For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜು ಕರಗಿಸಲು ನಿತ್ಯ ಎರಡು ಲೋಟದಷ್ಟು ಈ ಜ್ಯೂಸ್ ಕುಡಿಯಿರಿ

By Arshad
|

ಸಪಾಟಾದ ಹೊಟ್ಟೆ ಪಡೆಯುವುದು ಅಷ್ಟು ಸುಲಭವಲ್ಲ. ಏಕೆಂದರೆ ದೇಹದಲ್ಲಿ ಕೊಬ್ಬು ಸಂಗ್ರಹ ಇಲ್ಲಿ ಮೊದಲು ಪ್ರಾರಂಭವಾದರೂ ಕರಗುವುದು ಅತಿ ಕೊನೆಯಲ್ಲಿ. ಆದರೆ ಇದನ್ನು ಕರಗಿಸುವುದು ಕಷ್ಟಕರವಾದರೂ ಅಸಾಧ್ಯವೇನಲ್ಲ. ಇದಕ್ಕೆ ಕೊಂಚ ಆಹಾರಪದ್ಧತಿಯಲ್ಲಿ ಬದಲಾವಣೆ ಹಾಗೂ ಕೊಂಚ ವ್ಯಾಯಾಮದ ಅಗತ್ಯವಿದೆ.

ಬರೀ ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಿ!

ಆದರೆ ಹೊಟ್ಟೆಯನ್ನು ಕರಗಿಸಲು ಒಂದು ಸುಲಭ ವಿಧಾನ ಲಭ್ಯವಿದೆ. ಇದರಿಂದ ಒಂದೇ ವಾರದಲ್ಲಿ ಸಾಕಷ್ಟು ಮಟ್ಟಿಗೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಾಧ್ಯವಿದೆ. ಇದು ಕೇವಲ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲ, ದೇಹದಿಂದ ಅನಗತ್ಯವಾದ ವಿಷಕಾರಿ ವಸ್ತುಗಳನ್ನು ಹೊರಹಾಕುವ ಮೂಲಕ ಒಟ್ಟಾರೆ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಬನ್ನಿ, ಈ ಪೇಯ ಯಾವುದು? ಹೇಗೆ ತಯಾರಿಸುವುದು ಎಂಬ ಕುತೂಹಲವನ್ನು ತಣಿಸಿಕೊಳ್ಳಲು ಮುಂದೆ ಓದಿ.....

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಚಿಕ್ಕಚಮಚ ಸಾವಯವ ವಿಧಾನದಿಂದ ಸಂಗ್ರಹಿಸಿದ ಅಪ್ಪಟ ಜೇನು

*ಒಂದು ಕಪ್ ತಾಜಾ ಕೆಂಪುಚಕ್ಕೋತ ಹಣ್ಣಿನ ರಸ (Grapefruit)

*ಎರಡು ಚಿಕ್ಕ ಚಮಚ ಸೇಬಿನ ಶಿರ್ಕಾ (apple cider vinegar)

ಸಪಾಟಾದ ಹೊಟ್ಟೆ ಪಡೆಯಲು ಹಾಗೂ ಕಲ್ಮಶಗಳನ್ನು ಹೊರಹಾಕಲು ಈ ಸುಲಭ ಸಾಮಾಗ್ರಿಗಳೇ ಸಾಕು... ಮುಂದೆ ಓದಿ..

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

#1

#1

ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರ್ ನಲ್ಲಿ ಹಾಕಿ ಎಲ್ಲವನ್ನೂ ಚೆನ್ನಾಗಿ ಗೊಟಾಯಿಸಿ ಮಿಶ್ರಣಗೊಳಿಸಿ.

#2

#2

ಈ ಪೇಯವನ್ನು ಪ್ರತಿದಿನದ ಮಧ್ಯಾಹ್ನದ ಊಟ ಮತ್ತು ರಾತ್ರಿಯೂಟದ ಮುನ್ನ ಒಂದೊಂದು ಕಪ್ ಸೇವಿಸಿ. ಈ ಪೇಯವನ್ನು ಕನಿಷ್ಠ ಒಂದು ವಾರದ ಕಾಲ ಅಥವಾ ಅಪೇಕ್ಷಿತ ಪರಿಣಾಮ ಬರುವವರೆಗೂ ಸೇವಿಸಬೇಕು.

#3

#3

ಈ ಪೇಯದಲ್ಲಿರುವ ಪೋಷಕಾಂಶಗಳನ್ನು ಕರಗಿಸಿಕೊಳ್ಳಲು ದೇಹ ಅನಿವಾರ್ಯವಾಗಿ ಕೊಬ್ಬನ್ನು ಬಳಸಿಕೊಳ್ಳಲೇಬೇಕಾಗಿರುವುದು ಇದರ ಗುಟ್ಟಾಗಿದೆ. ಇದರ ಸೇವನೆಯಿಂದ ಹೆಚ್ಚಿ

#4

#4

ಒಂದು ಕಪ್ ಚಕ್ಕೋತದ ರಸದಲ್ಲಿ ಕೇವಲ 53 ಕ್ಯಾಲೋರಿ ಹಾಗೂ ಎರಡು ಗ್ರಾಂ ಕರಗದ ನಾರು ಇದೆ. ಇದು ಹೊಟ್ಟೆ ಕರಗಿಸಲು ಅತ್ಯುತ್ತಮವಾದ ಆಯ್ಕೆಯಾಗಿದ್ದು ಕೆಲವೇ ದಿನಗಳಲ್ಲಿ ಸಪಾಟಾದ ಹೊಟ್ಟೆ ಪಡೆಯಲು ನೆರವಾಗುತ್ತದೆ.

#5

#5

ಈ ಪೇಯವನ್ನು ಕುಡಿಯುವುದರೊಂದಿಗೇ ದಿನಕ್ಕೆ ಅರ್ಧ ಚಕ್ಕೋತ ಹಣ್ಣಿನ ತೊಳೆಗಳನ್ನು ತಿನ್ನುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

#6

#6

ಸೇಬಿನ ಶಿರ್ಕಾ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಆಹಾರದಲ್ಲಿರುವ ಕೊಬ್ಬಿಗೆ ಕಾರಣವಾಗುವ ಕಣಗಳು ಕರುಳು ಮತ್ತು ಜೀರ್ಣಾಂಗಗಳಲ್ಲಿ ಹೆಚ್ಚು ಹೊತ್ತು ಉಳಿಯದಂತೆ ಮಾಡುವ ಮೂಲಕ ಕೊಬ್ಬು ಸಂಗ್ರಹಗೊಳ್ಳದೇ ಇರಲು ನೆರವಾಗುತ್ತದೆ.

#7

#7

ಕೊಬ್ಬಿಗೆ ಕಾರಣವಾಗುವ ಕಣಗಳು ಜೀರ್ಣಾಂಗಗಳಲ್ಲಿ ಹೆಚ್ಚು ಹೊತ್ತು ಇದ್ದಷ್ಟೂ ಹೆಚ್ಚು ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ ಹಾಗೂ ಈ ಮೂಲಕ ಅನಗತ್ಯವಾಗಿ ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ.

#8

#8

ಜೇನಿನಲ್ಲಿ ನೈಸರ್ಗಿಕ ಸಕ್ಕರೆ ಇದೆ ಹಾಗೂ ಇದರಲ್ಲಿನ ಹಲವು ಪೋಷಕಾಂಶಗಳು, ವಿಟಮಿನ್ನುಗಳು ಹಾಗೂ ಖನಿಜಗಳು ಆರೋಗ್ಯಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ

#9

#9

ಚಕ್ಕೋತ ಹಣ್ಣಿನ ರಸವನ್ನು ಕೊಬ್ಬು ಹೆಚ್ಚಿಸುವ ಆಹಾರಗಳ ಜೊತೆಗೆ ಕುಡಿಯುವ ಮೂಲಕ ಕೊಬ್ಬು ಸಂಗ್ರಹಗೊಳ್ಳುವ ಸಾಧ್ಯತೆಯನ್ನು 50%ರಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು ಎಂಬುದನ್ನು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.

#10

#10

ಅಷ್ಟೇ ಅಲ್ಲ, ಪ್ರತಿ ಊಟದ ಜೊತೆಗೆ ಚಕ್ಕೋತ ಹಣ್ಣಿನ ರಸವನ್ನು ಸೇವಿಸುವ ಮೂಲಕ ಒಟ್ಟಾರೆ ಕ್ಯಾಲೋರಿಗಳನ್ನು ಪಡೆಯುವುದನ್ನು ಕಡಿಮೆ ಮಾಡಬಹುದು.

English summary

Two Cups A Day Of This Juice For One Week Will Give You A Flatter Tummy

This amazing drink not only helps to get rid of the belly fat but also helps to get rid of the toxins from your body and improve your overall health. So, continue reading this article to know more on how to prepare one of the best drinks for flat stomach.
X
Desktop Bottom Promotion