ಹಳ್ಳಿಗಾಡಿನ ಔಷಧ: ಲಿವರ್‌‌ನ ಆರೋಗ್ಯಕ್ಕೆ ನೆಲ್ಲಿಕಾಯಿ ಜ್ಯೂಸ್‌

By: Deepu
Subscribe to Boldsky

ಮದ್ಯಪಾನದ ಅಭ್ಯಾಸವಿರುವವರಿಗೆ ಅತಿ ಹೆಚ್ಚು ಬಾಧೆಗೊಳಗಾಗುವ ಅಂಗವೆಂದರೆ ಯಕೃತ್ ಅಥವಾ ಲಿವರ್. ಅದರಲ್ಲೂ ನಿಯಮಿತವಾಗಿ ಮದ್ಯ ಸೇವಿಸುವವರ ಯಕೃತ್‌ನಲ್ಲಿ ಭಾರೀ ಪ್ರಮಾಣದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹಗೊಂಡಿರುತ್ತವೆ. ಪ್ರಾರಂಭದಲ್ಲಿ ಏನೋ ಗೊತ್ತಾಗದೇ ಮದ್ಯಪಾನಿ ತನ್ನ ಸಾಮರ್ಥ್ಯವನ್ನು ಹೊಗಳಿಕೊಳ್ಳುತ್ತಾ ಇನ್ನಷ್ಟು ಹೆಚ್ಚಿಸುತ್ತಾನೆ. ಒಣದ್ರಾಕ್ಷಿ ನೆನೆಸಿದ ನೀರು- ದೇಹದ ಲಿವರ್‌‌ನ ಆಯಸ್ಸು ನೂರು!

ಆದರೆ ಒಮ್ಮೆ ಇದರ ಸಾಮರ್ಥ್ಯ ಮೀರಿತೋ, ಆಗ ಯಕೃತ್ ಥಟ್ಟನೇ ಕುಸಿಯುತ್ತದೆ. ಆಗ ಪಶ್ಚಾತ್ತಾಪ ಪಡುವುದಕ್ಕಿಂತ ಯಾವುದೇ ವ್ಯಸನಗಳನ್ನು ಅನುಸರಿಸದಿರುವುದೇ ಉತ್ತಮ. ಧೂಮಪಾನ, ಮಾದಕ ಪದಾರ್ಥ ಸೇವನೆ ಮದ್ಯಪಾನ ಮೊದಲಾದವು ಯಾವತ್ತಿದ್ದರೂ ಸೆರಗಿನ ಕೆಂಡಗಳೇ. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಇವುಗಳು ನಮ್ಮ ಪ್ರಮುಖ ಅಂಗಗಳ ಮೇಲೇ ಧಾಳಿ ಮಾಡುವ ಕಾರಣ ನಮ್ಮ ಅಂಗಗಳನ್ನು ಆಗಾಗ ಶುದ್ಧೀಕರಿಸಿಕೊಳ್ಳುವ ಮೂಲಕ ಇನ್ನಷ್ಟು ಹೆಚ್ಚು ಘಾಸಿಗೊಳ್ಳದಂತೆ ತಡೆಯುವುದು ಅಗತ್ಯ. ಬನ್ನಿ, ಯಕೃತ್ ಅನ್ನು ಶುದ್ಧೀಕರಿಸಲು ಏನು ಮಾಡಬಹುದು ಎಂಬುದನ್ನೊ ನೋಡೋಣ....  

ಅವಶ್ಯವಿರುವ ಸಾಮಾಗ್ರಿಗಳು:

ಅವಶ್ಯವಿರುವ ಸಾಮಾಗ್ರಿಗಳು:

*ನೆಲ್ಲಿಕಾಯಿಯ ರಸ: ಮೂರು ದೊಡ್ಡ ಚಮಚ

*ಜೇನು: ಒಂದು ದೊಡ್ಡಚಮಚ ನೆಲ್ಲಿಕಾಯಿ ಜ್ಯೂಸ್ ನಲ್ಲಿದೆ ಅತ್ಯದ್ಭುತ ಗುಣಗಳು

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಯಕೃತ್ ನಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಿ ಶುದ್ಧೀಕರಿಸಲೂ ಸಮರ್ಥವಾಗಿದೆ.

ಜೇನು

ಜೇನು

ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳು ಯಕೃತ್ ನಲ್ಲಿರುವ ವಿಷವಸ್ತುಗಳನ್ನು ಹೊರಹಾಕಲು ನೆರವಾಗುವುದರ ಜೊತೆಗೇ ಯಕೃತ್‌ನ ಜೀವಕೋಶಗಳಿಗೆ ಅಗತ್ಯವಾದ ಪೋಷಣೆಯನ್ನು ನೀಡಿ ಮೊದಲಿನ ಆರೋಗ್ಯವನ್ನು ಪಡೆಯಲು ನೆರವಾಗುತ್ತದೆ. ಅಲ್ಲದೇ ಈ ಮೂಲಕ ಯಕೃತ್ ಅನ್ನು ಹಲವಾರು ತೊಂದರೆಗಳಿಗೆ ಒಳಗಾಗುವುದರಿಂದ ರಕ್ಷಿಸುತ್ತದೆ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಒಂದು ಲೋಟಕ್ಕೆ ಮೇಲಿನ ಎರಡೂ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ

*ಈ ಮಿಶ್ರಣವನ್ನು ಪ್ರತಿದಿನ ಬಳಿಗ್ಗೆ ಎದ್ದ ಬಳಿಕ ಪ್ರಥಮ ಆಹಾರವಾಗಿ ಕುಡಿಯಿರಿ. ಬಳಿಕ ಕನಿಷ್ಠ ಮುಕ್ಕಾಲು ಗಂಟೆ ಏನನ್ನೂ ಸೇವಿಸದಿರಿ. ಈ ವಿಧಾನವನ್ನು ಕನಿಷ್ಠ ಎರಡು ವಾರ ಅನುಸರಿಸಿ.

 
English summary

This Ancient Gooseberry Remedy Can Cleanse Your Liver

It is always wise to follow a healthy lifestyle and refrain from vices like smoking, drug use and alcohol consumption in excess, if you want to avoid disorders that can affect your vital organs. So, it is important to detoxify your liver from time to time, in order to prevent liver damage.
Subscribe Newsletter