'ರಾಗಿ' ಎಂಬ ಅದ್ಭುತ ಧಾನ್ಯದ ಆರೋಗ್ಯ ಲಾಭಗಳು ಹತ್ತಾರು..

Posted By: Lekhaka
Subscribe to Boldsky

ನಾವು ಬಳಸುವಂತಹ ದ್ವಿದಳ ಹಾಗೂ ಏಕದಳ ಧಾನ್ಯಗಳಲ್ಲಿ ಹಲವಾರು ರೀತಿಯ ಪೌಷ್ಠಿಕಾಂಶಗಳು ಇವೆ. ಅದರಲ್ಲೂ ಭಾರತದಲ್ಲಿ ಪ್ರತಿಯೊಂದು ಮನೆಯಲ್ಲಿ ಒಂದಲ್ಲ ಒಂದು ರೀತಿಯ ಧಾನ್ಯಗಳನ್ನು ಬಳಸಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಜೋಳ, ರಾಗಿ, ಗೋಧಿ ಮತ್ತು ಅಕ್ಕಿಯನ್ನು ಬಳಸಲಾಗುತ್ತದೆ. ಎಲ್ಲವೂ ತುಂಬಾ ಪೌಷ್ಠಿಕವಾಗಿರುವಂತದ್ದಾಗಿದೆ. ಅದರಲ್ಲೂ ರಾಗಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ. ಮಾಜಿ ಪ್ರಧಾನಿ ದೇವೇಗೌಡರು ತನ್ನ ಇಳಿ ವಯಸ್ಸಿನಲ್ಲೂ ತುಂಬಾ ಆರೋಗ್ಯಕರವಾಗಿದ್ದರೆ ಎಂದರೆ ಅದಕ್ಕೆ ಅವರು ಸೇವಿಸುವಂತಹ ರಾಗಿಯೇ ಕಾರಣವೆನ್ನಲಾಗಿದೆ.

ಅದರಲ್ಲೂ ರಾಗಿಯು ಮಕ್ಕಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ತುಂಬಾ ಸುಲಭವಾಗಿ ಕರಗುವ ಕಾರಣದಿಂದ ಇದು ಸಣ್ಣ ಮಕ್ಕಳಿಗೆ ಸರಿಯಾದ ಆಹಾರವೆಂದು ಪರಿಗಣಿಸಲಾಗಿದೆ. ರಾಗಿಯಲ್ಲಿರುವ ಪ್ರಮುಖ ಅಂಶವೆಂದರೆ ಇದರಲ್ಲಿ ಪಿಷ್ಠವು ತುಂಬಾ ಕಡಿಮೆಯಿದೆ. ರಾಗಿಯಲ್ಲಿ ನಾರಿನಾಂಶವಿರುವ ಕಾರ್ಬ್ರೋಹೈಡ್ರೇಟ್ಸ್‌ಗಳಿವೆ ಮತ್ತು ಆಹಾರದ ನಾರಿನಾಂಶಗಳನ್ನು ಹೊಂದಿದೆ. ರಾಗಿಯಲ್ಲಿರುವ ಆರೋಗ್ಯ ಲಾಭಗಳು ಯಾವುದೆಂದು ನೀವು ತಿಳಿದುಕೊಳ್ಳಿ....

ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ

ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ

ಅಕ್ಕಿ ಮತ್ತು ಗೋಧಿಗಳಲ್ಲಿರುವ ಸಕ್ಕರೆ ಅಂಶ ಅತಿ ಶೀಘ್ರದಲ್ಲಿ ರಕ್ತಕ್ಕೆ ಲಭ್ಯವಾಗುವುದರಿಂದ ಮತ್ತು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದರಿಂದ ಕ್ಲುಪ್ತಕಾಲದಲ್ಲಿ ಬಳಕೆಯಾಗದೇ ಇದ್ದರೆ ಇತರ ತೊಂದರೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಬದಲಿಗೆ ರಾಗಿಯ ಸೇವನೆಯಿಂದ ರಕ್ತಕ್ಕೆ ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುವುದರಿಂದ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಜೊತೆಗೇ ರಾಗಿಯಲ್ಲಿರುವ ಕರಗದ ನಾರು ಜೀರ್‍ಣಕ್ರಿಯೆ ಮತ್ತು ವಿಸರ್ಜನಾ ಕ್ರಿಯೆಯನ್ನು ಸುಲಭಗೊಳಿಸುತ್ತದೆ.

ರಕ್ತಹೀನತೆ ನಿವಾರಣೆ

ರಕ್ತಹೀನತೆ ನಿವಾರಣೆ

ರಾಗಿಯಲ್ಲಿರುವ ಕೆಲವೊಂದು ಅಂಶಗಳು ಕಬ್ಬಿನಾಂಶದ ಕೊರತೆ ನಿವಾರಿಸುವುದು. ಇದು ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಧಾನ್ಯವಾಗಿದೆ. ಮಹಿಳೆಯರಿಗೆ ಇದು ತುಂಬಾ ಉಪಯುಕ್ತ.

ರಕ್ತದೊತ್ತಡ ಕಡಿಮೆ ಮಾಡುವುದು

ರಕ್ತದೊತ್ತಡ ಕಡಿಮೆ ಮಾಡುವುದು

ನೀವು ಅಧಿಕ ರಕ್ತದೊತ್ತಡ ಅಥವಾ ಪರಿಧಮನಿಯ ರೋಗಗಳಿದ್ದರೆ ನಾರಿನಾಂಶವು ಅಧಿಕವಾಗಿರುವ ರಾಗಿಯು ತುಂಬಾ ಒಳ್ಳೆಯ ಆಯ್ಕೆ.

 ಮೂಳೆಯ ಆರೋಗ್ಯ ಸುಧಾರಣೆ

ಮೂಳೆಯ ಆರೋಗ್ಯ ಸುಧಾರಣೆ

ರಾಗಿಯಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕವಾಗಿದೆ. ನಿಯಮಿತವಾಗಿ ರಾಗಿ ಸೇವನೆ ಮಾಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಸ್ಥೂಲಕಾಯದಿಂದ ಹೊರಬರಲಿಚ್ಛಿಸುವವರಿಗೆ ರಾಗಿ ಉತ್ತಮವಾದ ಪರ್ಯಾಯ ಆಹಾರವಾಗಿದೆ. ಗೋಧಿ ಮತ್ತು ಅಕ್ಕಿಗಳೆರಡರಲ್ಲಿಯೂ ತೂಕವನ್ನು ಹೆಚ್ಚಿಸುವ ಪೋಷಕಾಂಶಗಳಿರುವುದರಿಂದ ಈ ಆಹಾರಗಳನ್ನು ಸೇವಿಸುತ್ತಿರುವಂತೆ ತೂಕ ಕಳೆದುಕೊಳ್ಳುವ ಗತಿ ಅತಿ ನಿಧಾನವಾಗುತ್ತದೆ. ಬದಲಿಗೆ ರಾಗಿಯಲ್ಲಿರುವ ಪೋಷಕಾಂಶಗಳು ನಿಧಾನವಾಗಿ ಶರೀರಕ್ಕೆ ಲಭ್ಯವಾಗುವುದರಿಂದ ಹೆಚ್ಚಿನ ಕೊಬ್ಬು ಖರ್ಚಾಗುತ್ತದೆ. ಜೊತೆಗೇ ಶರೀರದಲ್ಲಿ ಕ್ಯಾಲೋರಿಗಳು ನಿಧಾನವಾಗಿ ಲಭ್ಯವಾಗಿ ದಿನದ ಚಟುವಟಿಕೆ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಪ್ರೋಟೀನ್ ಅಧಿಕವಾಗಿರುವ ಧಾನ್ಯ

ಪ್ರೋಟೀನ್ ಅಧಿಕವಾಗಿರುವ ಧಾನ್ಯ

ರಾಗಿಯಲ್ಲಿ ಪ್ರೋಟೀನ್ ಅಧಿಕವಾಗಿದೆ. ರಾಗಿಯಲ್ಲಿ ಇರುವಂತಹ ಅಮಿನೋ ಆಮ್ಲವು ಸ್ನಾಯುಗಳಲ್ಲಿನ ಶಕ್ತಿಯನ್ನು ಹೆಚ್ಚಿಸುವುದು.

ವಯಸ್ಸಾಗುವ ಲಕ್ಷಣ ತಡೆಯುವುದು

ವಯಸ್ಸಾಗುವ ಲಕ್ಷಣ ತಡೆಯುವುದು

ರಾಗಿಯಲ್ಲಿ ಹಲವಾರು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳಿವೆ. ಇದು ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು.

ರಕ್ತದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವುದು

ರಕ್ತದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವುದು

ರಾಗಿಯಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಲೂ ನೆರವಾಗುತ್ತವೆ. ಯಕೃತ್ ನಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸಿ ಹೊರದಬ್ಬಲು ರಾಗಿ ಅತ್ಯುತ್ತಮವಾಗಿದೆ. ಜೊತೆಗೇ ಇನ್ನಷ್ಟು ಕೊಬ್ಬು ಬೆಳೆಯುವುದನ್ನು ತಡೆಗಟ್ಟುತ್ತದೆ. ಪರಿಣಾಮವಾಗಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ.

ದೇಹಕ್ಕೆ ಆರಾಮ ನೀಡುವುದು

ದೇಹಕ್ಕೆ ಆರಾಮ ನೀಡುವುದು

ರಾಗಿಯಿಂದ ನಿಮ್ಮ ದೇಹಕ್ಕೆ ಒಳ್ಳೆಯ ಆರಾಮ ಸಿಗುವುದು. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಹಿತಕಾರಿಯಾದ ಪೋಷಕಾಂಶಗಳು ಇವೆ. ಇದು ದೇಹವನ್ನು ಶಾಂತವಾಗಿಡುವುದು.

ಹಾಲುಣಿಸುವ ಮಹಿಳೆಯರಿಗೆ

ಹಾಲುಣಿಸುವ ಮಹಿಳೆಯರಿಗೆ

ಮಕ್ಕಳಿಗೆ ಹಾಲುಣಿಸುವಂತಹ ಮಹಿಳೆಯರು ಹಾಲು ಉತ್ಪಾದನೆ ಹೆಚ್ಚು ಮಾಡಲು ರಾಗಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ದೀರ್ಘ ಕಾಲದ ತನಕ ಮಗುವಿಗೆ ಹಾಲುಣಿಸಲು ನೆರವಾಗುವುದು.

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತಹೀನತೆಗೆ ಪ್ರಮುಖ ಕಾರಣ ಆಹಾರದಲ್ಲಿ ಕಬ್ಬಿಣದ ಕೊರತೆ. ಬಸಲೆ ಪಾಲಕ್ ಮೊದಲಾದ ಸೊಪ್ಪುಗಳಲ್ಲಿ ಈ ಅಂಶ ಉತ್ತಮವಾಗಿದೆ. ರಾಗಿಯಲ್ಲಿಯೂ ಉತ್ತಮ ಪ್ರಮಾಣದಲ್ಲಿ ಕಬ್ಬಿಣದ ಅಂಶವಿದೆ. ಈ ಸೊಪ್ಪುಗಳ ಸಾರಿನ ಜೊತೆಗೆ ರಾಗಿಮುದ್ದೆಯನ್ನು ಉಣ್ಣುವುದರಿಂದ ಎರಡೂ ಕಡೆಗಳಿಂದ ಉತ್ತಮ ಪ್ರಮಾಣದ ಕಬ್ಬಿಣ ಲಭ್ಯವಾಗಿ ರಕ್ತಹೀನತೆಯನ್ನು ತೊಲಗಿಸುತ್ತದೆ.

ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ

ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ

ದೇಹವನ್ನು ಬಾಧಿಸುವ ಅಪೌಷ್ಟಿಕತೆ, ವಯಸ್ಸಿಗೂ ಮುನ್ನವೇ ವೃದ್ದಾಪ್ಯ ಆವರಿಸುವುದು, ಅಂಗಾಂಶಗಳು ಘಾಸಿಗೊಂಡು ಹೊಸ ಅಂಗಾಂಶ ಬೆಳೆಯದೇ ದೇಹ ಸೊರಗುವುದು (ಮಧುಮೇಹದ ಒಂದು ಅಡ್ಡಪರಿಣಾಮ) ಮೊದಲಾದ ತೊಂದರೆಗಳಿಗೆ ರಾಗಿಮುದ್ದೆ ಉತ್ತಮವಾಗಿದೆ. ಹಸಿರು ರಾಗಿ (ರಾಗಿ ಹಸಿಯಿದ್ದಾಗಲೇ ಕೊಯ್ಲು ಮಾಡಿದ್ದುದು) ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ, ದುರ್ಬಲವಾಗಿದ್ದ ಹೃದಯ ಸಬಲಗೊಳ್ಳುತ್ತದೆ, ಯಕೃತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಅಸ್ತಮಾ ಮತ್ತು ಹಾಲೂಡಿಸುವ ತಾಯಂದಿರ ದೇಹದಲ್ಲಿ ಹೊಸ ಹಾಲು ಉತ್ಪಾದಿಸಲು ನೆರವಾಗುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ನಾರಿನಂಶ ಕಡಿಮೆ ಇರುವ ಯಾವುದೇ ಆಹಾರ ಮಲಬದ್ದತೆಗೆ ಕಾರಣವಾಗುತ್ತದೆ. ಆದರೆ ರಾಗಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವುದರಿಂದ ಮಲಬದ್ಧತೆಯ ತೊಂದರೆಯನ್ನು ಸುಲಭವಾಗಿ ನಿವಾರಿಸುತ್ತದೆ.

ರಾಗಿ ಮುದ್ದೆ ತಯಾರಿಸುವ ವಿಧಾನ

ರಾಗಿ ಮುದ್ದೆ ತಯಾರಿಸುವ ವಿಧಾನ

ರಾಗಿಯನ್ನು ಅತ್ಯಂತ ನುಣ್ಣಗೂ ಅಲ್ಲದೇ ರವೆಯೂ ಅಲ್ಲದ ಮಟ್ಟಿಗೆ ಹಿಟ್ಟು ಮಾಡಿಕೊಳ್ಳಬೇಕು. ಇದಕ್ಕೆ ಉಗುರುಬೆಚ್ಚನೆಯ ನೀರನ್ನು ಹಾಗಿ ಕೈಯಿಂದ ನವಿರಾಗಿ ಕಲಸುತ್ತಾ ಬಂದರೆ ಸಾಕು, ಕೆಲವೇ ನಿಮಿಷಗಳಲ್ಲಿ ಮುದ್ದೆ ಸಿದ್ಧ. ನಿಮಗೆ ಇಷ್ಟವಾದ ಹದಕ್ಕೆ ಕಲಸಿಕೊಂಡು ಸೊಪ್ಪಿನ ಸಾರು, ಟೊಮೇಟೊ ರಸಂ, ಸಾಂಬಾರು ಅಥವಾ ನಿಮಗಿಷ್ಟದ ಸಾರಿನೊಂದಿಗೆ ಮುದ್ದೆಯನ್ನು ಸೇವಿಸಬಹುದು. ಆದರೆ ಮುದ್ದೆಯನ್ನು ಇತರ ಪದಾರ್ಥಗಳಂತೆ ಕಚ್ಚಿ ತಿನ್ನಲು ಸಾಧ್ಯವಿಲ್ಲ.

ಚಿಕ್ಕ ಚಿಕ್ಕ ತುತ್ತನ್ನು ಸಾರಿನೊಂದಿಗೆ ಕಲಸಿ ಬಾಯಿಯಲಿಟ್ಟು ನೇರವಾಗಿ ನುಂಗಿಬಿಡಬೇಕು. ಮೊದಮೊದಲು ಸ್ವಲ್ಪ ವಿಚಿತ್ರವಾದರೂ ಕ್ರಮೇಣ ಈ ಪರಿ ಇಷ್ಟವಾಗತೊಡಗುತ್ತದೆ.

English summary

Health Benefits Of Ragi Or Millet

Ragi or millet is a very popular Indian food grain. There are several health benefits if ragi that we do not know about. Although ragi or millet is an Indian food grain, it is not used very extensively in our kitchens. We prefer to stick to other whole grains like rice and wheat. However, the health benefits of ragi are much more as compared to the other common food grains consumed in India. One of the main health benefits of ragi is that, it contains very little starch. Ragi is a fibrous carbohydrate and gives you loads of dietary fibres. Here are some of the health benefits of ragi that you must know about.
Subscribe Newsletter