ಬರೀ ಹದಿನೈದು ದಿನಗಳಲ್ಲಿಯೇ ಹೊಟ್ಟೆಯ ಬೊಜ್ಜು ಕರಗಿಸುವ ಅದ್ಭುತ ಜ್ಯೂಸ್

By: Arshad
Subscribe to Boldsky

ಸಪಾಟಾದ ಹೊಟ್ಟೆ, ಕಟ್ಟುಮಸ್ತಾದ ಶರೀರ ನಮಗೆಲ್ಲರಿಗೂ ಬೇಕು. ಅಲ್ಲವೇ ಇದು ಸೌಂದರ್ಯದ ಲಕ್ಷಣ ಮಾತ್ರವಲ್ಲ, ಆರೋಗ್ಯವಂತರಾಗಿರುವ ಲಕ್ಷಣವೂ ಹೌದು. ಆದರೆ ನಮ್ಮಲ್ಲಿ ಬಹುತೇಕ ಎಲ್ಲರ ತೊಂದರೆಯೂ ಒಂದೇ ತೆರನಾಗಿದೆ. ಅದೆಂದರೆ ಹೊಟ್ಟೆಯ ಕೊಬ್ಬು. ಇದನ್ನು ಕರಗಿಸಿ ಹೊಟ್ಟೆಯನ್ನು ಸಪಾಟಾಗಿಸುವ ಎಲ್ಲಾ ಪ್ರಯತ್ನಗಳು ಹೆಚ್ಚು ಫಲನೀಡುವುದಿಲ್ಲ ಹಾಗೂ ಒಮ್ಮೆ ಪಡೆದ ಕೊಬ್ಬನ್ನು ಕರಗಿಸಿ ಮತ್ತೆ ಮೊದಲಿನ ಹೊಟ್ಟೆಯನ್ನು ಪಡೆಯುವುದು ದುಃಸಾಧ್ಯವೇ ಸರಿ. ಆದರೆ ಈ ಪ್ರಯತ್ನಕ್ಕೆ ಬೆಂಬಲ ನೀಡಲು ಹೊಟ್ಟೆಯ ಕೊಬ್ಬನ್ನು ಕರಗಿಸುವ ಪೇಯವನ್ನು ಕುಡಿದರೆ ನಿಮ್ಮ ಪ್ರಯತ್ನಗಳು ಹೆಚ್ಚು ಫಲಕಾರಿಯಾಬಹುದು. ಇಂದ ಒಂದು ಅದ್ಭುತ ಪೇಯವಿದ್ದು ಇದನ್ನು ಸತತವಾಗಿ ಕುಡಿದರೆ ಹದಿನೈದೇ ದಿನಗಳಲ್ಲಿ ಇದರ ಪರಿಣಾಮವನ್ನು ಗಮನಿಸಬಹುದು.

ಆದರೆ ಕೇವಲ ಈ ಪೇಯವನ್ನು ಕುಡಿದರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ, ಆರೋಗ್ಯಕರ ಜೀವನಶೈಲಿ, ಸಾಕಷ್ಟು ವ್ಯಾಯಾಮ, ಕೊಬ್ಬು ಹೆಚ್ಚಿಸುವ ಆಹಾರಗಳ ವರ್ಜನೆ ಮೊದಲಾದ ಕೆಲವು ಕಟ್ಟುಪಾಡುಗಳನ್ನೂ ಅನುಸರಿಸಬೇಕು. ಅನಾರೋಗ್ಯಕರ ಆಹಾರ ವರ್ಜಿಸಿ ನಾರಿನಂಶ ಹೆಚ್ಚಿರುವ ಓಟ್ಸ್, ಹಸಿ ತರಕಾರಿ, ಹಣ್ಣುಗಳು ಮೊದಲಾದವುಗಳನ್ನು ಮಾತ್ರವೇ ಸೇವಿಸಬೇಕು.

ಇದರೊಂದಿಗೆ ದಿನದ ಒಂದು ಹೊತ್ತಿನಲ್ಲಿ ಒಂದು ಗಂಟೆ ತೀವ್ರಗತಿಯ ನಡಿಗೆ ನಡೆಯಬೇಕು ಅಥವಾ ಇದಕ್ಕೆ ಸಮನಾದ ವ್ಯಾಯಾಮವನ್ನೂ ಕಡ್ಡಾಯವಾಗಿ ಮಾಡಬೇಕು. ಆಗ ಮಾತ್ರವೇ ಈ ಪೇಯಕ್ಕೆ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ. ಹೊಟ್ಟೆಯ ಕೊಬ್ಬು ಇವತ್ತಲ್ಲದಿದ್ದರೂ ನಾಳೆ ಎಂದಾದರೂ ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನುನೋವು ಮೊದಲಾದ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಬನ್ನಿ, ಹೊಟ್ಟೆಯ ಕೊಬ್ಬನ್ನು ಕರಗಿಸುವ ಶಕ್ತಿ ಇರುವ ಕೆಲವು ಮಹತ್ವದ ಪೇಯಗಳ ಬಗ್ಗೆ ಅರಿಯೋಣ....

ಹೊಟ್ಟೆಯ ಕೊಬ್ಬು ಕರಗಿಸುವ ಪೇಯ

ಹೊಟ್ಟೆಯ ಕೊಬ್ಬು ಕರಗಿಸುವ ಪೇಯ

ಮೂರು ಬೆಳ್ಳುಳ್ಳಿ ಎಸಳು

ಒಂದು ದೊಡ್ಡಚಮಚ ಜೇನು

ಈಗ ತಾನೇ ಹಿಂಡಿದ ಲಿಂಬೆರಸ

ಉಗುರುಬೆಚ್ಚನೆಯ ನೀರು

ತಯಾರಿಸುವ ವಿಧಾನ:

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಲಿಂಬೆ ಮತ್ತು ಜೇನು ಬೆರೆಸಿ ಕಲಕಿ. ಬೆಳ್ಳುಳ್ಳಿಯನ್ನು ಬಾಯಿಗೆ ಹಾಕಿ ಅಗಿದು ಈ ನೀರನ್ನು ಕುಡಿಯಿರಿ. ಬೆಳ್ಳುಳ್ಳಿಯ ರುಚಿ ಇಷ್ಟವಾಗದಿದ್ದರೆ ಚೆನ್ನಾಗಿ ಅರೆದು ನೀರಿಗೆ ಬೆರೆಸಬಹುದು. ಈ ನೀರನ್ನು ದಿನದ ಪ್ರಥಮ ಆಹಾರವಾಗಿ ಹದಿನೈದು ದಿನ ಸೇವಿಸಿ.

ಹೊಟ್ಟೆಯ ಕೊಬ್ಬು ಕರಗಿಸುವ ಪೇಯ

ಹೊಟ್ಟೆಯ ಕೊಬ್ಬು ಕರಗಿಸುವ ಪೇಯ

ನೂರು ಗ್ರಾಂ ಮೂಲಂಗಿ

ಕೊಂಚ ಹಸಿ ಶುಂಠಿ

ಮೂರು ಲಿಂಬೆ

ನಾಲ್ಕು ದೊಡ್ಡಚಮಚ ಜೇನು

ಎರಡು ಚಿಕ್ಕಚಮಚ ದಾಲ್ಚಿನ್ನಿ ಪುಡಿ

ತಯಾರಿಸುವ ವಿಧಾನ:

ಮೂಲಂಗಿ ಮತ್ತು ಶುಂಠಿಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಕಡೆಯಿರಿ. ಇದಕ್ಕೆ ಜೇನು. ಲಿಂಬೆರಸ, ದಾಲ್ಚಿನ್ನಿ ಪುಡಿ ಸೇರಿಸಿ ನಿಮಗೆ ಸೂಕ್ತವೆನಿಸಿದಷ್ಟು ನೀರು ಹಾಕಿ ಮತ್ತೊಮ್ಮೆ ಗೊಟಾಯಿಸಿ. ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಘಂಟೆಯ ಬಳಿಕ ಅಲ್ಪ ಉಪಾಹಾರ

ಸೇವಿಸಿ.

ಲೋಳೆಸರ ಮತ್ತು ಜೇನು

ಲೋಳೆಸರ ಮತ್ತು ಜೇನು

ಹೊಟ್ಟೆಯ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಲೋಳೆಸರವೂ ಉತ್ತಮ ಆಯ್ಕೆಯಾಗಿದೆ. ಇದರ ರಸ ಸಣ್ಣ ಕರುಳನ್ನು ಸ್ವಚ್ಛಗೊಳಿಸ್ತುತದೆ ಹಾಗೂ ಹೊಟ್ಟೆಯುಬ್ಬರಿಕೆಯನ್ನು ತಡೆಯುತ್ತದೆ. ಒಂದು ದೊಡ್ಡ ಲೋಟ ನೀರಿನಲ್ಲಿ ತಲಾ ಎರಡು ದೊಡ್ಡ ಚಮಚ ಲೋಳೆಸರದ ರಸ ಮತ್ತು ಜೇನನ್ನು ಬೆರೆಸಿ ಈ

ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಘಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಿ.

ಹೊಟ್ಟೆಯ ಕೊಬ್ಬು ಕರಗಿಸುವ ಪೇಯ

ಸೇಬಿನ ಸಿರ್ಕಾ

ಒಂದು ದೊಡ್ಡ ಲೋಟ ನೀರಿಗೆ ಎರಡು ದೊಡ್ಡಚಮಚ ಸೇಬಿನ ಶಿರ್ಕಾ (pple cider vinegar) ಬೆರೆಸಿ ಇದಕ್ಕೆ ಒಂದು ಮಧ್ಯಮಗಾತ್ರದ ಲಿಂಬೆಯರಸ, ಕೊಂಚ ದಾಲ್ಚಿನ್ನಿಪುಡಿ ಮತ್ತು ಕೊಂಚ ಜೇನನ್ನು ಬೆರೆಸಿ ಕಲಕಿ. ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಘಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಿ.

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ

ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ ಅನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು.

ಪಾನೀಯದ ಲಾಭಗಳು

ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ

ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ

ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್‪ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು

ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.

 ಮೆಂತೆ ನೀರು

ಮೆಂತೆ ನೀರು

ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

ಬೆಳ್ಳುಳ್ಳಿ+ಲಿಂಬೆ ರಸ

ಬೆಳ್ಳುಳ್ಳಿ+ಲಿಂಬೆ ರಸ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

 ಹಚ್ಚ ಹಸಿರು ಜ್ಯೂಸ್!

ಹಚ್ಚ ಹಸಿರು ಜ್ಯೂಸ್!

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

ನೀರು ಮತ್ತು ಲಿಂಬೆ

ನೀರು ಮತ್ತು ಲಿಂಬೆ

ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

English summary

Wonder drink that removes belly fat In 15 Days!

Abdominal fat is the most adamant fat that doesn't melt easily and requires a lot of efforts. However, if you drink some belly-melting juices then it is possible to melt the belly fat faster in a matter of 15 days! Apart from drinking juices to melt belly fat, you have to maintain a healthy lifestyle too. Avoid all oily and junk foods. Eat foods rich in fibre such as oats, fruits, vegetables, etc
Story first published: Wednesday, November 1, 2017, 8:31 [IST]
Subscribe Newsletter