ಹೊಟ್ಟೆ ನೋವು: ಸ್ವಯಂ ವೈದ್ಯರಾಗಲು ಹೋಗಬೇಡಿ!

By: Hemanth
Subscribe to Boldsky

ದೇಹಕ್ಕೆ ಬೇಕಾಗಿರುವಂತಹ ಶಕ್ತಿ ಒದಗಿಸುವ ಆಹಾರವನ್ನು ಜೀರ್ಣಗೊಳಿಸಿ ಅದರಲ್ಲಿರುವ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುವ ಕೆಲಸ ಮಾಡುವುದು ಹೊಟ್ಟೆಯಲ್ಲಿರುವಂತಹ ಜಠರ. ಇದರಿಂದ ಹೊಟ್ಟೆಗೆ ಕೂಡ ಇತರ ಅಂಗಾಂಗಗಳಂತೆ ಪ್ರಮುಖ ಪಾತ್ರವಿದೆ. ಹೊಟ್ಟೆಯಲ್ಲಿ ಕೆಲವು ಸಲ ನೋವು ಕಾಣಿಸಿಕೊಂಡರೆ ಇದು ಅಜೀರ್ಣ ಅಥವಾ ಆಹಾರದಲ್ಲಿನ ಸಮಸ್ಯೆಯಿಂದ ಎಂದು ಭಾವಿಸಿ ಕೆಲವೊಂದು ಮನೆಮದ್ದಗಳನ್ನು ಪ್ರಯೋಗಿಸುತ್ತೇವೆ. ಆದರೆ ಈ ಮನೆಮದ್ದು ಹೊಟ್ಟೆನೋವನ್ನು ಸ್ವಲ್ಪ ಸಮಯ ಕಡಿಮೆ ಮಾಡಬಹುದು.

ಹೊಟ್ಟೆನೋವು ಹಾಗೆ ಇದ್ದರೆ ಅದನ್ನು ಕಡೆಗಣಿಸದೆ, ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮನೆಮದ್ದಿನಿಂದಲೇ ಹೊಟ್ಟೆನೋವು ಕಡಿಮೆಯಾಗುತ್ತದೆ ಎಂದು ಕುಳಿತುಕೊಂಡರೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ- ಹೊಟ್ಟೆ ನೋವು, ಅಜೀರ್ಣಕ್ಕೆ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು

ಇದು ಪ್ರಾಣಾಪಾಯವನ್ನು ಕೂಡ ಉಂಟು ಮಾಡಬಹುದು. ಇದಕ್ಕಾಗಿ ಹೊಟ್ಟೆನೋವು ಕಾಣಿಸಿಕೊಂಡಾಗ ಕಡೆಗಣಿಸಬೇಕಾದ ಕೆಲವೊಂದು ತಪ್ಪುಗಳನ್ನು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮ್ಮ ಮುಂದಿಡಲಿದೆ....

ಸ್ವಯಂ ಚಿಕಿತ್ಸೆ

ಸ್ವಯಂ ಚಿಕಿತ್ಸೆ

ಹೊಟ್ಟೆ ನೋವಿಗೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬಗ್ಗೆ ಯಾವತ್ತೂ ಯೋಚಿಸಬೇಡಿ. ಮನೆಮದ್ದುಗಳು ತುಂಬಾ ಸುರಕ್ಷಿತ. ಆದರೆ ಹೊಟ್ಟೆನೋವಿಗೆ ನೀವು ಕಣ್ಣುಮುಚ್ಚಿ ಚಿಕಿತ್ಸೆ ಮಾಡಿಕೊಳ್ಳುತ್ತಾ ಇದ್ದೀರಿ. ಹೊಟ್ಟೆನೋವಿಗೆ ನಿಜವಾದ ಕಾರಣವೇನೆಂದು ತಿಳಿಯದೆ ಚಿಕಿತ್ಸೆ ಮಾಡಿಕೊಳ್ಳುವುದು ಅಪಾಯಕಾರಿ. ವೈದ್ಯರಲ್ಲಿ ಪರೀಕ್ಷೆ ಮಾಡಿಕೊಂಡು ಹೊಟ್ಟೆನೋವಿಗೆ ಸರಿಯಾದ ಕಾರಣ ತಿಳಿದುಕೊಂಡ ಬಳಿಕವಷ್ಟೇ ಚಿಕಿತ್ಸೆ ಮಾಡಿಕೊಳ್ಳಿ.

ವೈದ್ಯರಲ್ಲಿಗೆ ತಡವಾಗಿ ಹೋಗುವುದು

ವೈದ್ಯರಲ್ಲಿಗೆ ತಡವಾಗಿ ಹೋಗುವುದು

ಹೆಚ್ಚಿನ ಸಂದರ್ಭಗಳಲ್ಲಿ ಹೊಟ್ಟೆನೋವು ಮತ್ತು ತಲೆನೋವನ್ನು ಸಾಮಾನ್ಯ ವಿಭಾಗದ ಕಾಯಿಲೆಗಳೆಂದು ಪರಿಗಣಿಸಲಾಗಿದೆ. ಇದು ತನ್ನಷ್ಟಕ್ಕೆ ಗುಣವಾಗಬಹುದು ಎಂದು ನೀವು ಭಾವಿಸಿರಬಹುದು. ಆದರೆ ಚಿಕಿತ್ಸೆ ಫಲಕಾರಿಯಾಗಬೇಕಾದೆ ಹೊಟ್ಟೆನೋವಿಗೆ ಸೂಕ್ತ ಕಾರಣವನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.

ಇದನ್ನೂ ಓದಿ- ಯಮಯಾತನೆ ನೀಡುವ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರವೇನು?

 ಚಿಕಿತ್ಸೆಯನ್ನು ಸರಿಯಾಗಿ ಮಾಡದಿರುವುದು

ಚಿಕಿತ್ಸೆಯನ್ನು ಸರಿಯಾಗಿ ಮಾಡದಿರುವುದು

ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುವ ವೇಳೆ ಇದು ಸಂಭವಿಸುತ್ತದೆ. ಹೊಟ್ಟೆನೋವು ಇರುವಾಗ ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಹೊಟ್ಟೆನೋವು ಇರುವಾಗ ಅಂತಹ ತಪ್ಪನ್ನು ಕಡೆಗಣಿಸಬೇಕು. ಹೊಟ್ಟೆನೋವಿನಿಂದ ಸಂಪೂರ್ಣ ಗುಣಮುಖರಾದರೂ ಕೋರ್ಸ್ ಮುಂದುವರಿಸಿ.

ಸರಿಯಾಗಿ ತಿನ್ನದೇ ಇರುವುದು

ಸರಿಯಾಗಿ ತಿನ್ನದೇ ಇರುವುದು

ಆಹಾರ ತಿಂದರೆ ಹೊಟ್ಟೆನೋವು ಹೆಚ್ಚಾಗುತ್ತದೆ ಎನ್ನುವ ಭಾವನೆ ಕೆಲವರಲ್ಲಿದೆ. ಆದರೆ ಸರಿಯಾಗಿ ಆಹಾರ ಸೇವನೆ ಮಾಡದೆ ಇದ್ದರೆ ಅಸಿಡಿಟಿ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆಯುಬ್ಬರ ಮತ್ತು ಎದೆಯುರಿ ಕಾಣಿಸಿಕೊಳ್ಳುತ್ತದೆ. ಸುಲಭವಾಗಿ ಕರಗುವಂತಹ ಆಹಾರ ಸೇವಿಸಿ.

ಹೊಟ್ಟೆಗೆ ಭಾರವಾಗುವ ಆಹಾರ ಸೇವನೆ

ಹೊಟ್ಟೆಗೆ ಭಾರವಾಗುವ ಆಹಾರ ಸೇವನೆ

ಸೋಂಕಿನಿಂದಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದರೆ ಇದರ ವಿರುದ್ಧ ಹೋರಾಡಲು ಹೊಟ್ಟೆಗೆ ಸಮಯ ನೀಡಿ. ಜೀರ್ಣಕ್ರಿಯೆಗೆ ಕಷ್ಟವಾಗುವ ಆಹಾರ ಸೇವನೆ ಮಾಡಬೇಡಿ. ತುಂಬಾ ಖಾರ ಮತ್ತು ಎಣ್ಣೆಯಂಶವಿರುವ ಆಹಾರವನ್ನುಕಡೆಗಣಿಸಿ. ಇದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ.

ಹೊಟ್ಟೆಯ ಮೇಲೆ ಗಮನವಿರಲಿ

ಹೊಟ್ಟೆಯ ಮೇಲೆ ಗಮನವಿರಲಿ

ಹೊಟ್ಟೆನೋವು ಎನ್ನುವುದು ಕೇವಲ ಹೊಟ್ಟೆಗೆ ಸಂಬಂಧಿಸಿದ್ದು ಎಂದು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು. ಇದು ಬೇರೆ ಅಂಗಾಂಗಗಳ ಸಮಸ್ಯೆಯಿಂದಲೂ ಬರಬಹುದು. ಕಿಡ್ನಿಯಲ್ಲಿ ಕಲ್ಲು, ಎಂಡೋಮೆಟ್ರೋಸಿಸ್, ಹೆಪಟೊಮಗಾಲಿ, ಅಪೆಂಡಿಟೀಸ್, ಕರುಳಿನ ಅಂಗರಚನಾ ವಿರೂಪದಿಂದ ಹೊಟ್ಟೆನೋವು ಬರಬಹುದು. ಇದರಿಂದ ಹೊಟ್ಟೆನೋವನ್ನು ಸಾಮಾನ್ಯವೆಂದು ಭಾವಿಸಬೇಡಿ.

English summary

Mistakes You Need To Avoid When You Have Stomach Pain

Finding out the cause and treating it at the earliest is very important. The interesting thing is that some of your remedy measures can actually increase the intensity of the pain. Here, in this article, we will discuss some of the most dangerous mistakes that you need to avoid when you have stomach pain.
Subscribe Newsletter