For Quick Alerts
ALLOW NOTIFICATIONS  
For Daily Alerts

ಮೆದುಳಿನ ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳು

By CM Prasad
|

ಮಾನವರಲ್ಲಿ ಕಾಣಿಸಿಕೊಳ್ಳುವ ಮಾರಣಾಂತಿಕ ಮತ್ತು ಭಯಾನಕ ಕಾಯಿಲೆಗಳಲ್ಲಿ ಪ್ರಮುಖವಾದದ್ದು ಮೆದುಳಿನ ಪಾರ್ಶ್ವವಾಯು. ಹೌದು, ಮೆದುಳು ಎಷ್ಟು ಸೂಕ್ಷ್ಮ ಎಂದು ನಿಮಗೆ ತಿಳಿದೇ ಇದೆ. ಮೆದುಳಿಗೆ ಸ್ವಲ್ಪ ಏರುಪೇರು ಉಂಟಾದರೂ ಇಡೀ ದೇಹದ ಸಂಚಲನವೇ ನಿಂತುಹೋಗುತ್ತದೆ. ಮೆದುಳಿನ ನರಮಂಡಲವು ನಮ್ಮ ಇಡೀ ದೇಹದ ಪ್ರತಿಯೊಂದು ಅಂಗಗಳನ್ನು ನಿಯಂತ್ರಿಸುವಷ್ಟು ಬಲಾಢ್ಯ ಸಾಮರ್ಥ್ಯ ನಮ್ಮ ಮೆದುಳಿಗಿದೆ.

ಆದರೆ ಈ ಮೆದುಳಿಗೆ ಪಾರ್ಶ್ವವಾಯು ಸಂಭವಿಸಿದರೆ ನಿಜಕ್ಕೂ ನರಕಯಾತನೆಯ ಸ್ಥಿತಿ ಎದುರಾಗುತ್ತದೆ. ಮೆದುಳಿಗೆ ರಕ್ತಸಂಚಾರದ ಕೊರತೆಯುಂಟಾಗಿ ಮೆದುಳು ನಿಷ್ಕ್ರಿಯಗೊಂಡು ಪಾರ್ಶ್ವವಾಯು ಸಂಭವಿಸುತ್ತದೆ. ರಕ್ತಕೊರತೆಯ ಅಥವಾ ಮೆದುಳಿಗೆ ರಕ್ತ ಸಂಚಾರದ ಕೊರತೆಯಿಂದ ಅಥವಾ ಮೆದುಳಿನಲ್ಲಿ ರಕ್ತಸ್ರಾವವುಂಟಾಗುವುದರಿಂದ ಪಾರ್ಶ್ವವಾಯುವಿಗೆ ಎಡೆ ಮಾಡಿಕೊಡುತ್ತದೆ.

Warning signs of brain stroke

ಒಬ್ಬ ಸಾಮಾನ್ಯ ಮಾನವನಿಗೆ ಪಾರ್ಶ್ವವಾಯುವಿನ ಬಗ್ಗೆ ಕಿಂಚಿತ್ತೂ ಅರಿವಿರುವುದಿಲ್ಲ. ಈ ಭಯಾನಕ ಸಮಸ್ಯೆಯ ಬಗ್ಗೆ, ಅದರಿಂದ ಆಗುವ ಪರಿಣಾಮದ ಬಗ್ಗೆ ಮತ್ತು ಅದನ್ನು ತಕ್ಷಣಕ್ಕೆ ಚಿಕಿತ್ಸೆ ನೀಡುವ ತಿಳುವಳಿಕೆ ಮತ್ತು ಅಳವಡಿಸಿಕೊಳ್ಳಬೇಕಾದ ಜೀವನಶೈಲಿಯ ಬಗ್ಗೆ ಆತನಿಗೆ ಸೂಕ್ತ ತಿಳುವಳಿಕೆ ಇರುವುದಿಲ್ಲ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಧೂಮಪಾನ, ಉದರಬಾದೆ, ಅಧಿಕ ಬೊಜ್ಜಿನ ಮಟ್ಟ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳು ಪಾರ್ಶ್ವವಾಯುವಿನ ಅಪಾಯಕ್ಕೆ ಎಡೆಮಾಡಿಕೊಡುತ್ತವೆ. ಬನ್ನಿ ಮೆದುಳಿನ ಪಾರ್ಶ್ವವಾಯುವಿನ ಎಚ್ಚರಿಸುವ ಲಕ್ಷಣಗಳು ಯಾವುದು ಎಂಬುದನ್ನು ಮುಂದೆ ಓದಿ.. ನಿಧಾನವಾದ ಓಟ, ಮೆದುಳಿಗೆ ಊಟ, ಇದು ನಿತ್ಯದ ಪಾಠ!

ಮುಖ ಇಳಿಬಿದ್ದಂತಾಗುವುದು
ರೋಗಿಯ ಮುಖವು ಒಂದು ಕಡೆ ಇಳಿಬಿದ್ದಂತೆ ಆಗುವುದು ಅಥವಾ ಒಂದು ಕಡೆ ಮರಗಟ್ಟುವ ಹಾಗೆ ಅನುಭವವಾದರೆ ಕೂಡಲೆ ಸಹಾಯಕ್ಕೆ ಯಾಚಿಸಿ. ಮೊದಲಿಗೆ ಆತನನ್ನು ಹೆಚ್ಚು ನಗುವಂತೆ ಪ್ರೇರೇಪಿಸಿ. ಆಗದಿದ್ದಲ್ಲಿ, ಕೂಡಲೇ ಆಸ್ಪತ್ರೆಗೆ ಆತನನ್ನು ಸಾಗಿಸಿ.

ದುರ್ಬಲ ತೋಳುಗಳು

ಪಾರ್ಶ್ವವಾಯುವಿನಿಂದ ಬಳಲುತ್ತಿರುವ ರೋಗಿಯಲ್ಲಿ ತನ್ನ ಒಂದು ಅಥವಾ ತೋಳುಗಳು ಮರಗಟ್ಟುವಂತೆ ಅಥವಾ ದುರ್ಬಲಗೊಂಡಂತೆ ಭಾಸವಾಗುತ್ತದೆ. ರೋಗಿಗೆ ತನ್ನ ಕೈಗಳನ್ನು ಮೇಲೆತ್ತಲು ತಿಳಿಸಿದರೂ ಆತನ ತೋಳುಗಳು ಕೆಳಗೆ ವಾಲುತ್ತವೆ. ಈ ಸಮಸ್ಯೆಯನ್ನು ನಿರ್ಲಕ್ಷಿಸದಿರಿ. ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು

ಮಾತನಾಡಲು ತೊಂದರೆ

ಪಾರ್ಶ್ವವಾಯುವಿನಿಂದಾಗಿ ಮಾತನಾಡಲು ತುಂಬಾ ತೊಂದರೆಯುಂಟಾಗುತ್ತದೆ. ಕೆಲವು ಸುಲಭವಾದ ಪ್ರಶ್ನೆಗಳನ್ನು ಆವರಿಗೆ ಕೇಳಿನೋಡಿ. ಉತ್ತರಿಸಲು ಅವರಿಂದ ಸಾಧ್ಯವಾಗದು. ಮಾತನಾಡಲು ಹರಸಾಹಸ ಪಡುತ್ತಾರೆ. ಪದೇ ಪದೇ ಪ್ರಶ್ನೆಗಳನ್ನು ಕೇಳಿ ಅವರಿಗೆ ಪಾರ್ಶ್ವಾವಾಯು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ದೇಹದ ಸಮತೋಲನವನ್ನು ಕಳೆದುಕೊಳ್ಳುವುದು

ಪಾರ್ಶ್ವವಾಯು ಇರುವ ರೋಗಿಗಳು ತಮ್ಮ ದೇಹವನ್ನು ಸಮತೋಲನದಲ್ಲಿರಿಸಲು ಕಷ್ಟಪಡುತ್ತಾರೆ. ದೇಹದ ಸುಗಮ ಸಂಚಲನದ ವ್ಯವಸ್ಥೆಯ ಕೊರತೆಯಿಂದ ಅಥವಾ ದೇಹವನ್ನು ಚಲನೆಗೊಳಿಸುವ ತೊಂದರೆಯಿಂದ ಆತ ಬಳಲುತ್ತಿರುತ್ತಾನೆ.
English summary

Warning signs of brain stroke

Stroke is the rapid loss of brain function due to disturbance in the blood supply to the brain This could be either due to ischemia (lack of blood flow) due to blockage or due to hemorrhage. However, an ordinary person is not aware of what stroke is, what it's manifestations are, what the immediate course of action should be and how stroke patients should be rehabilitated.
Story first published: Sunday, January 24, 2016, 12:18 [IST]
X
Desktop Bottom Promotion