Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಹೆರ್ರಿಂಗ್ ಮೀನು, ಬಾದಾಮಿಯಂತಹ ರುಚಿ, ಹಾಗೂ ಆರೋಗ್ಯದ ಗಣಿ
Clupeidae ಎಂಬ ಜಾತಿಗೆ ಸೇರಿದ ಸರಿಸುಮಾರು ಬಂಗಡೆಯನ್ನೇ ಹೋಲುವ ಹುರುಪೆಯುಳ್ಳ ಮೀನು ಹೆರ್ರಿಂಗ್. ಕನ್ನಡದಲ್ಲಿ ಕೆಲವೆಡೆ ಇದಕ್ಕೆ ಸೋಡಿ ಮೀನು ಎಂದೂ ಕರೆಯುತ್ತಾರೆ. ತೀರಾ ಚಿಕ್ಕ ತಲೆ, ಅಪ್ಪಟ ಬೆಳ್ಳಿಯ ಹೊಳೆಹೊಳೆಯುವ ಹುರುಪೆಗಳ ಮತ್ತು ನಡುವಿನಲ್ಲಿ ಬಂಗಡೆಗಿಂತ ಕೊಂಚವೇ ಹೆಚ್ಚು ದಪ್ಪನಿರುವ ಈ ಮೀನು ಪೂರ್ಣವಾಗಿ ಬೆಳೆದಾಗ ಸುಮಾರು ಎಂಟರಿಂದ ಹದಿನೈದು ಇಂಚಿನಷ್ಟು ಗಾತ್ರ ಪಡೆದಿರುತ್ತದೆ.
ಬನ್ನಿ, ಈ ಮೀನಿನ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ: ಇದು ತುಂಬಾ ಮೃದುವಾದ ಮೀನಾಗಿದ್ದು ನಸು ಬಾದಾಮಿಯಂತಹ ರುಚಿ ಮತ್ತು ಅತಿ ಕಡಿಮೆ ಸಮಯದಲ್ಲಿ ಬೇಯುತ್ತದೆ. ಅಲ್ಲದೇ ಇದರಲ್ಲಿ ಪಾದರಸದ ಅಂಶ ಅತ್ಯಂತ ಕಡಿಮೆ ಇದ್ದು ಸೇವಿಸಲು ಸುರಕ್ಷಿತವಾಗಿದೆ.
ಹೆರ್ರಿಂಗ್ ಮೀನಿನಲ್ಲಿರುವ ಪೌಷ್ಟಿಕಾಂಶಗಳ ವಿವರ:
ಮೂರು ಔನ್ಸ್ ಅಥವಾ ಸುಮಾರು ಎಂಭತ್ತೈದು ಗ್ರಾಂ ಭಾರದ ಮೀನಿನಲ್ಲಿ 173 ಕ್ಯಾಲೋರಿಗಳು, 19.6 ಗ್ರಾಂ ಪ್ರೋಟೀನ್ ಹಾಗೂ 9.9 ಗ್ರಾಂ ಕೊಬ್ಬು ಇರುತ್ತದೆ. ಅಲ್ಲದೇ ಇದರಲ್ಲಿ ಹಲವಾರು ವಿಟಮಿನ್ನುಗಳು ಮತ್ತು ಖನಿಜಗಳಿವೆ. ವಿಟಮಿನ್ ಡಿ, ವಿಟಮಿನ್ ಬಿ12, ಸೆಲೆನಿಯಂ, ಒಮೆಗಾ 3 ಕೊಬ್ಬಿನ ಆಮ್ಲಗಳು, ರೈಬೋಫ್ಲೇವಿನ್, ಪೊಟ್ಯಾಶಿಯಂ, ವಿಟಮಿನ್ ಬಿ6 ಇದರಲ್ಲಿ ಪ್ರಮುಖವಾಗಿವೆ. ಇವೆಲ್ಲವೂ ಒಂದುಗೂಡಿ ನಮ್ಮ ಅಂಗಾಂಶಗಳ ಸೂಕ್ತ ಕಾರ್ಯನಿರ್ವಹಣೆ ಉತ್ತಮಗೊಳ್ಳಲು ಹಾಗೂ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತವೆ. ಬನ್ನಿ, ಈ ಮೀನಿನ ಸೇವನೆಯಿಂದ ಲಭಿಸುವ ಪ್ರಯೋಜನಗಳನ್ನು ನೋಡೋಣ:
*ಕೆಂಪುರಕ್ತಕಣಗಳ ಉತ್ಪತ್ತಿಗೆ ನೆರವಾಗುತ್ತದೆ.
*ಒಮೆಗಾ 3 ಕೊಬ್ಬಿನ ಆಮ್ಲದಿಂದ ಸಮೃದ್ಧವಾಗಿದೆ.
* ಮೆಟಬಾಲಿಕ್ ಸಿಂಡ್ರೋಮ್ ನ ಸಾಧ್ಯತೆ ತಗ್ಗಿಸುತ್ತದೆ.
*ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ.
* ನರಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ
ಕೆಂಪುರಕ್ತಕಣಗಳ ಉತ್ಪತ್ತಿಗೆ ನೆರವಾಗುತ್ತದೆ
ನಿಮ್ಮ ಆಹಾರದಲ್ಲಿ ಆಗಾಗ ಹೆರ್ರಿಂಗ್ ಮೀನನ್ನು ಅಳವಡಿಸಿಕೊಳ್ಳುವ ಮೂಲಕ ದೇಹದಲ್ಲಿ ಕೆಂಪುರಕ್ತಕಣಗಳು ಆರೋಗ್ಯಕರವಾಗಿರುತ್ತವೆ. ರಕ್ತದ ಕಾರ್ಯನಿರ್ವಹಣೆ ಸಮರ್ಪಕವಾಗಿರಲು ಹೀಮೋಗ್ಲೋಬಿನ್ ಅಗತ್ಯವಾಗಿದೆ. ಹೆರ್ರಿಂಗ್ ಮೀನಿನಲ್ಲಿರುವ ವಿಟಮಿನ್ ಬಿ12 ಮತ್ತು ಕಬ್ಬಿಣ ಹೀಮೋಗ್ಲೋಬಿನ್ ಉತ್ಪಾದನೆಗೆ ನೆರವಾಗುತ್ತವೆ. ಅಲ್ಲದೇ ಈ ಮೀನಿನಲ್ಲಿರುವ ಒಂದು ಪ್ರೋಟೀನ್ ಹೀಮೋಗ್ಲೋಬಿನ್ ಉತ್ಪಾದನೆಗೆ ಅಗತ್ಯವಿರುವ ಅಮೈನೋ ಆಮ್ಲಗಳಿಗೆ ಪರ್ಯಾಯವಾಗಿ ಲಭ್ಯವಾಗುತ್ತದೆ. ಆರು ಔನ್ಸ್ ಅಥವಾ ನೂರೆಪ್ಪತ್ತು ಗ್ರಾಂ ನಷ್ಟು ಮೀನಿನಲ್ಲಿ 28 ಗ್ರಾಂ ಪ್ರೋಟೀನ್ 1.9 ಮಿಲಿಗ್ರಾಂ ಕಬ್ಬಿಣ ಹಾಗೂ 17ಮೈಕ್ರೋಗ್ರಾಂ ನಷ್ಟು ವಿಟಮಿನ್ ಬಿ 12 ಇದೆ.
ಒಮೆಗಾ 3ಕೊಬ್ಬಿನ ಆಮ್ಲದಿಂದ ಸಮೃದ್ಧವಾಗಿದೆ
ದೇಹಕ್ಕೆ ಎದುರಾಗುವ ಉರಿಯೂತ ಮತ್ತು ಸ್ವಯಂನಿರೋಧಕ ಪ್ರತಿಕ್ರಿಯೆಗಳನ್ನು ಕಡಿಮೆಗೊಳಿಸಲು ಒಮೆಗಾ ೩ ಕೊಬ್ಬಿನ ಆಮ್ಲಗಳು ನೆರವಾಗುತ್ತದೆ. ಈ ಮೀನಿನಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ಹೃದಯದ ಕಾಯಿಲೆ, ಕ್ರೋನ್ಸ್ ಕಾಯಿಲೆಯ ಸಾಧ್ಯತೆಯನ್ನು ತಗ್ಗಿಸುತ್ತದೆ, ವೃದ್ಧಾಪ್ಯವನ್ನು ತಡವಾಗಿಸುತ್ತದೆ, ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಮೆದುಳಿನ ಕ್ಷಮತೆಯನ್ನು ಉತ್ತಮಗೊಳಿಸಿ ಖಿನ್ನತೆ ಮತ್ತು ಉದ್ವೇಗಕ್ಕೊಳಗಾಗದಂತೆ ತಡೆಯುತ್ತದೆ. ಹಾಗಾಗಿ ಇಂದಿನಿಂದಲೇ ಈ ಮೀನನ್ನು ಆಹಾರದಲ್ಲಿ ಸೇರಿಸಿಕೊಳ್ಳಲು ಮರೆಯದಿರಿ.
ಮೆಟಬಾಲಿಕ್ ಸಿಂಡ್ರೋಮ್ ನ ಸಾಧ್ಯತೆ ತಗ್ಗಿಸುತ್ತದೆ
ಮೆಟಬಾಲಿಕ್ ಸಿಂಡ್ರೋಮ್ ಎಂದರೆ ಹಲವು ತೊಂದರೆಗಳ ಸಾಧ್ಯತೆಗಳು ಒಟ್ಟಾಗಿ ಆವರಿಸಿರುವುದಾಗಿದೆ. ಹೃದಯದ ಕಾಯಿಲೆ, ಮಧುಮೇಹ ಮತ್ತು ಹೃದಯಸ್ತಂಭನದ ಸಾಧ್ಯತೆ ಒಟ್ಟಾಗಿ ಎದುರಾಗುವುದಕ್ಕೆ ಈ ಹೆಸರನ್ನಿಡಲಾಗಿದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಒಮೆಗಾ 3 ಕೊಬ್ಬಿನ ಆಮ್ಲದ ಪ್ರಮಾಣ ಹೆಚ್ಚಾಗಿರುವ ಆಹಾರಗಳ ಸೇವನೆಯಿಂದ ಮಧುಮೇಹ, ಹೃದಯದ ಕಾಯಿಲೆ ಆವರಿಸುವ ಸಾಧ್ಯತೆ ತಗ್ಗುತ್ತದೆ. ತನ್ಮೂಲಕ ಮೆಟಬಾಲಿಕ್ ಸಿಂಡ್ರೋಂ ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ.
ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ
ಹೆರ್ರಿಂಗ್ ಮೀನಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಗಂಧಕ ಹಾಗೂ ವಿಟಮಿನ್ ಡಿ ಹೇರಳವಾಗಿದ್ದು ಮೂಳೆಗಳ ದೃಢತೆ ಹೆಚ್ಚಿಸಲು ನೆರವಾಗುತ್ತವೆ. ವಿಶೇಷವಾಗಿ ಕ್ಯಾಲ್ಸಿಯಂ, ಮೆಗ್ನೇಶಿಯಂ ಹಾಗೂ ಗಂಧಕಗಳು ದೇಹದಲ್ಲಿ ಹೈಡ್ರಾಕ್ಸಿ ಅಪಟೈಟ್ (ನಿಸರ್ಗರೂಪದಲ್ಲಿ ದೊರಕುವ ಕ್ಯಾಲ್ಸಿಯಂ) ಉತ್ಪಾದಿಸಿಕೊಳ್ಳಲು ನೆರವಾಗುತ್ತವೆ. ನಮ್ಮ ಮೂಳೆ ಮತ್ತು ಹಲ್ಲುಗಳು ಇದೇ ಕಣಗಳಿಂದ ನಿರ್ಮಿಸಲ್ಪಟ್ಟಿವೆ. ಅಲ್ಲದೇ ಆಹಾರದ ಮೂಲಕ ಲಭಿಸುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಮಿನ್ ಡಿ ನೆರವಾಗುತ್ತದೆ. ಸುಮಾರು ನೂರಾಎಪ್ಪತ್ತು ಗ್ರಾಂ ಅಥವಾ ಆರು ಔನ್ಸ್ ಮೀನಿನಲ್ಲಿ 141ಮಿಲಿಗ್ರಾಂ ಕ್ಯಾಲ್ಸಿಯಂ ಮತ್ತು 388ಮಿಲಿಗ್ರಾಂ ಗಂಧಕವಿದೆ.
ನರಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ
ನರವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ಹೆರ್ರಿಂಗ್ ಮೀನು ನೆರವಾಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ನರಗಳ ಜೀವಕೋಶಗಳಿಗೆ ಹೆಚ್ಚಿನ ಚೈತನ್ಯ ನೀಡುವ ಮೂಲಕ ವಿದ್ಯುತ್ ಅಲೆಗಳು ಮೆದುಳಿಗೆ ಹೆಚ್ಚಿನ ಕ್ಷಮತೆಯಿಂದ ಕಳುಹಿಸಲು ನೆರವಾಗುತ್ತದೆ. ಅಲ್ಲದೇ ವಿಟಮಿನ್ ಬಿ6 ನರಗಳ ಮೂಲಕ ಸಂವಹನ ಕ್ರಿಯೆ ಚುರುಕುಗೊಳ್ಳಲು ಅಗತ್ಯವಿರುವ ರಾಸಾಯನಿಕಗಳನ್ನು ಉತ್ಪಾದಿಸಲು ನೆರವಾಗುತ್ತದೆ.
ಈ ಮೀನಿನ ಸೇವನೆ ಹೇಗೆ?
ತಾಜಾ ಮೀನಿಗಿಂತಲೂ ಉಪ್ಪಿನಕಾಯಿ ಹಾಕಿದ ಅಥವಾ ಉಪ್ಪಿನಲ್ಲಿ ಒಣಗಿಸಿದ ಮೀನು ಹೆಚ್ಚು ರುಚಿಕರ. ಆದರೆ ಒಂದು ಪ್ರಮಾಣದಲ್ಲಿ 740 ಮಿಲಿಗ್ರಾಂ ನಿಂದ 781 ಮಿಲಿಗ್ರಾಂ ವರೆಗೆ ಸೋಡಿಯಂ ಇರುತ್ತದೆ. ತಾಜಾ ಮೀನಿನಲ್ಲಿ ಈ ಪ್ರಮಾಣ 98 ಮಿಲಿಗ್ರಾಂ ಮಾತ್ರವೇ ಇರುತ್ತದೆ. ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದಷ್ಟೂ ಹೃದಯದ ಒತ್ತಡ ಹೆಚ್ಚುತ್ತದೆ ಹಾಗೂ ಹೃದಯದ ಕಾಯಿಲೆಗಳು ಆವರಿಸುವ ಸಾಧ್ಯತೆ ಸಹಾ ಹೆಚ್ಚುತ್ತದೆ. ಆದ್ದರಿಂದ ಆದಷ್ಟೂ ತಾಜಾ ಮೀನನ್ನೇ ಸೇವಿಸುವುದು ಉತ್ತಮ.