For Quick Alerts
ALLOW NOTIFICATIONS  
For Daily Alerts

ಚಿಟಿಕೆ ಹೊಡೆಯುವುದರೊಳಗೆ, ಹಲ್ಲು ನೋವು ಮಂಗಮಾಯ!

ಹಲ್ಲು ನೋವಿನಷ್ಟು ಸಂಕಟ ನೀಡುವ ನೋವು ಮತ್ತೊಂದು ಇಲ್ಲವೆನ್ನಬಹುದು. ಹಲ್ಲು ನೋವಿನ ಸಮಯದಲ್ಲಿ ಯಾವುದೇ ರೀತಿಯ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ... ಚಿಂತಿಸದಿರಿ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್...

|

ದೇವರೇ ಏನು ಬೇಕಾದರೂ ಕೊಡು ಆದರೆ ಹಲ್ಲು ನೋವು ಮಾತ್ರ ಕೊಡಬೇಡ ಎನ್ನುವ ಪ್ರಾರ್ಥನೆ ಹಲ್ಲು ನೋವು ಅನುಭವಿಸಿರುವ ಪ್ರತಿಯೊಬ್ಬರೂ ಮಾಡಿರುತ್ತಾರೆ. ಯಾಕೆಂದರೆ ಹಲ್ಲು ನೋವಿನಷ್ಟು ಸಂಕಟ ನೀಡುವ ನೋವು ಮತ್ತೊಂದು ಇಲ್ಲವೆನ್ನಬಹುದು. ಹಲ್ಲು ನೋವಿನ ಸಮಯದಲ್ಲಿ ಯಾವುದೇ ರೀತಿಯ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಆಹಾರ ಸೇವಿಸುವುದು ಕಷ್ಟವಾಗುತ್ತದೆ. ಹಲ್ಲು ನೋವು ಹೆಚ್ಚಾದಾಗ ತಲೆನೋವು, ಜ್ವರ ಕೂಡ ಕಾಣಿಸಿಕೊಳ್ಳಬಹುದು. ಇಂತಹ ಹಲ್ಲು ನೋವು ಯಾರಿಗೂ ಬರದಿರಲಿ ಎಂದು ಮನದಲ್ಲೇ ಅಂದುಕೊಳ್ಳುತ್ತೇವೆ. ಹಲ್ಲು ನೋವಿಗೆ ಪ್ರಮುಖವಾಗಿ ಬ್ಯಾಕ್ಟೀರಿಯಾ ಸೋಂಕು, ವಸಡಿನ ರೋಗ, ದುರ್ಬಲ ಹಲ್ಲುಗಳು ಪ್ರಮುಖ ಕಾರಣವಾಗಿದೆ.

ಬಾಲ್ಯದಲ್ಲಿ ಇರುವ ಹಲ್ಲುಗಳು ಕಿತ್ತು ಹೋಗಿ ಹೊಸ ಹಲ್ಲುಗಳು ಮೂಡಿ ಬರುತ್ತದೆ. ಇದರ ಬಳಿಕ ಬೆಳೆಯುತ್ತಾ ಇರುವಂತೆ ಯೌವನದಲ್ಲಿ ಕೊನೆಯ ಹಲ್ಲು ಬರುತ್ತದೆ. ಆದರೆ ಇದಕ್ಕೆ ಹೊರಬರಲು ಜಾಗವಿಲ್ಲದೆ ಇರುವ ಕಾರಣದಿಂದ ತುಂಬಾ ನೋವನ್ನು ಉಂಟು ಮಾಡುತ್ತದೆ.

ಆದರೆ ಈ ನೋವಿನೊಂದಿಗೆ ಸಂಪೂರ್ಣ ಹಲ್ಲುನೋವನ್ನು ನಿವಾರಣೆ ಮಾಡಲು ಮನೆಮದ್ದನ್ನು ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.....


ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಬೆಳ್ಳುಳ್ಳಿ ರಸ 2-3 ಚಮಚ

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

ಕಪ್ಪು ಉಪ್ಪು ಒಂದು ಚಿಟಿಕೆ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವಂತಹ ಉರಿಯೂತ ಶಮನಕಾರಿ ಗುಣವಿದೆ. ಇದು ವಸಡಿನ ಊತವನ್ನು ಕಡಿಮೆ ಮಾಡಿ ಹಲ್ಲಿನ ನೋವನ್ನು ನಿವಾರಿಸುತ್ತದೆ.

ಕಪ್ಪು ಉಪ್ಪು....

ಕಪ್ಪು ಉಪ್ಪು....

ಕಪ್ಪು ಉಪ್ಪಿನಲ್ಲಿ ಇರುವಂತಹ ನೈಸರ್ಗಿಕ ನಂಜುನಿರೋಧಕದೊಂದಿಗೆ ಸೋಡಿಯಂ ಇದೆ. ಇದು ಹಲ್ಲಿನಲ್ಲಿ ಬ್ಯಾಕ್ಟೀರಿಯಾದಿಂದ ಆಗುವಂತಹ ಸೋಂಕನ್ನು ನಾಶ ಮಾಡುವುದು. ಇದರಿಂದ ನೋವು ಕಡಿಮೆಯಾಗುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಪಿಂಗಾಣಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ.

*ಇದನ್ನು ಸರಿಯಾಗಿ ಪೇಸ್ಟ್ ಮಾಡಿಕೊಳ್ಳಿ.

*ಈ ಪೇಸ್ಟ್ ನ್ನು ಭಾದಿತ ಪ್ರದೇಶಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ.

*ನೋವು ಕಡಿಮೆಯಾಗುವ ತನಕ ಪ್ರತೀ ದಿನ ಹಚ್ಚಿಕೊಳ್ಳಿ.

English summary

Easy Home Remedy To Treat Tooth Ache In A Jiffy!

If you have ever suffered from tooth pain, you would surely know how bad it can be, right? Well, did you know that there is a simple home remedy that can reduce tooth pain? Now, as we know, tooth pain can be caused by a number of reasons like tooth decay, gum diseases, weakened tooth, loss of tooth enamel, bacterial infections, injuries, etc. When it comes to the wisdom teeth, there is another reason that may lead to pain, which is the growth of these 4 teeth itself!
X
Desktop Bottom Promotion