Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಣದ್ರಾಕ್ಷಿ ನೆನೆಸಿದ ನೀರು- ದೇಹದ ಲಿವರ್‌ನ ಆಯಸ್ಸು ನೂರು!
ಒಣದ್ರಾಕ್ಷಿ ಎಂದರೆ ನಾವೆಲ್ಲರೂ ಸಿಹಿತಿಂಡಿಯ ಸೊಗಡು ಹೆಚ್ಚಿಸುವ ಪದಾರ್ಥವೆಂದೇ ಪರಿಗಣಿಸಿದ್ದೇವೆ. ಆದರೆ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರು ಮಾತ್ರ ಆರೋಗ್ಯಕ್ಕೆ ತುಂಬಾ ಉತ್ತಮ. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!
ಅದರಲ್ಲೂ ವಿಶೇಷವಾಗಿ ಯಕೃತ್ತಿನ ಅಥವಾ ಲಿವರ್‌ನ ಆರೋಗ್ಯ ಈ ನೀರಿನ ನಿಯಮಿತ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಯಕೃತ್‌ನ ಸ್ವಚ್ಛತೆಗೆ ಕೆಲವಾರು ವಿಧಾನಗಳಿವೆ. ಆದರೆ ಒಣದ್ರಾಕ್ಷಿ ನೆನೆಸಿದ ನೀರು ನೀಡುವಂತಹ ಪರಿಣಾಮವನ್ನು ಉಳಿದವು ನೀಡಲಾರವು. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!
ಈ ನೀರಿಗೆ ಒದಗಿರುವ ಔಷಧೀಯ ಪರಿಣಾಮಕ್ಕೆ ಒಣದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಕಾರಣ. ಈ ನೀರನ್ನು ಸೇವಿಸತೊಡಗಿದ ನಾಲ್ಕೇ ದಿನದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮಗೊಂಡಿರುವುದನ್ನು ಗಮನಿಸಬಹುದು. ಅಲ್ಲದೇ ದಿನದ ಚಟುವಟಿಕೆಗಳು ಹೆಚ್ಚು ಉಲ್ಲಾಸದಾಯಕವಾಗಿಯೂ ಇರುತ್ತದೆ. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....

ಅಗತ್ಯವಿರುವ ಸಾಮಾಗ್ರಿಗಳು
*ನೀರು ಎರಡು ಕಪ್
*ಒಣದ್ರಾಕ್ಷಿ ಒಂದಿಷ್ಟು (ಸುಮಾರು 8 ರಿಂದ 10ರಷ್ಟು ಸಾಕು)

ಒಣದ್ರಾಕ್ಷಿ ಹೀಗಿರಬೇಕು?
ಇವು ತುಂಬಾ ಹೊಳಪುಳ್ಳದ್ದಾಗಿರಬಾರದು. ಅತಿ ಪ್ರಖರ ಬಣ್ಣದ್ದೂ ಆಗಿರಬಾರದು. ಏಕೆಂದರೆ ಈ ಹೊಳಪು ಬರಲಿಕ್ಕೆ ಕೆಲವರು ಕೃತಕ ರಾಸಾಯನಿಕಗಳನ್ನು ಬಳಸಿರಬಹುದು. ಆದರೆ ಗಾಢ ಕಂಡು ಬಣ್ಣಕ್ಕಿದ್ದು ಹೊಳಪು ಇಲ್ಲದೇ ಸಾಕಷ್ಟು ಸಂಕುಚಿತವಾಗಿರುವ ಒಣದ್ರಾಕ್ಷಿ ಉತ್ತಮ. ಇವು ಅತಿ ಗಟ್ಟಿಯಾಗಿಯೂ ಇರಬಾರದು, ತೀರಾ ಮೃದುವಾಗಿಯೂ ಇರಬಾರದು. ಅಷ್ಟೇ ಅಲ್ಲ, ಇದರಲ್ಲಿ ಮಣ್ಣು, ಮರಳು, ಧೂಳು ಮೊದಲಾದವು ಇಲ್ಲವೆಂದೂ ಖಚಿತಪಡಿಸಿಕೊಳ್ಳಿ.

ತಯಾರಿಸುವ ವಿಧಾನ
ಮೊದಲಿಗೆ ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಬದಿಯಲ್ಲಿಡಿ

ತಯಾರಿಸುವ ವಿಧಾನ
ಒಂದು ಚಿಕ್ಕ ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಒಣದ್ರಾಕ್ಷಿಯನ್ನು ಹಾಕಿ ಉರಿ ಚಿಕ್ಕದಾಗಿಸಿ.

ಇಪ್ಪತ್ತು ನಿಮಿಷ ಕುದಿಸಿ....
ಈ ನೀರನ್ನು ಸುಮಾರು ಇಪ್ಪತ್ತು ನಿಮಿಷ ಕುದಿಯಲು ಬಿಡಿ. ಬಳಿಕ ಉರಿ ಆರಿಸಿ ಇಡಿಯ ರಾತ್ರಿ ಹಾಗೇ ಬಿಡಿ.

ಮರುದಿನ ಬೆಳಿಗ್ಗೆ...
ಮರುದಿನ ಬೆಳಿಗ್ಗೆ ಈ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಿ. ಈ ನೀರನ್ನು ಮತ್ತೊಮ್ಮೆ ಉಗುರುಬೆಚ್ಚಗಾಗುವವರೆಗೆ ಬಿಸಿಮಾಡಿ.

ಖಾಲಿ ಹೊಟ್ಟೆಯಲ್ಲಿ ಸೇವಿಸಿ
ಮಗೆ ಇಷ್ಟವಾಗುವಷ್ಟು ಬಿಸಿಯಾಗಿ ಅಥವಾ ಉಗುರುಬೆಚ್ಚನೆ ಇರುವಂತೆಯೇ ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಸ್ವಲ್ಪ ಹೊತ್ತು ಏನೂ ಸೇವಿಸಬೇಡಿ....
ಬಳಿಕ ಸುಮಾರು ಮೂವತ್ತರಿಂದ ಮೂವತ್ತೈದು ನಿಮಿಷಗಳ ಕಾಲ ಏನನ್ನೂ ಸೇವಿಸಬೇಡಿ. ಬಳಿಕ ನಿಮ್ಮ ನಿತ್ಯದ ಉಪಾಹಾರ ಸೇವಿಸಿ.

ಎರಡು ತಿಂಗಳ ಬಳಿಕ....
ಈ ವಿಧಾನವನ್ನು ಕೆಲವಾರು ದಿನಗಳಾದರೂ ಸತತವಾಗಿ ಮಾಡಬೇಕು. ಕನಿಷ್ಠ ನಾಲ್ಕು ದಿನಗಳಾದರೂ ಸರಿ. ಸುಮಾರು ಎರಡು ತಿಂಗಳ ಬಳಿಕ ನಿಮ್ಮ ಆರೋಗ್ಯದಲ್ಲಿ, ವಿಶೇಷವಾಗಿ ಯಕೃತ್‌ಗಳಲ್ಲಿ ಉತ್ತಮ ಪ್ರಗತಿಯಾಗಿರುವುದನ್ನು ಕಾಣಬಹುದು.

ಸೂಚನೆ:
*ಯಾವುದಕ್ಕೂ ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ
*ಸಾಧ್ಯವಾದಷ್ಟು ನೈಸರ್ಗಿಕ ವಿಧಾನದಲ್ಲಿ ಬೆಳೆದ, ರಾಸಾಯನಿಕಗಳು ಇಲ್ಲದ ದ್ರಾಕ್ಷಿಯನ್ನೇ ಕೊಳ್ಳಿ. ಒಂದು ವೇಳೆ ಸಾವಯವ ವಿಧಾನದಲ್ಲಿ ಬೆಳೆದಿದ್ದರೆ ಇನ್ನೂ ಉತ್ತಮ.



Click it and Unblock the Notifications
