ಹೈ ಬಿಪಿ ಇರುವವರು ಇಂತಹ ಆಹಾರಗಳಿಂದ ದೂರವಿರಿ

Posted By: Arshad
Subscribe to Boldsky

ಅಧಿಕ ರಕ್ತದೊತ್ತಡ ಅಥವಾ ಸುಲಭಪದಗಳಲ್ಲಿ ಬಿಪಿ ಎಂದು ಕರೆಯಲ್ಪಡುವ ಈ ತೊಂದರೆ ಅಪಾಯಕಾರಿ ಎನ್ನಲು ಇನ್ನಷ್ಟು ಕಾರಣಗಳು ಇಲ್ಲಿವೆ. ಅಧಿಕ ರಕ್ತದೊತ್ತಡದ ಪರಿಣಾಮವಾಗಿ ರಕ್ತನಾಳಗಳು ಶಿಥಿಲಗೊಳ್ಳುತ್ತವೆ, ವಿಶೇಷವಾಗಿ ಕವಲಿನ ತುದಿಯಲ್ಲಿರುವ ಅತಿ ಕಿರಿಯ ಮತ್ತು ಸೂಕ್ಷ್ಮ ನರಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಪ್ರಮುಖ ಅಂಗಗಳೇ ವಿಫಲಗೊಳ್ಳಲು ಅಥವಾ ಹೃದಯದ ಕಾರ್ಯನಿರ್ವಹಣೆಯಲ್ಲಿ ಏರುಪೇರಿಗೆ ಕಾರಣವಾಗುತ್ತದೆ.

ಒಂದು ವೇಳೆ ನೀವು ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಅಥವಾ ಈಗಿರುವ ಒತ್ತಡ ಅಧಿಕ ರಕ್ತದೊತ್ತಡದ ಕನಿಷ್ಟ ಮಿತಿಯನ್ನು ಇನ್ನೇನು ತಲುಪಲಿದೆ ಎಂದಾಗಿದ್ದರೆ ಕೆಳಗೆ ವಿವರಿಸಿರುವ ಒಂಬತ್ತು ಆಹಾರಗಳನ್ನು ನಿಮ್ಮ ಮನಸ್ಸಿನಿಂದ ಮರೆತು ಬಿಡುವುದೇ ನಿಮ್ಮ ಆರೋಗ್ಯಕ್ಕೆ ಉತ್ತಮ....

ಕ್ಯಾನ್‌ಗಳಲ್ಲಿ ಲಭಿಸುವ ಸಿದ್ಧ ಆಹಾರಗಳು

ಕ್ಯಾನ್‌ಗಳಲ್ಲಿ ಲಭಿಸುವ ಸಿದ್ಧ ಆಹಾರಗಳು

ಸಾಮಾನ್ಯವಾಗಿ ಟ್ಯೂನಾ ಮೀನು, ಅಣಬೆ, ಧಿಡೀರನೇ ತಯಾರಿಸಬಹುದಾದ ಮಸಾಲೆಯುಕ್ತ ಆಹಾರಗಳು ಮೊದಲಾದವನ್ನು ಗಾಳಿಯಾಡದಂತೆ ಲೋಹದ ಡಬ್ಬಿಯಲ್ಲಿ ಬಂಧಿಸಿಡಲಾಗಿರುತ್ತದೆ. ಇವುಗಳಲ್ಲಿರುವ ಆಹಾರ ಹೆಚ್ಚು ಕಾಲ ಕೆಡದಂತಿರಿಸಲು ಇದಕ್ಕೆ ಅತಿ ಹೆಚ್ಚು ಉಪ್ಪನ್ನು ಸೇರಿಸಿರಲಾಗಿರುತ್ತದೆ. ಹೆಚ್ಚಿನ ಉಪ್ಪು ಅಂದರೆ ಹೆಚ್ಚಿನ ಸೋಡಿಯಂ! ಈ ಹೆಚ್ಚಿನ ಸೋಡಿಯಂಯುಕ್ತ ಆಹಾರ ರುಚಿಕರವಾಗಿದ್ದರೂ, ರಕ್ತದಲ್ಲಿ ಬೆರೆತ ಬಳಿಕ ರಕ್ತವನ್ನು ಹೆಚ್ಚು ಮಂದವಾಗಿಸುತ್ತದೆ ಹಾಗೂ ಈ ಮಂದ ರಕ್ತವನ್ನು ಮುಂದೂಡಲು ಹೃದಯ ಅನಿವಾರ್ಯವಾಗಿ ಹೆಚ್ಚಿನ

ಒತ್ತಡವನ್ನು ಹೇರಬೇಕಾಗುತ್ತದೆ. ಒಂದು ವೇಳೆ ನೀವು ಅಧಿಕ ರಕ್ತದೊತ್ತಡದಿಂದ ಈಗಾಗಲೇ ಬಳಲುತ್ತಿರುವಿರಾದರೆ ಕ್ಯಾನ್ ಆಹಾರಗಳು ನಿಮಗಲ್ಲ!

 ಹೆಚ್ಚಿನ ಕೊಬ್ಬು ಇರುವ ಆಹಾರಗಳು

ಹೆಚ್ಚಿನ ಕೊಬ್ಬು ಇರುವ ಆಹಾರಗಳು

ಈ ಆಹಾರಗಳ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ ಹಾಗೂ ತನ್ಮೂಲಕ ನರಗಳ ಗೋಡೆಗಳು ಗಟ್ಟಿ ಪ್ಲಾಸ್ಟಿಕ್ ನಂತಾಗುತ್ತವೆ. ಈ ಗಟ್ಟಿಯಾಗಿರುವ ನರಗಳ ಮೂಲಕ ರಕ್ತವನ್ನು ಮುಂದೂಡಲು ಹೃದಯಕ್ಕೆ ಹೆಚ್ಚಿನ ಒತ್ತಡದಿಂದ ನೂಕಬೇಕಾಗಿ ಬರುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡದ ರೋಗಿಗಳು ಕೊಬ್ಬು ಹೆಚ್ಚಿರುವ ಆಹಾರಗಳನ್ನು ಸೇವಿಸಕೂಡದು. ಇದರ ಬದಲಿಗೆ ತಾಜಾ ಹಣ್ಣು ಮತ್ತು ಹಸಿ ತರಕಾರಿಗಳನ್ನು ಸೇವಿಸುವ ಮೂಲಕ ಇದರಲ್ಲಿರುವ ಹೆಚ್ಚಿನ ಕರಗದ ನಾರು ಮತ್ತು ಬಹುಅಪರ್ಯಾಪ್ತ (polyunsaturated fat) ಕೊಬ್ಬಿನ ಪ್ರಮಾಣ ಹೆಚ್ಚುವ ಮೂಲಕ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಮದ್ಯ

ಮದ್ಯ

ಒಂದು ವೇಳೆ ನೀವು ಮದ್ಯವ್ಯಸನಿಯಾಗಿದ್ದರೆ ದಿನದಲ್ಲಿ ಗರಿಷ್ಠ ಒಂದು ಚಿಕ್ಕ ಲೋಟ ವೈನ್ ಅಥವಾ ಒಂದು ಲೋಟ ಬಿಯರ್ ಸೇವಿಸಿದರೆ ಇದು ನಿಮ್ಮ ಆರೋಗ್ಯಕ್ಕೆ ಬೇಕಾದಷ್ಟಾಯಿತು. ಇದಕ್ಕೂ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ನಿಮ್ಮ ರಕ್ತವನ್ನು ಸೇರಿದರೆ ನಿಮಗೆ ಅಧಿಕ ರಕ್ತದೊತ್ತಡದ ವಿಭಾಗದಿಂದ ತೊಂದರೆಯ ಆಹ್ವಾನ ಬರುವುದು ಖಚಿತ!

ಕಾಫಿ

ಕಾಫಿ

ನೀರು ಬರುತ್ತಿರುವ ನೀರಿನ ಪೈಪಿನ ತುದಿಯನ್ನು ಕೊಂಚ ಅಮುಕಿ ಕಿರಿದಾಗಿಸಿದರೆ ಏನಾಗುತ್ತದೆ? ನೀರು ಹೆಚ್ಚಿನ ಒತ್ತಡದಲ್ಲಿ ಮುಂದೆ ಹಾರುತ್ತದೆ ಅಲ್ಲವೇ? ಕಾಫಿ ಕುಡಿದ ಬಳಿಕ ನಮ್ಮ ನರಗಳಲ್ಲಿಯೂ ಹೆಚ್ಚೂ ಕಡಿಮೆ ಇದೇ ರೀತಿಯ ಪರಿಣಾಮವುಂಟಾಗುತ್ತದೆ. ಕಾಫಿಯಲ್ಲಿರುವ ಕೆಫೀನ್ ನರಗಳನ್ನು ಸಂಕುಸುವ ಗುಣ ಹೊಂದಿದೆ. ಪರಿಣಾಮವಾಗಿ ರಕ್ತದೊತ್ತಡವೂ ಹೆಚ್ಚುತ್ತದೆ ಹಾಗೂ ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ಇಡಿಯ ಹಾಲು (Whole Milk)

ಇಡಿಯ ಹಾಲು (Whole Milk)

ಹಾಲನ್ನು ಹೆಚ್ಚು ಕಾಲ ಕೆಡದಿರದಂತೆ ಕ್ಷಣದಲ್ಲಿ ಕುದಿಸಿ ಮರುಕ್ಷಣದಲ್ಲಿಯೇ ತಣಿಸುವ ತಂತ್ರಜ್ಞಾನದಿಂದ ಲಭಿಸುವ ಈ ಹಾಲಿನಲ್ಲಿ ಹೆಚ್ಚಿನ ಕೊಬ್ಬು ಇರುತ್ತದೆ. ಸಾಮಾನ್ಯವಾಗಿ ಎಮ್ಮೆ ಮತ್ತು ಕುರಿಯ ಹಾಲನ್ನು ಈ ರೀತಿಯಾಗಿ ಸಂಸ್ಕರಿಸಲಾಗುತ್ತದೆ. ಈ ಹಾಲಿನ ಸೇನವೆಯಿಂದಲೂ ರಕ್ತದ ಒತ್ತಡ ಹೆಚ್ಚುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಈ ಹಾಲನ್ನು ಸೇವಿಸಬಾರದು.

ಚೀಸ್

ಚೀಸ್

ಸಂಸ್ಕರಿಸಿದ ಚೀಸ್‌ನಲ್ಲಿ ಹೆಚ್ಚಿನ ಉಪ್ಪನ್ನು ಸೇರಿಸಿ ಇದನ್ನು ಸೋಪಿನಂತೆ ಕತ್ತರಿಸಲು ಸುಲಭವಾಗುವಂತೆ ಹಾಗೂ ರುಚಿಕರವಾಗಿರುವಂತೆ ಮಾಡಲಾಗುತ್ತದೆ. ವಿಶೇಷವಾಗಿ ಮೊಜ್ರೆಲ್ಲಾ ಚೀಸ್, ಹಾಗೂ ಎಮ್ಮೆಂಟಲ್ ಚೀಸ್ ವಿಧಗಳಲ್ಲಿ ಮಾತ್ರ ಉಪ್ಪು ಹೆಚ್ಚಿರುವುದಿಲ್ಲ. ಉಳಿದಂತೆ ಚೆಡ್ಡಾರ್ ಚೀಸ್, ಫೆಟಾ ಚೀಸ್, ಎಡಂ ಚೀಸ್ ನಲ್ಲಿ ಹೆಚ್ಚಿನ ಉಪ್ಪಿರುತ್ತದೆ. ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಈ ಚೀಸ್ ಗಳನ್ನು ಆಯ್ಕೆಯಿಂದ ದೂರವಿಡಬೇಕು.

ಸಕ್ಕರೆ ಹೆಚ್ಚಿರುವ ಆಹಾರಗಳು

ಸಕ್ಕರೆ ಹೆಚ್ಚಿರುವ ಆಹಾರಗಳು

ಸಕ್ಕರೆ ಹೆಚ್ಚು ತಿನ್ನುವುದರಿಂದ ಮಧುಮೇಹ ಬರುವುದಿಲ್ಲವಾದರೂ ಮಧುಮೇಹ ಮತ್ತು ಸ್ಥೂಲಕಾಯ ಆವರಿಸುವ ಸಾಧ್ಯತೆ ಮಾತ್ರ ಖಚಿತವಾಗಿ ಹೆಚ್ಚುತ್ತದೆ. ಸಕ್ಕರೆ ಹೆಚ್ಚಿರುವ ಆಹಾರಗಳ ಸೇವನೆಯಿಂದ ಕಾಲಕ್ರಮೇಣ ರಕ್ತದೊತ್ತಡವನ್ನು ನಿಧಾನವಾಗಿ ಏರಿಸುತ್ತಾ ಹೋಗುತ್ತದೆ. ಏಕೆಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ ರಕ್ತನಾಳಗಳು ಹೆಚ್ಚು ಪೆಡಸಾಗುತ್ತಾ ಹೋಗುತ್ತವೆ ಹಾಗೂ ತಮ್ಮ ಹಿಗ್ಗುವ ಗುಣವನ್ನು ಕಳೆದುಕೊಂಡು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.

ಸಂಸ್ಕರಿಸಿದ ಮಾಂಸದ ಉತ್ಪನ್ನಗಳು

ಸಂಸ್ಕರಿಸಿದ ಮಾಂಸದ ಉತ್ಪನ್ನಗಳು

ಈ ಆಹಾರಗಳು ಬೇಡ ಎನ್ನಲು ಎರಡು ಕಾರಣಗಳಿವೆ. ಮೊದಲನೆಯದಾಗಿ ಇದರಲ್ಲಿ ಹೆಚ್ಚಿನ ಸಂರಕ್ಷಕಗಳಿದ್ದು ಹೆಚ್ಚಿನ ಉಪ್ಪು ಸಹಾ ಇರುತ್ತದೆ. ಉಪ್ಪು ಹೆಚ್ಚಿದ್ದಷ್ಟೂ ರಕ್ತದೊತ್ತಡ ಹೆಚ್ಚುವುದು ಖಚಿತ. ಎರಡನೆಯದಾಗಿ ಸಂಸ್ಕರಿಸಿದ ಮಾಂಸದಲ್ಲಿ ಕೊಬ್ಬಿನ ಕಣಗಳು ಹೆಚ್ಚು ಒತ್ತೊತ್ತೊಆಗಿರುತ್ತವೆ ಹಾಗೂ ಈ ಕೊಬ್ಬು ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಅಹಾರಗಳ ಸತತ ಸೇವನೆಯಿಂದ ನಿಧಾನವಾಗಿ ರಕ್ತನಾಳಗಳು ಪೆಡಸಾಗುತ್ತಾ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.

ಉಪ್ಪಿನ ಕಾಯಿ

ಉಪ್ಪಿನ ಕಾಯಿ

ಹೆಸರೇ ಸೂಚಿಸುವಂತೆ ಇದರಲ್ಲಿ ಆಹಾರವನ್ನು ಹೆಚ್ಚು ಕಾಲ ಕೆಡದಿರುವಂತೆ ರಕ್ಷಿಸಿಡಲು ಆಗಾಧ ಪ್ರಮಾಣದ ಉಪ್ಪನ್ನು ಬೆರೆಸಿರಲಾಗಿರುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡದಿಂದ ಬಳಲುವವರು ಉಪ್ಪಿನ ಕಾಯಿಯನ್ನು ಕೇವಲ ಕಣ್ಣಿನಿಂದ ನೋಡಿಯೇ ಜಿಹ್ವಾಚಾಪಲ್ಯವನ್ನು ತಣಿಸುವುದು ಮೇಲು.

English summary

foods-that-increase-blood-pressure

There's a reason why high blood pressure is considered dangerous. It can damage the walls of your arteries over time, especially the small ones, leading to organ failure or heart abnormalities. So, if you are currently suffering from high blood pressure or are borderline hypertensive, the following list of 9 foods that increase blood pressure will definitely be beneficial to you.
Story first published: Tuesday, March 27, 2018, 23:31 [IST]