For Quick Alerts
ALLOW NOTIFICATIONS  
For Daily Alerts

ಮುಟ್ಟಿನ ನೋವಿಗೆ 'ನೋವು ನಿವಾರಕ' ಮಾತ್ರೆ ಸೇವಿಸಲೇಬೇಡಿ...

By Hemanth
|

ತಿಂಗಳ ಮುಟ್ಟು ಎನ್ನುವುದು ಮಹಿಳೆಯರಿಗೆ ಶಾಪ ಎಂದು ಹೆಚ್ಚಿನ ಮಹಿಳೆಯರ ಅಭಿಪ್ರಾಯ. ಪ್ರತೀ ತಿಂಗಳು ಮುಟ್ಟಾಗುವ ವೇಳೆ ಮಹಿಳೆಯರು ಭಾರೀ ನೋವು ಅನುಭವಿಸುತ್ತಾರೆ. ಮುಟ್ಟಾಗುವ ವೇಳೆ ಸ್ನಾಯು ಕೂಡ ಸೆಳೆತಕ್ಕೆ ಒಳಗಾಗುತ್ತದೆ. ನೋವು ನಿವಾರಕ ಮಾತ್ರೆ ತೆಗೆದುಕೊಂಡು ನೋವಿಗೆ ತಾತ್ಕಾಲಿಕ ಶಮನ ನೀಡಬಹುದು.

ಮನೆ ಔಷಧ: ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ನಿಯಂತ್ರಣಕ್ಕೆ

ಆದರೆ ಇದರಿಂದ ಮುಂದೆ ಅಡ್ಡಪರಿಣಾಮಗಳು ಉಂಟಾಗುವುದು ಖಚಿತ. ನೋವು ನಿವಾರಣೆ ಮಾಡಲು ನೋವು ನಿವಾರಕ ತೆಗೆದುಕೊಳ್ಳುತ್ತಾ ಇದ್ದರೆ ಮಹಿಳೆಯರು ಇದರ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಅತೀ ಅಗತ್ಯ. ಮುಟ್ಟಾಗುವ ವೇಳೆ ಸ್ನಾಯು ಸೆಳೆತವಾಗಿ ನೋವು ಉಂಟಾಗಲು ಕಾರಣವೇನೆಂದು ತಿಳಿದುಕೊಳ್ಳುವುದು ಅತೀ ಅಗತ್ಯ.

ಮುಟ್ಟಿನ ಹೊಟ್ಟೆ ನೋವನ್ನು ನಿಯಂತ್ರಿಸಲು 'ನೈಸರ್ಗಿಕ ಜ್ಯೂಸ್'

ಗರ್ಭಕೋಶಕ್ಕೆ ಸರಿಯಾಗಿ ಆಮ್ಲಜನಕವು ಪೂರೈಕೆಯಾಗದಿರುವ ಕಾರಣ ಅಲ್ಲಿ ರಕ್ತನಾಳಗಳ ಮೇಲೆ ಒತ್ತಡ ಉಂಟಾಗಿ ಸ್ನಾಯು ಸೆಳೆತಗೊಂಡು ನೋವು ಉಂಟಾಗುತ್ತದೆ. ಇದರ ಬಗ್ಗೆ ಮತ್ತಷ್ಟು ವಿವರ ಹಾಗೂ ನೋವು ನಿವಾರಕದಿಂದ ಉಂಟಾಗವು ದುಷ್ಪರಿಣಾಮಗಳು ಮತ್ತು ನೋವನ್ನು ನಿವಾರಣೆ ಮಾಡಲು ಸರಳ ಪರಿಹಾರವನ್ನು ಬೋಲ್ಡ್ ಸ್ಕೈ ನಿಮ್ಮ ಮುಂದಿಡಲಿದೆ...

ನೋವು ನಿವಾರಕ ಏನು ಮಾಡುತ್ತದೆ?

ನೋವು ನಿವಾರಕ ಏನು ಮಾಡುತ್ತದೆ?

ಸ್ಟಿರಾಯ್ಡ್ ಇಲ್ಲದೆ ಇರುವಂತಹ ಉರಿಯೂತ ಶಮನಕಾರಿ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ನೋವು ನಿವಾರಣೆ ಮಾಡುವುದು. ಇದು ಪ್ರೊಸ್ಟಗ್ಲಾಂಡಿನ್ ಎನ್ನುವ ಹಾರ್ಮೋನು ಉತ್ಪತ್ತಿಯನ್ನು ತಾತ್ಕಾಲಿಕವಾಗಿ ತಡೆಯುವುದು. ಮುಟ್ಟಿನ ವೇಳೆ ಇದರ ಅತಿಯಾದ ಉತ್ಪಾದನೆಯಿಂದ ಸ್ನಾಯು ಸೆಳೆತ ಉಂಟಾಗುತ್ತದೆ. ಈ ಹಾರ್ಮೋನು ದೇಹದಲ್ಲಿ ಕೆಲವೊಂದು ಕ್ರಿಯೆಗಳು ಸರಿಯಾದ ರೀತಿಯಲ್ಲಿ ನಡೆಯಲು ತುಂಬಾ ನೆರವಾಗುವುದು. ಆಗಾಗ ಹಾರ್ಮೋನುಗಳನ್ನು ತಡೆಯುವ ಕಾರಣದಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.

ನೋವು ನಿವಾರಕದ ದುಷ್ಪರಿಣಾಮಗಳು

ನೋವು ನಿವಾರಕದ ದುಷ್ಪರಿಣಾಮಗಳು

ತಿಂಗಳ ಮುಟ್ಟಿನ ವೇಳೆ ತೆಗೆದುಕೊಳ್ಳುವ ನೋವುನಿವಾರಕದ ದುಷ್ಪರಿಣಾಮಗಳ ಪಟ್ಟಿ ಮಾಡಿದರೆ ಅದು ತುಂಬಾ ದೊಡ್ಡದಾಗುತ್ತಾ ಹೋಗುತ್ತದೆ. ಇದರಲ್ಲಿ ಕೆಲವೊಂದು ದುಷ್ಪರಿಣಾಮಗಳೆಂದರೆ ಯಕೃತ್ ಗೆ ಹಾನಿ, ರಕ್ತ ಸ್ರಾವ, ಭೇದಿ, ವಾಕರಿಕೆ, ಗ್ಯಾಸ್ಟ್ರಿಕ್ ಸಮಸ್ಯೆ ಇತ್ಯಾದಿ. ಸ್ನಾಯು ಸೆಳೆತದಿಂದ ಆಗುವ ನೋವನ್ನು ಸರಿಯಾಗಿ ಪತ್ತೆ ಹಚ್ಚದೆ ನೋವು ನಿವಾರಕ ಸೇವಿಸಿದರೆ ಅದರಿಂದ ನೋವು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಪ್ರತೀ ತಿಂಗಳು ಮುಟ್ಟಿನ ವೇಳೆ ನೋವು ನಿವಾರಕ ಮಾತ್ರೆ ತೆಗೆದುಕೊಂಡರೆ ಇದು ಚಟವಾಗಬಹುದು. ಅತಿಯಾಗಿ ನೋವು ನಿವಾರಕ ಮಾತ್ರೆ ಸೇವನೆ ಮಾಡುವಂತಹ ಮಹಿಳೆಯರು ಅಲ್ಝಿಮರ್ ನಂತಹ ಕಾಯಿಲೆಗೆ ಗುರಿಯಾಗಬಹುದು.

ಮುಟ್ಟಿನ ವೇಳೆ ನೋವು ನಿವಾರಣೆ ಮಾಡಲು ಇತರ ವಿಧಾನಗಳು

ಮುಟ್ಟಿನ ವೇಳೆ ನೋವು ನಿವಾರಣೆ ಮಾಡಲು ಇತರ ವಿಧಾನಗಳು

ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಇಂತಹ ದುಷ್ಪರಿಣಾಮಗಳು ಉಂಟಾಗುವ ಕಾರಣ ಮುಟ್ಟಿನ ವೇಳೆ ಆಗುವ ಸಹಿಸಲು ಅಸಾಧ್ಯವಾದ ನೋವು ನಿವಾರಣೆ ಹೇಗೆ ಎಂದು ನೀವು ಪ್ರಶ್ನಿಸಬಹುದು. ಆದರೆ ಕೆಲವೊಂದು ಸುರಕ್ಷಿತ ವಿಧಾನಗಳಿಂದ ಈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಕೊಬ್ಬು ಕಡಿಮೆ ಇರುವ ಆಹಾರ ಸೇವನೆ

ಕೊಬ್ಬು ಕಡಿಮೆ ಇರುವ ಆಹಾರ ಸೇವನೆ

ಕೊಬ್ಬು ಕಡಿಮೆ ಇರುವ ಆಹಾರವು ದೇಹವನ್ನು ತುಂಬಾ ಒಳ್ಳೆಯ ಸ್ಥಿತಿಯಲ್ಲಿಡುವುದು. ಇಷ್ಟು ಮಾತ್ರವಲ್ಲದೆ ಮಾಸಿಕ ಮುಟ್ಟಿನ ವೇಳೆ ಆಗುವಂತಹ ನೋವನ್ನು ಇದು ಕಡಿಮೆ ಮಾಡುವುದು.

ವಿಟಮಿನ್ ಸಪ್ಲಿಮೆಂಟ್ ಸೇವನೆ

ವಿಟಮಿನ್ ಸಪ್ಲಿಮೆಂಟ್ ಸೇವನೆ

ಸಂಶೋಧನೆಗಳ ಪ್ರಕಾರ ನೈಸರ್ಗಿಕ ರೀತಿಯಲ್ಲಿ ನೋವು ನಿವಾರಣೆ ಮಾಡಲು ವಿಟಮಿನ್ ಸಪ್ಲಿಮೆಂಟ್ ಗಳು ಅತೀ ಅಗತ್ಯ. ಬಿ1, ಡಿ3 ಮತ್ತು ಮೆಗ್ನಿಶಿಯಂನಂತಹ ಸಪ್ಲಿಮೆಂಟ್ ಗಳನ್ನು ಸೇವಿಸಿ.

ಹೊಟ್ಟೆಯ ಭಾಗವನ್ನು ಬಿಸಿಯಾಗಿಡಿ

ಹೊಟ್ಟೆಯ ಭಾಗವನ್ನು ಬಿಸಿಯಾಗಿಡಿ

ಮುಟ್ಟಿನ ವೇಳೆ ಉಂಟಾಗುವ ನೋವಿಗೆ ಇದು ತುಂಬಾ ಸುಲಭ ಪರಿಹಾರ. ಹೊಟ್ಟೆಯ ಮೇಲೆ ಮತ್ತು ಬೆನ್ನಿಗೆ ಬಿಸಿ ನೀರಿನ ಪ್ಯಾಕ್ ನ್ನು ಇಟ್ಟರೆ ಪರಿಹಾರ ಕಾಣಬಹುದು.

ಎಳೆಯುವ ವ್ಯಾಯಾಮ

ಎಳೆಯುವ ವ್ಯಾಯಾಮ

ಕೆಲವೊಂದು ಯೋಗಾಸನಗಳು ಮತ್ತು ಎಳೆಯುವಂತಹ ವ್ಯಾಯಾಮಗಳು ಒಳ್ಳೆಯದು ಮತ್ತು ಇದು ಆರೋಗ್ಯಕರ ರೀತಿಯಿಂದ ನೋವು ನಿವಾರಿಸುವುದು.

ಸಾರಭೂತ ತೈಲದಿಂದ ಮಸಾಜ್ ಮಾಡಿ

ಸಾರಭೂತ ತೈಲದಿಂದ ಮಸಾಜ್ ಮಾಡಿ

ಸುಗಂಧಭರಿತ ಮೂಲಿಕೆ ಋಷಿ ತೈಲ, ಲ್ಯಾವೆಂಡರ್ ತೈಲ, ಸೈಪ್ರೆಸ್ ಎಣ್ಣೆಯಂತಹ ಸಾರಭೂತ ತೈಲದಿಂದ ಮಸಾಜ್ ಮಾಡಿ. ಇದು ನೋವಿನಿಂದ ಶಮನ ನೀಡುವುದು.

ಸಾರಭೂತ ತೈಲದಿಂದ ಮಸಾಜ್ ಮಾಡಿ

ಸಾರಭೂತ ತೈಲದಿಂದ ಮಸಾಜ್ ಮಾಡಿ

ಮುಂದಿನ ಸಲ ಮುಟ್ಟಿನ ವೇಳೆ ನೋವು ಕಾಣಿಸಿಕೊಂಡರೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವ ಬದಲು ಯಾವುದೇ ಅಡ್ಡಪರಿಣಾಮಗಳು ಇಲ್ಲದ ಈ ವಿಧಾನ ಪಾಲಿಸುವುದು ಒಳ್ಳೆಯದು. ನೋವು ನಿವಾರಕ ತೆಗೆದುಕೊಳ್ಳಬೇಕೆಂದಿದ್ದರೆ ವೈದ್ಯರ ಸಲಹೆ ಪಡೆದು ಸೇವಿಸಿ. ಎಲ್ಲಾ ಸಮಸ್ಯೆಗಳಿಗೆ ಇಂದಿನ ವೈದ್ಯಕೀಯ ಲೋಕದಲ್ಲಿ ಪರಿಹಾರ ಇದ್ದೇ ಇರುತ್ತದೆ. ತಜ್ಞರ ಸಲಹೆ ಮೇರೆಗೆ ಸರಿಯಾದ ಮಾರ್ಗದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾ ಇದ್ದರೆ ಯಾವುದೇ ಸಮಸ್ಯೆ ಬಗ್ಗೆ ಚಿಂತೆ ಮಾಡಬೇಕೆಂದಿಲ್ಲ.

English summary

Using Painkillers During Periods, Is It Good Or Bad?

How many of our women folk pop painkillers in their mouths to alleviate pain during menstrual cramps? Well! Though this action may give them some temporary relief, in the long run its effects are not as good and encouraging as we think! A quick peek into the ill effects of painkillers taken during periods will certainly make one think twice before having them to reduce the pain.
X
Desktop Bottom Promotion