For Quick Alerts
ALLOW NOTIFICATIONS  
For Daily Alerts

ಮೊಟ್ಟೆ ತಿಂದ ಕೂಡಲೇ ಹಾಲು ಕುಡಿಯಬಹುದೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಇದೆಯೇ?

By Divya Pandith
|

ಆರೋಗ್ಯಕರವಾದ ಉಪಾಹಾರದ ಬಗ್ಗೆ ಆಲೋಚನೆ ಮಾಡಿದರೆ ಆಗ ನಾವು ಉತ್ತಮವಾಗಿರುವುದನ್ನು ಸೇವಿಸಲು ಬಯಸುತ್ತೇವೆ. ಅದರಲ್ಲೂ ನಮ್ಮ ಆಲೋಚನೆಗೆ ಬರುವುದು ಒಂದು ಲೋಟ ಹಾಗೂ ಮತ್ತು ಆಮ್ಲೆಟ್. ಇದು ಅದ್ಭುತವಾಗಿರುವ ಆರೋಗ್ಯಕಾರಿ ಆಹಾರವೆಂದು ನಾವು ಹಿಂದಿನಿಂದಲೂ ಪರಿಗಣಿಸಿಕೊಂಡು ಬಂದಿದ್ದೇವೆ. ಆದರೆ ನಿಜವಾಗಿಯೂ ಇದು ಆರೋಗ್ಯಕಾರಿಯೇ?

Can we eat boiled eggs and drink milk together?

ಹಾಲು ಮತ್ತು ಮೊಟ್ಟೆ ಜತೆಯಾಗಿ ಸೇವನೆ ಮಾಡಬಾರದು ಎಂದು ನಾವು ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಇದರಿಂದ ಅನಾರೋಗ್ಯ ಬರಬಹುದು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಸರಿಯಾಗಿರದ ಆಹಾರ ಅಜೀರ್ಣ ಸಮಸ್ಯೆ ಇತ್ಯಾದಿ ಉಂಟು ಮಾಡಬಹುದು... ಬನ್ನಿ ಇದರ ಕುರಿತು ಇನ್ನಷ್ಟು ಮಾಹಿತಿ ಮುಂದೆ ಓದಿ ಮುಂದೆ ಓದಿ

ಮೊಟ್ಟೆ ಮತ್ತು ಹಾಲಿನ ಸಂಯೋಜನೆ

ಮೊಟ್ಟೆ ಮತ್ತು ಹಾಲಿನ ಸಂಯೋಜನೆ

ಪ್ರೋಟೀನ್ ಹೆಚ್ಚಾಗಿರುವ ಆಹಾರ ಬೆಳಗ್ಗಿನ ಉಪಾಹಾರದಲ್ಲಿ ಸೇವನೆ ಮಾಡಬೇಕೆಂದು ಹೆಚ್ಚಿನವರು ಹೇಳುತ್ತಾರೆ. ಇದರಲ್ಲಿ ಕಂಡುಬರುವ ಎರಡು ಆಹಾರವೆಂದರೆ ಮೊಟ್ಟೆ ಮತ್ತು ಹಾಲು. ಆದರೆ ಇವೆರಡನ್ನು ಜತೆಯಾಗಿ ಸೇವಿಸಿದರೆ ಅದು ಒಳ್ಳೆಯ ಆಹಾರದ ಕ್ರಮವಲ್ಲವೆಂದು ಹೇಳಲಾಗುತ್ತದೆ. ಮೊಟ್ಟೆಯಲ್ಲಿ ಕೇವಲ ಪ್ರೋಟೀನ್ ಮಾತ್ರವಲ್ಲದೆ ಕೋಲೀನ್, ಅಲ್ಬುಲಿನ್ ಎನ್ನುವ ಎರಡು ಅಂಶಗಳು ಇವೆ. ಮೊಟ್ಟೆಯನ್ನು ಹಸಿ, ಬೇಯಿಸಿ, ಅರೆ ಬೇಯಿಸಿ, ಫ್ರೈ ಮಾಡಿ, ಆಮ್ಲೆಟ್ ಮಾಡಿ ಸೇವಿಸಲಾಗುತ್ತದೆ. ಹಸಿ ಮೊಟ್ಟೆಗಳನ್ನು ಸೇವಿಸುವುದು ತುಂಬಾ ಅಪಾಯಕಾರಿ ಮಾತ್ರವಲ್ಲದೆ, ಇದರ ರುಚಿ ಕೂಡ ಕಡಿಮೆ. ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣ ಪ್ರೋಟೀನ್, ಅಮಿನೋ ಆಮ್ಲ ಮತ್ತು ಆರೋಗ್ಯಕರ ಕೊಬ್ಬು ಇದೆ. ಹಾಲಿನಲ್ಲಿ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಇದೆ. ನಮ್ಮ ಆರೋಗ್ಯಕ್ಕೆ ಇದು ಅಗತ್ಯ ಕೂಡ. ಮೊಟ್ಟೆ ಮತ್ತು ಹಾಲಿನ ಸಂಯೋಜನೆಯು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ದೇಹಕ್ಕೆ ಕೂಡ ಹಾನಿಯುಂಟು ಮಾಡುವುದು. ಪ್ರೋಟೀನ್ ಅತಿಯಾದರೆ ಅದನ್ನು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುವುದು. ಮೊಟ್ಟೆ ಮತ್ತು ಹಾಲಿನಲ್ಲಿ ಹೆಚ್ಚಿನ ಮಟ್ಟದ ಪೋಷಕಾಂಶಗಳು ಇವೆ. ಆರೋಗ್ಯಕ್ಕೂ ಇದು ಒಳ್ಳೆಯದು. ಆದರೆ ಮೊಟ್ಟೆಯನ್ನು ಕೆಲವು ತಪ್ಪು ಕ್ರಮಗಳಿಂದ ತಿನ್ನುವರು ಇದನ್ನು ಕಡೆಗಣಿಸಬೇಕು.

Most Read: ಪಾದಗಳಲ್ಲಿ ಕಂಡು ಬರುವ ಬದಲಾವಣೆಗಳು, ಭಯಾನಕ ರೋಗದ ಲಕ್ಷಣಗಳಾಗಿರಬಹುದು!

ಬೇಯಿಸಿ ಮೊಟ್ಟೆಯನ್ನು ಹಾಲಿನೊಂದಿಗೆ ಸೇವಿಸಬಹುದು

ಬೇಯಿಸಿ ಮೊಟ್ಟೆಯನ್ನು ಹಾಲಿನೊಂದಿಗೆ ಸೇವಿಸಬಹುದು

ಹಾಲು ಮತ್ತು ಮೊಟ್ಟೆಯನ್ನು ತಪ್ಪಾದ ಕ್ರಮದಿಂದ ಸೇವನೆ ಮಾಡಿದರೆ ಅದರಿಂದ ಪೋಷಕಾಂಶಗಳು ಕಡಿಮೆಯಾಗುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬರಬಹುದು. ಬೇಯಿಸಿ ಅಥವಾ ಸಂಸ್ಕರಿಸಿದ ಮೊಟ್ಟೆಯನ್ನು ನೀವು ಅದನ್ನು ಹಾಲಿನೊಂದಿಗೆ ಸೇವಿಸಬಹುದು. ಇದರಿಂದ ಯಾವುದೇ ರೀತಿಯ ಹಾನಿಯಾಗದು. ಇದರ ಬಗ್ಗೆ ಹಲವಾರು ಶತಮಾನಗಳಿಂದಲೂ ಕೆಲವೊಂದು ಸುಳ್ಳುಗಳು ಹರಡುತ್ತಲೇ ಇದೆ. ಬೇಯಿಸಿದ ಮೊಟ್ಟೆ ಹಾಗೂ ಹಾಲನ್ನು ಜತೆಯಾಗಿ ಸೇವಿಸದೆ ಇರಲು ಯಾವುದೇ ವೈಜ್ಞಾನಿಕ ಕಾರಣಗಳು ಇಲ್ಲ. ಆದರೆ ಮೊಟ್ಟೆಯನ್ನು ಸೋಯಾಹಾಲಿನೊಂದಿಗೆ ಸೇವನೆ ಮಾಡಿದರೆ ಆಗ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಯಾಕೆಂದರೆ ಸೋಯಾಹಾಲಿನಲ್ಲಿ ಟ್ರಿಸ್ಪಿನ್ ಪ್ರತಿಬಂಧಕವಿದೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು.

ಬೇಯಿಸಿದ ಮೊಟ್ಟೆಯೇ ಸೇವಿಸಿ

ಬೇಯಿಸಿದ ಮೊಟ್ಟೆಯೇ ಸೇವಿಸಿ

ಬೇಯಿಸಿದ ಮೊಟ್ಟೆ ಸೇವನೆ ಮಾಡಿದರೆ ಅದರಿಂದ ಸೋಂಕು ಮತ್ತು ಆಹಾರ ವಿಷವಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಹಸಿ ಮೊಟ್ಟೆಗಿಂತ ಬೇಯಿಸಿದ ಮೊಟ್ಟೆ ತಿಂದಾಗ ಅದರಲ್ಲಿನ ಪ್ರೋಟೀನ್ ಅಂಶವನ್ನು ದೇಹವು ಬೇಗನೆ ಹೀರಿಕೊಳ್ಳುವುದು. ಇದರಿಂದ ಹೊಟ್ಟೆಗೆ ತುಂಬಾ ಹಗುರ ಮತ್ತು ಆರೋಗ್ಯಕಾರಿಯಾಗಿರುವುದು. ಇನ್ನು ಹಾಲಿನಲ್ಲಿ ಕ್ಯಾಲ್ಸಿಯಂ, ಲಿಪಿಡ್ಸ್ ಮತ್ತು ಪ್ರೋಟೀನ್ ಮತ್ತು ಇತರ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಇವೆ. ಪ್ರಾಣಿಗಳಿಂದ ಪಡೆದ ಹಾಲನ್ನು ಹಸಿಯಾಗಿ ಅಥವಾ ಅದನ್ನು ಸಂಸ್ಕರಿಸಿ, ಅದರಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಂದ ಬಳಿಕ ಸೇವನೆ ಮಾಡಲಾಗುತ್ತದೆ. ಈ ಎರಡು ಆಹಾರಗಳು ಜತೆಯಾಗಿ ಸೇವನೆ ಮಾಡಬೇಕೆಂದರೆ, ಮೊಟ್ಟೆಯನ್ನು ಬೇಯಿಸಿರಬೇಕು ಮತ್ತು ಹಾಲನ್ನು ಬ್ಯಾಕ್ಟೀರಿಯಾ ಮುಕ್ತಗೊಳಿಸಿರಬೇಕು.

Most Read: ಜನರ ಮನಸ್ಸಿಗೆ ನೋವು ಮಾಡಬಲ್ಲ ರಾಶಿಚಕ್ರದವರು, ಈ ಕ್ರಮಾಂಕದಲ್ಲಿ ಇದ್ದಾರೆ ನೋಡಿ...

ಹಸಿ ಮೊಟ್ಟೆ ಬೇಡ

ಹಸಿ ಮೊಟ್ಟೆ ಬೇಡ

ಬೇಯಿಸಿದ ಮೊಟ್ಟೆ ಹಾಗೂ ಹಾಲಿನ ಸೇವನೆ ನೀವು ಯಾವ ಸಮಯದಲ್ಲೂ ಮಾಡಬಹುದು. ಆದರೆ ಹಸಿ ಮೊಟ್ಟೆ ಹಾಗೂ ಹಾಲಿನಿಂದಾಗಿ ಅಜೀರ್ಣ ಸಮಸ್ಯೆ ಹಾಗೂ ಕೆಲವೊಂದು ಅನಾರೋಗ್ಯವು ಬರಬಹುದು. ಬೇಯಿಸಿದ ಮೊಟ್ಟೆ ಹಾಗೂ ಹಾಲು ನಿಮ್ಮ ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು. ಇದು ನಿಮ್ಮ ದೇಹಕ್ಕೆ ಶಕ್ತಿ ಕೂಡ ನೀಡುವುದು. ಬೇಯಿಸಿದ ಮೊಟ್ಟೆಯು ಆಹಾರವನ್ನು ವಿಷಕಾರಿಯಾಗಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ. ಇನ್ನು ಹಸಿ ಮೊಟ್ಟೆ ಮತ್ತು ಹಾಲನ್ನು ಜತೆಯಾಗಿ ಸೇವನೆ ಮಾಡಿದಾಗ ಪ್ರೋಟೀನ್ ಅತಿಯಾಗಿ ಅದನ್ನು ಹೀರಿಕೊಳ್ಳಲು ದೇಹವು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀರಿಕೊಳ್ಳದೆ ಉಳಿಯುವಂತಹ ಪ್ರೋಟೀನ್ ಕೊಬ್ಬಿನ ರೂಪವಾಗಿ ಪರಿವರ್ತನೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಮೊಟ್ಟೆ ಸೇವಿಸುವ ಮೊದಲು ಸರಿಯಾಗಿ ಬೇಯಿಸಿಕೊಂಡರೆ ಆಗ ಅದನ್ನು ದೇಹವು ಸುಲಭವಾಗಿ ಹೀರಿಕೊಳ್ಳುವುದು. ಇದರಿಂದ ಆರೋಗ್ಯ ಸಮಸ್ಯೆ ಕಡಿಮೆಯಾಗುವುದು. ಬೇಯಿಸಿರುವ ಮೊಟ್ಟೆಯನ್ನು ಹಾಲಿನೊಂದಿಗೆ ಯಾವುದೇ ಚಿಂತೆಯಿಲ್ಲದೆ ಸೇವನೆ ಮಾಡಬಹುದು. ಕೆಟ್ಟ ಕೊಲೆಸ್ಟ್ರಾಲ್ ಕೂಡ ಬರುವುದಿಲ್ಲ.

Most Read: ಸಣ್ಣ-ಪುಟ್ಟ ವಿಷಯಕ್ಕೆ ಅಳುವಂತಹ ವ್ಯಕ್ತಿಗಳಲ್ಲಿರುವ ಐದು ಗುಣಗಳು!

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನವಾಗಿರುವಂತಹ ಮೊಸರು, ಚೀಸ್, ಸಂಪೂರ್ಣ ಕೆನೆಯಿರುವ ಸಾವಯವ ಹಾಲು ಇತ್ಯಾದಿಗಳು ಉನ್ನತ ಮಟ್ಟದ ಪೋಷಕಾಂಶಗಳನ್ನು ಹೊಂದಿದ್ದು, ಇದನ್ನು ಹಾಲಿನೊಂದಿಗೆ ಸೇವನೆ ಮಾಬಡಹುದು. ಹಾಲನ್ನು ಬೇರೆ ಆಹಾರಗಳೊಂದಿಗೆ ಮಿಶ್ರಣ ಮಾಡಿಕೊಂಡು ತಿನ್ನುವಂತಹ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಹಾಲಿನಲ್ಲಿ ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳು ಇವೆ. ಭಿನ್ನ ರೀತಿಯ ಪ್ರೋಟೀನ್ ಹೊಂದಿರುವಂತಹ ಎರಡು ಆಹಾರಗಳನ್ನು ಯಾವತ್ತೂ ಜತೆಯಾಗಿ ಸೇವನೆ ಮಾಡಬಾರದು. ಇದರಿಂದ ಅಜೀರ್ಣ ಸಮಸ್ಯೆ ಉಂಟಾಗಬಹುದು. ಉದಾಹರಣೆಗೆ ಹಾಲು ಮತ್ತು ಮೊಟ್ಟೆ.

ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಿ

ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಿ

ನಿಮ್ಮ ಆರೋಗ್ಯಕ್ಕೆ ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯವಾಗಿರುವುದು. ಮೊಟ್ಟೆ ಹಾಗೂ ಹಾಲಿನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಹಾಗೂ ಪೋಷಕಾಂಶಗಳು ಇವೆ. ಹಾಲು ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಿದರೆ ಯಾವುದೇ ಸಂದರ್ಭದಲ್ಲೂ ಇದನ್ನು ಸೇವನೆ ಮಾಡಬಹುದು. ಹಸಿ ಮೊಟ್ಟೆಯನ್ನು ಹಾಲಿನೊಂದಿಗೆ ಸೇವನೆ ಮಾಡಬೇಡಿ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಹಾಲು ಮತ್ತು ಮೊಟ್ಟೆ ಜತೆಯಾಗಿ ಸೇವನೆ ಮಾಡಬೇಕೆಂದಿದ್ದರೆ ಅದನ್ನು ಸರಿಯಾಗಿ ಬೇಯಿಸಿಕೊಳ್ಳಿ.

English summary

Can we eat boiled eggs and drink milk together?

Whenever we consider about the healthy breakfast, we always want to have something well. A well done omelette with a glass of milk at once comes to our mind. It sounds wonderful and super healthy but is it actually? From the time we have been hearing that eggs and milk should not eat together as they may cause disorder and disaster on your health. Improper food can create digestive disorders, fermentation and gas formation in your stomach.
X
Desktop Bottom Promotion