Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಿ ದುರ್ವಾಸನೆಗೆ ಕೆಲ ಅಚ್ಚರಿಯ ಕಾರಣಗಳು!
ಬಾಯಿ ದುರ್ವಾಸನೆ ಸಮಸ್ಯೆ ನಮ್ಮ ಆತ್ಮ ವಿಶ್ವಾಸವನ್ನು ಕಮ್ಮಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಬಾಯಿ ದುರ್ವಾಸನೆ ಸಮಸ್ಯೆಯನ್ನು ಕಡೆಗಣಿಸುವಂತೆ ಇಲ್ಲ. ಬಾಯಿ ದುರ್ವಾಸನೆ ಬೀರಿದರೆ ಯಾರೂ ನಮ್ಮ ಹತ್ತಿರ ನಿಂತು ಮಾತನಾಡಲು ಇಷ್ಟಪಡುವುದಿಲ್ಲ. ದಂಪತಿಗಳ ನಡುವೆ ಅಸಮಧಾನಕ್ಕೆ ಬಾಯಿ ದುರ್ವಾಸನೆ ಕಾರಣವಾಗಬಹುದು.
ಯಾರಾದರೂ ಮಾತನಾಡುವಾಗ ಅವರ ಬಾಯಿಂದ ದುರ್ವಾಸನೆ ಹೊರಹೊಮ್ಮಿದರೆ ಅವರು ಸರಿಯಾಗಿ ಬಾಯಿ ಶುಚಿ ಮಾಡಿಲ್ಲವೆಂದೇ ಯೋಚಿಸುತ್ತೇವೆ. ಬಾಯಿ ದುರ್ವಾಸನೆ ಬೀರುತ್ತಿದ್ದರೆ ಅದಕ್ಕೆ ಬಾಯಿ ಶುಚಿತ್ವ ಮಾಡದಿರುವುದು ಮಾತ್ರ ಕಾರಣವಲ್ಲ, ಕೆಲವರಿಗೆ ದಿನದಲ್ಲಿ 2 ಎರಡು ಬಾರಿ ಹಲ್ಲುಜ್ಜಿದರೂ ಬಾಯಿ ದುರ್ವಾಸನೆ ಬೀರುತ್ತದೆ. ವಸಡಿನಲ್ಲಿ ಸಮಸ್ಯೆಯಿದ್ದರೆ, ಸೋಂಕಾಣುಗಳಿಂದಲೂ ಬಾಯಿ ದುರ್ವಾಸನೆ ಬೀರುವುದು. ಇವುಗಳಲ್ಲದೆ ಬಾಯಿ ದುರ್ವಾಸನೆಗೆ ನಿಮ್ಮಲ್ಲಿ ಅಚ್ಚರಿ ಮೂಡಿಸುವ ಕಾರಣಗಳು ನೋಡಿ ಇಂತಿವೆ:

ಬ್ರೇಕ್ ಫಾಸ್ಟ್ ಮಾಡದಿದ್ದರೆ
ಬ್ರೇಕ್ ಫಾಸ್ಟ್ ಮಾಡದಿದ್ದರೆ ಆರೊಗ್ಯಕ್ಕೆ ಒಳ್ಳೆಯದಲ್ಲ ಮಾತ್ರವಲ್ಲ, ಬಾಯಿ ದುರ್ವಾಸನೆ ಬೀರುವುದು. ಬೆಳಗಿನ ಉಪಹಾರ ಸಲೈವಾದ (ಎಂಜಲಿನ)ಉತ್ಪತ್ತಿಗೆ ಸಹಾಯ ಮಾಡಿ ಬಾಯಿ ದುರ್ವಾಸನೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಲಿವರ್ ಸಮಸ್ಯೆ
ಲಿವರ್(ಯಕೃತ್) ಸಮಸ್ಯೆಯಿದ್ದರೆ ಬಾಯಿ ಕೆಟ್ಟದಾಗಿ ದುರ್ವಾಸನೆ ಬೀರುವುದು. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದಾಗ ಬಾಯಿಯಲ್ಲಿ ಬ್ಯಾಕ್ಟೀರಿಯಾ ಹೆಚ್ಚು ಉತ್ಪತ್ತಿಯಾಗಿ ಬಾಯಿ ದುರ್ವಾಸನೆ ಬೀರುವುದು.

ಬಾಯಿ ಹುಣ್ಣು
ಬಾಯಿ ಹುಣ್ಣು ಉಂಟಾದಾಗ, ಬಾಯಿ ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡದಿದ್ದರೆ ಬಾಯಿ ಹೆಚ್ಚು ದುರ್ವಾಸನೆ ಬೀರುವುದು.

ವಸಡಿನಲ್ಲಿ ರಕ್ತ ಸೋರುವುದು
ವಸಡುಗಳು ಬಲಹೀನವಾಗಿ ರಕ್ತ ಸೋರಿದರೆ ಬಾಯಿ ದುರ್ವಾಸನೆ ಬೀರುವುದು.

ಗಂಟಲು ನೋವು
ಗಂಟಲು ನೋವು ಇದ್ದಾಗ ಕೆಲವೊಮ್ಮೆ ಬ್ಯಾಕ್ಟೀರಿಯಾಗಳು ಜೀವ ಕಣಗಳಿಗೆ ಹಾನಿ ಮಾಡಿದಾಗ ಬಾಯಿ ದುರ್ವಾಸನೆ ಬೀರುವುದು. ಈ ರೀತಿಯ ಬಾಯಿ ದುರ್ವಾಸನೆ ಗಂಟಲು ನೋವು ಕಡಿಮೆಯಾದಾಗ ದುರ್ವಾಸನೆಯೂ ಇಲ್ಲದಾಗುವುದು.

ಕಿಡ್ನಿ ವೈಫಲ್ಯ
ಮೀನು ಕೊಳೆತಂತೆ ಬಾಯಿ ದುರ್ವಾಸನೆ ಬೀರಿದರೆ ನಿಮ್ಮ ಕಿಡ್ನಿಗೆ ಹಾನಿಯಾಗಿದೆಯೆಂದು ಅರ್ಥ.

ಆಹಾರಗಳು
ಪ್ರೊಟೀನ್ ಅಧಿಕವಿರುವ ಆಹಾರಗಳನ್ನು ತಿಂದಾಗ ಅಮೈನೋ ಆಸಿಡ್ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ಚಟುವಟಿಕೆಯನ್ನು ಹೆಚ್ಚು ಬಾಯಿ ದುರ್ವಾಸನೆ ಬೀರುವಂತೆ ಮಾಡುತ್ತದೆ. ಆದ್ದರಿಂದ ಪ್ರೊಟೀನ್ ಇರುವ ಆಹಾರ ತಿಂದಾಗ ಮೌತ್ ವಾಶ್ ಬಳಸಲು ಮರೆಯಬೇಡಿ.

ಮದ್ಯಪಾನ
ಮದ್ಯಪಾನ ಚಟವಿರುವವರಿಗೆ ಸಲೈವಾ ಉತ್ಪತ್ತಿ ಕಡಿಮೆಯಾಗಿ ಬಾಯಿ ದುರ್ವಾಸನೆ ಬೀರುವುದು.

ಕಮುಚಿ ಮಲಗುವ ಅಭ್ಯಾಸ
ಕಮುಚಿ ಮಲಗಿದರೆ ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡುತ್ತೇವೆ. ಇದರಿಂದ ಬಾಯಿಯಲ್ಲಿರುವ ಸಲೈವಾ ಒಣಗಿ ಬಾಯಿ ದುರ್ವಾಸನೆ ಬೀರುವುದು.

ಔಷಧಿಗಳು
ಕೆಲವು ಔಷಧಿಗಳು ಬಾಯಿಯನ್ನು ಒಣಗುವಂತೆ ಮಾಡುತ್ತದೆ. ಉದಾಹರಣೆಗೆ ನೋವು ನಿವಾರಕ ಔಷಧಿಗಳು. ಬಾಯಿಯಲ್ಲಿ ಎಂಜಲಿನ ಉತ್ಪತ್ತಿ ಕಡಿಮೆಯಾದಾಗ ಬಾಯಿ ದುರ್ವಾಸನೆ ಬೀರುವುದು ಸಹಜ.



Click it and Unblock the Notifications
