ ಬಿಗಿದ ಒಳ ಉಡುಪು ಧರಿಸುವುದರಿಂದ ರಕ್ತ ಪರಿಚಲನೆ ಉಂಟಾಗದೆ ನಿಕಟ ಪ್ರದೇಶಕ್ಕೆ ಕಿರಿಕಿರಿ ಉಂಟಾಗುವುದು ಜೊತೆಗೆ ಉರಿಯೂತವು ಉಂಟಾಗುವುದು. ಕೆಲವೊಮ್ಮೆ ಮರಗಟ್ಟಿರುವಂತಹ ಸಂವೇದನೆ ಅಥವಾ ಜುಮ್ಮೆನುವ ಸಂವೇದನೆಯನ್ನು ಅನುಭವಿಸಬಹುದು. ಬಿಗಿದ ಒಳ ಉಡುಪನ್ನು ಧರಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು.

ಎದೆಯುರಿ

ಎದೆಯುರಿ

ಬಿಗಿದ ಒಳ ಉಡುಪು ಧರಿಸುವುದರಿಂದ ಎದೆ ಉರಿಯೂ ಉಂಟಾಗುವುದು. ಒಟ್ಟೆ ಭಾಗ ಹಾಗೂ ಸೊಂಟದ ಭಾಗದಲ್ಲಿ ಬಿಗಿದ ಒಳ ಉಡುಪು ಧರಿಸುವುದರಿಂದ ಹೊಟ್ಟೆಯನ್ನು ಕಠಿಣ ಸ್ಥಿತಿಗೆ ತಳ್ಳಿದಂತಾಗುವುದು. ಅನ್ನನಾಳದಲ್ಲಿ ಆಮ್ಲದ ಗುಣವು ಹೆಚ್ಚಾಗುವುದು. ಇದರಿಂದ ಎದೆ ಉರಿಯು ಸಂಭವಿಸುವುದು.

ಗಾಳಿಯ ಸಂಚಾರ

ಗಾಳಿಯ ಸಂಚಾರ

ಬಿಗಿದ ಒಳ ಉಡುಪು ದೇಹದೊಳಗೆ ಗಾಳಿಯ ಸಂಚಾರವನ್ನು ತಡೆಗಟ್ಟುತ್ತವೆ. ಇದರಿಂದ ಅತಿಯಾದ ಬೆವರು ಉಂಟಾಗುವುದು. ಅನಗತ್ಯ ತೇವಾಂಶ ಉಂಟಾಗುವುದರಿಂದ ಕೆಲವು ಸೋಂಕು ಹರಡುವುದು. ಜೊತೆಗೆ ಬ್ಯಾಕ್ಟೀರಿಯಗಳ ದಾಳಿ ಹೆಚ್ಚಾಗಬಹುದು.

ಮೂತ್ರದಲ್ಲಿ ಸೊಂಕು

ಮೂತ್ರದಲ್ಲಿ ಸೊಂಕು

ಬಿಗಿದ ಒಳ ಉಡುಪು ಧರಿಸುವುದರಿಂದ ಯೋನಿಗೆ ಉಸಿರಾಟ ಸೂಕ್ತ ರೀತಿಯಲ್ಲಿ ಉಂಟಾಗದು. ಹಾಗಾಗಿ ಬಹುಬೇಗ ಯೀಸ್ಟ್ ಸೋಂಕು ಆವರಿಸುವುದು. ಮೂತ್ರದಲ್ಲಿ ಸೋಂಕು ಉಂಟಾಗುವುದರಿಂದ ವಿಪರೀತ ನೋವನ್ನು ಅನುಭವಿಸಬೇಕಾಗುವುದು.

ಚರ್ಮದ ಸೋಂಕು

ಚರ್ಮದ ಸೋಂಕು

ಬಿಗಿದ ಒಳ ಉಡುಪು ಧರಿಸುವುದರಿಂದ ತೊಡೆ ಸಂಧು ಹಾಗೂ ಸೊಂಟದ ಸುತ್ತಲು ಕೆಂಪು ಕಲೆಗಳು ಉಂಟಾಗುತ್ತವೆ. ಇದು ಚರ್ಮದ ಮೇಲೆ ಗಂಭೀರ ಪರಿಣಾಮ ಉಂಟಾಗುವುದು. ಕಪ್ಪು ಕಲೆ ಹಾಗೂ ಇನ್ನಿತರ ಸಮಸ್ಯೆಗಳು ತಲೆದೂರುವುದು. ಹಾಗಾಗಿ ಯಾವಾಗಲೂ ಶುಚಿಯಾದ ಹಾಗೂ ಸಡಿಲವಿರುವ ಒಳ ಉಡುಪನ್ನು ಧರಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ಅನೇಕ ಸಮಸ್ಯೆಗಳಿಂದ ದೂರ ಉಳಿಯಬಹುದು.

English summary

Health Risks Of Wearing Tight Underwear

You are well aware about the benefit of wearing clean underwear. As these garments are worn on the intimate parts of your body, any infection to those areas can be more painful than other parts of body. Also any small infection can lead to disasters like vaginal cancer. So, always wear neat and clean underwear. But, did you know that there are several health effects of wearing tight underwear? Women often think that a size smaller undergarment can make them look sexier. But that is completely wrong idea.
X
Desktop Bottom Promotion