For Quick Alerts
ALLOW NOTIFICATIONS  
For Daily Alerts

  ಮರೆಗುಳಿತನವೇ? ಈ ಕೆಟ್ಟ ಅಭ್ಯಾಸಗಳೇ ಕಾರಣವಿರಬಹುದು!

  By Arshad
  |

  ಆಂಗ್ಲ ಭಾಷೆಯಲ್ಲೊಂದು ಸುಭಾಷಿತವಿದೆ. "ನಾನು ಮರೆಯಬಾರದು ಎಂದುಕೊಂಡಿದ್ದನ್ನು ಮರೆತುಬಿಡುತ್ತೇನೆ ಆದರೆ ಯಾವುದನ್ನು ಮರೆಯಬೇಕೋ ಅದನ್ನೇ ಮರೆಯಲಾರೆ". ಸಾಮಾನ್ಯವಾಗಿ ಇದು ಪ್ರತಿಯೊಬ್ಬರ ಪಾಲಿನ ಸತ್ಯ. ನಿತ್ಯದ ಹತ್ತು ಹಲವು ಕೆಲಸಗಳು ನಮಗೆ ಮರೆತೇ ಹೋಗುತ್ತದೆ. ಇದಕ್ಕೊಂದು ಸುಲಭ ಉಪಾಯವಿದೆ. ಏನು ಮಾಡಬೇಕು ಎಂದುಕೊಂಡಿರುವುದನ್ನೆಲ್ಲಾ ಬರೆದು ಪಟ್ಟಿ ಮಾಡಿ ಜೇಬಿನಲ್ಲಿಡುವುದು.

  ಒಂದು ವೇಳೆ ಈ ಪಟ್ಟಿಯನ್ನು ನೋಡುವುದನ್ನೇ ಮರೆತರೆ? ಬಹುತೇಕ ನಾವೆಲ್ಲಾ ಇದೇ ಗುಂಪಿಗೆ ಸೇರಿದವರು. ಆದರೆ ಮರೆಗುಳಿತನ ಹೆಚ್ಚಾದರೆ ಇದು ಆಲ್‌ಝೈಮರ್‌‌ ಅಥವಾ ಅಲ್ಜೀಮರ್‌ ಕಾಯಿಲೆ ಎಂಬ ಸ್ಥಿತಿಗೂ ತಲುಪಬಹುದು. ಇದು ನೆನಪಿನ ಶಕ್ತಿಯನ್ನೇ ಕುಗ್ಗಿಸುವ ಖತರ್ನಾಕ್ ಕಾಯಿಲೆ!  

  ಆದರೆ ಈ ಸ್ಥಿತಿ ಸುಮಾರು ಅರವತ್ತು ಅರವತ್ತೈದು ವರ್ಷದಲ್ಲಿ ಕಂಡುಬರುತ್ತದೆ. ಇದನ್ನೇ ನಮ್ಮ ಹಿರಿಯರು ಅರವತ್ತರಲ್ಲಿ ಅರಳು ಮರಳು ಎಂದು ಕರೆದಿದ್ದಾರೆ. ಆದರೆ ಈ ಸ್ಥಿತಿ ಬರದೇ ಇರಲು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಮೂಲಕ ಮಾತ್ರ ಸಾಧ್ಯ. ನಿಜವಾಗಿ ನೋಡಬೇಕೆಂದರೆ ಮರೆವು ಎಂದರೆ ನಿಜವಾಗಿ ಹೇಳಬೇಕೆಂದರೆ ಮಾಹಿತಿ ನೆನಪಿನಿಂದ ಮಾಸಿ ಹೋಗುವುದಲ್ಲ, ಬದಲಿಗೆ ಯಾವ ಹೊತ್ತಿನಲ್ಲಿ ನೆನಪಿಗೆ ಬರಬೇಕೋ ಆಗ ನೆನಪಾಗದಿರುವುದೇ ಆಗಿದೆ. ಮರೆವಿನ ಕಾಯಿಲೆ: ಮೈಮರೆತರೆ ಆಪತ್ತು ಕಟ್ಟಿಟ್ಟ ಬುತ್ತಿ

  ಇದಕ್ಕೆ ಮುಖ್ಯ ಕಾರಣ ನಮ್ಮ ಕೆಲಸಗಳಿಗೆ ಆದ್ಯತೆ ನೀಡದೇ ಇರುವುದು. ಉದಾಹರಣೆಗೆ ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನ ಬ್ಯಾಟಿಂಗ್ ಬೆಳಿಗ್ಗೆ ಆರು ಘಂಟೆಗೆ ಶುರುವಾಗುತ್ತದೆ. ನೂರನೆಯ ಶತಕ ಬಾರಿಸಲು ಎರಡೇ ರನ್ ಇದೆ. ಬೆಳಿಗ್ಗೆ ಏಳಲು ಮರೆಯಲು ಸಾಧ್ಯವೇ? ಅದೇ ನಿಮ್ಮ ಅಮ್ಮ ಬೆಳಿಗ್ಗೆದ್ದು ಸಾಮಾನು ತರಲು ಹೇಳಿದ್ದುದು ಮರೆತೇ ಹೋಗಿದೆ. ಇಲ್ಲಿ ಯಾವ ವಿಷಯಕ್ಕೆ ಆದ್ಯತೆ ನೀಡುತ್ತೀರೋ ಅದನ್ನು ಮರೆಯಲು ಸಾಧ್ಯವೇ ಇಲ್ಲ.

  ಈ ಅಭ್ಯಾಸಗಳು ಹೆಚ್ಚು ಹೆಚ್ಚಾಗುತ್ತಿದ್ದಂತೆಯೇ ಆಲ್ಜೀಮರ್ಸ್ ಕಾಯಿಲೆ ತಗಲುವ ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ. ಇದರ ಹೊರತಾಗಿ ಕೆಲವು ಇತರ ಕಾರಣಗಳೂ ಈ ಸ್ಥಿತಿಯನ್ನು ತರಲು ಕಾರಣವಾಗುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

  ಔಷಧಿಗಳು

  ಔಷಧಿಗಳು

  ರಕ್ತದ ಒತ್ತಡ ಕಡಿಮೆ ಮಾಡಲು ಅಥವಾ ನೋವು ನಿವಾರಕವಾಗಿ ನೀಡುವ ಔಷಧಿಗಳು ವಾಸ್ತವವಾಗಿ ನರಗಳ ಸಂವೇದನೆಯನ್ನು ತಪ್ಪಿಸುವ ಕ್ಷಮತೆ ಹೊಂದಿವೆ. ನೋವು ನಿವಾರಕ ಎಂದರೆ ನೋವನ್ನು ನಿವಾರಿಸುವುದಿಲ್ಲ, ಬದಲಿಗೆ ನೋವಿನ ಸಂವೇದನೆಯನ್ನು ಮೆದುಳಿಗೆ ತಲುಪದಂತೆ ಮಾಡುತ್ತದೆ. ಇದು ಸತತವಾದರೆ ಕ್ರಮೇಣ ನರವ್ಯವಸ್ಥೆಯೇ ಶಿಥಿಲಗೊಂಡು ಮೆದುಳಿನ ಕ್ಷಮತೆ ಕುಂಠಿತವಾಗುತ್ತದೆ.

  ಖಿನ್ನತೆ

  ಖಿನ್ನತೆ

  ಒಂದು ಸಂಶೋಧನೆಯಲ್ಲಿ ಸಾಬೀತಾಗಿರುವ ಪ್ರಕಾರ ಖಿನ್ನತೆ ಮೊದಲಾದ ಮಾನಸಿಕ ವ್ಯಾಧಿಯಿಂದ ಬಳಲುವವರು ಹೆಚ್ಚಾಗಿ ಮರೆಗುಳಿತನವನ್ನು ಅನುಭವಿಸುತ್ತಾರೆ. ಏಕೆಂದರೆ ಖಿನ್ನತೆಯ ಸಮಯದಲ್ಲಿ ಮೆದುಳಿನಲ್ಲಿರುವ ರಾಸಾಯನಿಕಗಳು ಮೆದುಳಿನ ಕ್ಷಮತೆಗೆ ವಿರುದ್ಧವಾಗಿ ಕೆಲಸ ಮಾಡುವ ಮೂಲಕ ನೆನಪಿನ ಶಕ್ತಿಯನ್ನು ಕ್ಷೀಣಿಸುತ್ತವೆ.

  ಒತ್ತಡ

  ಒತ್ತಡ

  ಮಾನಸಿಕ ಒತ್ತಡವೂ ಮರೆಗುಳಿತನಕ್ಕೆ ಕಾರಣವಾಗಬಹುದು. ಏಕೆಂದರೆ ಯಾವುದೋ ಒಂದು ವಿಷಯದ ಕುರಿತೇ ಹೆಚ್ಚು ಒತ್ತಡಕ್ಕೊಳಗಾಗುವ ವ್ಯಕ್ತಿ ಆ ವಿಷಯವನ್ನಲ್ಲದೇ ಇತರ ವಿಷಯಗಳತ್ತ ಚಿತ್ತ ಹರಿಸದೇ ಇರುವ ಕಾರಣ ಇತರ ವಿಷಯಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದನ್ನೇ ಮರೆಗುಳಿತನ ಎಂದು ಕರೆಯಬಹುದು. ಮರೆಗುಳಿ ಪ್ರೊಫೆಸರ್ ಎಂದು ಹೀಯಾಳಿಸುವ ಮೊದಲು ಆ ಪ್ರೊಫೆಸರರು ಯಾವ ವಿಷಯದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ ಎಂದು ಕಂಡುಕೊಂಡರೆ ಅವರು ಪಡೆದಿರುವ ಆಗಾಧ ಮಾಹಿತಿ ನಿಬ್ಬೆರಗಾಗಿಸುತ್ತದೆ.

  ಸುಸ್ತು

  ಸುಸ್ತು

  ನಮ್ಮ ಮೆದುಳಿಗೆ ದೇಹದ ಇತರ ಯಾವುದೇ ಅಂಗಕ್ಕಿಂತ ಹೆಚ್ಚಿನ ರಕ್ತಸಂಚಾರದ ಅಗತ್ಯವಿದೆ. ದೈಹಿಕವಾಗಿ ಸುಸ್ತಾದಾಗ ಅಥವಾ ಯಾವುದೋ ಕಾಯಿಲೆಯ ಕಾರಣ ಸುಸ್ತು ಆವರಿಸಿದ್ದರೆ ಅನಿವಾರ್ಯವಾಗಿ ಈ ಸ್ಥಳಕ್ಕೆ ಹೆಚ್ಚಿನ ರಕ್ತ ಸರಬರಾಜು ಮಾಡಬೇಕಾಗಿರುವ ಕಾರಣ ಮೆದುಳಿಗೆ ಹರಿಯುವ ರಕ್ತ ಕಡಿಮೆಯಾಗುತ್ತದೆ. ಒಂದು ವೇಳೆ ಇದು ಸತತವಾಗಿದ್ದರೆ ಕ್ರಮೇಣ ಮೆದುಳಿನ ಕ್ಷಮತೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

  ಹೆಚ್ಚಿನ ಮದ್ಯಪಾನ

  ಹೆಚ್ಚಿನ ಮದ್ಯಪಾನ

  ಮದ್ಯದ ವ್ಯಸನಕ್ಕೆ ಒಳಗಾದವರು ನಿತ್ಯವೂ ಇಂತಿಷ್ಟು ಕುಡಿಯದಿದ್ದರೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಬಂದಿರುತ್ತಾರೆ. ಆದರೆ ಈ ವ್ಯಸನ ಮೆದುಳಿನ ಸಂತುಲನವನ್ನೇ ಅಲ್ಲಾಡಿಸಿಬಿಡುತ್ತದೆ. ಮತ್ತಿನಲ್ಲಿ ಪೂರ್ಣ ಎಚ್ಚರವೂ ಅಲ್ಲದ ಪೂರ್ಣ ನಿದ್ರಾವಸ್ಥೆಯೂ ಅಲ್ಲದ ಸ್ಥಿತಿಯಲ್ಲಿ ಮೆದುಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸದೇ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತ್ತಾಬರುತ್ತದೆ. ಇದು ಮರೆಗುಳಿತನವನ್ನು

  ಹೆಚ್ಚಿಸುತ್ತದೆ.

  ಮಧುಮೇಹ

  ಮಧುಮೇಹ

  ಮಧುಮೇಹವೂ ಮರೆಗುಳಿತನಕ್ಕೆ ಕಾರಣವಾಬಹುದು. ಮಧುಮೇಹದ ಕಾರಣ ಸಕ್ಕರೆಯ ಬಳಕೆಯಾಗದೇ ವ್ಯರ್ಥವಾಗುತ್ತದೆ. ಇದರಿಂದ ಮೆದುಳಿನ ಜೀವಕೋಶಗಳೂ ಶಿಥಿಲಗೊಳ್ಳುತ್ತವೆ ಹಾಗೂ ಸ್ಮರಣಶಕ್ತಿಯೂ ಕುಂದುತ್ತದೆ.

  ಹೃದಯ ಸಂಬಂಧಿ ತೊಂದರೆಗಳು

  ಹೃದಯ ಸಂಬಂಧಿ ತೊಂದರೆಗಳು

  ಹೃದಯ ಸಂಬಂಧಿ ತೊಂದರೆಗಳಿದ್ದವರಲ್ಲಿ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಕಡಿಮೆ ರಕ್ತ ಎಂದರೆ ಮೆದುಳಿನ ಕ್ಷಮತೆ ಕುಂದುವುದು ಎಂದೇ ಅರ್ಥ. ಈ ಸ್ಥಿತಿಯಲ್ಲಿ ಅನಿವಾರ್ಯವಾಗಿ ಮರೆಗುಳಿತನ ಆವರಿಸುತ್ತದೆ.

   

  English summary

  Unusual Reasons For Memory Loss You Should Know!

  Do you feel like you have been more absent-minded and forgetful lately? If yes, then there may be a few surprising reasons for your memory loss, apart from a common ailment like Alzheimer's disease
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more