For Quick Alerts
ALLOW NOTIFICATIONS  
For Daily Alerts

ಬಾಯಿಯ ದುರ್ವಾಸನೆ ತಡೆಯಲು 7 ಟಿಪ್ಸ್

|

ಬಾಯಿ ಶುಚಿತ್ವ ನಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಹಲ್ಲು ಹಳದಿ ಬಣ್ಣದಲ್ಲಿ ಇರುವುದು, ನಾಲಗೆ ಬಿಳಿಯಾಗಿ ಕಾಣುವುದು, ಬಾಯಿ ದುರ್ವಾಸನೆ ಇವೆಲ್ಲಾ ನಮ್ಮಲ್ಲಿ ಮುಜುಗರವನ್ನು ತರುತ್ತದೆ. ನಾನಾ ಕಾರಣಗಳಿಂದ ಬಾಯಿ ದುರ್ವಾಸನೆ ಬೀರುತ್ತದೆ. ಹಲ್ಲು ಸರಿಯಾಗಿ ಉಜ್ಜದಿದ್ದರೆ, ನಾಲಗೆ ಶುಚಿ ಮಾಡದಿದ್ದರೆ, ಧೂಮಪಾನ, ತಂಬಾಕು ಇವುಗಳಿಂದ ಬಾಯಿ ವಾಸನೆ ಉಂಟಾಗುವುದು.

ಬಾಯಿ ಶುಚಿಯಾಗಿ ಇರಲು ಹಲ್ಲು ಬೆಳ್ಳಗೆ ಇರಬೇಕು ಆದರೆ ನಾಲಗೆ ಬೆಳ್ಳಗೆ ಇರಬಾರದು. ನಾಲಗೆ ಬೆಳ್ಳಗಿದ್ದರೆ ಬಾಯಿ ದುರ್ವಾಸನೆ ಬೀರುತ್ತದೆ. ಆದ್ದರಿಂದ ನಾಲಗೆಯ ಶುಚಿಗಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.]

1. ಟೂತ್ ಬ್ರೆಷ್

1. ಟೂತ್ ಬ್ರೆಷ್

ಟಂಗ್ ಕ್ಲೀನರ್ ಇರುವ ಟೂತ್ ಬ್ರೆಷ್ ಬಳಸುವುದು ಬಾಯಿ ಶುಚಿತ್ವಕ್ಕೆ ತುಂಬಾ ಒಳ್ಳೆಯದು. ಇದು ಹಲ್ಲು ಮತ್ತು ನಾಲಗೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೊರಹಾಕುತ್ತದೆ. ಟಂಗ್ ಕ್ಲೀನರ್ ಕೂಡ ಬಳಸಬಹುದು.

2. ಹಣ್ಣುಗಳು

2. ಹಣ್ಣುಗಳು

ಸ್ಟ್ರಾಬರಿ, ನಿಂಬೆ ಹಣ್ಣು ಸೇಬು, ಕಬ್ಬು ಇವೆಲ್ಲಾ ಹಲ್ಲು ಮತ್ತು ನಾಲಗೆಯನ್ನು ಶುಚಿಯಾಗಿಡುತ್ತದೆ.

3. ನಿಂಬೆ ಹಣ್ಣು ಮತ್ತು ಸೋಡಾ

3. ನಿಂಬೆ ಹಣ್ಣು ಮತ್ತು ಸೋಡಾ

ನಿಂಬೆ ಹಣ್ಣಿನ ತುಂಡಿಗೆ ಸೋಡಾ ಹಾಕಿ ಅದರಿಂದ ನಾಲಗೆ ತಿಕ್ಕಿದರೆ ಬಾಯಿ ಶುಚಿಯಾಗುವುದು.

4. ಬಾಯಿ ಮುಕ್ಕಳಿಸು

4. ಬಾಯಿ ಮುಕ್ಕಳಿಸು

ಏನಾದರೂ ತಿಂದ ನಂತರ ಬಾಯಿ ಮುಕ್ಕಳಿಸಿದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಉಳಿಯುವುದಿಲ್ಲ.

5. ಮೊಸರು

5. ಮೊಸರು

ಊಟದ ನಂತರ ಮೊಸರು ತಿನ್ನುವುದರಿಂದ ಬಾಯಿ ಶುಚಿಯಾಗಿರುತ್ತದೆ. ನಾಲಗೆ ಬೆಳ್ಳಗಾಗುವುದನ್ನು ತಡೆಯುತ್ತದೆ.

6. ಮೌತ್ ವಾಶ್

6. ಮೌತ್ ವಾಶ್

ಮೌತ್ ವಾಶ್ ಬಳಸಿದರೆ ಬಾಯಿ ತುಂಬಾ ಸಮಯದವರೆಗೆ ಶುಚಿಯಾಗಿರುತ್ತದೆ. ಇದು ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ನಿಲ್ಲದಂತೆ ನೋಡಿಕೊಳ್ಳುತ್ತದೆ.

 7. ಅರಿಶಿಣ

7. ಅರಿಶಿಣ

ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುವವರು ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.

English summary

Home Remedies To Clean White Tongue | Tips For Health | ನಾಲಗೆ ಶುಚಿ ಮಾಡಲು ಟಿಪ್ಸ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

You can clean your tongue with a toothbrush or also add a tongue cleaner. However, eating the right foods an drinking lots water can be helpful to maintain oral hygiene.
X
Desktop Bottom Promotion