ನಿಮ್ಮ ಹಲ್ಲುಗಳನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದಾದ 5 ವಿಧಾನಗಳು

Posted By: Sushma Chathra
Subscribe to Boldsky

ನಿಮ್ಮ ನಗು ಸುಂದರವಾಗಿರಿಸಿಕೊಳ್ಳಬೇಕೆಂದರೆ ನಿಮ್ಮ ಹಲ್ಲುಗಳ ಸುರಕ್ಷತೆಯ ಬಗ್ಗೆ ಒತ್ತು ನೀಡಬೇಕಾಗಿರುವುದು ತುಂಬಾ ಮಹತ್ವವಾದದ್ದು. ನಿಮ್ಮ ನಗು ಸುಂದರವಾಗಿದ್ದರೆ ಕೇವಲ ನಿಮ್ಮ ಬಾಯಿ ಮಾತ್ರವಲ್ಲ ನಿಮ್ಮ ಕಾನ್ಫಿಡೆನ್ಸ್, ನಿಮ್ಮ ಮುಖಭಾವ, ನಿಮ್ಮ ಮನಸ್ಥಿತಿ ಎಲ್ಲವೂ ಅದ್ಭುತವಾಗಿರಲು ಸಾಧ್ಯ.

ನಿಮ್ಮ ಹಲ್ಲುಗಳನ್ನು ಸುರಕ್ಷಿತವಾಗಿ ಮತ್ತು ಬಿಳಿಯಾಗಿ ಸುಂದರವಾಗಿ ಇಟ್ಟುಕೊಳ್ಳಲು ಕೆಲವು ಸಿಂಪಲ್ ವಿಧಾನಗಳಿವೆ.

ways to keep your teeth healthy for long

ಪ್ರತಿ ದಿನ ಎರಡು ಬಾರಿ ಹಲ್ಲುಜ್ಜಲು ಮರೆಯಬೇಡಿ.

ಹಲ್ಲುಜ್ಜುವಿಕೆ ನಮ್ಮ ದೈನಂದಿನ ಚಟುವಟಿಕೆಯ ಒಂದು ಭಾಗ. ನಿಮ್ಮ ಹಲ್ಲುಗಳ ಸಂಧಿಗಳಲ್ಲಿ ಸಿಲುಕಿಕೊಂಡಿರುವ ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸುವಿಕೆಯು ಹಲವು ಕಾಯಿಲೆಗಳಿಂದ ನಿಮ್ಮನ್ನ ರಕ್ಷಿಸುತ್ತದೆ. ಹಲ್ಲುಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳುವುದರಿಂದ ನಿಮ್ಮ ಹಲ್ಲು ಹುಳುಕಾಗುವುದನ್ನು ತಡೆಯಬಹುದು. ಅಮೇರಿಕಾದ ಡೆಂಟಲ್ ಅಸೋಸಿಯೇಷನ್ ಹೇಳುವ ಪ್ರಕಾರ ನಿಮ್ಮ ಹಲ್ಲುಗಳನ್ನು ಪ್ರತಿ ದಿನ ಎರಡು ಬಾರಿ ಮೃದು ಬ್ರಷ್ ನಿಂದ ಉಜ್ಜಲೇಬೇಕು ಮತ್ತು 3 ರಿಂದ 4 ತಿಂಗಳಿಗೊಮ್ಮೆಯಾದರೂ ನಿಮ್ಮ ಟೂತ್ ಬ್ರಷ್ ಬದಲಿಸಲೇಬೇಕು.

ಸರಿಯಾದ ಟೂತ್ ಪೇಸ್ಟ್ ಆರಿಸಿಕೊಳ್ಳುವುದು

ಈಗಂತೂ ನೂರಾರು ವೆರೈಟಿ ಟೂತ್ ಪೇಸ್ಟ್ ಗಳು ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ. ಆದ್ರೆ ನಿಮ್ಮ ಹಲ್ಲುಗಳಿವೆ ಯಾವ ವಿಧಾನದ ಟೂತ್ ಪೇಸ್ಟ್ ಬೇಕು ಅನ್ನುವುದನ್ನು ಸರಿಯಾದ ರೀತಿಯಲ್ಲಿ ಆರಿಸಿಕೊಳ್ಳುವುದು ಬಹಳ ಇಂಪಾರ್ಟೆಂಟ್.. ಒಳ್ಳೆ ಆಫರ್ ನಲ್ಲಿದೆ ಕಡಿಮೆ ಬೆಲೆ ಇದೆ ಎಂದು ಯಾವುದೋ ಲೋ ಕ್ವಾಲಿಟಿ ಪ್ರೊಡಕ್ಟ್ ಗಳಿಗೆ ಮೊರೆ ಹೋಗದೆ ಇರುವುದು ಒಳಿತು. ಉದಾಹರಣಗೆ ಸೆನ್ಸಿಟೀವ್ ಹಲ್ಲುಗಳಿರುವವರಿಗೆ ಅದಕ್ಕೆ ಸಂಬಂಧಿಸಿದ ಡಿಸೆನ್ಸಿಟೀವ್ ಟೂತ್ ಪೇಸ್ಟ್ ಗಳು ಮಾರ್ಕೆಟ್ ನಲ್ಲಿರುತ್ತೆ. ಸಾಮಾನ್ಯ ಟೂತ್ ಪೇಸ್ಟ್ ಬಳಸುವುದಕ್ಕಿಂತ ಸರಿಯಾದ ಟೂತ್ ಪೇಸ್ಟ್ ಬಳಸುವುದರಿಂದ ನಿಮ್ಮ ಹಲ್ಲು ಮತ್ತು ವಸಡಿನ ಆರೋಗ್ಯ ಉತ್ತಮವಾಗಿರಲು ಸಾಧ್ಯ.

ಬಾಯಿ ಮುಕ್ಕಳಿಸುವಿಕೆಯು ಹಲ್ಲುಜ್ಜುವಷ್ಟೇ ಮಹತ್ವವಾದದ್ದು

ಹಲ್ಲುಗಳ ಸಂಧುಗಳನ್ನು ಕ್ಲೀನ್ ಮಾಡುವುದು ಬಹಳ ಮುಖ್ಯ. ಟೂತ್ ಬ್ರಷ್ ತಗುಲದೆ ಇರುವ ಜಾಗವನ್ನು ಬಾಯಿ ಮುಕ್ಕಳಿಸುವಿಕೆಯಿಂದ ನಾವು ಸ್ವಚ್ಛಗೊಳಿಸಿಕೊಳ್ಳಬಹುದು. ತಾಯಿ ಮಾಡದ ಸೇವೆಯನ್ನು ನೀರು ಮಾಡಿತ್ತಂತೆ ಅನ್ನೋ ಹಳೆಯ ಗಾದೆಯೊಂದಿದೆ. ಹಾಗೆಯೇ ಬಾಯಿಗೆ ನೀರು ಹಾಕಿ ಚೆನ್ನಾಗಿ ಕುಳುಕುಳು ಮಾಡುವುದರಿಂದ ನಿಮ್ಮ ಹಲ್ಲುಗಳ ನಡುವಿನ ಮೂಲೆಯಲ್ಲಿ ಅಡಗಿ ಕುಳಿತಿರುವ ಕೀಟಾಣುಗಳನ್ನು ದೂರ ತಳ್ಳಬಹುದು.

ಸಕ್ಕರೆ- ಹಲ್ಲು ಹುಳುಕು ಮಾಡುವ ಶತ್ರು

ಪ್ರತಿ ವಯಸ್ಸಿನಲ್ಲೂ, ಸರಿಯಾದ ಆಹಾರ ಕ್ರಮವನ್ನು ರೂಢಿಸಿಕೊಳ್ಳುವುದು ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಸರಿಯಾಗಿ ಹಲ್ಲುಜ್ಜದೆ ಹೋದರೆ, ಸಕ್ಕರೆ ನಿಮ್ಮ ಹಲ್ಲು ಹಾಳು ಮಾಡುವ ಶತ್ರುವಾಗಿ ಪರಿಣಮಿಸುತ್ತದೆ. ಸಕ್ಕರೆ ಹೆಚ್ಚಿನ ಆಸಿಡ್ ಅಂಶವನ್ನು ಬಾಯಿಯಲ್ಲಿ ಉತ್ಪಾದಿಸುತ್ತದೆ ಮತ್ತು ಹಲ್ಲು ಹುಳುಕಾಗಲು ಬಾಗಿಲು ತೆರೆದು ಕೊಡುತ್ತದೆ. ಅಷ್ಟೇ ಅಲ್ಲ ಹೆಚ್ಚು ಆಸಿಡ್ ಅಂಶವಿರುವ ಕೋಲಾದಂತ ಆಹಾರ ಪದಾರ್ಥಗಳ ಸೇವನೆಯಿಂದ ಕೂಡ ನಿಮ್ಮ ಹಲ್ಲು ಹಾಳಾಗುತ್ತದೆ.

ಹಲ್ಲಿನ ವೈದ್ಯರನ್ನು ಆಗಾಗ ಸಂಪರ್ಕಿಸುತ್ತಿರಬೇಕು

ಹಲ್ಲು ಹಾಳಾದಾಗ, ಹಲ್ಲು ನೋವು ಬಂದಾಗ, ಹಲ್ಲಿನ ಸಮಸ್ಯೆ ಇದ್ದಾಗ ಮಾತ್ರ ಹಲ್ಲಿನ ವೈದ್ಯರನ್ನು ಸಂಪರ್ಕಿಸುವುದಲ್ಲ. ಸಂಕಟ ಬಂದಾಗ ಮಾತ್ರ ವೆಂಕಟರಮಣ ಅನ್ನುವುದಲ್ಲ. ಬದಲಾಗಿ 3 ರಿಂದ 6 ತಿಂಗಳಿಗೊಮ್ಮೆ ನಿಮ್ಮ ಎಲ್ಲಾ ಹಲ್ಲುಗಳನ್ನು ವೈದ್ಯರ ಬಳಿ ಪರೀಕ್ಷಿಸಿಕೊಳ್ಳುತ್ತಿರಿ. ಇಂಗ್ಲೀಷಿನಲ್ಲಿ ಒಂದು ಮಾತಿದೆ ಪ್ರಿಕಾಷನ್ ಈಸ್ ಬೆಟರ್ ದೆನ್ ಕ್ಯೂರಿಂಗ್ ಅಂತ ಅಂದರೆ ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬರದಂತೆ ತಡೆಯುವುದು ಉತ್ತಮವಾದದ್ದು. ಹಾಗಾಗಿ ಹಲ್ಲಿನ ಬಗ್ಗೆ ಹೆಚ್ಚಿನ ನಿಗಾ ತೆಗೆದುಕೊಳ್ಳಿ,.

English summary

5 ways To Keep Your Teeth Healthy For Long

Regular oral care is a prime component in keeping your smile healthy and bright. From greater self-confidence to a soaring career, healthy teeth can truly transform the positivity of your mind-set and improve the health of not only your mouth but also your body.