For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಸ್ತನ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಪರಿಣಾಮಕಾರಿ ಸಲಹೆಗಳು

|

ಪುರುಷರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ತುಂಬಾ ವಿರಳವಾದರೂ ಇದು ಯಾರಿಗಾದರೂ ಬರಬಹುದು. ಆದರೆ ಮಹಿಳೆಯರ ಸ್ತನ ಕ್ಯಾನ್ಸರ್‌ಗೆ ಹೋಲಿಸಿದಲ್ಲಿ ಪುರುಷರ ಸ್ತನ ಕ್ಯಾನ್ಸರ್ ಬಗ್ಗೆ ತೀರಾ ಚಿಂತಿತರಾಗುವ ಅವಶ್ಯಕತೆ ಇಲ್ಲ.

ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳು ಕಡಿಮೆ ಇದ್ದರೂ ಸಹ ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತ. ಏಕೆಂದರೆ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬಾರದಂತೆ ಜಾಗೃತಿ ವಹಿಸುವುದೇ ಜಾಣತನವಾಗಿದೆ.....

ಪುರುಷರಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳು

ಪುರುಷರಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳು

ಪುರುಷರಲ್ಲಿನ ಸ್ತನ ಕ್ಯಾನ್ಸರ್ ಲಕ್ಷಣಗಳು ಮಹಿಳೆಯರ ಸ್ತನ ಕ್ಯಾನ್ಸರ್ ಲಕ್ಷಣಗಳಂತೆಯೇ ಇರುತ್ತವೆ. ಆದರೆ ಪುರುಷರು ತಮ್ಮ ಸ್ತನಗಳನ್ನು ನಿಯಮಿತವಾಗಿ ಪರಿಶೀಲಿಸುವುದಿಲ್ಲವಾದ್ದರಿಂದ ಹಾಗೂ ಮ್ಯಾಮೋಗ್ರಾಂ ಮಾಡಿಸುವುದಿಲ್ಲವಾದ್ದರಿಂದ ಕ್ಯಾನ್ಸರ್ ಇರುವುದು ಬೇಗ ಪತ್ತೆಯಾಗುವುದಿಲ್ಲ. ಈ ಕೆಳಗಿನ ಲಕ್ಷಣಗಳು ಕಂಡು ಬಂದಲ್ಲಿ ಬೇಗ ವೈದ್ಯರನ್ನು ಭೇಟಿ ಮಾಡುವುದು ಒಳಿತು..

ಸ್ತನದಲ್ಲಿ ಗಡ್ಡೆ

ಸ್ತನದಲ್ಲಿ ಗಡ್ಡೆ

ಸಾಮಾನ್ಯವಾಗಿ ಪುರುಷರು ತಮ್ಮ ಎದೆಯಭಾಗದಲ್ಲಿ ಗಡ್ಡೆಯ ಇರುವಿಕೆಯನ್ನೇ ಅಲಕ್ಷಿಸುತ್ತಾರೆ, ಏಕೆಂದರೆ ಇದು ಸ್ತನ ಕ್ಯಾನ್ಸರ್ ಇರಬಹುದು ಎಂಬ ಕಲ್ಪನೆಯೇ ಇವರಿಗೆ ಇರುವುದಿಲ್ಲ. ಸಾಮಾನ್ಯವಾಗಿ ಈ ಗಡ್ಡೆಗಳಲ್ಲಿ ನೋವಿಲ್ಲದಿದ್ದು ಕೆಲವರಲ್ಲಿ ಮಾತ್ರ ಸ್ಪರ್ಶಿಸಿದರೆ ನವಿರಾದ ಕಚಗುಳಿಯಂತಹ ಭಾವನೆ ಮೂಡುತ್ತದೆ. ಒಂದು ವೇಳೆ ಈ ಕ್ಯಾನ್ಸರ್ ಹೆಚ್ಚು ಹರಡುತ್ತಾ ಹೋದರೆ ಕಂಕುಳು ಹಾಗೂ ಭುಜದ ಮೂಳೆಗಳ ಬಳಿಯಲ್ಲಿಯೂ ಗಡ್ಡೆಗಳು ಕಾಣಿಸಿಕೊಳ್ಳಬಹುದು.

Most Read:ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಸ್ತನತೊಟ್ಟು ಒಳಕ್ಕೆ ಸೆಳೆದಿರುವುದು

ಸ್ತನತೊಟ್ಟು ಒಳಕ್ಕೆ ಸೆಳೆದಿರುವುದು

ಆರೋಗ್ಯವಂತ ಪುರುಷರು ಮತ್ತು ಮಹಿಳೆಯರಲ್ಲಿ ಸ್ತನತೊಟ್ಟು ಸದಾ ಹೊರಚಾಚಿಕೊಂಡಿರಬೇಕು. ಒಂದು ವೇಳೆ ಎದೆಯ ಅಂಗಾಂಶ ಕ್ಯಾನ್ಸರ್ ಗೆ ಒಳಗಾದರೆ ಇದು ಸ್ತನತೊಟ್ಟಿನ ಸುತ್ತಲ ಭಾಗವನ್ನು ಸೆಳೆಯಲು ತೊಡಗುತ್ತದೆ. ಪರಿಣಾಮವಾಗಿ ಸ್ತನತೊಟ್ಟಿನ ಅಡಿಭಾಗದಲ್ಲಿ ಖಾಲಿಜಾಗ ಕಂಡುಬಂದು ಸ್ತನತೊಟ್ಟನ್ನು ಒಳಗೆಳೆದುಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ತನತೊಟ್ಟಿನ ಸುತ್ತಲ ಭಾಗದ ಚರ್ಮ ತೀರಾ ಒಣಗಿ ಸಿಪ್ಪೆಯಂತೆ ಏಳಲು ಪ್ರಾರಂಭಿಸುತ್ತದೆ.

ಸ್ತನತೊಟ್ಟಿನಿಂದ ದ್ರವ ಜಿನುಗುವುದು

ಸ್ತನತೊಟ್ಟಿನಿಂದ ದ್ರವ ಜಿನುಗುವುದು

ಕೆಲವು ಸಂದರ್ಭಗಳಲ್ಲಿ ಪುರುಷರಲ್ಲಿ ಸ್ತನ ಕ್ಯಾನ್ಸರ್ ಈಗತಾನೇ ಪ್ರಾರಂಭವಾಗಿದ್ದರೆ ಸ್ತನತೊಟ್ಟಿನಿಂದ ಕೆಲವು ತೊಟ್ಟು ದ್ರವ ಜಿನುಗಿ ತೊಟ್ಟಿದ್ದ ಬನಿಯನ್ ಅಥವಾ ಶರ್ಟಿನ ಮೇಲೆ ಕಲೆಗಳನ್ನು ಮೂಡಿಸುತ್ತದೆ. ಸಾಮಾನ್ಯವಾಗಿ ಈ ಕಲೆಗಳು ಟೀ ಚೆಲ್ಲಿ ಆಗಿರಬಹುದು ಎಂದೇ ಹೆಚ್ಚಿನ ಪುರುಷರು ಅಸಡ್ಡೆ ತೋರುತ್ತಾರೆ. ಒಂದು ವೇಳೆ ಎದೆಯ ಒಂದೇ ಭಾಗದಲ್ಲಿ ಈ ಸ್ರವಿಕೆ ಸತತವಾಗಿ ಕಂಡುಬರುತ್ತಿದ್ದರೆ ಇದಕ್ಕೆ ಸ್ತನ ಕ್ಯಾನ್ಸರ್ ಗೆ ಒಳಗಾದ ಅಂಗಾಂಶದ ಸುತ್ತಲ ಭಾಗದಲ್ಲಿ ದ್ರವ ತುಂಬಿಕೊಂಡು ಸ್ತನತೊಟ್ಟಿನ ಮೂಲಕ ಹೊರಸ್ರವಿಸುತ್ತದೆ.

ಇತರ ಲಕ್ಷಣಗಳು

ಇತರ ಲಕ್ಷಣಗಳು

*ಮೊಲೆ ತೊಟ್ಟಿನ ಆಕಾರದಲ್ಲಿ ಬದಲಾವಣೆ

*ಮೊಲೆ ತೊಟ್ಟಿನಿಂದ ದ್ರವ ಒಸರುವಿಕೆ

*ಮೊಲೆ ತೊಟ್ಟಿನಲ್ಲಿ ನೋವು

*ಸ್ತನ ಭಾಗದಲ್ಲಿ ಕೆಂಪಾಗುವುದು, ಊದಿಕೊಳ್ಳುವುದು ಅಥವಾ ಇನ್ನಾವುದೇ ರೀತಿಯ ಬದಲಾವಣೆಗಳು ಕಂಡು ಬಂದಲ್ಲಿ ಸ್ತನ ಕ್ಯಾನ್ಸರ್ ತಡೆಗಟ್ಟಲು ಸೂಕ್ತ ಆಹಾರ ಕ್ರಮ

Most Read:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪ ಸೇವಿಸಿದರೆ, ಆರೋಗ್ಯಕ್ಕೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳಿವೆ

ಆಹಾರದ ಶೈಲಿ

ಆಹಾರದ ಶೈಲಿ

ನಿಮ್ಮ ಆಹಾರದ ಶೈಲಿ ಹಾಗೂ ಇತರ ಜೀವನ ಶೈಲಿಯು ಸ್ತನ ಕ್ಯಾನ್ಸರ್‌ನೊಂದಿಗೆ ನೇರ ಸಂಬಂಧ ಹೊಂದಿದೆ. ಹಾಗಂತ ಒಮ್ಮೆಲೇ ಸಂಪೂರ್ಣ ಆಹಾರ ಪದ್ಧತಿಯನ್ನು ಬದಲಾಯಿಸುವುದು ಸರಿಯಲ್ಲ. ಇದರಿಂದ ತೂಕ ಕಡಿಮೆಯಾಗಿ ಆಹಾರ ಪದ್ಧತಿ ಅಪೌಷ್ಟಿಕತೆ ಬರುವ ಸಾಧ್ಯತೆ ಇರುತ್ತದೆ. ದಿನನಿತ್ಯ ಒಬ್ಬ ವ್ಯಕ್ತಿಗೆ ಬೇಕಾಗುವಂಥ ಎಲ್ಲ ವಿಟಮಿನ್, ಪೌಷ್ಟಿಕಾಂಶಗಳನ್ನು ನೀಡಬಲ್ಲ ಸಮತೋಲಿತ ಆಹಾರ ಸೇವಿಸುವುದು ಉತ್ತಮ.ಆಹಾರ ಕ್ರಮದಲ್ಲಿ ಮೊದಲಿಗೆ ನೀವು ಸುಲಭವಾಗಿ ಬದಲಾಯಿಸಬಹುದಾದ ಪದಾರ್ಥಗಳನ್ನು ಮೊದಲಿಗೆ ಆಯ್ದು, ಅವುಗಳಿಂದ ದೂರವಿರಲು ಯತ್ನಿಸಬೇಕು. ಆರಂಭದಲ್ಲಿ ಇದು ತುಸು ಕಷ್ಟಕರವೆನಿಸಿದರೂ ನಂತರದಲ್ಲಿ ಅಭ್ಯಾಸವಾಗುತ್ತದೆ. ಇಂದಿನ ಚಿಕ್ಕ ಸಹನೆಯಿಂದ ದೀರ್ಘಾವಧಿಯಲ್ಲಿ ಸಿಗಬಹುದಾದ ಉತ್ತಮ ಪರಿಣಾಮಗಳು ಹಾಗೂ ದೀರ್ಘಾಯುಷ್ಯದ ಬಗ್ಗೆ ಆಲೋಚನೆ ಮಾಡಿ ಬದಲಾವಣೆಗಳನ್ನು ತರಲು ಮುಂದಾಗಬೇಕು.ಉತ್ತಮ ಆರೋಗ್ಯಕ್ಕಾಗಿ ಶ್ರೇಷ್ಠ ಆಹಾರ ಪದಾರ್ಥಗಳು

 ಟೊಮೆಟೊ

ಟೊಮೆಟೊ

ಟೊಮೆಟೊ ಹಾಗೂ ಟೊಮ್ಯಾಟೊಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಪುರುಷರ ಆರೋಗ್ಯ ವೃದ್ಧಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿವೆ. ಇವುಗಳ ಸೇವನೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು ಎನ್ನಲಾಗಿದೆ.

ಅಕ್ರೋಟ್ (Walnuts)

ಅಕ್ರೋಟ್ (Walnuts)

ಅಕ್ರೋಟ್ ಬೀಜಗಳನ್ನು (ವಾಲ್‌ನಟ್ಸ್) ಅವುಗಳ ಚಿಪ್ಪಿನಿ೦ದ ಹೊರತೆಗೆದಾಗ, ಅವು ಸಣ್ಣ ಸಣ್ಣ ಗಾತ್ರದ, ಪ್ರದರ್ಶನಕ್ಕಿರಿಸಿದ ಮೆದುಳುಗಳ೦ತೆ ಗೋಚರಿಸುತ್ತವೆ, ಇದೇನೋ ಕೇವಲ ಕಾಕತಾಳೀಯವಾಗಿರಬಹುದು. ಆದರೆ, ನಿಜಕ್ಕೂ ಅಕ್ರೋಟ್ ಬೀಜಗಳಿಗೂ ಮೆದುಳಿನ ಆರೋಗ್ಯದ ಸ೦ವರ್ಧನೆಗೂ ಏನಾದರೂ ಸ೦ಬ೦ಧವಿದೆಯೇ? ಅಕ್ರೋಟ್ ಬೀಜವು ಹತ್ತುಹಲವು ಆರೋಗ್ಯಕಾರಿ ಪ್ರಯೋಜನಗಳಿ೦ದ ತು೦ಬಿತುಳುಕುವ೦ತಹುದಾಗಿದ್ದು, ಇವು ನಿಮ್ಮ ಶರೀರದ ಅ೦ದ ಹಾಗೂ ಆರೋಗ್ಯವನ್ನು ಹೆಚ್ಚಿಸಬಲ್ಲವು. ಅಕ್ರೋಟ್ ಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಆರೋಗ್ಯಕರ ಫ್ಯಾಟ್ ಮತ್ತು ಫೈಬರ್ ಅಂಶಗಳಿರುತ್ತವೆ. ಇದಲ್ಲದೇ ಹೃದಯದ ಆರೋಗ್ಯಕ್ಕೆ ಬೇಕಾಗುವ ಆಂಟಿ ಆಕ್ಸಿಡೆಂಟ್ ಗುಣ ಹೊಂದಿದ ಓಮೆಗಾ-3 ಎಂಬ ತೈಲವು ಅಕ್ರೂಡಗಳಲ್ಲಿರುತ್ತದೆ.

Most Read:ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!

ಬ್ಲ್ಯೂ ಬೆರ್ರಿ ಹಣ್ಣುಗಳು

ಬ್ಲ್ಯೂ ಬೆರ್ರಿ ಹಣ್ಣುಗಳು

ಕ್ಯಾನ್ಸರ್ ತಡೆಗಟ್ಟುವ ಗುಣ ಹೊಂದಿರುವ ಪಿಗ್ಮೆಂಟ್ ಉತ್ಪತ್ತಿ ಮಾಡುವ ಆಂಥೊಸೈನಿನ್ ಎಂಬ ಅಂಶಗಳು ಬ್ಲ್ಯೂ ಬೆರ್ರಿ ಹಣ್ಣುಗಳಲ್ಲಿ ಇರುತ್ತದೆ. ಜೊತೆಗೆ ಇವು ಉತ್ತಮ ಆಂಟಿ ಆಕ್ಸಿಡೆಂಟ್ ಆಹಾರ ಪದಾರ್ಥಗಳೂ ಆಗಿವೆ.

ವ್ಯಾಯಾಮ

ವ್ಯಾಯಾಮ

ಜಡವಾದ ಜೀವನ ಶೈಲಿಯಿಂದ ಬಹು ಬೇಗ ಆರೋಗ್ಯ ಹಾಳಾಗುತ್ತದೆ. ಹೀಗಾಗಿ ಆದಷ್ಟು ಬೇಗ ವ್ಯಾಯಾಮ ಮಾಡಲು ಆರಂಭಿಸುವುದು ಸೂಕ್ತ. ವಾರಕ್ಕೆ ಕನಿಷ್ಠ ೩ ಗಂಟೆಗಳಾದರೂ ದೈಹಿಕ ಕಸರತ್ತಿನಲ್ಲಿ ತೊಡಗಿಸಿಕೊಳ್ಳಬೇಕು. ಜಿಮ್ ನಲ್ಲಿ ವ್ಯಾಯಾಮ ಮಾಡಬಹುದು ಅಥವಾ ವಾಕಿಂಗ್ ಮಾಡಬಹುದು ಒಟ್ಟಾರೆಯಾಗಿ ದೈಹಿಕ ಶ್ರಮ ಬೀಳುವಂಥ ಚಟುವಟಿಕೆಗಳನ್ನು ಮಾಡಬೇಕು. ನಿಯಮಿತ ವ್ಯಾಯಾಮದಿಂದ ರೋಗ ಬರದಂತೆ ತಡೆಗಟ್ಟಬಹುದು. ವ್ಯಕ್ತಿಯ ಸಂಪೂರ್ಣ ಆರೋಗ್ಯಕ್ಕಾಗಿ ವ್ಯಾಯಾಮ ಬೇಕೇ ಬೇಕು.

ಧ್ಯಾನ

ಧ್ಯಾನ

ನಿತ್ಯವೂ ಚೈತನ್ಯಶೀಲರಾಗಿರಬೇಕು ಎಂದರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸರಿಯಾಗಿ ಇರಬೇಕು. ಧನಾತ್ಮಕ ಚಿಂತನೆಗಳೆಡೆಗೆ ಮನಸ್ಸು ತಿರುಗಿದಾಗ ಸಮಸ್ಯೆಗಳೆಲ್ಲವೂ ಸರಳವಾಗಿ ತೋರುತ್ತವೆ. ಕೆಲಸಗಳು ಹಗುರವಾಗುತ್ತವೆ. ಆಗ ಎಂತಹ ಕೆಲಸವನ್ನಾದರೂ ನಿರ್ವಹಿಸುವಂತ ಮನಸ್ಸು ಅಥವಾ ಹುಮ್ಮಸ್ಸು ಉಂಟಾಗುವುದು. ಇಂತಹ ಒಂದು ಉತ್ತಮವಾದ ಮನಸ್ಸು ನಮ್ಮದಾಗಬೇಕು ಎಂದಾದರೆ ಮೊದಲು ಮನಸ್ಸಿಗೆ ಅನುಕೂಲವಾಗುವಂತ ವ್ಯಾಯಾಮ ಅಥವಾ ಶಾಂತಿ ದೊರೆಯಬೇಕು. ಮನಸ್ಸಿನ ಆರೋಗ್ಯವನ್ನು ಸದಾ ಕಾಲ ಆರೈಕೆ ಮಾಡುವ ಒಂದು ಆಧುನಿಕ ಪದ್ಧತಿ ಅಥವಾ ಅತ್ಯುತ್ತಮವಾದ ವಿಧಾನ ಎಂದರೆ ಧ್ಯಾನ. ಏಕಾಗ್ರತೆಯಿಂದ ಕೂಡಿರುವ ಧ್ಯಾನ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಜೀವನದ ಬಹುತೇಕ ಎಲ್ಲ ಸಣ್ಣ ಹಾಗೂ ದೊಡ್ಡ ಸಮಸ್ಯೆಗಳ ನಿವಾರಣೆಗೆ ಧ್ಯಾನ ಎಂಬುದು ಪರ್ಯಾಯ ಮಾರ್ಗವಾಗಿದೆ. ಸಾಮಾನ್ಯವಾಗಿ ದೈಹಿಕ ಆರೋಗ್ಯ ಯಾವಾಗಲೂ ಮಾನಸಿಕ ಆರೋಗ್ಯಕ್ಕೂ ಸಂಬಂಧಿಸಿರುತ್ತದೆ. ಹೀಗಾಗಿ ದಿನದಲ್ಲಿ ನಿಮಗಾಗಿಯೇ ಕೆಲ ಸಮಯ ಮೀಸಲಿಟ್ಟಾಗ ದೇಹ ಹಾಗೂ ಮನಸುಗಳೆರಡೂ ಒಂದಾಗಲು ಸಾಧ್ಯವಾಗುತ್ತದೆ. ಇದರಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚುವುದಲ್ಲದೇ ನಿಮ್ಮ ಜೊತೆಗಿರುವವರಿಗೂ ಸಂತೋಷ ನೀಡುತ್ತದೆ. ಜೊತೆಗೆ ಒತ್ತಡ ನಿವಾರಣೆಯಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

English summary

Effective ways to Prevent Male Breast Cancer

Male breast cancer is rare but anyone can suffer from it. It may not seem so much of a concern as compared with female breast cancer. However, breast cancer in men is just as crucial as it is for women and therefore, even if you think your chances of developing it are feeble, you must try your best to prevent its occurrence, as prevention is better than cure.
X
Desktop Bottom Promotion