Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಾಯಿ ದುರ್ವಾಸನೆಗೆ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ
ಕೆಲವರು ಎದುರು ನಿಂತು ಮಾತನಾಡಿದರೆ ಸಾಕು ಅವರ ಬಾಯಿಯಿಂದ ಬರುವಂತಹ ದುರ್ವಾಸನೆಯಿಂದ ಅಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಬಾಯಿಯ ದುರ್ವಾಸನೆ ತುಂಬಾ ಕೆಟ್ಟದಾಗಿರುತ್ತದೆ ಮತ್ತು ಅದು ನಮಗೆ ಮಾತ್ರವಲ್ಲದೆ ಇತರರಿಗೂ ತುಂಬಾ ಮುಜುಗರವನ್ನು ಉಂಟು ಮಾಡುತ್ತದೆ. ಬಾಯಿ ವಾಸನೆ ಇರುವ ವ್ಯಕ್ತಿ ಆತ್ಮವಿಶ್ವಾಸವನ್ನೇ ಕಳೆದುಕೊಂಡು ಎಲ್ಲರ ಮುಂದೆ ಬಂದು ನಿಲ್ಲಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬಾಯಿ ದುರ್ವಾಸನೆ ತಡೆಗೆ, ಮುನ್ನೆಚ್ಚರಿಕೆ ಕ್ರಮಗಳೇನು?
ಬಾಯಿ ವಾಸನೆಗೆ ಮುಖ್ಯ ಕಾರಣ ಹಲ್ಲಿನಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು. ಇದು ಬಾಯಿಯಲ್ಲಿ ದುರ್ವಾಸನೆಯನ್ನು ಉಂಟುಮಾಡುತ್ತದೆ. ಹಲ್ಲುಗಳೆಡೆಗೆ ಆಮ್ಲಜನಕದ ಪೂರೈಕೆಯು ಕಡಿಮೆಯಾದಾಗ ಬಾಯಿಯಲ್ಲಿ ಜೊಲ್ಲುರಸ ಉತ್ಪತ್ತಿಯು ಕಡಿಮೆಯಾಗಿ ಬಾಯಿ ಒಣಗಿ ಬ್ಯಾಕ್ಟೀರಿಯಾಗಳು ಕೆಲವೊಂದು ಹಾನಿಕಾರಕ ಅಂಶಗಳನ್ನು ಬಿಡುಗಡೆ ಮಾಡುವುದರಿಂದ ಬಾಯಿ ವಾಸನೆ ಬರುವುದು. ಬಾಯಿ ದುರ್ವಾಸನೆಗೆ ಕೆಲ ಅಚ್ಚರಿಯ ಕಾರಣಗಳು!
ಮೌಥ್ ವಾಶ್ ಮತ್ತು ಚೂಯಿಂಗ್ ಗಮ್‌ನಿಂದ ತಾತ್ಕಾಲಿಕವಾಗಿ ಬಾಯಿ ವಾಸನೆ ಕಡಿಮೆ ಮಾಡಬಹುದು. ಆದರೆ ಶಾಶ್ವತ ಪರಿಹಾರ ಬೇಕಿದ್ದರೆ ಕೆಲವೊಂದು ಮನೆಮದ್ದನ್ನು ಬಳಸುವುದು ತುಂಬಾ ಸೂಕ್ತ. ಇದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...

ದಾಲ್ಚಿನ್ನಿ
ಬಾಯಿಯಲ್ಲಿ ವಾಸನೆಯನ್ನು ಉಂಟುಮಾಡುವಂತಹ ಬ್ಯಾಕ್ಟೀರಿಯಾಗಳ ನಿವಾರಣೆ ಮಾಡಲು ದಾಲ್ಚಿನ್ನಿಯಲ್ಲಿರುವಂತಹ ಎಣ್ಣೆಯು ಸಹಕಾರಿ. ದಾಲ್ಚಿನ್ನಿ ಹುಡಿಯನ್ನು ನೀರಿನಲ್ಲಿ ಕುದಿಸಿ ಅದನ್ನು ಸೋಸಿಕೊಂಡು ತಣ್ಣಗೆ ಮಾಡಿ. ಈ ನೀರಿನಿಂದ ಬಾಯಿ ಮುಕ್ಕಳಿಸಿಕೊಂಡರೆ ವಾಸನೆ ದೂರವಾಗುವುದು.

ಮೆಂತೆ ಕಾಳು
ಒಂದೆರಡು ಚಮಚ ಮೆಂತೆ ಕಾಳನ್ನು ಚೆನ್ನಾಗಿ ಬೇಯಿಸಿ ಅದರ ನೀರನ್ನು ಸೋಸಿಕೊಳ್ಳಿ. ಈ ನೀರನ್ನು ದಿನದಲ್ಲಿ ಒಂದು ಸಲ ಚಹಾದಂತೆ ಕುಡಿಯಿರಿ. ಬಾಯಿ ವಾಸನೆ ಇರುವ ತನಕ ಇದನ್ನು ಮುಂದುವರಿಸಿ.

ಪುದೀನಾ ಎಲೆಗಳು
ಪುದೀನಾ ಎಲೆಗಳು ನೈಸರ್ಗಿಕವಾಗಿ ಬಾಯಿಯನ್ನು ತಾಜಾಗೊಳಿಸುವುದು. 2-3 ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಇದು ಬಾಯಿ ವಾಸನೆಯನ್ನು ಬೇಗನೆ ನಿವಾರಿಸುವುದು.

ಲವಂಗ
ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಗಾಧವಾಗಿದೆ. 1-2 ಲವಂಗ ತೆಗೆದುಕೊಂಡು ಅದನ್ನು ಸರಿಯಾಗಿ ಜಗಿಯಿರಿ. ಇದು ಬಾಯಿ ವಾಸನೆಯನ್ನು ಬೇಗನೆ ನಿವಾರಿಸುವುದು.

ನಿಂಬೆ ಹಣ್ಣು ಮತ್ತು ಸೋಡಾ
ನಿಂಬೆ ಹಣ್ಣಿನ ತುಂಡಿಗೆ ಸೋಡಾ ಹಾಕಿ ಅದರಿಂದ ನಾಲಗೆ ತಿಕ್ಕಿದರೆ ಬಾಯಿ ಶುಚಿಯಾಗುವುದು.

ಸೋಂಪು ಕಾಳುಗಳು
ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳನ್ನು ಹೊಂದಿರುವ ಸೋಂಪು ಕಾಳುಗಳು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಸ್ವಲ್ಪ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯಿರಿ. ಇದು ಜೊಲ್ಲುರಸವನ್ನು ಉತ್ಪತ್ತಿ ಮಾಡಿ ಬಾಯಿ ವಾಸನೆ ಕಡಿಮೆ ಮಾಡುವುದು.

ಅರಿಶಿಣ
ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುವವರು ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.



Click it and Unblock the Notifications
