For Quick Alerts
ALLOW NOTIFICATIONS  
For Daily Alerts

  ಹೊಟ್ಟೆ ಕರಗಿಸಬೇಕಾ? ಹಾಗಿದ್ರೆ ಈ ವಿಧಾನವನ್ನು ಮೊದಲು ಮಾಡಿ ನೋಡಿ...

  By Deepu
  |

  ಹೊಟ್ಟೆ ಭಾಗದಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸುವುದು ಎಂದರೆ ಅದು ಅಷ್ಟು ಸುಲಭವಲ್ಲ. ಸೊಂಟದಲ್ಲಿ ಸಂಗ್ರಹವಾಗುವ ಕೊಬ್ಬನ್ನು ಕರಗಿಸಲೇ ಬೇಕು ಎನ್ನುವ ಹಠದಿಂದ ಊಟ ತಿಂಡಿಯಲ್ಲಿ ನಿಷೇಧಗಳನ್ನು ಹೇರಿಕೊಂಡರೆ ದೇಹದಲ್ಲಿ ಅಶಕ್ತತೆ ಉಂಟಾಗುತ್ತದೆ ವಿನಃ ಹೊಟ್ಟೆ ಕರಗುವುದಿಲ್ಲ. ಮುಂಜಾನೆ ಬೇಗ ಎದ್ದು ಬಹುದೂರ ನಡೆಯುವುದು ಅಥವಾ ಓಡುವ ಪ್ರಕ್ರಿಯೆಗೆ ಮುಂದಾದರೂ ನಮ್ಮ ನಿರೀಕ್ಷೆಯಷ್ಟು ಕೊಬ್ಬನ್ನು ಕರಗಿಸಲು ಸಾಧ್ಯವಿಲ್ಲ.

  ಬಹುತೇಕ ಮಂದಿ ಅಂದರೆ ಮಧ್ಯವಯಸ್ಸಿನಲ್ಲಿರುವ ವ್ಯಕ್ತಿಗಳು ಹೆಚ್ಚಾಗಿ ಕೆಲಸದ ಒತ್ತಡ ಹಾಗೂ ಸಂಸಾರದ ನಿರ್ವಹಣೆಯ ಗೋಜಿನಲ್ಲಿ ತಮ್ಮ ದೇಹದ ನ್ಯೂನತೆಯನ್ನು ಸರಿಪಡಿಸಿಕೊಳ್ಳುವ ಸಾಹಸಕ್ಕೆ ಮುಂದಾಗುವುದಿಲ್ಲ. ಬೆರಳೆಣಿಕೆಯ ಜನರು ಸೂಕ್ತ ಆಹಾರ ಕ್ರಮ ಹಾಗೂ ವ್ಯಾಯಾಮಗಳ ಮೊರೆ ಹೋಗುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿರುವಂತೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಅತಿಹೆಚ್ಚು ಹಣವನ್ನು ವ್ಯಯಿಸಬೇಕಾಗುವುದು. ಅಂತಹ ದುಬಾರಿ ಬೆಲೆಯ ದೇಹ ದಂಡನೆಯನ್ನು ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆ ಅಥವಾ ಮಾನ್ಯತೆ ಪಡೆದ ಜನರಿಗೆ ಮಾತ್ರ ಸಾಧ್ಯವಾಗುತ್ತದೆ. 

  ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್-ಒಂದೇ ತಿಂಗಳಲ್ಲಿ ಫಲಿತಾಂಶ!

  ಇಂತಹ ಒಂದು ಗೊಂದಲ, ಸಮಸ್ಯೆ ಹಾಗೂ ಬೇಸರದಲ್ಲಿ ನೀವು ಇದ್ದೀರಿ ಎಂದಾದರೆ ಇಂದೇ ಚಿಂತೆಯನ್ನು ಬಿಡಿ. ಬಹು ಸುಲಭವಾಗಿ ಹೊಟ್ಟೆಯನ್ನು ಹೇಗೆ ಕರಗಿಸಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡುತ್ತಿದೆ. ನೀವು ಇದನ್ನೇ ಕಾಯುತ್ತಿದ್ದೀರಿ ಎಂದಾದರೆ ಮತ್ತೇಕೆ ತಡ? ಈ ಮುಂದೆ ವಿವರಿಸಿರುವ ಕ್ರಮವನ್ನು ಕೈಗೊಳ್ಳಿ.... 

  ಬಿಸಿ ನೀರು ಮತ್ತು ತಾಜಾ ನಿಂಬೆ

  ಬಿಸಿ ನೀರು ಮತ್ತು ತಾಜಾ ನಿಂಬೆ

  ತಾಜಾ ನಿಂಬೆ ಕೆಲವು ಕಿಣ್ವಗಳನ್ನು ಹೊಂದಿರುತ್ತದೆ. ಅದು ನಿಮ್ಮ ಪಿತ್ತಜನಕಾಂಗವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಯಕೃತ್ತಿನ ಕೆಲಸವನ್ನು ಸುಗಮವಾಗಿ ನೆರವೇರುವಂತೆ ಮಾಡುತ್ತದೆ. ಯಕೃತ್ತಿನಿಂದಲೇ ಕೊಬ್ಬು ಬಿಡುಗಡೆಯಾಗುತ್ತದೆ. ಹಾಗಾಗಿ ನೀವು ಮುಂಜಾಣೆ ಎದ್ದ ತಕ್ಷಣ ಬಿಸಿ ನೀರಿಗೆ ತಾಜಾ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ಕೊಬ್ಬನ್ನು ಬಲು ಸುಲಭವಾಗಿ ಕರಗಿಸ ಬಹುದು. ಆದರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸಬೇಕು. ಇದನ್ನು ಸೇವಿಸಿದ ಬಳಿಕ ಸುಮಾರು ಅರ್ಧ ಗಂಟೆಯವರೆಗೆ ಏನನ್ನೂ ತಿನ್ನುವುದು ಅಥವಾ ಕುಡಿಯುವುದನ್ನು ಮಾಡಬಾರದು.

  ಕ್ರಾನ್ಬೆರಿ ಜ್ಯೂಸ್ ಕುಡಿಯಿರಿ

  ಕ್ರಾನ್ಬೆರಿ ಜ್ಯೂಸ್ ಕುಡಿಯಿರಿ

  ಗಾಢ ಕೆಂಪು ಬಣ್ಣದ ಕ್ರಾನ್ಬೆರಿ ಹಣ್ಣುಗಳಲ್ಲಿ ಮ್ಯಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಕ್ವಿನಿಕ್ ಆಮ್ಲಗಳಿವೆ. ಇವುಗಳು ಜೀರ್ಣಶಕ್ತಿಯನ್ನು ಹೆಚ್ಚಿಸುವ ಕಿಣ್ವಗಳಾಗಿದ್ದು ದೇಹದ ದುಗ್ದರಸದ ಸ್ರವಿಕೆ ಹೆಚ್ಚಿಸಲು ನೆರವಾಗುತ್ತವೆ. ಈ ದುಗ್ದರಸಗಳು ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಲು ಪ್ರೇರೇಪಿಸುತ್ತವೆ. ಒಂದು ವೇಳೆ ಯಕೃತ್ ಬಳಸದೇ ಬಿಟ್ಟ ಕೊಬ್ಬನ್ನು ಕರಗಿಸಿ ವಿಸರ್ಜಿಸುವ ಮೂಲಕ ಕೊಬ್ಬು ಸಂಗ್ರಹವಾಗದಂತೆ ತಡೆಯುತ್ತದೆ.

  ಶುಂಠಿ ಚಹಾಕ್ಕೆ ನಿಂಬೆ ಮತ್ತು ಜೇನುತುಪ್ಪದ ಮಿಶ್ರಣ

  ಶುಂಠಿ ಚಹಾಕ್ಕೆ ನಿಂಬೆ ಮತ್ತು ಜೇನುತುಪ್ಪದ ಮಿಶ್ರಣ

  ಶುಂಠಿ ತುಂಬಾ ಆರೋಗ್ಯಕರ ಮಸಾಲೆ ಎಂದು ನಮಗೆ ತಿಳಿದಿದೆ ಏಕೆಂದರೆ ಅದು ದೇಹವು ಜೀರ್ಣಕಾರಿ ಕಿಣ್ವಗಳನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಶುಂಠಿ ಸಹ ಥರ್ಮೋಜೆನಿಕ್ ಏಜೆಂಟ್. ಮೂಲಭೂತವಾಗಿ ಥರ್ಮೋಜೆನಿಕ್ ಏಜೆಂಟ್ ಗಳು ದೇಹ ಉಷ್ಣಾಂಶವನ್ನು ಮತ್ತು ಕೊಬ್ಬುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕರಗಿಸಲು ಸಹಾಯ ಮಾಡುತ್ತದೆ.

  ತಯಾರಿಸುವ ವಿಧಾನ

  ತಯಾರಿಸುವ ವಿಧಾನ

  ಒಂದು ಪಾತ್ರೆಯಲ್ಲಿ ನೀರು ಮತ್ತು ಶುಂಠಿಯನ್ನು ಬೆರೆಸಿ, 5 ನಿಮಿಷಗಳಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು. ಉರಿಯನ್ನು ಆರಿಸಿದ ನಂತರ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ, ಸೇವಿಸಬೇಕು. ದೇಹ ಮತ್ತು ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸಲು ಕಡಿಮೆ ಎಂದರೂ ದಿನದಲ್ಲಿ ಎರಡು ಬಾರಿ ಶುಂಠಿ ಚಹಾವನ್ನು ಸೇವಿಸಬೇಕು.

  ಬೆಳ್ಳುಳ್ಳಿ ಮತ್ತು ನಿಂಬೆ ರಸ

  ಬೆಳ್ಳುಳ್ಳಿ ಮತ್ತು ನಿಂಬೆ ರಸ

  ಬೊಜ್ಜುಕರಗಿಸಲು ಬೆಳ್ಳುಳ್ಳಿ ಅತ್ಯುತ್ತಮ ದಿವ್ಯ ಔಷಧಿ. ನೀರಿಗೆ ನಿಂಬೆ ರಸವನ್ನು ಹಿಂಡಿ, ಸ್ವಲ್ಪ ಕುದಿಸಬೇಕು. ನಂತರ 2 ರಿಂದ 3 ಬೆಳ್ಳುಳ್ಳಿಯನ್ನು ಜಗೆದು, ಬೆಚ್ಚಗಿನ ನಿಂಬೆ ನೀರನ್ನು ಕುಡಿಯಬೇಕು. ಖಾಲಿಹೊಟ್ಟೆಯಲ್ಲಿ ಮುಂಜಾನೆ ಈ ವಿಧಾನವನ್ನು ಅನುಸರಿಸಿದರೆ 2 ವಾರದೊಳಗೆ ಹೊಟ್ಟೆಯ ಭಾಗದ ಕೊಬ್ಬು ಬಹು ಬೇಗ ಕರಗುವುದು.

  ದಾಲ್ಚಿನ್ನಿ ಪುಡಿ

  ದಾಲ್ಚಿನ್ನಿ ಪುಡಿ

  ಸಿಹಿ ತಿಂಡಿಯೊಂದಿಗೆ ದಾಲ್ಚಿನಿಯನ್ನು ಸೇರಿಸಿ ಸೇವಿಸಬಾರದು. ಅದು ನಿಮ್ಮ ದೇಹದ ಕೊಬ್ಬನ್ನು ಕರಗಿಸುವ ಬದಲು ಹೆಚ್ಚಿಸುವ ಸಾಧ್ಯತೆಗಳಿರುತ್ತವೆ. ದಾಲ್ಚಿನ್ನಿ ಒಂದು ಮಸಾಲೆಯಾಗಿದ್ದು ಅದು ನಿಮಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಚಹಾ, ಕಾಫಿ ಅಥವಾ ಹಾಲಿನಲ್ಲಿ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕುಡಿಯಿರಿ. ಇಲ್ಲವೇ ಸಲಾಡ್ಗಳಿಗೆ ದಾಲ್ಚಿನಿ ಪುಡಿಯನ್ನು ಸೇರಿಸಿ ಸೇವಿಸಿ.

  ಮೆಂತೆ ನೀರು

  ಮೆಂತೆ ನೀರು

  ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

  ಲೋಳೆಸರ ಮತ್ತು ಜೇನಿನ ಪಾನೀಯ

  ಲೋಳೆಸರ ಮತ್ತು ಜೇನಿನ ಪಾನೀಯ

  ಹೊಟ್ಟೆಯ ಕೊಬ್ಬು ಕರಗಿಸಲು ಲೋಳೆಸರವೂ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆ, ಅಜೀರ್ಣ, ಹೊಟ್ಟೆ ಉಬ್ಬರಿಕೆ ಮೊದಲಾದ ತೊಂದರೆಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಎರಡು ದೊಡ್ಡಚಮಚ ಲೋಳೆಸರದ ರಸ ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಕೊಂಚವೇ ಬಿಸಿ ಮಾಡಿಕೊಂಡು ಪ್ರಥಮ ಆಹಾರವಾಗಿ ಸೇವಿಸಿ. ಒಂದು ಘಂಟೆಯ ಬಳಿಕವೇ ಉಪಾಹಾರ ಸೇವಿಸಿ.

  ಬೆಳ್ಳುಳ್ಳಿ+ಲಿಂಬೆ ರಸ

  ಬೆಳ್ಳುಳ್ಳಿ+ಲಿಂಬೆ ರಸ

  *ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

  *ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

  *ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

  *ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

  ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

  ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

  ಕೊಂಚ ಖಾರವಾಗಿರುವ ದಾಲ್ಚಿನ್ನಿಯ ಚೆಕ್ಕೆ (cinnamon) ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೇ ದೇಹದ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಈ ಕೊಬ್ಬಿನಲ್ಲಿ ಸೊಂಟದ ಕೊಬ್ಬು ಸಹಾ ಒಂದು. ದಾಲ್ಚಿನ್ನಿಯ ಸೇವನೆಯಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುವುದರಿಂದ ಹಲವು ರೀತಿಯಲ್ಲಿ ಇದು ಅರೋಗ್ಯಕ್ಕೆ ಪೂರಕವಾಗಿದೆ. ಹೆಚ್ಚಿದ ತಾಪಮಾನವನ್ನು ಪಡೆಯಲು ಕೊಬ್ಬು ಬಳಕೆಯಾಗುವುದರಿಂದ ಕೊಬ್ಬು ಕರಗಲು ನೆರವಾಗುತ್ತದೆ.

  ಬಳಕೆಯ ವಿಧಾನ

  ಬಳಕೆಯ ವಿಧಾನ

  * ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ.

  * ನಿಮ್ಮ ನಿತ್ಯದ ಉಪಾಹಾರಗಳಾದ ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳ ಮೇಲೆ ಕೊಂಚವಾಗಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ

  * ನಿತ್ಯದ ಸಾಲಾಡ್ (ಅಥವಾ ಪಲ್ಯ)ಗಳ ಮೇಲೆ ಚಿಮುಕಿಸಿ ಸೇವಿಸಿ. ಕೆಲವೇ ದಿನಗಳಲ್ಲಿ ಕೊಬ್ಬು ಕರಗತೊಡಗಿರುವುದು ಗಮನಕ್ಕೆ ಬರುತ್ತದೆ.

  English summary

  Effective Tips to Lose Belly Fat

  Losing belly fat is not easy. As they say, belly fat is the first to pile on and last to go. Whenever you go on a diet, what you really want to lose is belly fat. However, by the time you come off the diet, you are still left with a pudgy belly. That is why; tips to lose belly fat need to be very specific. It would certainly help if there is a video to compliment these tips to lose belly fat.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more