ಆರೋಗ್ಯ ಟಿಪ್ಸ್: ಲವಲವಿಕೆಯ ಆರೋಗ್ಯಕ್ಕೆ ಯೋಗಮುದ್ರೆಗಳು

By Arshad
Subscribe to Boldsky

ಯೋಗಾಭ್ಯಾಸವೆನ್ನುವುದು ಕೇವಲ ಒಂದು ತೂಕ ಇಳಿಸುವ ಹಾಗೂ ದೇಹದಾರ್ಢ್ಯತೆ ಕಾಪಾಡಿಕೊಳ್ಳುವ ವ್ಯಾಯಾಮ ಮಾತ್ರವಲ್ಲ ಬದಲಿಗೆ ಮನಸ್ಸು ಹಾಗೂ ದೇಹವನ್ನು ಸುಸ್ಥಿತಿಯಲ್ಲಿರುವ ಒಂದು ಶಿಸ್ತುಬದ್ದ ಕ್ರಮ. ಭಾರತೀಯ ಸಂಸ್ಕೃತಿಯಲ್ಲಿ ಯೋಗಾಭ್ಯಾಸಕ್ಕೆ ಪ್ರಮುಖ ಸ್ಥಾನವಿದ್ದು ಇದನ್ನು ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಐತಿಹಾಸಿಕ ದಾಖಲೆಗಳು ಸಾರುತ್ತವೆ. ಇದರಲ್ಲಿ ಸಾಧುಗಳು ಅನುಭವದಿಂದ ಕಂಡುಕೊಂಡ ಜ್ಞಾನ ಹಾಗೂ ಇದರ ಸರಿಯಾದ ಬಳಕೆಯನ್ನು ಇಂದಿನ ವಿಜ್ಞಾನದ ಮೂಲಕ ಅನುಸರಿಸಿದರೆ ವ್ಯಾಯಾಮಕ್ಕೂ ಹೆಚ್ಚಿನ ಲಾಭವನ್ನು ಪಡೆಯಬಹುದು.

ಸಾಮಾನ್ಯವಾಗಿ ನಾವೆಲ್ಲರೂ ಯೋಗಾಭ್ಯಾಸವೆಂದರೆ ಆಸನ ಅಥವಾ ಭಂಗಿ ಎಂದೇ ತಿಳಿಯುತ್ತೇವೆ. ಆದರೆ ಮುದ್ರೆಗಳೂ ಸಹಾ ಯೋಗಾಭ್ಯಾಸದ ಒಂದು ಅಂಗವೇ ಆಗಿದ್ದು ಹೆಚ್ಚಿನವರಿಗೆ ಈ ಬಗ್ಗೆ ಅರಿವಿಲ್ಲ. ಈ ಮುದ್ರೆಗಳನ್ನು ಅನುಸರಿಸುವ ಮೂಲಕವೂ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿ ಮುದ್ರೆಗೂ ತನ್ನದೇ ಆದ ಮಹತ್ವ ಹಾಗೂ ಅರ್ಥವಿದೆ. ಇದನ್ನು ತಪ್ಪದೇ ನಿತ್ಯವೂ ಅನುಸರಿಸುವ ಮೂಲಕ ಮಾತ್ರವೇ ಇದರ ಪ್ರಯೋಜನ ಪಡೆಯಬಹುದು. ಉದಾಹರಣೆಗೆ ಜ್ಞಾನಮುದ್ರೆ. ಇದು ಸಾಮಾನ್ಯವಾಗಿದ್ದು ಇದರಿಂದ ಗ್ರಹಣಶಕ್ತಿ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಅಂತೆಯೇ ವಾಯುಮುದ್ರೆ ಹೆಸರೇ ತಿಳಿಸುವಂತೆ ದೇಹದಲ್ಲಿ ಉಸಿರಾಟದ ತೊಂದರೆಗಳಿಂದ ರಕ್ಷಿಸುತ್ತದೆ.

ಪ್ರತಿ ಮುದ್ರೆಯೂ ತನ್ನದೇ ಆದ ಪ್ರಯೋಜನವನ್ನು ಹೊಂದಿದೆ. ಆದರೆ ಕೇವಲ ಒಂದೆರಡು ಮುದ್ರೆಗಳನ್ನು ಮಾತ್ರವೇ ಅನುಸರಿಸಿದರೆ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಕೆಲವಾರು ಮುದ್ರೆಗಳನ್ನು ದಿನದ ಒಂದು ನಿಗದಿತ ಹೊತ್ತಿನಲ್ಲಿ ತಪ್ಪದೇ ಅನುಸರಿಸಬೇಕಾಗುತ್ತದೆ. ನಿಂತ, ಕುಳಿತ ಹಾಗೂ ಮಲಗಿರುವ ಭಂಗಿಯಲ್ಲಿಯೂ ಕೆಲವು ಮುದ್ರೆಗಳನ್ನು ಅನುಸರಿಸಬಹುದು. ತನ್ಮೂಲಕ ಹೆಚ್ಚಿನ ಎಲ್ಲಾ ಮುದ್ರೆಗಳನ್ನು ಅನುಸರಿಸಿ ಪರಿಪೂರ್ಣ ಆರೋಗ್ಯ ಪಡೆಯಬಹುದು. ಬನ್ನಿ, ಕೆಲವು ಮೂಲ ಮುದ್ರೆಗಳ ಬಗ್ಗೆ ಅರಿಯೋಣ..

ಜ್ಞಾನ ಮುದ್ರೆ

ಜ್ಞಾನ ಮುದ್ರೆ

ಇದು ಅತ್ಯಂತ ತಳಮಟ್ಟದ ಹಾಗೂ ಸುಲಭವಾದ ಮುದ್ರೆಯಾಗಿದ್ದು ಜ್ಞಾನ ಹಾಗೂ ಏಕಾಗ್ರತೆ ಹೆಚ್ಚಿಸಲು ನೆರವಾಗುತ್ತದೆ. ಇದನ್ನು ನಿತ್ಯವೂ ಬೆಳಿಗ್ಗೆ ಪದ್ಮಾಸನದಲ್ಲಿ ಕುಳಿತು ಅನುಸರಿಸಬೇಕಾಗುತ್ತದೆ. ಏಕಾಗ್ರತೆ ಹೆಚ್ಚಿಸುವ ಜೊತೆಗೇ ನಿದ್ದೆ ಬಾರದಿರುವಿಕೆ ಹಾಗೂ ಕೋಪದ ಮೇಲೆ ಮನಸ್ಸನ್ನು ನಿಯಂತ್ರಿಸಲೂ ನೆರವಾಗುತ್ತದೆ.

ವಾಯು ಮುದ್ರೆ

ವಾಯು ಮುದ್ರೆ

ಈ ಮುದ್ರೆಯ ಮೂಲಕ ದೇಹದಲ್ಲಿ ವಾಯು ಅಥವಾ ಉಸಿರನ್ನು ಸಮತೋಲನದಲ್ಲಿರಿಸಲು ಸಾಧ್ಯವಾಗುತ್ತದೆ. ಇದನ್ನು ಕುಳಿತಿದ್ದಾಗ, ನಿಂತಿದ್ದಾಗ ಅಥವಾ ಪವಡಿಸಿದ್ದಾಗ ದಿನದ ಯಾವುದೇ ಹೊತ್ತಿನಲ್ಲಿ ಅನುಸರಿಸಬಹುದು. ಇದು ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ವಾಯುವನ್ನು ಹೊರಹಾಕಿ ಈ ಮೂಲಕ ಎದುರಾಗಬಹುದಾಗಿದ್ದ ಎದೆಯುರಿ ಮೊದಲಾದ ತೊಂದಗೆಗಳಿಂದ ರಕ್ಷಿಸುತ್ತದೆ.

ಅಗ್ನಿ ಮುದ್ರೆ

ಅಗ್ನಿ ಮುದ್ರೆ

ಈ ಮುದ್ರೆಯಿಂದ ದೇಹದ ಅಗ್ನಿ ಎಂಬ ಧಾತುವನ್ನು ಸಮತೋಲನದಲ್ಲಿರಿಸಬಹುದು. ಆದರೆ ಈ ಮುದ್ರೆಯನ್ನು ಕೇವಲ ಖಾಲಿ ಹೊಟ್ಟೆಯಲ್ಲಿದ್ದಾಗ ಮಾತ್ರವೇ ಅನುಸರಿಸಬೇಕು. ಆದ್ದರಿಂದ ರಾತ್ರಿ ಮಲಗಿ ಬೆಳಿಗ್ಗೆದ್ದಾಗ ಮಾತ್ರ ಇದನ್ನು ಅನುಸರಿಸಬೇಕು. ಇದರಿಂದ ತೂಕ ಇಳಿಕೆ, ಕೊಬ್ಬು ಕರಗುವಿಕೆ ಹಾಗೂ ಜೀರ್ಣಕ್ರಿಯೆಯನ್ನು ಚುರುಕುಕೊಳಿಸಲು ನೆರವಾಗುತ್ತದೆ.

ವರುಣ ಮುದ್ರೆ

ವರುಣ ಮುದ್ರೆ

ಈ ಮುದ್ರೆಯಿಂದ ವರುಣ ಅಥವಾ ಮಳೆ ಅಥವಾ ದೇಹದಲ್ಲಿನ ನೀರಿನ ಧಾತುವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದು ದೇಹದ ಸೌಂದರ್ಯವನ್ನು ಹೆಚ್ಚಿಸಲೂ ನೆರವಾಗುತ್ತದೆ. ದೇಹದಲ್ಲಿ ದ್ರವ ಹೆಚ್ಚಿನ ಪ್ರಮಾಣದಲ್ಲಿ ಹರಿಯುವ ಮೂಲಕ ಆರ್ದ್ರತೆಯನ್ನು ಪಡೆಯುವ ತ್ವಚೆ ಇನ್ನಷ್ಟು ಹೆಚ್ಚು ಕಾಂತಿಯುಕ್ತವಾಗುತ್ತದೆ.

ಪ್ರಾಣ ಮುದ್ರೆ

ಪ್ರಾಣ ಮುದ್ರೆ

ಇದು ಹೆಸರೇ ತಿಳಿಸುವಂತೆ ಪ್ರಾಣ ಅಥವಾ ಜೀವವನ್ನು ಉತ್ತಮಗೊಳಿಸುವ ಮುದ್ರೆಯಾಗಿದ್ದು ಇದನ್ನು ದಿನದ ಯಾವುದೇ ಹೊತ್ತಿನಲ್ಲಿ ಅನುಸರಿಸಬಹುದು. ಇದು ರೋಗ ನಿರೋಧಕ ಶಕ್ತಿ, ದೃಷ್ಟಿಯನ್ನು ಚುರುಕುಕೊಳಿಸುವುದು ಹಾಗೂ ಸುಸ್ತನ್ನು ನಿವಾರಿಸಿ ಚುರುಕುತನವನ್ನು ಹೆಚ್ಚಿಸಲೂ ನೆರವಾಗುತ್ತದೆ.

ಪೃಥ್ವಿ ಮುದ್ರೆ

ಪೃಥ್ವಿ ಮುದ್ರೆ

ಇದು 'ಪೃಥ್ವಿ' ಅಥವಾ ನಮ್ಮ ದೇಹದ ಬ್ರಹ್ಮಾಂಡವನ್ನು ಉತ್ತೇಜನಗೊಳಿಸುತ್ತದೆ. ಪರಿಣಾಮವಾಗಿ ಉತ್ತಮ ರಕ್ತಪರಿಚಲನೆ, ತಾಳ್ಮೆ ಹಾಗೂ ಮೂಳೆ ಮತ್ತು ಸ್ನಾಯುಗಳನ್ನೂ ಬಲಪಡಿಸುತ್ತದೆ.

ಶೂನ್ಯ ಮುದ್ರೆ

ಶೂನ್ಯ ಮುದ್ರೆ

ಶೂನ್ಯ ಅಥವಾ ಸೊನ್ನೆ ವಿಶೇಷವಾಗಿ ನಮ್ಮ ಕಿವಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಿವಿಯಂತೆಯೇ ತೋರುವ ಈ ಮುದ್ರೆಯನ್ನು ಅನುಸರಿಸುವ ಮೂಲಕ ಕಿವಿನೋವು ಹಾಗೂ ವಯಸ್ಸಾಗುತ್ತಿದ್ದಂತೆ ಎದುರಾಗುವ ಕಿವುಡುತನದಿಂದಲೂ ರಕ್ಷಿಸುತ್ತದೆ.

ಸೂರ್ಯ ಮುದ್ರೆ

ಸೂರ್ಯ ಮುದ್ರೆ

ಇದು ಸೂರ್ಯನ ಶಕ್ತಿ ದೇಹದಲ್ಲಿ ಅವಗಾಹನೆಯಾಗುವಂತೆ ಮಾಡಲು ನೆರವಾಗುತ್ತದೆ. ಈ ಮುದ್ರೆಯನ್ನು ಪ್ರಾತಃಕಾಲದ ಸೂರ್ಯನ ಪ್ರಥಮ ಕಿರಣಗಳು ಮೈಮೇಲೆ ಬೀಳುತ್ತಿರುವಾಗ ಅನುಸರಿಸಿದಾಗ ಮಾತ್ರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು.

ಲಿಂಗ ಮುದ್ರೆ

ಲಿಂಗ ಮುದ್ರೆ

ವಿಶೇಷವಾಗಿ ಪುರುಷರಿಗೆ ಈ ಮುದ್ರೆ ಪ್ರಯೋಜನಕಾರಿಯಾಗಿದ್ದು ದೇಹದಲ್ಲಿ ಲೈಂಗಿಕ ಶಕ್ತಿ ಹೆಚ್ಚಲು ಅಗತ್ಯವಿರುವ ತಾಪಮಾನವನ್ನು ಹೆಚ್ಚಿಸಲು ನೆರವಾಗುತ್ತದೆ. ಪರಿಣಾಮವಾಗಿ ಲೈಂಗಿಕ ಶಕ್ತಿ ಹೆಚ್ಚುತ್ತದೆ ಹಾಗೂ ಶೀತದ ಪ್ರಭಾವದಿಂದ ಎದುರಾಗುವ ತೊಂದರೆಗಳು ಇಲ್ಲವಾಗುತ್ತವೆ.

ಲಿಂಗ ಮುದ್ರೆ

ಲಿಂಗ ಮುದ್ರೆ

ಇದು ಪ್ರತಿಯೊಬ್ಬರಿಗೂ ಉಪಯುಕ್ತವಾದ ಮುದ್ರೆಯಾಗಿದ್ದು ದೇಹದಿಂದ ಕಲ್ಮಶಗಳನ್ನು ಹೊರಹಾಕಿ ದೇಹವನ್ನು ಸ್ವಚ್ಛವಾಗಿರಿಸಲು ನೆರವಾಗುತ್ತದೆ. ಪರಿಣಾಮವಾಗಿ ಮೂತ್ರಕೋಶದ ಉರಿಯೂತ, ಮಲಬದ್ದತೆ, ಅಜೀರ್ಣತೆ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

For Quick Alerts
ALLOW NOTIFICATIONS
For Daily Alerts

    English summary

    Yoga Mudras and Their Significance to Health

    All yoga mudras are hand gestures that have surprising health benefits. But you cannot practise these mudras in isolation. There is a specific time of the day to do these mudras. You also have particular sitting, standing and lying down positions in which you can practise these special hand gestures for getting all their health benefits. Here is a list of the most basic yoga mudras and their benefits for you body.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more