For Quick Alerts
ALLOW NOTIFICATIONS  
For Daily Alerts

ಒಸಡಿನ ಸಮಸ್ಯೆಯೇ? ಇಲ್ಲಿದೆ ನೋಡಿ ಸೂಪರ್ ಮನೆಮದ್ದು

By Deepu
|

ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಅದು ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತದೆ. ಅದರಲ್ಲೂ ಒಸಡಿನ ನೋವು ಮಾತನಾಡಲು ಬಿಡುವುದಿಲ್ಲ. ಇದರಿಂದಾಗಿ ಒಸಡಿನ ನೋವು ಬಂದರೆ ಅದರಿಂದ ಹೊರಬರುವುದು ಹೇಗೆಂಬ ಚಿಂತೆ ಆರಂಭವಾಗುತ್ತದೆ. ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ

ಒಸಡಿನ ನೋವು ಬಂದರೆ ಆಹಾರ ಸೇವನೆ ಮಾಡುವುದು ಅಸಾಧ್ಯವಾಗುತ್ತದೆ. ಇಂತಹ ಸಮಯದಲ್ಲಿ ನಮಗೆ ತಕ್ಷಣ ನೋವಿನಿಂದ ಪರಿಹಾರ ಸಿಗಬೇಕು ಎನ್ನುವ ಭಾವನೆ ಮೂಡುತ್ತದೆ. ಹಲ್ಲು ಮತ್ತು ಒಸಡಿನ ಮಧ್ಯೆ ಸೋಂಕಾಗಿದ್ದರೆ ಆ ನೋವು ಹಲವಾರು ದಿನಗಳವರೆಗೆ ಇರಬಹುದು. ವೈದ್ಯರನ್ನು ಕಾಣುವ ಮೊದಲು ಸ್ವಲ್ಪ ಮಟ್ಟಿಗೆ ನೋವಿನಿಂದ ಪರಿಹಾರ ಪಡೆಯಲು ಮನೆಮದ್ದನ್ನು ಬಳಸಿದರೆ ಒಳ್ಳೆಯದು. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ ನೋಡಿ. ಒಸಡಿನ ನೋವಿನಿಂದ ಸ್ವಲ್ಪಮಟ್ಟಿನ ಪರಿಹಾರ ಪಡೆಯಿರಿ. ಹಳದಿ ಹಲ್ಲಿಗೆ ಮಂಗಳ ಹಾಡುವ ಮನೆಮದ್ದುಗಳು

ಬೆಳ್ಳುಳ್ಳಿಯ ಪೇಸ್ಟ್

ಬೆಳ್ಳುಳ್ಳಿಯ ಪೇಸ್ಟ್

ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದರ ಪೇಸ್ಟ್ ಅನ್ನು ನೋವುಂಟು ಮಾಡುತ್ತಿರುವ ಒಸಡಿಗೆ ಹಚ್ಚಿ. ಇದು ಬಹುತೇಕ ಕೆಲಸ ಮಾಡುತ್ತದೆ. ಹಲ್ಲಿನ ನೋವಾಗಿರಲಿ ಅಥವಾ ಒಸಡಿನ ನೋವಾಗಿರಲಿ. ಇದು ಕೆಲಸ ಮಾಡುವುದು.

ಲವಂಗ

ಲವಂಗ

ಒಸಡಿನಲ್ಲಿ ಹರಡಿರುವ ಬ್ಯಾಕ್ಟೀರಿಯಾ ನಿವಾರಣೆಗೆ ಲವಂಗ ಒಳ್ಳೆಯ ಮದ್ದು. ಇದು ನೋವನ್ನು ನಿವಾರಣೆ ಮಾಡುವುದು. ಲವಂಗವನ್ನು ಜಗಿಯಿರಿ ಅಥವಾ ಲವಂಗದ ಎಣ್ಣೆಯನ್ನು ಒಸಡಿಗೆ ಹಚ್ಚಿರಿ.

ವೆನಿಲ್ಲಾದ ಸಾರ

ವೆನಿಲ್ಲಾದ ಸಾರ

ಒಸಡಿನ ನೋವು ನಿಮ್ಮ ನಿದ್ರೆಗೆ ತೊಂದರೆಯನ್ನು ಉಂಟು ಮಾಡುತ್ತಲಿದ್ದರೆ ಆಗ ವೆನಿಲ್ಲಾದ ಸಾರವನ್ನು ಬಳಸಿಕೊಳ್ಳಿ. ಇದನ್ನು ಒಸಡಿಗೆ ಒಮ್ಮೆ ಹಚ್ಚಿಕೊಂಡರೆ ನೋವು ಕೆಲವು ಕಾಲ ಕಡಿಮೆಯಾಗಬಹುದು.

ಲಿಂಬೆ ಹಣ್ಣು

ಲಿಂಬೆ ಹಣ್ಣು

ಲಿಂಬೆಯಲ್ಲಿ ವಿಟಮಿನ್ ಸಿ ಇದೆ. ಇದು ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಲಿಂಬೆಯ ಸಾರವನ್ನು ಬಳಸಿ ಒಸಡಿನ ನೋವಿನಿಂದ ಮುಕ್ತರಾಗಿ.

ಈರುಳ್ಳಿ

ಈರುಳ್ಳಿ

ಹಲ್ಲಿನ ಸೋಂಕಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳನ್ನು ಈರುಳ್ಳಿ ಕೊಲ್ಲುವುದು. ಒಂದು ತುಂಡು ಈರುಳ್ಳಿಯನ್ನು ಜಗಿದು ಅದರ ರಸ ಬಾಯಿಯೊಳಗೆ ಇರುವಂತೆ ನೋಡಿಕೊಳ್ಳಿ. ಬಳಿಕ ಅದನ್ನು ಉಗಿಯಿರಿ.

ಟ್ರೀ ಟ್ರೀ ಎಣ್ಣೆ

ಟ್ರೀ ಟ್ರೀ ಎಣ್ಣೆ

ಒಂದು ತುಂಡು ಹತ್ತಿಯನ್ನು ತೆಗೆದುಕೊಂಡು ಅದಕ್ಕೆ ಟ್ರೀ ಟ್ರೀ ಎಣ್ಣೆಯನ್ನು ಹಾಕಿ. ಅದನ್ನು ಒಸಡಿಗೆ ಉಜ್ಜಿಕೊಳ್ಳಿ ಮತ್ತು ನೋವಿನಿಂದ ಪರಿಹಾರ ಪಡೆಯಿರಿ.

English summary

These Remedies Can Kill Gum Pain

Gum pain can make life miserable! When you are suffering from terrible pain, all you need is instant relief. Even before you find the time to go to a doctor, you would want to do something to reduce the pain. The problem with gum pain is that it could start all of a sudden without giving you prior notice. And yes, it gives you hard time. Here are some natural remedies to try.
Story first published: Friday, August 5, 2016, 20:12 [IST]
X
Desktop Bottom Promotion