ಮಾಸಿಕ ದಿನಗಳಲ್ಲಿ ವಿಪರೀತ ಹೊಟ್ಟೆ ನೋವಿದ್ದರೆ, ಕ್ಯಾರೆಟ್ ಸೇವಿಸಿ...

By: Arshad
Subscribe to Boldsky

ಋತುಮತಿಯಾದ ಬಳಿಕ ಪ್ರತಿ ಮಹಿಳೆಯೂ ಅನುಭವಿಸುವ ಅನಿವಾರ್ಯ ನೋವೆಂದರೆ ಮಾಸಿಕ ದಿನಗಳಲ್ಲಿ (ಋತುಚಕ್ರದ ಅವಧಿಯಲ್ಲಿ) ಕಾಡುವ ಹೊಟ್ಟೆ ನೋವು. ಇದು ಎಲ್ಲರಲ್ಲಿಯೂ ಏಕಪ್ರಕಾರವಾಗಿರುವುದಿಲ್ಲ. ಕೆಲವರಿಗೆ ಅತಿ ಹೆಚ್ಚಾಗಿದ್ದರೆ ಕೆಲವರಿಗೆ ಕೊಂಚ ಕಡಿಮೆ ಇರಬಹುದು. ಕೆಲವರಿಗೆ ವಾರಕ್ಕೂ ಹೆಚ್ಚು ದಿನ ಕಾಡಿದರೆ ಕೆಲವರಿಗೆ ಮೂರು ದಿನಗಳೇ ಕಾಡಬಹುದು.

ಈ ನೋವು ನೈಸರ್ಗಿಕವಾಗಿದ್ದು ಅನುಭವಿಸುವುದು ಅನಿವಾರ್ಯವಾಗಿದ್ದರೂ ಕೆಲವು ವಿಧಾನಗಳಿಂದ ದಿನನಿತ್ಯದ ಕೆಲಸಗಳು ಹೆಚ್ಚು ಬಾಧೆಗೊಳಗಾಗದಂತೆ ತಡೆಯಲು ಕೆಲವಾರು ಸೌಲಭ್ಯಗಳು ಇಂದು ಲಭ್ಯವಿವೆ. ಆದರೆ ಜಾಣತನದ ಕ್ರಮವೆಂದರೆ ದೇಹದ ಒಳಗಿನಿಂದ ಈ ನೋವನ್ನು ಕಡಿಮೆಗೊಳಿಸುವುದು.   ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಹಾಲಿಗೆ ಅರಿಶಿನ ಹಾಕಿ ಕುಡಿಯುವುದು ಒಂದು ಪುರಾತನ ವಿಧಾನವಾಗಿದ್ದು ಕೊಂಚ ಮಟ್ಟಿಗೆ ಶಮನ ನೀಡಬಹುದು. ಆದರೆ ಇದಕ್ಕೂ ಉತ್ತಮ ವಿಧಾನವೆಂದರೆ ಗಜ್ಜರಿ ಅಥವಾ ಕ್ಯಾರೆಟ್ಟುಗಳನ್ನು ಸೇವಿಸುವುದು. ಕ್ಯಾರೆಟ್ ಸೇವನೆಯಿಂದ ದೇಹಕ್ಕೆ ಹಲವು ವಿಧದ ಪ್ರಯೋಜನಗಳಿವೆ. ಇದರಲ್ಲಿ ಪ್ರಮುಖವಾದುದು ಮಾಸಿಕ ದಿನಗಳ ನೋವು ಕಡಿಮೆ ಮಾಡುವುದು. ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ  

ಬನ್ನಿ, ಮಾಸಿಕ ದಿನಗಳಲ್ಲಿ ಕ್ಯಾರೆಟ್ ಅನ್ನು ಸಾಧ್ಯವಾದಷ್ಟೂ ಹಸಿಯಾಗಿಯೇ ತಿನ್ನುವ ಮೂಲಕ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

ಪ್ರಯೋಜನ #1

ಪ್ರಯೋಜನ #1

ಕ್ಯಾರೆಟ್ಟಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಬ್ಬಿಣವಿದೆ: ಬಸಲೆ ಸೊಪ್ಪಿನಲ್ಲಿ ಅತ್ಯಂತ ಹೆಚ್ಚಿದ್ದರೂ ಇದನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲದ ಕಾರಣ ಕ್ಯಾರೆಟ್ ಹೆಚ್ಚು ಉತ್ತಮವಾಗಿದೆ.

ಪ್ರಯೋಜನ #1

ಪ್ರಯೋಜನ #1

ಮಾಸಿಕ ದಿನಗಳ ಸ್ರಾವದ ಮೂಲಕ ದೇಹ ಕಳೆದುಕೊಳ್ಳುವ ರಕ್ತವನ್ನು ಪೂರೈಸಲು ಕಬ್ಬಿಣ ಅವಶ್ಯಕವಾಗಿದ್ದು ಈ ಹೊತ್ತಿನಲ್ಲಿ ಕ್ಯಾರೆಟ್ ತಿಂದರೆ ಶೀಘ್ರವಾಗಿ ರಕ್ತಕಣಗಳು ಉತ್ಪಾದನೆಗೊಂಡು ಸ್ರಾವವನ್ನು ಸುಲಭಗೊಳಿಸುವುದರ ಜೊತೆಗೇ ನೋವನ್ನೂ ಕಡಿಮೆ ಮಾಡುತ್ತವೆ.

ಪ್ರಯೋಜನ #2

ಪ್ರಯೋಜನ #2

ಇದರಲ್ಲಿ ಬೀಟಾ ಕ್ಯಾರೋಟೀನ್ ಉತ್ತಮ ಪ್ರಮಾಣದಲ್ಲಿದೆ: ಆಹಾರದ ಮೂಲಕ ಪಡೆಯಲಾಗುವ ಈ ಪೋಷಕಾಂಶ ಜೀರ್ಣಗೊಳ್ಳುವ ವೇಳೆ ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ. ಈ ವಿಟಮಿನ್ ವಿಶೇಷವಾಗಿ ರಕ್ತದ ಹರಿಯುವಿಕೆಯನ್ನು ನಿಯಂತ್ರಿಸುವ ಮೂಲಕ ನೋವನ್ನು ಅತಿ ಕಡಿಮೆಯಾಗಿಸುತ್ತದೆ.

ಪ್ರಯೋಜನ #3

ಪ್ರಯೋಜನ #3

ಉತ್ತಮ ಪ್ರಮಾಣದ ಕರಗದ ನಾರು ಇದೆ: ಈ ನಾರುಗಳು ಜೀರ್ಣಗೊಳ್ಳದೇ ಜೀರ್ಣಾಂಗಗಳಿಂದ ಮಲಿನ ವಸ್ತುಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತವೆ. ತನ್ಮೂಲಕ ಮಾಸಿಕ ದಿನಗಳಲ್ಲಿ ರಕ್ತಪರಿಚಲನೆ ಮತ್ತು ಸ್ರಾವವನ್ನು ಸುಗಮಗೊಳಿಸಿ ನೋವನ್ನೂ ಕಡಿಮೆಗೊಳಿಸುತ್ತದೆ.

ಈ ದಿನಗಳಲ್ಲಿ ಕ್ಯಾರೆಟ್ ಸೇವನೆಯ ವಿಧಾನಗಳು

ಈ ದಿನಗಳಲ್ಲಿ ಕ್ಯಾರೆಟ್ ಸೇವನೆಯ ವಿಧಾನಗಳು

ವಿಧಾನ #1. ಜ್ಯೂಸ್ ಮಾಡಿಕೊಂಡು ಕುಡಿಯುವುದು

ಎರಡು ಮಧ್ಯಮ ಗಾತ್ರದ ಗಜ್ಜರಿಗಳನ್ನು ಸಿಪ್ಪಿ ಸುಲಿದು ಚಿಕ್ಕದಾಗಿ ತುಂಡರಿಸಿ ಬಳಿಕ ಜ್ಯೂಸರಿನಲ್ಲಿ ನುಣ್ಣಗೆ ಕಡೆಯಬೇಕು. ಇದಕ್ಕೆ ಕೊಂಚವೇ ನೀರು ಅಥವಾ ಹಾಲು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಈ ವಿಧಾನದಿಂದ ಮಾಸಿಕ ದಿನಗಳ ನೋವು ಕಡಿಮೆಯಾಗುತ್ತದೆ.

ವಿಧಾನ #2. ಸಾಲಾಡ್ ನೊಂದಿಗೆ ಸೇವಿಸಿ

ವಿಧಾನ #2. ಸಾಲಾಡ್ ನೊಂದಿಗೆ ಸೇವಿಸಿ

ಸುಮಾರು ಎರಡು ಗಜ್ಜರಿಗಳನ್ನು ನಿಮಗೆ ಸೂಕ್ತವೆನಿಸಿದ ಆಕಾರ ಮತ್ತು ಗಾತ್ರದಲ್ಲಿ ಕತ್ತರಿಸಿ ನಿಮ್ಮ ಊಟದ ನಡುವೆ ಸಾಲಾಡ್ ನೊಂದಿಗೆ ಸೇವಿಸಿ. ಇದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆತು ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ.

ವಿಧಾನ #3. ಹಸಿಯಾಗಿ ತಿನ್ನಿ

ವಿಧಾನ #3. ಹಸಿಯಾಗಿ ತಿನ್ನಿ

ಒಂದು ವೇಳೆ ಮಾಸಿಕ ದಿನಗಳ ನೋವು ವಿವರೀತವಾಗಿದ್ದರೆ ಇದರ ಸಿಪ್ಪೆ ಸುಲಿಯದೇ ಚೆನ್ನಾಗಿ ತೊಳೆದು (ಸಿಪ್ಪೆಯಲ್ಲಿ ಸೂಕ್ಷ್ಮ ಮರಳಿನ ಕಣಗಳಿರುತ್ತವೆ, ಇವನ್ನು ನಿವಾರಿಸಲು ಕೊಂಚ ಉಜ್ಜಬೇಕು)

ವಿಧಾನ #3. ಹಸಿಯಾಗಿ ತಿನ್ನಿ

ವಿಧಾನ #3. ಹಸಿಯಾಗಿ ತಿನ್ನಿ

ಬಳಿಕ ಹಸಿಯಾಗಿ ತಿನ್ನಿ. ಇದರಿಂದ ಹೆಚ್ಚಿನ ಪೋಷಕಾಂಶಗಳು ದೊರೆತು ನೋವನ್ನು ಕಡಿಮೆ ಮಾಡುತ್ತವೆ. ಅಲ್ಲದೇ ರಕ್ತಸ್ರಾವದ ಪ್ರಮಾಣವನ್ನೂ ಕಡಿಮೆಗೊಳಿಸುತ್ತವೆ.

 
English summary

Do Carrots Help To Treat Period Pain? Check It Out!

Here are a few reasons why women should make carrots a part of their diet especially when they are on their periods. Take a look at the health benefits of carrots and how to consume them....
Please Wait while comments are loading...
Subscribe Newsletter