For Quick Alerts
ALLOW NOTIFICATIONS  
For Daily Alerts

ಮಳೆಗಾಲ ಶುರುವಾಗಿ ಬಿಟ್ಟಿದೆ, ಆರೋಗ್ಯದ ಬಗ್ಗೆ ಇರಲಿ ಕಾಳಜಿ....

By Arshad
|

ಬೇಸಿಗೆಯ ಬಿಸಿಯಿಂದ ಬಸವಳಿದಿದ್ದ ಇಳೆಯನ್ನು ತಂಪುಗೊಳಿಸಲು ಮಳೆಗಾಲ ಆರಂಭವಾಗಿದೆ. ಇದರೊಂದಿಗೇ ಗಾಳಿಯಲ್ಲಿ ತೇಲಾಡುವ ನೂರಾರು ಹೊಸ ವೈರಸ್ಸು, ಹೊಸ ಬ್ಯಾಕ್ಟೀರಿಯಾಗಳು (ಹೊಸ-ಏಕೆಂದರೆ ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಇರದಿದ್ದ) ಅನಿವಾರ್ಯವಾಗಿ ಶೀತ, ನೆಗಡಿ ಮೊದಲಾದವನ್ನು ತರುತ್ತವೆ. ಶೀತವಾಗಲು ಹೊಸ ವೈರಸ್ಸೇ ಬೇಕು.

ಏಕೆಂದರೆ ಒಂದು ವೈರಸ್ಸು ನಮ್ಮ ಜೀವಮಾನದಲ್ಲಿ ಎಂದಾದರೊಮ್ಮೆ ಹಿಂದೆ ಬಂದಿದ್ದರೆ ಇದನ್ನು ಸದೆಬಡಿಯಲು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಈಗಾಗಲೇ ಶಕ್ತಿಯನ್ನು ಪಡೆದುಬಿಟ್ಟಿರುತ್ತದೆ. ಆದ್ದರಿಂದ ಪ್ರತಿಬಾರಿ ಶೀತ ನೆಗಡಿಯಾದಾಗಲೂ ಇದಕ್ಕೆ ಪ್ರತಿರೋಧ ಬೆಳೆಸಿಕೊಳ್ಳಲು ನಮ್ಮ ದೇಹಕ್ಕೆ ಒಂದು ವಾರ ಬೇಕು.

ಮಳೆಗಾಲದಲ್ಲಿ ತಿನ್ನುವ ಮುನ್ನ ಗಮನಿಸಬೇಕಾದ ಅಂಶಗಳು

ಅದಕ್ಕೆಂದೇ ನಮ್ಮ ಜಾಣ ವೈದ್ಯರು 'ಶೀತಕ್ಕೆ ಔಷಧಿ ತೆಗೆದುಕೊಂಡರೆ ಒಂದೇ ವಾರ ಸಾಕು, ಇಲ್ಲದಿದ್ದರೆ ಏಳು ದಿನ ಬೇಕು ನೋಡಿ' ಎಂದು ವಿನೋದವಾಡುತ್ತಾರೆ. ಆದರೆ ಸರಿಯಾದ ಆರೈಕೆ ಇಲ್ಲದೇ ಇದ್ದರೆ ವೈರಸ್ಸುಗಳ ಸೋಂಕು, ಜಠರ ಮತ್ತು ಕರುಳುಗಳ ಉರಿಯೂತ, ಹಳದಿರೋಗ, ಶ್ವಾಸನಾಳಗಳ ಸೋಂಕು, ನ್ಯುಮೋನಿಯಾ ಜ್ವರ, ಕೆಲವೊಮ್ಮೆ ಮಲೇರಿಯಾ, ಡೆಂಘಿಗಳಂತಹ ಮಾರಕ ರೋಗಗಳೂ ಆವರಿಸಬಹುದು.

ಆದ್ದರಿಂದ ಕೀಟಾಣುಗಳ ಧಾಳಿಗೆ ಒಳಗಾಗಿ ರೋಗವನ್ನು ಆಹ್ವಾನಿಸುವ ಬದಲು ಇದರಿಂದ ತಪ್ಪಿಸಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಜಾಣರಾಗಲು ಬೋಲ್ಡ್ ಸ್ಕೈ ತಂಡ ಇಂದು ಕೆಲವಾರು ಸಲಹೆಗಳನ್ನು ನೀಡುತ್ತಿದ್ದು ಇವೆಲ್ಲವೂ ತಜ್ಞರು ತಮ್ಮ ಅನುಭವದಿಂದ ಕಂಡುಕೊಂಡದ್ದಾಗಿವೆ...

ಸಲಹೆ #1

ಸಲಹೆ #1

ಮಳೆಗಾಲದೊಂದಿಗೆ ಆಗಮಿಸುವ ಅತಿ ಸಾಮಾನ್ಯ ಕಾಯಿಲೆಯಂದರೆ ಶೀತ. ಇದನ್ನು ತಪ್ಪಿಸಿಕೊಳ್ಳಬೇಕೆಂದರೆ ಮಳೆಯಲ್ಲಿ ನೆನೆಯುವುದನ್ನು ಆದಷ್ಟೂ ತಪ್ಪಿಸಿಕೊಳ್ಳಬೇಕು. ಅನಿವಾರ್ಯವಾಗಿ ನೆನೆಯಲೇಬೇಕಾದ ಸಂದರ್ಭ ಬಂದರೆ ಮನೆಗೆ ಬಂದ ತಕ್ಷಣ ದಪ್ಪ ಟವೆಲ್ಲಿನಿಂದ ಒರೆಸಿಕೊಂಡು ದೇಹವನ್ನು ಪೂರ್ಣವಾಗಿ ಒಣಗಿಸಿಕೊಳ್ಳಬೇಕು.

ಸಲಹೆ#2

ಸಲಹೆ#2

ಒಂದು ವೇಳೆ ಜ್ವರ, ಶೀತ, ಕೆಮ್ಮು ಮೊದಲಾದವು ಆವರಿಸುತ್ತಿದೆ ಎಂದು ಅನ್ನಿಸಿದರೆ ಒಂದು ಕ್ಷಣವೂ ತಡಮಾಡದೇ ವೈದ್ಯರ ಸಲಹೆ ಪಡೆಯಬೇಕು. ಏಕೆಂದರೆ ಈ ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ಸೂಕ್ತ ಔಷಧಿಗಳ ಮೂಲಕ ಉಲ್ಬಣಾವಸ್ಥೆ ತಲುಪದಂತೆ ನೋಡಿಕೊಳ್ಳಬಹುದು.

ಸಲಹೆ#3

ಸಲಹೆ#3

ಒಂದು ವೇಳೆ ಶೀತವಾಗಿಯೇ ಬಿಟ್ಟಿತು ಅಂದರೆ ಇದಕ್ಕೆ ಬಿಸಿ ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದಕ್ಕಿಂತ ಉತ್ತಮ ಪರಿಹಾರ ಇನ್ನೊಂದಿಲ್ಲ. ಒಂದು ವೇಳೆ ಗಂಟಲಿನಲ್ಲಿ ಕಿರಿಕಿರಿ, ಕೆಮ್ಮು ಇದ್ದರೆ ಬಿಸಿನೀರಿಗೆ ಚಿಟಿಕೆಯಷ್ಟು ಉಪ್ಪು ಹಾಕಿ ಗಳಗಳ ಮಾಡಬೇಕು. ಶೀತ ಇದಕ್ಕೆ ಬಗ್ಗದೇ ಇದ್ದರೆ ಮಾತ್ರ ಮರುದಿನ ತಡಮಾಡದೇ ವೈದ್ಯರನ್ನು ಕಾಣಬೇಕು.

ಸಲಹೆ #4

ಸಲಹೆ #4

ಮಳೆಗಾಲದಲ್ಲಿ ಕುಡಿಯುವ ನೀರಿನಲ್ಲಿಯೂ ಕ್ರಿಮಿಗಳು ಸೇರಿಕೊಂಡಿರುವ ಸಾಧ್ಯತೆ ಇರುವ ಕಾರಣ ಕೇವಲ ಫಿಲ್ಟರ್ ಮಾಡಿದ ಅಥವಾ ಕುದಿಸಿದ ನೀರನ್ನು ಮಾತ್ರವೇ ಕುಡಿಯಬೇಕು. ಅಲ್ಲದೇ ದೈಹಿಕ ಸ್ವಚ್ಛತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಈ ಅಭ್ಯಾಸಗಳಿಂದ ನೀರಿನಿಂದ ಆವರಿಸಬಹುದಾದ ಕಾಮಾಲೆ, ಅತಿಸಾರ, ಜಠರ ಮತ್ತು ಕರುಳುಗಳ ಉರಿಯೂತ ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

ಸಲಹೆ #5

ಸಲಹೆ #5

ಈ ಮಳೆಗಾಲದ ಚುಮುಮುಚು ಚಳಿಯಲ್ಲಿ ರಸ್ತೆಬದಿಯಲ್ಲಿ ಸಿಗುವ ಬಿಸಿಬಿಸಿ ಬೋಂಡಾ, ಮೆಣಸಿನ ಬಜ್ಜಿಗಳನ್ನು ತಿನ್ನಲು ಮನಸ್ಸು ಎಷ್ಟೇ ಪ್ರಲೋಭಿಸಿದರೂ ಇವುಗಳನ್ನು ತಿನ್ನದಿರುವುದೇ ಜಾಣತನ. ಏಕೆಂದರೆ ಗಾಳಿಯಲ್ಲಿ ತೇಲಾಡುತ್ತಿರುವ ವೈರಸ್ಸುಗಳು ಹಾಗೂ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುವ ಸಂಭವ ಇದ್ದೇ ಇರುತ್ತದೆ. ಅಲ್ಲದೇ ಮಳೆನೀರು ನಿಂತಲ್ಲೆಲ್ಲಾ ಸೊಳ್ಳೆಗಳಿಗೆ ಸಂತಾನೋತ್ಪತ್ತಿಗೆ ಸೂಕ್ತ ಸ್ಥಳವಾಗಿದ್ದು ಈ ಮೂಲಕ ಮಲೇರಿಯಾ ಡೆಂಘಿ ಗಳಂತಹ ಕಾಯಿಲೆಗಳು ಹರಡುವ ಸಂಭವವಿದೆ. ಕ್ರಿಮಿಗಳಿಂದ ಕೂಡಿದ ನೀರು ಹರಿದು ಕುಡಿಯುವ ನೀರಿನೊಂದಿಗೆ ಬೆರೆತು ಈ ನೀರನ್ನು ಕುಡಿಯುವ ಮೂಲಕ ಅತಿಸಾರ, ಕಾಮಾಲೆಗಳೂ ಆವರಿಸಬಹುದು. ಆದ್ದರಿಂದ ಮಳೆಗಾಲ ಕಳೆಯುವವರೆಗೂ ಮನೆಯಲ್ಲಿಯೇ ಮಾಡಿದ ಅಥವಾ ಸ್ವಚ್ಛತೆಯನ್ನು ಕಾಯ್ದುಕೊಂಡ ಪ್ರಾಮಾಣಿತ ಮಳಿಗೆಗಳಿಂದ ಮಾತ್ರವೇ ಆಹಾರ ಸೇವಿಸಿ.

ಸಲಹೆ #6

ಸಲಹೆ #6

ನಿಮ್ಮ ಮನೆಯ ಒಳಗೆ ಹಾಗೂ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿ. ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರು ತುಂಬಿಕೊಳ್ಳಬಹುದಾದ ವಸ್ತುಗಳು, ಉದಾಹರಣೆಗೆ ತೆಂಗಿನ ಚಿಪ್ಪು, ಟೈರು ಮೊದಲಾದವುಗಳೆಲ್ಲಾ ಸೊಳ್ಳೆಗಳಿಗೆ ಮತ್ತು ಇತರ ಕ್ರಿಮಿಗಳಿಗೆ ಪ್ರಶಸ್ತ ಸ್ಥಳವಾಗುತ್ತದೆ. ಇವುಗಳನ್ನು ನಿವಾರಿಸಿ, ಸಾಧ್ಯವಾಗದಿದ್ದರೆ ನೀರು ನಿಲ್ಲದಂತೆ ಬೋರಲು ಹಾಕಿಡಿ. ನಿಮ್ಮ ಮನೆಯ ಕೊಳೆನೀರು ಹೊರಹೋಗುವಲ್ಲಿ ಹಾಗೂ ಬಚ್ಚಲು ಮೊದಲಾದ ಕಡೆಗಳಲ್ಲಿ ಸೂಕ್ತ ಕ್ರಿಮಿನಾಶಕ ದ್ರಾವಣ ಬಳಸಿ. ತೆರೆದ ಕಿಟಕಿಗಳಿಗೆ ಸೊಳ್ಳೆಪರದೆ ಹಾಕಿಸಿ. ಮನೆಯೊಳಗೆ ಸೊಳ್ಳೆ ವಿಕರ್ಷಕ ಉತ್ಪನ್ನ ಅಥವಾ ಸೊಳ್ಳೆಪರದೆಗಳನ್ನು ಉಪಯೋಗಿಸಿ ರೋಗ ತಗುಲದಂತೆ ಎಚ್ಚರಿಕೆ ವಹಿಸಿ.

ಸಲಹೆ #7

ಸಲಹೆ #7

ಮಳೆಗಾಲದಲ್ಲಿ ಸಾಮಾನ್ಯವಾದ ಇನ್ನೊಂದು ತೊಂದರೆ ಎಂದರೆ ಶಿಲೀಂಧ್ರದ ಸೋಂಕು. ಇವು ಬೆರಳು ಸಂಧುಗಳು ಮೊದಲಾದ ಇಕ್ಕಟ್ಟಿನ ಚರ್ಮದಲ್ಲಿ ಸುಲಭವಾಗಿ ಹರಡುತ್ತವೆ. ಅತಿ ಹೆಚ್ಚು ಸೋಂಕು ಅಂಟಿಕೊಳ್ಳುವ ಸ್ಥಳವೆಂದರೆ ಕಾಲುಬೆರಳುಗಳ ನಡುವಣ ಸಂಧುಗಳು. ಆದ್ದರಿಂದ ಪ್ರತಿಬಾರಿ ಹೊರಗಿನಿಂದ ಬಂದಾಗಲೂ ಕಾಲುಗಳನ್ನು ತೊಳೆದುಕೊಂಡು ಬೆರಳುಗಳ ನಡುವೆ ತೇವ ಇರದಂತೆ ಟವೆಲ್ಲಿನಿಂದ ಒರೆಸಿಕೊಳ್ಳಿ. ಅಷ್ಟೇ ಅಲ್ಲ, ಪ್ರತಿ ಬಾರಿಯೂ ಚೆನ್ನಾಗಿ ಒಣಗಿರುವ ಬಟ್ಟೆಗಳನ್ನೇ ಇಸ್ತ್ರಿ ಮಾಡಿಯೇ ಉಪಯೋಗಿಸಿ. ವಿಶೇಷವಾಗಿ ಒಳ ಉಡುಪುಗಳು- ಇವನ್ನು ಎಂದಿಗೂ ತೇವವಾಗಿದ್ದಂತೆ ತೊಡಬೇಡಿ. ಪ್ರತಿಬಾರಿ ಎರಡೂ ಬದಿಯಿಂದ ಇಸ್ತ್ರಿ ಮಾಡಿಯೇ ಉಪಯೋಗಿಸಿ. ರಾತ್ರಿ ಮಲಗುವ ಮುನ್ನ ಬೆರಳು ಸಂಧುಗಳ ನಡುವೆ ಕೊಂಚವೇ ಅರಿಶಿನ ಪುಡಿ ಹಚ್ಚಿಕೊಂಡು ಮಲಗುವುದರಿಂದ ಹೆಚ್ಚಿನ ರಕ್ಷಣೆ ದೊರಕುತ್ತದೆ.

English summary

Expert tips to beat common monsoon diseases

Come monsoon, the weather significantly cools down and most people tend to enjoy the spurts of rainfall. But with the wonderful weather come some ailments that can wreak havoc with your daily life. Viral infections, gastroenteritis, jaundice, lower respiratory tract infections, pneumonia and even malaria are a major concern during this season. So Today Boldsky gave us some useful tips to keep common monsoon diseases at bay.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more