ಇಂತಹ ಹಣ್ಣುಗಳ ಸಿಪ್ಪೆ ಬಿಸಾಡಿದರೆ, ನಿಮ್ಮ ಆರೋಗ್ಯಕ್ಕೇ ನಷ್ಟ!

By: Hemanth
Subscribe to Boldsky

ಹಣ್ಣುಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯ ವರ್ಧಕ ಆಹಾರವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಹಣ್ಣುಗಳನ್ನು ತಿನ್ನಬಹುದು. ಹಣ್ಣುಗಳಲ್ಲಿ ಇರುವಂತಹ ವಿಟಮಿನ್, ಖನಿಜಾಂಶಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಆದರೆ ಹೆಚ್ಚಿನ ಹಣ್ಣುಗಳನ್ನು ಬಳಸುವ ನಾವು ಅದರ ಸಿಪ್ಪೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಹಣ್ಣು ತಿಂದ ಬಳಿಕ ಸಿಪ್ಪೆ ಯಾಕೆ ಎಂದು ಭಾವಿಸಿ ಅದನ್ನು ಕಸದ ಬುಟ್ಟಿಗೆ ಬಿಸಾಡುತ್ತೇವೆ. ಇಲ್ಲಿ ಸಿಪ್ಪೆಯಿಂದ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದೆ. ಹಣ್ಣುಗಳ ಸಿಪ್ಪೆಯಿಂದ ದೇಹಕ್ಕೆ ಯಾವ್ಯಾವ ಲಾಭಗಳು ಆಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

ಮಧುಮೇಹಿಗಳಿಗೆ ಯಾವ ಹಣ್ಣುಗಳು ಸೂಕ್ತ? ಅದೂ ಎಷ್ಟು ಪ್ರಮಾಣದಲ್ಲಿ?

ಸೂಚನೆ-

ಹಣ್ಣುಗಳು ಹಾಗೂ ತರಕಾರಿಗಳನ್ನು ಆರಿಸುವಾಗ ಅದರ ಸಿಪ್ಪೆಯ ಮೇಲೆ ತೆಳುವಾದ ಕೀಟನಾಶಕದ ಪದರ ಇದೆಯೇ ಎಂದು ನೋಡಿಕೊಳ್ಳಿ. ಒಂದು ವೇಳೆ ತೆಳುವಾಗಿ ಪೌಡರ್ ಅಂಟಿಸಿದಂತೆ ಪದರವೇನಾದರೂ ಇದ್ದರೆ ಈ ಸಿಪ್ಪೆಗಳನ್ನು ಬಳಸಬೇಡಿ. (ಸಾಮಾನ್ಯವಾಗಿ ಹಣ್ಣುಗಳನ್ನು ಕೊಳ್ಳುವಾಗಲೇ ಇದನ್ನು ಗಮನಿಸಿ ಕೊಳ್ಳದೇ ಇರುವುದು ಮೇಲು). ಈ ಕೀಟನಾಶಕ ಸಿಪ್ಪೆಯ ಆಳಕ್ಕೆ ಇಳಿದಿರುವುದರಿಂದ ಇವುಗಳ ಬಳಕೆ ಒಳ್ಳೆಯದಲ್ಲ.....

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆ

ದಾಳಿಂಬೆಯ ಸಣ್ಣ ಸಣ್ಣ ಬೀಜಗಳು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿರುವಂತೆ ಅದರ ದಪ್ಪದ ಸಿಪ್ಪೆಯಲ್ಲಿ ಕೂಡ ತುಂಬಾ ಆರೋಗ್ಯ ಗುಣಗಳು ಇವೆ. ಇದು ಆರೋಗ್ಯ ಹಾಗೂ ತ್ವಚೆಗೆ ತುಂಬಾ ಪರಿಣಾಮಕಾರಿಯಾಗಲಿದೆ. ದಾಳಿಂಬೆ ಸಿಪ್ಪೆಯು ಮೊಡವೆ, ಬೊಕ್ಕೆ, ಕೂದಲು ಉದುರುವುದು ಮತ್ತು ತಲೆಹೊಟ್ಟನ್ನು ನಿವಾರಣೆ ಮಾಡುವುದು. ದಾಳಿಂಬೆ ಸಿಪ್ಪೆಯಲ್ಲಿರುವ ಇರುವ ಲಾಭಗಳೆಂದರೆ ಹೃದಯದ ಕಾಯಿಲೆ, ಗಂಟಲು ನೋವು, ಹಲ್ಲಿನ ಸ್ವಚ್ಛತೆ ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡುವುದು.

ಕಲ್ಲಂಗಡಿ ಸಿಪ್ಪೆ

ಕಲ್ಲಂಗಡಿ ಸಿಪ್ಪೆ

ಕಲ್ಲಂಗಡಿ ಸಿಪ್ಪೆಯ ಬಿಳಿ ಬಾಗದಲ್ಲಿ ಇರುವಂತಹ ಹಲವಾರು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ಕಡಿಮೆ ಮಾಡಲು ಬಯಸುವವರಿಗೆ ಈ ಭಾಗವು ತುಂಬಾ ನೆರವಾಗುವುದು. ಕಲ್ಲಂಗಡಿ ಸಿಪ್ಪೆಯನ್ನು ತ್ವಚೆಗೆ ಉಜ್ಜಿದಾಗ ಅದರಲ್ಲಿರುವ ಕಲ್ಮಶಗಳು ಹೊರಬರುವುದು. ತ್ವಚೆಯಲ್ಲಿರುವ ಫ್ರೀ ರ್ಯಾಡಿಕಲ್ ಅನ್ನು ಇದು ತಟಸ್ಥಗೊಳಿಸುವುದು. ಇದರಿಂದ ತ್ವಚೆಯ ಹಾನಿಯನ್ನು ತಡೆಯಬಹುದು.

ಕಲ್ಲಂಗಡಿ ಜ್ಯೂಸ್: ಬೇಸಿಗೆಗೆ ದೇವರು ಕೊಟ್ಟಿರುವ ವರ!!

ಲಿಂಬೆ ಸಿಪ್ಪೆ

ಲಿಂಬೆ ಸಿಪ್ಪೆ

ಸಂಧಿವಾತ ಅಥವಾ ಮೂಳೆಸಂದುಗಳಲ್ಲಿ ನೋವಿದ್ದರೆ ಈ ವಿಧಾನವನ್ನು ಪ್ರಯತ್ನಿಸಿ: ಒಂದು ಲಿಂಬೆಯಹಣ್ಣಿನ ರಸ ಹಿಂಡಿದ ಬಳಿಕ ಸಿಪ್ಪೆಯನ್ನು ಮಾತ್ರ ಸುಲಿದುಕೊಳ್ಳಿ. ಒಳಗಿನ ತೊಳೆಗಳನ್ನೆಲ್ಲಾ ನಿವಾರಿಸಿ ಕೇವಲ ಹೊರಪದರವನ್ನು ಮಾತ್ರ ಸಂಗ್ರಹಿಸಿ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಹಣ್ಣಾದ ಲಿಂಬೆಯ ಸಿಪ್ಪೆಯ ಹಳದಿ ಭಾಗವನ್ನು ಮಾತ್ರ ಸಂಗ್ರಹಿಸಿ ಒಳಗಣ ಬಿಳಿ ಭಾಗವನ್ನು ನಿವಾರಿಸಬೇಕು. ಈ ಸಿಪ್ಪೆಯನ್ನು ಚಿಕ್ಕದಾಗಿ ಕೊಚ್ಚಿ ಒಂದು ದಪ್ಪ ಬ್ಯಾಂಡೇಜ್ ಬಟ್ಟೆಯಲ್ಲಿ ಸುತ್ತಿಕೊಂಡು ನೋವಿರುವ ಭಾಗಕ್ಕೆ ತಗಲುವಂತೆ ಕಟ್ಟಿಕೊಳ್ಳಿ. ನಡೆದಾಡುವಾಗ ಈ ಗಂಟು ಜಾರಿ ಹೋಗದಂತಿರಬೇಕು. ಸುಮಾರು ಎರಡರಿಂದ ಮೂರು ಗಂಟೆ ಹಾಗೇ ಬಿಟ್ಟು ಬಳಿಕ ನಿವಾರಿಸಿ.

ಬಾಳೆಹಣ್ಣೆನ ಸಿಪ್ಪೆ

ಬಾಳೆಹಣ್ಣೆನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲಿಗೆ ಉಜ್ಜುವುದರಿಂದ ಹಲ್ಲು ಬಿಳಿಯಾಗುವುದು. ಸುಟ್ಟ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆ ಇಡುವುದರಿಂದ ನೋವು ಶಮನವಾಗುವುದು. ಒಡೆದ ಪಾದಗಳಿಗೆ ಬಾಳೆಹಣ್ಣಿನ ಸಿಪ್ಪೆ ಉಜ್ಜಿಕೊಂಡರೆ ಒಂದು ವಾರದಲ್ಲಿ ಒಳ್ಳೆಯ ಫಲಿತಾಂಶ ಸಿಗುವುದು.

ನಿಮಗೆ ಗೊತ್ತಾ? ಬಾಳೆಹಣ್ಣಿನ ಸಿಪ್ಪೆಯಿಂದ ಮೊಡವೆ ನಿಯಂತ್ರಿಸಬಹುದು!

ಪಪ್ಪಾಯಿ ಹಣ್ಣಿನ ಸಿಪ್ಪೆ

ಪಪ್ಪಾಯಿ ಹಣ್ಣಿನ ಸಿಪ್ಪೆ

ತಿನ್ನಲು ಅತ್ಯಂತ ಕಹಿಯಾಗಿರುವ ಪೊಪ್ಪಾಯಿ ಸಿಪ್ಪೆಯಲ್ಲಿ ನಮ್ಮ ಕರುಳುಗಳನ್ನು ಒಳಗಿನಿಂದ ಸ್ವಚ್ಛಗೊಳಿಸುವ ಕೆಲವು ರಾಸಾಯನಿಕಗಳಿವೆ. ಒಂದು ವೇಳೆ ಅಜೀರ್ಣ, ಮಲಬದ್ಧತೆ ಮೊದಲಾದ ತೊಂದರೆಗಳು ಎದುರಾದರೆ ಪಪ್ಪಾಯಿಯ ಸಿಪ್ಪೆಯನ್ನು ನುಣ್ಣಗೆ ಅರೆದು ಮಜ್ಜಿಗೆಯೊಂದಿಗೆ ಬೆರೆಸಿ ಒಂದು ಲೋಟ ಕುಡಿದರೆ ಮರುದಿನ ಹೊಟ್ಟೆ ಶುದ್ಧೀಕರಣವಾಗುತ್ತದೆ.

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಇದು ಮಲಬದ್ದತೆಯಾಗದಂತೆ ತಡೆಯುವ ಶಕ್ತಿ ಹೊಂದಿದೆ. ಅಲ್ಲದೇ ಈ ಸಿಪ್ಪೆಯನ್ನು ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೆಲವು ಬಗೆಯ ಕ್ಯಾನ್ಸರ್ ಗಳನ್ನೂ ತಡೆಯಲು ಸಾಧ್ಯವಾಗುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಸೇಬುಗಳ ಸಿಪ್ಪೆಗಳ ಮೇಲೆ ತೆಳುವಾದ ಮೇಣದ ಲೇಪನವಿರುವ ಕಾರಣ ಇದನ್ನು ಕೊಂಚ ಬಿಸಿನೀರಿನಲ್ಲಿ ಉಪ್ಪು ಬೆರೆಸಿ ಇದರಲ್ಲಿ ತೊಳೆದುಕೊಂಡ ಬಳಿಕವೇ ಸೇವಿಸಬೇಕು

English summary

Fruit peels that have amazing health benefits!

Fruits are a storehouse of nutrients that render myriad health and beauty benefits. However like the fruit, the peel too has lots to offer. Here are some surprising health benefits of fruit peels.
Subscribe Newsletter