ಪಾದಗಳ ಮಸಾಜ್ ಮಾಡಿದರೆ ಆರೋಗ್ಯ ವರ್ಧನೆ ಆಗುವುದು

By: manu
Subscribe to Boldsky

ಹಿಂದೆ ಆಯುರ್ವೇದ ಔಷಧವೇ ಹೆಚ್ಚು ಪ್ರಚಲಿತದಲ್ಲಿತ್ತು. ನಿಧಾನವಾಗಿ ಅಲೋಪತಿ ಔಷಧವು ಚಾಲನೆಗೆ ಬಂತು. ಇದರ ಪರಿಣಾಮವಾಗಿ ಆಯುರ್ವೇದ ಔಷಧಿಯನ್ನು ಜನರು ಮರೆತೆ ಬಿಟ್ಟಿದ್ದರು. ಅಲೋಪತಿಯ ಔಷಧದಿಂದ ದೇಹದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುವುದು ಯಾವಾಗ ಅರಿವಿಗೆ ಬಂತೋ, ಅಂದಿನಿಂದ ಜನರು ಪುನಃ ಆಯುರ್ವೇದದ ಮೊರೆ ಹೋಗಲು ಪ್ರಾರಂಭಿಸಿದರು. ಯಾವುದೇ ಅಡ್ಡ ಪರಿಣಾಮ ಬೀರದ ಆಯುರ್ವೇದದ ಔಷಧ ಆರೋಗ್ಯವನ್ನು ಕಾಪಾಡುತ್ತದೆ.

ಬಹುತೇಕ ಜನರು ತಮ್ಮ ಕಾಲು ಹಾಗೂ ಪಾದಗಳ ರಕ್ಷಣೆಯ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಅದು ಹೇಗಿದ್ದರೂ ಸೈ ಎನ್ನುವ ಮನೋಭಾವ ಹೊಂದಿರುತ್ತಾರೆ. ಅದೇ ಕಾಲು ಮತ್ತು ಪಾದಗಳ ಮಸಾಜ್ ಮಾಡಿಕೊಳ್ಳುವುದರಿಂದ ದೇಹಕ್ಕೆ ಹೆಚ್ಚು ಆರಾಮದಾಯಕ ಅನುಭವ ದೊರೆಯುತ್ತದೆ. ಜೊತೆಗೆ ಕಾಲಿಂದ ತಲೆಯವರೆಗೂ ರಕ್ತ ಸಂಚಾರ ಸುಗಮವಾಗಿ ಆಗುವಂತೆ ಮಾಡುತ್ತದೆ ಎನ್ನುತ್ತದೆ ಆಯುರ್ವೇದ. ವಾರದಲ್ಲೊಮ್ಮೆಯಾದರೂ ಪಾದಗಳ ಮಸಾಜ್ ಮಾಡಿಕೊಂಡರೆ ಅಗಾಧ ಶಕ್ತಿ ಮತ್ತು ರಕ್ತದ ಪರಿಚಲನೆಯಾಗುತ್ತದೆ. 

Foot Massage

ಆಯುರ್ವೇದದಲ್ಲಿ ಪಾದಗಳ ಆರೈಕೆ ಮತ್ತು ಮಸಾಜ್ ಮಾಡುವುದು ಚಿಕಿತ್ಸೆಗಳ ತಾಯಿ ಎಂದು ಕರೆಯುತ್ತಾರೆ. ದಿನದಲ್ಲೊಮ್ಮೆ ಪಾದಗಳ ಮಸಾಜ್ ಮಾಡಿದರೂ ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಗುತ್ತದೆ. ಆಯುರ್ವೇದದ ಪ್ರಕಾರ ಪಾದಗಳ ಮಸಾಜ್ ಯಾವೆಲ್ಲಾ ಅನುಕೂಲವನ್ನು ಸೃಷ್ಟಿಸಿಕೊಡುತ್ತದೆ ಎನ್ನುವುದನ್ನು ಈಕೆಳಗೆ ವಿವರಿಸಲಾಗಿದೆ.

ರಕ್ತ ಪರಿಚಲನೆ

ಪಾದಗಳ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆಯಾಗುತ್ತದೆ. ಕೀಲುಗಳು ಮತ್ತು ಮೃದು ಅಂಗಾಂಶಗಳನ್ನು ಬಲಪಡಿಸುತ್ತದೆ.

ಕಣ್ಣಿನ ಆರೋಗ್ಯವು ಸುಧಾರಣೆಯಾಗುತ್ತದೆ

ಸರಿಯಾದ ರಕ್ತ ಪರಿಚಲನೆ ಉಂಟಾಗಿ ಕಣ್ಣಿನ ಆರೋಗ್ಯವು ಸುಧಾರಣೆಯಾಗುತ್ತದೆ. ದೃಷ್ಟಿಯ ಆರೋಗ್ಯವೂ ಹೆಚ್ಚುತ್ತದೆ. ಮಸಾಜ್ ಮಾಡುವುದರಿಂದ ಕಾಲುಗಳಲ್ಲಿ ಬಿರುಕು, ಅಸ್ಥಿರಜ್ಜುಗಳು, ಸ್ನಾಯು ಮತ್ತು ನರಗಳ ಕಿರಿ ಕಿರಿ ತಡೆಯುತ್ತದೆ. ಒಟ್ಟಾರೆ ರಕ್ತ ಪರಿಚಲನೆ ಸುಧಾರಿಸುತ್ತದೆ.

ರೋಗನಿರೋಧಕ ಶಕ್ತಿ

Foot Massage

ಮಸಾಜ್‍ನಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಆಂತರಿಕ ಒತ್ತಡವೂ ಗುಣಮುಖವಾಗುತ್ತದೆ. ಶ್ರವಣ ಸಾಮಥ್ರ್ಯವೂ ಹೆಚ್ಚುವುದು. ಆತಂಕ, ಖಿನ್ನತೆ, ಆಯಾಸ ಮತ್ತು ಸೆಳೆತಗಳಿಂದ ನಿಮ್ಮನ್ನು ಬಿಡುಗಡೆಮಾಡುತ್ತದೆ.

ತ್ವಚೆಯು ಶುದ್ಧವಾಗಿ ಸದಾ ಕೋಮಲತೆಯಿಂದ ಕೂಡಿರುತ್ತದೆ

ಮಸಾಜ್ ಮಾಡಿಸುವುದರಿಂದ ತ್ವಚೆಯು ಶುದ್ಧವಾಗಿ ಸದಾ ಕೋಮಲತೆಯಿಂದ ಕೂಡಿರುತ್ತದೆ. ಯಾವುದೇ ಅಡೆ ತಡೆ ಉಂಟಾಗದೆ ರಕ್ತಗಳ ಪರಿಚಲನೆಯಿಂದ ಎಲ್ಲಾ ಅಂಗಾಂಶವೂ ಸುಧಾರಣೆಗೊಳ್ಳುತ್ತವೆ.

ಮಸಾಜ್ ಮಾಡುವ ವಿಧಾನ

* ಪಾದಗಳ ಮಸಾಜ್ ಮಾಡಲು ಬೆಚ್ಚಗಿನ ನೀರನ್ನು ಬಳಸಬೇಕು.

* ಒಂದು ಟಬ್‍ನಲ್ಲಿ ರೋಸ್ಮರಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಸೇರಿದಂತೆ ಇನ್ನಿತರ ಆಯುರ್ವೇದದ ಪದಾರ್ಥಗಳನ್ನು ಮತ್ತು ಗಿಡಮೂಲಿಕೆಗಳನ್ನು ಬಳಸಬೇಕು.

* ಕೆಲವು ನಿಮಿಷಗಳ ಕಾಲ ಎಣ್ಣೆ ಮತ್ತು ನೀರಿನ ಮಿಶ್ರಣದಲ್ಲಿ ಪಾದವನ್ನು ನೆನೆಸಬೇಕು.

* ಸಾಮಾನ್ಯ ಒತ್ತುವಿಕೆಯಿಂದ ಮಸಾಜ್ ಮಾಡಬೇಕು. ವೃತ್ತಾಕಾರದ ಚಲನೆಯಿಂದ ಕೀಲುಗಳ ಸುತ್ತ, ಕಾಲುಗಳ ಮೇಲೆ ಲಂಬವಾಗಿ ಮಸಾಜ್ ಮಾಡಬೇಕು.

* ಟಬ್ಬಿನಿಂದ ಪಾದಗಳನ್ನು ತೆಗೆದು, ಸ್ವಚ್ಛಗೊಳಿಸಬೇಕು. ಇದರಿಂದ ದೇಹವು ಕೊಳೆ ಮುಕ್ತವಾಗಲು ಸಹಾಯವಾಗುತ್ತದೆ. ಭಾವನೆಗಳ ಸಮತೋಲನವನ್ನು ಕಾಯುವುದರ ಜೊತೆಗೆ ರಕ್ತ ಪರಿಚಲನೆಯು ಸರಾಗವಾಗಿ ಆಗುತ್ತದೆ.

Foot Massage

ಮಸಾಜ್‍ನ ಇತರ ಉಪಯೋಗಗಳು

ಪಾದಗಳ ಮಸಾಜ್ ದೇಹಕ್ಕೆ ಉತ್ತಮ ವಿಶ್ರಾಂತಿಯನ್ನು ನೀಡುವುದು. ನಿದ್ರಾಹೀನತೆ ಉಂಟಾದಾಗ ಪಾದಗಳ ಮಸಾಜ್ ಮಾಡಿಸಿಕೊಂಡರೆ ತೊಂದರೆ ದೂರವಾಗುತ್ತದೆ. ಕೈ ಕಾಲುಗಳಲ್ಲಿ ಮರಗಟ್ಟುವಿಕೆ ಕಂಡು ಬಂದರೆ ಪಾದಗಳ ಮಸಾಜ್ ಮಾಡಬೇಕು. ಮರಗಟ್ಟುವಿಕೆ ನಿವಾರಣೆಯಾಗುವುದು.

English summary

Ayurveda Suggests This Foot Massage For Better Blood Circulation

Ayurveda medicine is the age old system of medicine that has been practised in the Indian subcontinent. With the advent of allopathy medicine, most of us had forgotten Ayurveda medicine. Today, people see the side effects of allopathy medicines and realize the benefits of Ayurveda again.
Subscribe Newsletter