For Quick Alerts
ALLOW NOTIFICATIONS  
For Daily Alerts

ಇಂತಹ ಆಹಾರಗಳಿಂದ ದೂರವಿರಿ! ಇಲ್ಲಾಂದ್ರೆ ವೀರ್ಯಾಣುಗಳ ಮೇಲೆ ಅಪಾಯ ಕಾಡಬಹುದು

|

ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ನಪುಂಸಕತ್ವ ಗಾಬರಿಗೊಳಿಸುವಷ್ಟು ಪ್ರಮಾಣದಲ್ಲಿ ಏರುತ್ತಿದೆ. ಇದಕ್ಕೆ ವೈದ್ಯಕೀಯ ಕಾರಣಗಳ ಹೊರತಾಗಿ ಇಂದುನಾವು ಸೇವಿಸುತ್ತಿರುವ ಅಹಾರಗಳೂ ಪ್ರಮುಖ ಪಾತ್ರ ವಹಿಸುತ್ತಿವೆ.

Every day foods that hurt male fertility

ಇಂದಿನ ಲೇಖನದಲ್ಲಿ ಒದಗಿಸಲಾಗಿರುವ ಕೆಲವು ಆಹಾರಗಳು ವೀರ್ಯಾಣುಗಳ ಗುಣಮಟ್ಟವನ್ನು ಕುಂದಿಸಿ ತನ್ಮೂಲಕ ಪುರುಷರ ಫಲವತ್ತತೆಯನ್ನು ಕುಂದಿಸುವ ಶಕ್ತಿ ಹೊಂದಿದ್ದು ಈ ಆಹಾರಗಳನ್ನು ಪುರುಷರು ಕಡಿಮೆ ಸೇವಿಸುವುದು ಉತ್ತಮ

ಬುರುಗು ಬರುವ ಪಾನೀಯಗಳು

ಬುರುಗು ಬರುವ ಪಾನೀಯಗಳು

ಲಘು ಪಾನೀಯಗಳು ಅಥವಾ ಕಾರ್ಬನ್ ಡೈ ಆಕೈಡ್ ಅನಿಲವನ್ನು ಬೆರೆಸಿದ ಪೇಯಗಳು ಪುರುಷರ ವೀರ್ಯಾಣುಗಳ ಸಂಖ್ಯೆಯನ್ನು ಅಪಾಯಕಾರಿ ಮಟ್ಟಕ್ಕೆ ತಗ್ಗಿಸಬಹುದು. ಹೀಗೆಂದು in Human Reproduction ಎಂಬ ವೈದ್ಯಕೀಯ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಲಾಗಿದೆ. ನಿಯಮಿತವಾಗಿ ಈ ಲಘು ಪಾನೀಯವನ್ನು ಕುಡಿಯುತ್ತಾ ಬರುವ ಪುರುಷರಲ್ಲಿ ವೀರ್ಯಾಣುಗಳ ಸಾಂದ್ರತೆ ಹಾಗೂ ಆರೋಗ್ಯಕ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ.

Most Read: ಮೊಟ್ಟೆ ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆಯೇ?

ಚೀಸ್ ಮತ್ತು ಕೆನೆಸಹಿತ ಹಾಲು

ಚೀಸ್ ಮತ್ತು ಕೆನೆಸಹಿತ ಹಾಲು

2013ರಲ್ಲಿ ಮಾನವರ ವಂಶಾಭಿವೃದ್ದಿಯ ವಿಷಯದಲ್ಲಿ ನಡೆಸಿದ ಕೆಲವು ಸಂಶೋಧನೆಗಳ ಮೂಲಕ ಅತಿಯಾಗಿ ಚೀಸ್ ಮತ್ತು ಕೆನೆಭರಿತ ಹಾಲಿನ ಸೇವನೆಯನ್ನು ಮಾಡಿದ ಪುರುಷರಲ್ಲಿಯೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದು ಕಂಡುಬಂದಿದೆ. ಡೈರಿ ಉತ್ಪನ್ನಗಳ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳು ದೊರಕುತ್ತವೆ ಎಂಬುದೇನೋ ನಿಜ, ಆದರೆ ಈ ಉತ್ಪನ್ನಗಳಲ್ಲಿ ಕೊಬ್ಬು ಹೆಚ್ಚಿದ್ದಷ್ಟೂ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿತ ಕಂಡುಬಂದಿದೆ. ಹಾಗಾಗಿ ಪುರುಷರು ಕೊಬ್ಬಿನ ಅಂಶ ಹೆಚ್ಚಿರುವ ಚೀಸ್ ಮತ್ತು ಕೆನೆಸಹಿತ ಹಾಲಿನ ಸೇವನೆಯನ್ನು ತಗ್ಗಿಸಬೇಕು.

Most Read: ತುಟಿಗಳ ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಆಹಾರಗಳು

ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಆಹಾರಗಳು

ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಆಹಾರಗಳು

ಆರೋಗ್ಯಕರ ಆಹಾರಗಳ ಸೇವನೆಯಿಂದ ಕೇವಲ ಒಟ್ಟಾರೆ ಆರೋಗ್ಯದ ಜೊತೆಗೇ ಪುರುಷರ ವೀರ್ಯಾಣುಗಳ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಹಾಗಾಗಿ, ಪುರುಷರ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚಿಸುವ ಸಾಮರ್ಥವುಳ್ಳ ಈ ಕೆಳಗಿನ ಆಹಾರಗಳನ್ನು ಪುರುಷರು ಹೆಚ್ಚು ಹೆಚ್ಚಾಗಿ ಸೇವಿಸಬೇಕು.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನ ಸೇವನೆಯಿಂದ ಪುರುಷರ ಲೈಂಗಿಕ ರಸದೂತಗಳು ನಿಯಂತ್ರಣದಲ್ಲಿರುತ್ತವೆ ಹಾಗೂ ಲೈಂಗಿಕ ಶಕ್ತಿಯೂ ಹೆಚ್ಚುವುದನ್ನು ಕಂಡುಕೊಳ್ಳಲಾಗಿದೆ. ಇವುಗಳಲ್ಲಿ ವಿಟಮಿನ್ ಸಿ, ಎ, ಬಿ೧ ಪೋಷಕಾಂಶಗಳು ಹೇರಳವಾಗಿರುವ ಕಾರಣ ಇವು ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ನೆರವಾಗುತ್ತವೆ.

ಬ್ರೋಕೋಲಿ

ಬ್ರೋಕೋಲಿ

ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಬ್ರೋಕೋಲಿ ನೆರವಾಗುತ್ತದೆ. ವಿಟಮಿನ್ ಎ ಹೆಚ್ಚಿರುವ ಆಹಾರಗಳಾದ ಕ್ಯಾರೆಟ್, ಪಾಲಕ್ ಸೊಪ್ಪು, ಅಪ್ರಿಕಾಟ್ ಸಿಹಿಗೆಣಸು ಮೊದಲಾದವುಗಳ ಸೇವನೆಯೂ ಉತ್ತಮ.

ಅಕ್ರೋಟು

ಅಕ್ರೋಟು

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವ ಕ್ಷಮತೆ ಹೊಂದಿರುವ ಇನ್ನೊಂದು ಪೋಷಕಾಂಶವೆಂದರೆ ಒಮೆಗಾ-3 ಕೊಬ್ಬಿನ ಆಮ್ಲಗಳು. ಅಕ್ರೋಟುಗಳಲ್ಲಿ ಈ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆಯನ್ನು ಒದಗಿಸುತ್ತವೆ. ತನ್ಮೂಲಕ ಪುರುಷರ ಫಲವತ್ತತೆಯನ್ನೂ ಹೆಚ್ಚಿಸುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಸೇವನೆಯಿಂದ ಪುರುಷರ ಫಲವತ್ತತೆಯಲ್ಲಿ ಅದ್ಭುತವಾದ ಹೆಚ್ಚಳ ಕಂಡುಬಂದಿದೆ. ಇದರಲ್ಲಿರುವ ಸೆಲೆನಿಯಂ ಮತ್ತು ಆಲಿಸಿನ್ ಎಂಬ ಪೋಷಕಾಂಶಗಳು ವೀರ್ಯಾಣುಗಳು ಘಾಸಿಗೊಳ್ಳುವುದರಿಂದ ರಕ್ಷಿಸುವುದು ಮಾತ್ರವಲ್ಲ ಗುಣಮಟ್ಟವನ್ನೂ ಹೆಚ್ಚಿಸುತ್ತವೆ.

Most Read: ಹೊಟ್ಟೆಯ ಎಡಭಾಗದಲ್ಲಿ ನೋವು ಬರುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತೇ?

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕಪ್ಪು ಚಾಕಲೇಟುಗಳ ರುಚಿಯೇ ಇದನ್ನು ಸೇವಿಸಲು ಪ್ರೇರಣೆ ನೀಡಲು ಸಾಕು. ಪುರುಷರ ಫಲವತ್ತತೆಯನ್ನು ಹೆಚ್ಚಿಸುವ ಕ್ಷಮತೆ ಇರುವ ಈ ರುಚಿಕರ ಆಹಾರದ ಸೆಳೆತವನ್ನು ನಿರಾಕರಿಸುವುದು ಅಷ್ಟು ಸುಲಭವಲ್ಲ. ಇದರಲ್ಲಿ ಅಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿದ್ದು ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ವಿರುದ್ದ ಹೋರಾಡುವ ಶಕ್ತಿಯನ್ನು ಇವು ಹೊಂದಿವೆ. ಆದರೆ ಒಂದು ದಿನದ ಅವಧಿಯಲ್ಲಿ ಕಪ್ಪು ಚಾಕಲೇಟಿನ ಒಂದು ಬಾರ್ ನಲ್ಲಿರುವ ಒಂದು ಅಥವಾ ಎರಡು ಚೌಕಾಕಾರದ ಭಾಗಗಳನ್ನು ಮಾತ್ರವೇ ಸೇವಿಸಬೇಕು, ಈ ಪ್ರಮಾಣ ಮೀರಬಾರದು.

ವಿಟಮಿನ್ ಸಿ ಹೆಚ್ಚಿರುವ ಆಹಾರಗಳು

ವಿಟಮಿನ್ ಸಿ ಹೆಚ್ಚಿರುವ ಆಹಾರಗಳು

ವಿಟಮಿನ್ ಸಿ ಹೆಚ್ಚಿರುವ ಆಹಾರಗಳ (ಕಿತ್ತಳೆ ಹಣ್ಣು) ಸೇವನೆಯಿಂದಲೂ ಪುರುಷರ ಫಲವತ್ತತೆ ಹೆಚ್ಚುತ್ತದೆ. ಈ ವಿಟಮಿನ್ ವೀರ್ಯಾಣುಗಳಿಗೆ ಆಗುವ ಘಾಸಿಯನ್ನು ತಡೆಯಲು ಹಾಗೂ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.

English summary

Every day foods that hurt male fertility

Infertility in men is increasing at an alarming rate. Medical reasons aside, even some foods can play havoc with a man's fertility. We list down some of the foods that men should avoid to improve their sperm quality.
X
Desktop Bottom Promotion