ಹೊಟ್ಟೆಯಲ್ಲಿ ಹುಣ್ಣು ಇದ್ದಾಗ ಈ ಆಹಾರಗಳನ್ನು ಸೇವಿಸುವುದು ಲೇಸು

Posted By: Arshad Hussain
Subscribe to Boldsky

ಹೊಟ್ಟೆಯಲ್ಲಿ ಹುಣ್ಣು ಹಾಗೂ ಕರುಳುವ್ರಣ ಯಾವುದೇ ವಯಸ್ಸಿನಲ್ಲಿ ಆಗಮಿಸಬಹುದಾದ ಅನಾರೋಗ್ಯವಾಗಿದೆ. ಚರ್ಮದ ಮೇಲೆ ಮೂಡುವ ಕೀವುಭರಿತ ಮೊಡವೆಯಂತೆಯೇ ಹೊಟ್ಟೆಯ ಮತ್ತು ಕರುಳಿನ ಹುಣ್ಣುಗಳೂ ಜಠರದ ಒಳಪದರದಲ್ಲಿ ಕೀವುತುಂಬಿದ ಗುಳ್ಳೆಗಳಾಗಿರುತ್ತವೆ. ಆದರೆ ಇದರ ತುದಿ ತೆರೆದಿದ್ದು ಆಮ್ಲೀಯ ಜಠರರಸ ಇಲ್ಲಿ ತಾಕಿದೊಡನೆ ಅಸಾಧ್ಯವಾದ ಉರಿಯಾಗುತ್ತದೆ. ಅಲ್ಲದೇ ಆಹಾರವಸ್ತುಗಳ ಚಲನೆಯ ಸಮಯದಲ್ಲಿ ಹುಣ್ಣಿಗೆ ತಾಕಿದಾಗಲೂ ತಡೆಯಲಾರದ ನೋವಾಗುತ್ತದೆ. ಈ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಇದಕ್ಕೆ ಪ್ರಮುಖ ಕಾರಣ ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಬ್ಯಾಕ್ಟೀರಿಯಾ ಹರಡುವ ಸೋಂಕು ಎಂದು ಕಂಡುಕೊಳ್ಳಲಾಗಿದೆ.

ಹೊಟ್ಟೆಯ ಮತ್ತು ಕರುಳಿನ ಹುಣ್ಣುಗಳನ್ನು ಜೊತೆಯಾಗಿ ಅಲ್ಸರ್ ಎಂದು ಕರೆಯಲಾಗುತ್ತದೆ. ಒಂದು ವೇಳೆ ನಿಮಗೆ ಅಲ್ಸರ್ ಎದುರಾಗಿದ್ದರೆ ಇದರ ಚಿಕಿತ್ಸೆ ಪೂರ್ಣವಾಗುವವರೆಗೂ ನೀವು ಕೆಲವು ಆಹಾರಗಳನ್ನು ಮಾತ್ರವೇ ಸೇವಿಸಬೇಕು ಹಾಗೂ ಕೆಲವು ಆಹಾರಗಳನ್ನು ಸರ್ವಥಾ ಸೇವಿಸಬಾರದು. ವಾಸ್ತವವಾಗಿ ಅಲ್ಸರ್ ಗೆ ಯಾವುದೇ ಆಹಾರದ ಚಿಕಿತ್ಸೆಯಿಲ್ಲ. ಆದರೆ ಕೆಲವು ಆಹಾರಗಳು ನೋವು ಮತ್ತು ಉರಿಯನ್ನು ಹೆಚ್ಚಿಸುವುದರಿಂದ ಹಾಗೂ ಇವುಗಳನ್ನು ಗುಣಪಡಿಸುವ ಕಾಲವನ್ನು ಮುಂದೂಡುವ ಕಾರಣದಿಂದಾಗಿ ಇವುಗಳನ್ನು ಸೇವಿಸಬಾರದು.

ಯಮಯಾತನೆ ನೀಡುವ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರವೇನು?

ಈ ಬಗ್ಗೆ ಅಧ್ಯಯನ ನಡೆಸಿದ ತಜ್ಞರ ತಂಡವೊಂದು ಅಮೂಲ್ಯವಾದ ಮಾಹಿತಿಯನ್ನು ಸಂಗ್ರಹಿಸಿದೆ. ಆ ಪ್ರಕಾರ ಕೆಲವು ಆಹಾರಗಳು ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾದೊಂದಿಗೆ ಸೆಣೆಸುವ ಮೂಲಕ ಕರುಳುವ್ರಣವನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಈ ಗುಣವಿರುವ ಕೆಲವು ಆಹಾರಗಳನ್ನು ಇಂದು ಸಂಗ್ರಹಿಸಲಾಗಿದ್ದು ಈ ಆಹಾರಗಳ ಸೇವನೆಯಿಂದ ವ್ರಣ ಶೀಘ್ರವಾಗಿ ಗುಣವಾಗಲು ನೆರವಾಗುತ್ತದೆ ಹಾಗೂ ವೈದ್ಯರು ವ್ರಣದ ಚಿಕಿತ್ಸೆಗೆ ನೀಡಿದ ಆಮ್ಲೀಯತೆಯನ್ನು ತಡೆಗಟ್ಟುವ ಔಷಧಿಗಳು ಹಾಗೂ ಪ್ರತಿಜೀವಕಗಳಿಗೆ ನೆರವನ್ನೂ ನೀಡುತ್ತದೆ....

ಹೂಕೋಸು

ಹೂಕೋಸು

ನೋಡಲು ಹೀವಿನಂತೆಯೇ ಇರುವ ಹೂಕೋಸು ಸರಿಸುಮಾರು ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ತರಕಾರಿ ಅಂಗಡಿಯಲ್ಲಿ ಸಿಗುತ್ತದೆ. ಇದರಲ್ಲಿರುವ ಸಲ್ಫೋರಾಫೇನ್ ಎಂಬ ಪೋಷಕಾಂಶ ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾದೊಂದಿಗೆ ಸೆಣೆಸುವ ಕ್ಷಮತೆ ಹೊಂದಿದೆ. ಈ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಕಂಡುಕೊಂಡಂತೆ ದಿನಕ್ಕೆರಡು ಬಾರಿ ಹೂಕೋಸಿನ ಆಹಾರವನ್ನು ಸೇವಿಸಿದ ರೋಗಿಗಳಲ್ಲಿ ಈ ಬ್ಯಾಕ್ಟೀರಿಯಾದ ಪ್ರಾಬಲ್ಯ 78% ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ಈ ಪೋಷಕಾಂಶ ಜಠರ ಮತ್ತು ಕರುಳುಗಳಲ್ಲಿ ಆಶ್ರಯ ಪಡೆದು ಹುಣ್ಣಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಂದು ನಿವಾರಿಸಲು ನೆರವಾಗುತ್ತದೆ ಹಾಗೂ ಔಷಧಿಗಳ ಮೂಲಕ ಶೀಘ್ರವಾಗಿ ಗುಣವಾಗಲು ನೆರವಾಗುತ್ತದೆ. ಕರುಳುಹುಣ್ಣನ್ನು ಮಾಗಿಸುವ ಜೊತೆಗೇ ಹೂಕೋಸಿನಲ್ಲಿರುವ ವಿಟಮಿನ್ ಸಿ ಹಾಗೂ ಕರಗುವ ನಾರು ಕರುಳುಗಳಲ್ಲಿ ಆಹಾರದ ಚಲನೆಯನ್ನು ಸುಲಭವಾಗಿಸುತ್ತವೆ. ಆದರೆ ಹೂಕೋಸಿನ ಪದಾರ್ಥದಲ್ಲಿ ಮಸಾಲೆ, ಮೆಣಸು ಮೊದಲಾದ ಉರಿತರಿಸುವ ಸಾಂಬಾರ ಪದಾರ್ಥಗಳನ್ನು ಬೆರೆಸದೇ ಬರೆಯ ನೀರಿನಲ್ಲಿ ಕುದಿಸಿ ಸಾಲಾಡ್ ರೂಪದಲ್ಲಿ ಸೇವಿಸಬೇಕು.

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿರುವ ಪೋಷಕಾಂಶಗಳಲ್ಲಿ ವಿಟಮಿನ್ ಯು ಅಥವಾ ಎಸ್-ಮೀಥೈಲ್ ಮೀಥಿಯೋನೈನ್ ಎಂಬ ಪೋಷಾಕಂಶವೂ ಒಂದು. ಈ ಪೋಷಕಾಂಶ ಕರುಳಿನ ಹುಣ್ಣನ್ನು ಮಾಗಿಸಲು ಸಕ್ಷಮವಾಗಿದೆ. ಒಂದು ವೇಳೆ ಜಠರದ ದ್ರವದ ಪಿ ಎಚ್ ಅಥವಾ ಆಮ್ಲೀಯತೆ-ಕ್ಷಾರೀಯತೆಯ ಮಟ್ಟ ಏರುಪೇರಾದರೆ ಈ ವಿಟಮಿನ್ ಈ ಏರುಪೇರನ್ನು ಸರಿಪಡಿಸುತ್ತದೆ ಹಾಗೂ ಈ ಕಾರಣದಿಂದ ಎದುರಾಗಿದ್ದ ಕರುಳುಹುಣ್ಣನ್ನು ಮಾಗಿಸಲು ನೆರವಾಗುತ್ತದೆ. ಅಲ್ಲದೇ ಎಲೆಕೋಸಿನಲ್ಲಿ ಗ್ಲುಟಮೈನ್ ಎಂಬ ಅಮೈನೋ ಆಮ್ಲವಿದೆ. ಇದು ಕರುಳುವ್ರಣವನ್ನು ಗುಣಪಡಿಸಲು ನೇರವಾಗಿ ನೆರವಾಗುತ್ತದೆ. ವಿಶೇಷವಾಗಿ ತೆರೆದಿರುವ ಕರುಳು ಹುಣ್ಣುಗಳಿಗೆ ಈ ಪೋಷಕಾಂಶ ಶಮನ ನೀಡಿ ಉರಿಯನ್ನು ತಗ್ಗಿಸುತ್ತದೆ ಹಾಗೂ ಜಠರ ಮತ್ತು ಕರುಳುಗಳ ಒಳಪದರದ ಮೇಲೆ ಇರುವ ಸ್ನಿಗ್ಧ ದ್ರವದ ಲೇಪನವನ್ನು ಹೆಚ್ಚಿಸಿ ವ್ರಣವನ್ನು ಗುಣಪಡಿಸಲು ನೆರವಾಗುತ್ತದೆ. ಎಲೆಕೋಸನ್ನು ಹಸಿಯಾಗಿ ದಿನಕ್ಕೆರಡು ಬಾರಿ ಕನಿಷ್ಟ ಒಂದು ಕಪ್ ಪ್ರತಿಬಾರಿಯಂತೆ ತಿಂದರೆ ಅತಿ ಹೆಚ್ಚು ಪ್ರಯೋಜನವಿದೆ.

ಬಿಳಿಮೂಲಂಗಿ

ಬಿಳಿಮೂಲಂಗಿ

ಮೂಲಂಗಿಯಲ್ಲಿ ಕರಗುವ ನಾರು ಅತಿ ಹೆಚ್ಚು ಪ್ರಮಾಣದಲ್ಲಿದೆ. ಇದು ಜೀರ್ಣಕ್ರಿಯೆಯನ್ನು ಸುಲಭ ಗೊಳಿಸುವುದರೊಂದಿಗೆ ಸತು ಮತ್ತು ಇತರ ಖನಿಜಗಳನ್ನು ದೇಹ ಹೀರಿಕೊಳ್ಳಲು ನೆರವಾಗುತ್ತದೆ. ಕರುಳು ಹುಣ್ಣಿರುವ ಅಷ್ಟೂ ದಿನಗಳಲ್ಲಿ ಬಿಳಿ ಮೂಲಂಗಿಯನ್ನು ಸೇವಿಸುವ ಮೂಲಕ ಜಠರದ ಒಳಪದರದಲ್ಲಿ ಉಂಟಾದ ಉರಿಯೂತದ ಕಾರಣವನ್ನು ಕಡಿಮೆಯಾಗಿಸಿ ಹುಣ್ಣುಗಳನ್ನೂ ಇಲ್ಲವಾಗಿಸುತ್ತದೆ. ಈ ಮೂಲಕ ಅಜೀರ್ಣತೆ ಹಾಗೂ ಇತರ ವಾಯುಪ್ರಕೋಪದ ತೊಂದರೆಗಳನ್ನು ಇಲ್ಲವಾಗಿಸುತ್ತದೆ.

ಸೇಬುಗಳು

ಸೇಬುಗಳು

ನಿತ್ಯವೂ ಒಂದು ಸೇಬುಹಣ್ಣನ್ನು ಸೇವಿಸುವ ಮೂಲಕ ಕರುಳಿನ ಹುಣ್ಣು ಆಗುವ ಸಾಧ್ಯತೆಯನ್ನು ಕಡಿಮೆ ಗೊಳಿಸಬಹುದು ಹಾಗೂ ಇದರಲ್ಲಿರುವ ಫ್ಲೇವನಾಯ್ಡುಗಳು ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದನ್ನು ತಡೆದು ಹುಣ್ಣುಗಳು ಶೀಘ್ರವೇ ಮಾಗಲು ನೆರವಾಗುತ್ತದೆ.

ಬ್ಲೂಬೆರಿ ಹಣ್ಣುಗಳು

ಬ್ಲೂಬೆರಿ ಹಣ್ಣುಗಳು

ನಿತ್ಯವೂ ಬೆಳಿಗ್ಗೆ ಬ್ಲೂಬೆರಿ ಹಣ್ಣುಗಳನ್ನು ತಿನ್ನುವ ಮೂಲಕ ಶೀಘ್ರವೇ ಕರುಳುಹುಣ್ಣುಗಳನ್ನು ಮಾಗಿಸಬಹುದು. ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಹಾಗೂ ಪೋಷಕಾಂಶಗಳಿವೆ. ಅಲ್ಲದೇ ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅಲ್ಸರ್ ನಿಂದ ಗುಣಹೊಂದುವ ಗತಿಯನ್ನು ತೀವ್ರಗೊಳಿಸುತ್ತದೆ.

ರಾಸ್ಬೆರಿಗಳು

ರಾಸ್ಬೆರಿಗಳು

ರಾಸ್ಬೆರಿ ಹಾಗೂ ಬ್ಲ್ಯಾಕ್ ಬೆರಿ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಫಿನೋಲಿಕ್ ಸಂಯುಕ್ತಗಳಿವೆ ಹಾಗೂ ಈ ಮೂಲಕ ಅತಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇರುವ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಹೊಟ್ಟೆ ಮತ್ತು ಕರುಳುಗಳಲ್ಲಿ ಎದುರಾಗುವ ಉರಿಯೂತವನ್ನು ನಿಯಂತ್ರಿಸಿ ಕರುಳುಹುಣ್ಣನ್ನು ಮಾಗಿಸಲು ನೆರವಾಗುತ್ತದೆ.

ಸ್ಟ್ರಾಬೆರಿ ಹಣ್ಣುಗಳು

ಸ್ಟ್ರಾಬೆರಿ ಹಣ್ಣುಗಳು

ಇತ್ತೀಚಿನ ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಸ್ಟ್ರಾಬೆರಿ ಹಣ್ಣುಗಳ ಸೇವನೆಯಿಂದ ಜಠರದ ಹುಣ್ಣುಗಳ ಮೇಲೆ ರಕ್ಷಣೆ ನೀಡುವ ಪದರವೊಂದನ್ನು ಸೃಷ್ಟಿಸುತ್ತದೆ. ಸ್ಟ್ರಾಬೆರಿ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ದೇಹವನ್ನು ವ್ರಣಗಳಿಂದ ರಕ್ಷಿಸುತ್ತದೆ. ಇದರ ಜೊತೆಗೇ ಜಠರದ ಒಳಪದರವನ್ನು ಇನ್ನಷ್ಟು ಬಲಪಡಿಸುತ್ತದೆ. ನಿತ್ಯವೂ ಒಂದು ಕಪ್ ನಷ್ಟು ಸ್ಟ್ರಾಬೆರಿ ಹಣ್ಣುಗಳನ್ನು ಧಾನ್ಯಗಳ ಜೊತೆಗೆ ಅಥವಾ ಮಧ್ಯಾಹ್ನದ ಲಘು ಆಹಾರದೊಡನೆ ತಿನ್ನುವ ಮೂಲಕ ಹುಣ್ಣುಗಳನ್ನು ಮಾಗಿಸಬಹುದು.

ದೊಣ್ಣೆ ಮೆಣಸು

ದೊಣ್ಣೆ ಮೆಣಸು

ಸಿಹಿಯಾಗಿರುವ ದೊಣ್ಣೆ ಮೆಣಸು (Sweet bell peppers) ಜಠರದ ವ್ರಣವನ್ನು ಗುಣಪಡಿಸುವ ಗುಣ ಹೊಂದಿದೆ. ಈ ಮೆಣಸನ್ನು ಹಸಿಯಾಗಿ ಸಾಲಾಡ್ ನೊಂದಿಗೆ ನಿತ್ಯವೂ ಸೇವಿಸುವ ಮೂಲಕ ಶೀಘ್ರವೇ ಕರುಳುವ್ರಣ ಗುಣವಾಗುತ್ತದೆ.

ಕ್ಯಾರೆಟ್

ಕ್ಯಾರೆಟ್

ಜಠರದ ಒಳಪದರವನ್ನು ಇನ್ನಷ್ಟು ಬಲಪಡಿಸಲು ಕ್ಯಾರೆಟ್ಟುಗಳು ಅತಿ ಹೆಚ್ಚಿನ ಬೆಂಬಲ ನೀಡುತ್ತದೆ. ಇದರಲ್ಲಿರುವ ವಿಟಮಿನ್ ಎ ಹೊಟ್ಟೆಯಲ್ಲಿ ಎದುರಾಗಿರುವ ವ್ರಣಗಳನ್ನು, ಜಠರದ ಉರಿಯೂತ ಹಾಗೂ ಅಜೀರ್ಣತೆಯನ್ನು ಗುಣಪಡಿಸಲು ನೆರವಾಗುತ್ತದೆ. ಕ್ಯಾರೆಟ್ಟುಗಳನ್ನು ಬೇಯಿಸಿ ಸೂಪ್ ರೂಪದಲ್ಲಿ ಅಥವಾ ಹಸಿಯಾಗಿ ಸೇವಿಸಬಹುದು. ಬದಲಿಗೆ ಹಸಿ ಕ್ಯಾರೆಟ್ಟುಗಳಿಂದ ತಯಾರಿಸಿದ ತಾಜಾ ರಸವನ್ನು ನಿತ್ಯವೂ ಸೇವಿಸಬಹುದು.

ಬ್ರೋಕೋಲಿ

ಬ್ರೋಕೋಲಿ

ಒಂದು ಅಧ್ಯಯನದಲ್ಲಿ ಕಂಕೊಂಡಿರುವ ಪ್ರಕಾರ ಬ್ರೋಕೋಲಿಯಲ್ಲಿ ಸಲ್ಫೋರಾಫೇನ್ ಎಂಬ ಪೋಷಕಾಂಶವಿದ್ದು ಇವು ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತವೆ. ಹಸಿರು ಹೋಕೋಸಿನಂತಹ ಬ್ರೋಕೋಲಿಯನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಅಥವಾ ಬೇಯಿಸಿ ಇತರ ಆಹಾರಗಳೊಂದಿಗೆ ಮದ್ಯಾಹ್ನದ ಸಮಯ ಸೇವಿಸಬೇಕು.

ಮೊಸರು

ಮೊಸರು

ನಮ್ಮ ಆರೋಗ್ಯಕ್ಕೆ ಅತ್ಯಂತ ಸೂಕ್ತವಾದ ಆಹಾರವೆಂದರೆ ಮೊಸರು. ಇದರಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಲ್ಯಾಕ್ಟೋಬ್ಯಾಸಿಲ್ಲಸ್ ಹಾಗೂ ಅಸಿಡೋಫೈಲಸ್ ಎಂಬ ಜಠರಸ್ನೇಹಿ ಬ್ಯಾಕ್ಟೀರಿಯಾಗಳಿವೆ. ಇವು ಜಠರವ್ರಣವನ್ನು ಗುಣಪಡಿಸಲು ನೆರವಾಗುತ್ತವೆ ಹಾಗೂ ಜಠರದಲ್ಲಿ ಕೆಟ್ಟ ಮತ್ತು ಒಳ್ಳೆಯ ಬ್ಯಾಕ್ಟೀರಿಯಾಗಳ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ. ಈ ಪರಿಯ ಜಠರಸ್ನೇಹಿ ಬ್ಯಾಕ್ಟೀರಿಯಾಗಳು ಸೋಯಾ ಆಧಾರಿತ ಟೆಂಪೆ (tempeh), ಮೀಸೋ ಹಾಗೂ ಇತರ ಆಹಾರಗಳನ್ನೂ ಸೇವಿಸಬಹುದು.

English summary

Foods To Eat When Suffering From Stomach Ulcers

A stomach ulcer is one of the major problems, affecting any age group. These are the open pores that develop within the stomach lining. Studies reveal that Helicobacter pylori, a bacterial infection is suggested to be its main cause. So, while you are suffering from stomach ulcer, besides medication, there are certain foods that you must eat and some which you should avoid. Although there is no proper diet that a patient suffering from an ulcer can consume and get cured, avoiding some foods can be beneficial for your health.