Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಮರೆವಿನ ಕಾಯಿಲೆ: ಮೈಮರೆತರೆ ಆಪತ್ತು ಕಟ್ಟಿಟ್ಟ ಬುತ್ತಿ
ಸಾಮಾನ್ಯವಾಗಿ, ಅಲ್ಜೈಮರ್ಸ್ ಕಾಯಿಲೆ (ಮರೆವಿನ ಕಾಯಿಲೆ) ಯನ್ನು ತಡೆಯಲು, ಹಲವಾರು ಪ್ರೋಟೀನ್ ಮತ್ತು ಖನಿಜಾಂಶಗಳು ಇರುವ ಆಹಾರಗಳು ಇಂದು ನಮಗೆ ಮಾರಕಟ್ಟೆಯಲ್ಲಿ ದೊರೆಯುತ್ತಿದ್ದರೂ ಕೂಡ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮಾತ್ರ ಸಾಧ್ಯವಿಲ್ಲ. ಅಲ್ಜೈಮರ್ಸ್ ಎಂಬುದು ಎಲ್ಲರನ್ನು ಭಯಪಡಿಸುವ ಕಾಯಿಲೆಯಾಗಿದೆ. ಈ ಕಾಯಿಲೆಯು ಒಮ್ಮೆ ಬಂದರೆ ಸಾಕು ಅದು ಆ ವ್ಯಕ್ತಿಯಲ್ಲಿರುವ ಕಾರಣ ನೀಡುವ ಸಾಮರ್ಥ್ಯ ಮತ್ತು ಚಿಂತಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.
ಇನ್ನೂ ಆತಂಕಕಾರಿ ವಿಷಯವೇನೆಂದರೆ, ಇತ್ತೀಚೆಗೆ ಈ ಕಾಯಲೆ ಎಳೆ ಮಕ್ಕಳಲ್ಲಿ ಸಾಮಾನ್ಯವಾಗುತ್ತಿದೆ. ಮುಖ್ಯವಾಗಿ ಅಲ್ಜೈಮರ್ಸ್ ಕಾಯಿಲೆಯು ವಂಶವಾಹಿಗಳ ಪ್ರಭಾವದಿಂದ ಬರುತ್ತವೆ. ಆದರೆ ಆರೋಗ್ಯ ತಙ್ಞರು ಈ ಕಾಯಿಲೆ ಬರಲು ಇರುವ ಇನ್ನಿತರ ಕಾರಣಗಳ ಬಗ್ಗೆ ಪಟ್ಟಿ ನೀಡುತ್ತಾರೆ. ಅವುಗಳಲ್ಲಿ ಪೋಷಕಾಂಶಗಳು, ಶಿಕ್ಷಣ, ಮಧುಮೇಹ, ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳು ಸೇರಿವೆ.
ಅಲ್ಜೈಮರ್ಸ್ ಬಂದರೆ ಅದಕ್ಕೆ ನಮ್ಮ ಮೇಲೆ ಯಾವುದೇ ಮುಲಾಜು ಇರುವುದಿಲ್ಲ. ಇದರ ವಿಚಾರಕ್ಕೆ ಬಂದಾಗ ಚಿಕಿತ್ಸೆಗಿಂತ ನಿಯಂತ್ರಣವೇ ಒಳ್ಳೆಯದು. ಏಕೆಂದರೆ ಇದಕ್ಕೆ ಯಾವುದೇ ಚಿಕಿತ್ಸೆಯು ಇನ್ನೂ ಸರಿಯಾಗಿ ಲಭ್ಯವಾಗಿಲ್ಲ. ಹಾಗಾಗಿ ಅಲ್ಜೈಮರ್ಸ್ ಕಾಯಿಲೆಗೆ ಯಾವುದೇ ಚಿಕಿತ್ಸೆಯನ್ನು ವೈದ್ಯರು ನೀಡಿದರು ಕೂಡ ಅದರಿಂದ ಫಲಪ್ರದವಾದ ಫಲ ಸಿಗುವುದಿಲ್ಲ. ಹಾಗಾಗಿ ನಿಯಂತ್ರಣವೇ ಇದಕ್ಕೆ ಪ್ರಸ್ತುತ ಇರುವ ಮದ್ದಾಗಿದೆ. ಹಾಗಾದರೆ ಅಲ್ಜೀಮರ್ ಅನ್ನು ಹೇಗೆ ನಿಯಂತ್ರಿಸಬಹುದು? ಎಂಬುದು ನಿಮ್ಮ ಪ್ರಶ್ನೆಗೆ ಉತ್ತರವೇ ಈ ಲೇಖನ. ಈ ಅಪಾಯಕಾರಿ ಮರೆವಿನ ಕಾಯಿಲೆ ತಡೆಗಟ್ಟಿ
ಈ ಲೇಖನದಲ್ಲಿ ಅಲ್ಜೈಮರ್ಸ್ ಕಾಯಿಲೆ ಬರುವ ಅಪಾಯವನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸುವ ಆಹಾರಗಳನ್ನು ನಾವು ನೀಡಿದ್ದೇವೆ. ಇದನ್ನು ಸೇವಿಸುವುದರಿಂದ ನಿಮಗೆ ಅಲ್ಜೈಮರ್ಸ್ ಸ್ಥಿತಿ ಬರುವುದನ್ನು ತಡೆಯಬಹುದು. ಈ ಆರೋಗ್ಯಕರ ಆಹಾರಗಳು ಮೆದುಳಿನ ಕೋಶಗಳು ವೇಗವಾಗಿ ಸಾಯುವುದನ್ನು ತಪ್ಪಿಸುತ್ತವೆ. ಏಕೆಂದರೆ ಮೆದುಳಿನ ಕೋಶಗಳು ಸಾಯುವುದರಿಂದಲೇ ಅಲ್ಜೈಮರ್ಸ್ ಕಾಯಿಲೆಯು ಬರುತ್ತದೆ. ಬನ್ನಿ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದೆಯಲ್ಲವೇ? ಬನ್ನಿ ಮುಂದೆ ಓದಿ.
ಹಸಿರು ಸೊಪ್ಪುಗಳು
ಪಾಲಕ್ ಮತ್ತು ಹಸಿರು ಸೊಪ್ಪುಗಳು ಅಲ್ಜೈಮರ್ಸ್ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈ. ಅಷ್ಟೇ ಅಲ್ಲದೆ, ಆರೋಗ್ಯವನ್ನು ಹೆಚ್ಚಿಸುವ ಗುಣಗಳನ್ನು ಕೂಡ ತಮ್ಮಲ್ಲಿ ಒಳಗೊಂಡಿವೆ. ಅಲ್ಜೀಮರ್ ಕಾಯಿಲೆಯನ್ನು ತಡೆಯುವ ನಿಟ್ಟಿನಲ್ಲಿ ನೀವು ಪ್ರತಿದಿನ ನಾರಿನಂಶ ಅಧಿಕವಾಗಿರುವ ಆಹಾರವನ್ನು, ಆಂಟಿ ಆಕ್ಸಿಡೆಂಟ್‌ಗಳನ್ನು, ಹಸಿರು ಸೊಪ್ಪುಗಳನ್ನು, ತರಕಾರಿಗಳನ್ನು ಸೇವಿಸಬೇಕು. ಇವುಗಳು ಮೆದುಳಿನ ಕೋಶಗಳನ್ನು ಬಲಗೊಳಿಸುತ್ತವೆ.

ಜೊತೆಗೆ ಅವುಗಳನ್ನು ಆರೋಗ್ಯಕರವಾಗಿ ಮತ್ತು ಚಟುವಟಿಕೆಯಿಂದ ಸಹ ಇರುವಂತೆ ಮಾಡುತ್ತವೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಒಂದು ಒಂದು ಅಮೂಲ್ಯ ಅಂಶವಾಗಿದ್ದು ಡಿಮೆನ್ಶಿಯಾ ಬರದಂತೆ ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇತ್ತೀಚಿಗೆ ತುಂಬಾ ಮರೆವು? ಅಲ್ಜೈಮರ್ಸ್ ಇರಬಹುದೇ?
ಬಾದಾಮಿ, ವಾಲ್‌ನಟ್‌ಗಳು ಮತ್ತು ಹೆಜಲ್‌ನಟ್‌ಗಳು
ಬಾದಾಮಿ, ವಾಲ್‌ನಟ್‌ಗಳು ಮತ್ತು ಹೆಜಲ್‌ನಟ್‌ಗಳಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು ಇರುತ್ತವೆ. ಇವು ಮತ್ತು ಇವುಗಳಲ್ಲಿರುವ ಕೊಬ್ಬುಗಳು ಸಹ ಆರೋಗ್ಯಕರವಾಗಿರುತ್ತವೆ, ಹಾಗಾಗಿ ಇವುಗಳು ಮೆದುಳಿನ ಆರೋಗ್ಯಕ್ಕೆ ಅತ್ಯಂತ ಮುಖ್ಯವಾದ ಆಹಾರಗಳಾಗಿರುತ್ತವೆ.
ಕ್ಯಾಲಿಫೋರ್ನಿಯಾದ ಅಗ್ರ ಸಂಶೋಧನಾ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ, ವಾಲ್‌ನಟ್‌ಗಳನ್ನು ಸೇವಿಸಲು ನೀಡಿದ ಇಲಿ ಮರಿಗಳು ಅಧಿಕ ದೈಹಿಕ ಕ್ಷಮತೆ ಮತ್ತು ಸ್ಮರಣೆಯ ಸಾಮರ್ಥ್ಯವನ್ನು ತೋರಿಸಿದವಂತೆ.
ಬೆರ್ರಿಗಳು
ಅರಿಶಿನ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














