Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ
ನಿಮ್ಮ ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‍ಗೆ ಅಗ್ರಸ್ಥಾನ ನೀಡಬಹುದು. ಇವುಗಳಲ್ಲಿ ಏನೆಲ್ಲಾ ಆರೋಗ್ಯವು ದೊರೆಯುತ್ತದೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ಆದಷ್ಟು ನಿಮ್ಮ ದೈನಂದಿನ ಡಯಟ್‍ನಲ್ಲಿ ಸೇರಿಸಿಕೊಳ್ಳಿ. ಕ್ಯಾರೆಟ್‍ಗಳು ಅಪಿಯಸಿಯೆ ಕುಟುಂಬಕ್ಕೆ ಸೇರಿದ ಗಿಡಗಳು. ಈ ಹೆಸರು ಗ್ರೀಕ್ ಭಾಷೆಯ "ಕರಟಾನ್" ಪದದಿಂದ ಬಂದಿದೆ. ಸಂಯುಕ್ತ ರಾಷ್ಟ್ರಗಳ
ಕೃಷಿ ಇಲಾಖೆಯ ಪ್ರಕಾರ ಒಂದು ಕ್ಯಾರೆಟ್ ಅಥವಾ ಕತ್ತರಿಸಿದ ಅರ್ಧ ಕಪ್ ಕ್ಯಾರೆಟ್‍ನಲ್ಲಿ 25 ಕ್ಯಾಲೊರಿ, 6 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಸಕ್ಕರೆ ಮತ್ತು 1 ಗ್ರಾಂ ಪ್ರೋಟಿನ್ ದೊರೆಯುತ್ತದೆಯಂತೆ. ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆಯಂತೆ.
ಮತ್ತೊಂದು ಪ್ರಮುಖ ಅಂಶವೆಂದರೆ, ಕ್ಯಾರಟ್‍ನಲ್ಲಿ ಅತ್ಯದ್ಭುತವಾದ ಆಂಟಿ ಆಕ್ಸಿಡೆಂಟ್ ಸಹ ಇರುತ್ತದೆ. ವಿಟಮಿನ್ ಎ ಜೊತೆಗೆ ಇದರಲ್ಲಿ ಬೀಟಾ ಕೆರೊಟಿನ್, ಸಹ ಇರುತ್ತದೆ. ಅವುಗಳಿಂದಲೆ ಕ್ಯಾರೆಟ್‍ಗೆ ಕಡು ಕಿತ್ತಳೆ ಬಣ್ಣ ಬಂದಿರುವುದು. ತೂಕ ಕಡಿಮೆ ಮಾಡಿಕೊಳ್ಳಲು ಕ್ಯಾರೆಟ್‍ಗಳು ಹೇಳಿ ಮಾಡಿಸಿದ ತರಕಾರಿಗಳಾಗಿವೆ. ಇದರಲ್ಲಿ ಕ್ಯಾಲೋರಿ ಕಡಿಮೆಯಿರುವುದರಿಂದ, ಸ್ನ್ಯಾಕ್ಸ್ ಆಗಿ ಇದನ್ನೆ ಸೇವಿಸಿ. ರಕ್ತದ ಶುದ್ಧತೆಗೆ ದಿನಾ ಕ್ಯಾರೆಟ್‌ನ್ನು ಸೇವಿಸಿ!

ಹಲ್ಲುಗಳನ್ನು ಸ್ವಚ್ಛಗೊಳಿಸಲು
ಕ್ಯಾರೆಟ್‍ನಲ್ಲಿರುವ ಗರಿ ಗರಿ ಅಂಶವು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಇದನ್ನು ಹಾಗೆಯೇ ಸೇವಿಸುವುದರಿಂದ ಹಲ್ಲುಗಳು ಬೆಳ್ಳಗಾಗುತ್ತವೆ.
ತ್ವಚೆಯ ಹೊಳಪಿಗೆ
ಕ್ಯಾರೆಟ್ ರಸವು ತ್ವಚೆಯ ಹೊಳಪಿಗೆ ಹೇಳಿ ಮಾಡಿಸಿದ ಔಷಧಿಯಾಗಿರುತ್ತದೆ. ಜೊತೆಗೆ ಇದು ತ್ವಚೆಯ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಪುರುಷರ ಆರೋಗ್ಯಕ್ಕೆ ಕ್ಯಾರೆಟ್ ಒಳ್ಳೆಯದು
ಕಣ್ಣುಗಳು
ಕ್ಯಾರೆಟ್ ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಯು ನಿಮ್ಮ ಕಣ್ಣುಗಳಿಗೆ ಅತ್ಯಗತ್ಯವಾಗಿ ಬೇಕಾಗುತ್ತವೆ.
ರಕ್ತ
ಕ್ಯಾರೆಟ್‍ನಲ್ಲಿರುವ ಆಲ್ಕಾಲೈನ್‍ಗಳು ರಕ್ತದಲ್ಲಿರುವ ಆಸಿಡ್‍ಗಳನ್ನು ಸಮತೋಲನದಲ್ಲಿಡುತ್ತವೆ. ಜೊತೆಗೆ ಇವು ರಕ್ತವನ್ನು ಶುದ್ಧಗೊಳಿಸುತ್ತವೆ.
ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ
ಕ್ಯಾರೆಟ್‌ಗಳು ನಿಮ್ಮನ್ನು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ. ಇದರಲ್ಲಿರುವ ಸಮೃದ್ಧ ಆಂಟಿ-ಆಕ್ಸಿಡೆಂಟ್‍ಗಳು ನಿಮ್ಮ ತ್ವಚೆಯನ್ನು ಬಿಗಿಯಾಗಿ ಇರಿಸುತ್ತವೆ.
ಸೂರ್ಯನಿಂದ ರಕ್ಷಣೆ
ಸೂರ್ಯನಿಂದ ರಕ್ಷಣೆ ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯನ್ನು ಕಾಪಾಡುವಲ್ಲಿ ಕ್ಯಾರೆಟ್ ಜ್ಯೂಸ್ ನಿಮಗೆ ಉತ್ತಮವಾಗಿ ಸಹಕರಿಸುತ್ತದೆ. ಕ್ಯಾರೆಟ್ ಜ್ಯೂಸ್ ಸನ್ ಬರ್ನ್‍ಗಳನ್ನು ಗುಣಪಡಿಸುತ್ತದೆ ಮತ್ತು ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡುತ್ತದೆ. ಸನ್‍ಸ್ಕ್ರೀನ್ ಲೋಶನ್ ಬಳಸುವ ಬದಲು, ನೀವು ಕ್ಯಾರೆಟ್ ಜ್ಯೂಸನ್ನು ಸೇವಿಸಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಿ.
ಸೆಪ್ಸಿಸ್ ಅನ್ನು ನಿಯಂತ್ರಿಸುತ್ತವೆ
ಕ್ಯಾರೆಟ್‍ನಲ್ಲಿರುವ ಆಂಟಿಸೆಪ್ಟಿಕ್ ಅಂಶಗಳು ಅವುಗಳನ್ನು ಒಂದು ಜನಪ್ರಿಯ ತರಕಾರಿಯನ್ನಾಗಿ ಮಾಡಿವೆ. ಈ ಅಂಶವು ಸೆಪ್ಸಿಸ್ ಬರದಂತೆ ತಡೆಯುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

