For Quick Alerts
ALLOW NOTIFICATIONS  
For Daily Alerts

ಬಾಯಿ ಹುಣ್ಣಿನಿಂದ ಹತಾಶೆಯೇ? ಈ ಲೇಖನ ಓದಿ...

By Suma
|

ಬಾಯಿ ಹುಣ್ಣಿನ ಸಮಸ್ಯೆಯು ಎಲ್ಲರಿಗೂ ಬರುವುದು ಸರ್ವೇ ಸಾಮಾನ್ಯ. ಬಾಯಿ ಹುಣ್ಣು ಬರಲು ಅನೇಕ ಕಾರಣಗಳಿವೆ. ಈ ಸಮಸ್ಯೆಯಿಂದ ಹೆಚ್ಚು ಕಿರಿಕಿರಿಯುಂಟಾಗಿ ಕೆಲವೊಮ್ಮೆ ಮಾತನಾಡಲು ಮತ್ತು ಊಟ ಮಾಡಲು ಕಷ್ಟವಾಗುವ ಪರಿಸ್ಥಿತಿ ಎದುರಾಗುತ್ತದೆ. ಕೆಲವೊಂದು ಬಾರಿ ಶಾಖಾಹಾರಿ ಪದಾರ್ಥಗಳ ಸೇವನೆಯೂ ಸಹ ಈ ಸಮಸ್ಯೆಗೆ ತೊಂದರೆಯನ್ನುಂಟು ಮಾಡುತ್ತದೆ. ಆದ್ದರಿಂದ ಚಾಕಲೇಟ್, ಕಡಲೇಬೀಜ, ಗೋಧಿ ಹಿಟ್ಟು ಮತ್ತು ಬಾದಾಮಿಯ ಪದಾರ್ಥಗಳಿಂದ ಕೊಂಚ ದೂರವಿರಿ. ಬಾಯಿ ಹುಣ್ಣಿಗೆ ಕಾರಣ ಮತ್ತು ಮನೆಮದ್ದು

ಇದರಿಂದ ಬಾಯಿ ಹುಣ್ಣು ಆಗುವ ಅಪಾಯವನ್ನು ತಪ್ಪಿಸಬಹುದು. ಬಾಯಿ ಹುಣ್ಣು ಕೆಲವು ಬಾರಿ ಹೆಚ್ಚು ನೋವು ನೀಡಿ ನಿಮ್ಮನ್ನು ಚಿಂತಾಕ್ರಾಂತರನ್ನಾಗಿಸುತ್ತದೆ. ಇದನ್ನು ಅಲಕ್ಷಿಸಿದಷ್ಟು ನೋವು ಖಚಿತ. ಈ ನಿಟ್ಟಿನಲ್ಲಿ ನೀವು ಸುಲಭಾವಾಗಿ ಅನುಸರಿಸಬಹುದಾದ ಕೆಲವು ಆಸಕ್ತಿಕರ ವಿಧಾನಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ...

ಟೂತ್ ಪೇಸ್ಟ್ ಕೊಳ್ಳುವ ಮುನ್ನ..

ಟೂತ್ ಪೇಸ್ಟ್ ಕೊಳ್ಳುವ ಮುನ್ನ..

ಹೌದು, ಟೂತ್ ಪೇಸ್ಟ್ ಕೊಳ್ಳುವ ಮುನ್ನ ಅದರಲ್ಲಿರುವ ಗುಣಲಕ್ಷಣಗಳು ಮತ್ತು ವಿವಿಧ ಅಂಶಗಳ ಬಗ್ಗೆ ಗಮನಹರಿಸಿ. ಸೋಡಿಯಮ್ ಲಾರಿಲ್ ಸಲ್ಫೇಟ್ ಅಂಶವಿರುವ ಟೋತ್ ಪೇಸ್ಟನ್ನು ಬಳಸದಿರಿ. ಕೆಲವೊಂದು ಪ್ರಕರಣಗಳಲ್ಲಿ ಈ ಅಂಶಯುಕ್ತ ಟೂತ್ ಪೇಸ್ಟ್ ನಿಂದ ಬಾಯಿ ಹುಣ್ಣು ಹೆಚ್ಚಾಗಿ ಅಪಾಯದ ಮಟ್ಟವನ್ನು ಮೀರಿರುವುದನ್ನು ಗಮನಿಸಲಾಗಿದೆ.

ವಿಟಮಿನ್-ಬಿ12 ಕೊರತೆ

ವಿಟಮಿನ್-ಬಿ12 ಕೊರತೆ

ನಿಮ್ಮ ದೇಹದಲ್ಲಿ ವಿಟಮಿನ್-ಬಿ12, ಕಬ್ಬಿಣದ ಅಂಶ ಮತ್ತು ಫೋಲಿಕ್ ಆಮ್ಲ ಸತ್ವಗಳ ಕೊರತೆಯುಂಟಾದರೆ ಬಾಯಿ ಹುಣ್ಣು ಬರಲು ಕಾರಣವಾಗುತ್ತದೆ. ಇದನ್ನು ತಡೆಯಲು ಹೆಚ್ಚು ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಸೇವಿಸಲು ಮರೆಯದಿರಿ.

ಗಟ್ಟಿಯಾದ ಆಹಾರ ಪದಾರ್ಥಗಳಿಂದ ದೂರವಿರಿ

ಗಟ್ಟಿಯಾದ ಆಹಾರ ಪದಾರ್ಥಗಳಿಂದ ದೂರವಿರಿ

ಗಟ್ಟಿಯಾದ ಮತ್ತು ಬಾಯಿಯಿಂದ ಅಗಿಯಲು ತೊಂದರೆಯಾಗುವ ಆಹಾರ ಪದಾರ್ಥಗಳಿಂದ ದೂರವಿರಿ. ಜೊತೆಗೆ ಬಿಸಿ ಬಿಸಿ ಮತ್ತು ಖಾರಯುಕ್ತ ಪದಾರ್ಥಗಳನ್ನು ಹೆಚ್ಚು ಸೇವಿಸುವುದನ್ನು ತಡೆಯಿರಿ. ಇದರಿಂದ ಬಾಯಿ ಹುಣ್ಣು ಹೆಚ್ಚಾಗುವ ಅಪಾಯ ಜಾಸ್ತಿ ಇರುತ್ತದೆ.

ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸದಿರಿ

ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿಯನ್ನು ಸೇವಿಸದಿರಿ

ಹೌದು, ಖಾಲಿ ಹೊಟ್ಟೆಯಲ್ಲಿ ಎಂದೂ ಚಹಾ ಅಥವಾ ಕಾಫಿಯನ್ನು ಸೇವಿಸದಿರಿ. ಏಕೆಂದರೆ ಇದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ಬಾಯಿ ಹುಣ್ಣು ಬರಲು ಕಾರಣವಾಗುತ್ತದೆ.

ಊಟದ ಬಳಿಕ ಬಾಯಿ ಸ್ವಚ್ಛಗೊಳಿಸಿ

ಊಟದ ಬಳಿಕ ಬಾಯಿ ಸ್ವಚ್ಛಗೊಳಿಸಿ

ಆಹಾರ ಸೇವಿಸಿದ ನಂತರ ಬಾಯಿಯನ್ನು ಸ್ವಚ್ಛಗೊಳಿಸಲು ಮರೆಯದಿರಿ, ಏಕೆಂದರೆ ಬಾಯಿಯಲ್ಲಿ ಉಳಿದಿರುವ ಅಹಾರ ಪದಾರ್ಥಗಳು ಆಮ್ಲಕ್ಕೆ ರೂಪಾಂತರಗೊಂಡು ಸುಲಭವಾಗಿ ಬಾಯಿ ಹುಣ್ಣಿಗೆ ಕಾರಣವಾಗಿ ಬಿಡುತ್ತದೆ.

ಇತರ ಸೊಂಕಿಗೆ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಿ

ಇತರ ಸೊಂಕಿಗೆ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಿ

ಒಂದು ವೇಳೆ ನೀವು ಜಠರಗರುಳಿನ ಬೇನೆಯಿಂದ, ವೈರಲ್ ಸೋಂಕಿನಿಂದ, ಉದರ ಬಾದೆ ಅಥವಾ ಇಮ್ಮುನೋ ಕೊರತೆಯಿಂದ ಬಳಲುತ್ತಿದ್ದಲ್ಲಿ, ಮೊದಲಿಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಹೊಂದಿರಿ. ಈ ಪರಿಸ್ಥಿತಿಯಲ್ಲಿರುವವರು ಸಹ ಬಾಯಿ ಹುಣ್ಣಿಗೆ ತುತ್ತಾಗುವ ಅಪಾಯವಿರುತ್ತದೆ.

English summary

Tips to prevent mouth ulcers

Suffering from recurrent mouth ulcers and don’t have a clue what to do about it? Well, here are a few tips that might help you prevent mouth ulcers and maintain good oral health. have a look 
Story first published: Tuesday, January 19, 2016, 20:14 [IST]
X
Desktop Bottom Promotion