ಬಾಯಿ ದುರ್ವಾಸನೆಯ ಸಮಸ್ಯೆಗೆ ಚಿಟಿಕೆಯಷ್ಟು 'ಅಡುಗೆ ಸೋಡಾ' ಸಾಕು!

By: Deepak
Subscribe to Boldsky

ಕೆಲವೊಮ್ಮೆ ನಮಗರಿವಿಲ್ಲದಂತೆಯೇ ನಮ್ಮ ಬಾಯಿಯಿಂದ ದುರ್ವಾಸನೆ ಸೂಸುತ್ತಿದ್ದು ಎದುರಿನವರಿಗೆ ವಾಕರಿಕೆ ಹಾಗೂ ನಮಗೆ ಬಹಳಷ್ಟು ಮುಜುಗರ ಉಂಟಾಗಬಹುದು. ಬಾಯಿಯ ದುರ್ಗಂಧಕ್ಕೆ ಹಲವಾರು ಕಾರಣಗಳಿವೆ.

ಊಟದ ನಡುವೆ ಅಥವಾ ಬಳಿಕ ಸೇವಿಸಿದ್ದ ಈರುಳ್ಳಿ, ಸರಿಯಾಗಿ ಹಲ್ಲುಜ್ಜಿಕೊಳ್ಳದೇ ಇದ್ದದ್ದು, ಊಟದ ಬಳಿಕ ಮುಕ್ಕಳಿಸದೇ ಇದ್ದದ್ದು (ಸಿದ್ಧ ಆಹಾರ ತಿನ್ನುವವರದ್ದೆಲ್ಲಾ ಇದೇ ಅವಸ್ಥೆ), ಹಲ್ಲುಗಳ ಸಂದುಗಳಲ್ಲಿ ಉಳಿದಿರುವ ಆಹಾರದ ತುಣುಕುಗಳು, ಹಲ್ಲುಗಳಲ್ಲಿ ಕುಳಿ, ನೀರು ಕುಡಿಯದೇ ನಿರ್ಜಲೀಕರಣವಾಗಿರುವುದು ಮೊದಲಾದವು ಇದರ ಸಾಮಾನ್ಯ ಕಾರಣಗಳು.

Bad Breath
 

ಆದರೆ ಕೆಲವೊಮ್ಮೆ ಸಮಸ್ಯೆಯು ಇದರ ಹೊರತಾಗಿ ಸಹ ನಿಲ್ಲುತ್ತದೆ. ಬಾಯಿಯ ದುರ್ವಾಸನೆಯು ಯಾವಾಗ ದಿನವಿಡೀ ಇರುತ್ತದೆಯೋ, ಆಗ ಇದು ತೀರಾ ಗಂಭೀರ ಸಮಸ್ಯೆಯಾಗುತ್ತದೆ. ಆಗ ನೀವು ಬಾಯಿ ಮುಕ್ಕಳಿಸುವಿಕೆ, ಬ್ರಷ್ ಮತ್ತು ಫ್ಲಾಸ್ಸಿಂಗ್ ಇತ್ಯಾದಿಗಳನ್ನು ಹೊರತುಪಡಿಸಿ ಒಂದು ಪರಿಹಾರವನ್ನು ಕಂಡು ಕೊಳ್ಳಬೇಕಾಗುತ್ತದೆ.  ಬಾಯಿಯ ದುರ್ವಾಸನೆ ತಡೆಯಲು 7 ಟಿಪ್ಸ್

ಅಸಲಿಗೆ ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆಯೇ ಇಲ್ಲವೇ ಎಂದು ತಿಳಿಯಲು ಒಂದು ಪರೀಕ್ಷೆ ನಡೆಸಿ. ಸಣ್ಣದಾದ ಬಿಳಿ ಬಟ್ಟೆಯ ತುಂಡನ್ನು ತೆಗೆದುಕೊಳ್ಳಿ. ಇದನ್ನು ನಾಲಿಗೆಯ ಮೇಲೆ ಇರಿಸಿ ತಿಕ್ಕಿ. ಒಂದು ವೇಳೆ ಈ ಬಟ್ಟೆ ಹಳದಿ ಬಣ್ಣಕ್ಕೆ ತಿರುಗಿದರೆ ನಿಮ್ಮ ಬಾಯಿಯಲ್ಲಿ ದುರ್ವಾಸನೆ ಇದೆ ಎಂದರ್ಥ. 

Bad Breath
 

ಜೊತೆಗೆ ಇದು ನಿಮ್ಮ ದೇಹದಲ್ಲಿ ಸಲ್ಫರ್ ಅಂಶ ಹೆಚ್ಚಾಗಿದೆ ಎಂದು ತಿಳಿಸುತ್ತದೆ. ಸಲ್ಫೈಡ್ ಉಸಿರಿನ ದುರ್ವಾಸನೆಗೆ ಕಾರಣವಾಗುವ ಅಂಶವಾಗಿರುತ್ತದೆ. ಈ ಅಂಕಣದಲ್ಲಿ ನಾವು ಉಸಿರಿನ ದುರ್ವಾಸನೆಯನ್ನು ತೊಲಗಿಸಲು ಇರುವ ಉತ್ತಮ ಸ್ವಾಭಾವಿಕ ಮಾರ್ಗಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಮುಂದೆ ಓದಿ ಉಸಿರಿನ ದುರ್ವಾಸನೆಯನ್ನು ನಿವಾರಿಸಿಕೊಳ್ಳಿ.  ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

#1 ನಾವು ಮಾತನಾಡುತ್ತಿರುವ ಪದಾರ್ಥ ಯಾವುದೆಂದರೆ ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ. ಇದು ಬಾಯಿಯ ದುರ್ವಾಸನೆಯನ್ನು ನಿವಾರಿಸಲು ಇರುವ ಒಂದು ಉತ್ತಮ ಪರಿಹಾರವಾಗಿದೆ.

baking soda

#2 ಇದು ಹಲ್ಲುಗಳ ಮೇಲೆ ಕುಳಿತಿರುವ ಆಸಿಡ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಉಸಿರನ್ನು ತಾಜಾ ಮಾಡುತ್ತದೆ.

#3 ಈ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳಲು ಬೇಕಿಂಗ್ ಸೋಡಾವನ್ನು ಎರಡು ಬಗೆಯಲ್ಲಿ ಬಳಸಬಹುದು.

#4 ಬೇಕಿಂಗ್ ಸೋಡಾವನ್ನು ಅರ್ಧ ಚಮಚ ತೆಗೆದುಕೊಂಡು ನೀರಿನಲ್ಲಿ ಬೆರೆಸಿ ಮತ್ತು ಅದನ್ನು ನಿಮ್ಮ ಬಾಯಿ ಮುಕ್ಕಳಿಸಲು ಬಳಸಿ.

#5 ಇನ್ನೊಂದು ವಿಧಾನದಲ್ಲಿ ನೀವು ನಿಮ್ಮ ಟೂತ್ ಬ್ರಶ್ ಅನ್ನು ಈ ನೀರಿನಲ್ಲಿ ಅದ್ದಿ, ಅದರಿಂದ ಸಹ ಬ್ರಶ್ ಮಾಡಬಹುದು.  

baking soda

#6 ಇದನ್ನು ನೀವು ನಿಯಮಿತವಾಗಿ ಮಾಡಿದಲ್ಲಿ, ಮುಂದಿನ ದಿನಗಳಲ್ಲಿ ಬಾಯಿಯ ದುರ್ವಾಸನೆಯಿಂದ ಮುಕ್ತರಾಗಬಹುದು. ಜೊತೆಗೆ ಇದು ದಂತ ಕುಳಿಯನ್ನು ಸಹ ತಪ್ಪಿಸುತ್ತದೆ.    ಬಾಯಿ ದುರ್ವಾಸನೆ ತಡೆಗೆ, ಸ್ಟೆಪ್ ಬೈ ಸ್ಟೆಪ್ ಟಿಪ್ಸ್

English summary

One Simple Ingredient To Get Rid Of Bad Breath Permanently

You all know that everyone wakes up with a bad breath in the morning. Did you ever think of the reason for this? This is because the bacteria keep multiplying in the mouth at night and there is no continuous flow of saliva to wash it away until morning. This problem can obviously be sorted when the teeth are brushed or flossed. Eating some foods like onions, garlic and heavily spiced food items can also cause bad breath.
Subscribe Newsletter