Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೆನಪಿನ ಶಕ್ತಿಯ ವೃದ್ಧಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ
ನಿಮ್ಮ ಫೋನ್ ಸಂಖ್ಯೆಯನ್ನು ಆಗಾಗ್ಗೆ ಮರೆತು ಬಿಡುವ ಸ್ವಭಾವ ನಿಮ್ಮದಾಗಿದೆಯೇ ಅಥವಾ ಪರೀಕ್ಷೆಯಲ್ಲಿ ಏನಾದರೂ ಪಾಯಿಂಟ್ಗಳನ್ನು ಮರೆತು ಬಿಡುತ್ತಿದ್ದೀರಾ? ಮೆದುಳಿನ ಒಂದು ಪ್ರಮುಖ ಭಾಗವಾಗಿರುವ ಸ್ಮರಣೆಯು ನಿಮಗೆ ಕೈಕೊಡುತ್ತಿದೆ ಎಂದಾದಲ್ಲಿ ಸಾಮಾನ್ಯ ಜೀವನವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತದೆ. ಮೆದುಳು ಎಂಬ ಬ್ರಹ್ಮಾಂಡದಲ್ಲಿ ಅಚ್ಚರಿಯ ಸಂಗತಿ
ಮೆದುಳಿನಲ್ಲಿ ಮಾಹಿತಿಯನ್ನು ಸಂಗ್ರಹಿಸುವುದು, ಮರುಪಡೆದುಕೊಳ್ಳುವುದು ಮೊದಲಾದ ಕಾರ್ಯವನ್ನು ಸ್ಮರಣೆ ಮಾಡುತ್ತದೆ. ಮಾಹಿತಿ ಪ್ರಕ್ರಿಯೆ ಕ್ರಿಯೆಯಾಗಿ ಸ್ಮರಣೆಯು ಕಾರ್ಯನಿರ್ವಹಿಸುತ್ತದೆ. ಮೆಮೊರಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ ಒಂದು ಶಾರ್ಟ್ ಟರ್ಮ್ ಮೆಮೊರಿ ಇನ್ನೊಂದು ಲಾಂಗ್ ಟರ್ಮ್ ಮೆಮೊರಿ. ನೀವು ಎಡ ಮೆದುಳಿನವರೇ ಅಥವಾ ಬಲ ಮೆದುಳಿನವರೇ?
ಶಾರ್ಟ್ ಟರ್ಮ್ ಮೆಮೊರಿಯು ಕಡಿಮೆ ಅವಧಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಲಾಂಗ್ ಟರ್ಮ್ ಮೆಮೊರಿಯು ದೀರ್ಘ ಅವಧಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ. ನಮ್ಮ ಮೆದುಳನ್ನು ಚಟುವಟಿಕೆಯಿಂದ ಇರಿಸಿಕೊಳ್ಳುವುದು ಸಕ್ರಿಯ ಮತ್ತು ಆರೋಗ್ಯದಿಂದ ಇರುತ್ತದೆ. ಇದರಿಂದಾಗಿ ಸುಧಾರಿತ ಜ್ಞಾಪಕ ಶಕ್ತಿಯನ್ನು ನೀವು ಪಡೆದುಕೊಳ್ಳುತ್ತೀರಿ....

ಮೆದುಳಿಗೆ ವ್ಯಾಯಾಮ ನೀಡಿ
ಪದಬಂಧ, ಒಗಟುಗಳನ್ನು ಬಿಡಿಸುವುದು, ಚೆಸ್ ಆಡುವುದು, ಹೀಗೆ ಹೊಸ ತಂತ್ರಗಳನ್ನು ಅರಿತುಕೊಳ್ಳುವುದು ಹೀಗೆ ನಿಯಮಿತವಾಗಿ ಈ ಚಟುವಟಿಕೆಗಳನ್ನು ನಿರ್ವಹಿಸುತ್ತಿರಿ.

ಹೊಸ ಸ್ಮರಣೆಗಳನ್ನು ರಚಿಸಿ
ನಿಮ್ಮ ಸ್ಮರಣೆಯನ್ನು ನೈಸರ್ಗಿಕವಾಗಿ ಸುಧಾರಿಸಬೇಕು ಎಂದಾದಲ್ಲಿ, ಹೊಸ ಜನರನ್ನು ಭೇಟಿಯಾಗುವುದರ ಮೂಲಕ, ಬೇರೆ ಬೇರೆ ಸ್ಥಳಗಳಿಗೆ ವಿಹಾರ ಹೋಗುವುದರ ಮೂಲಕ ಹೊಸ ಹೊಸ ಸ್ಮರಣೆಗಳನ್ನು ರಚಿಸಿಕೊಳ್ಳಿ. ಇದು ನಿಮ್ಮ ಜ್ಞಾಪನೆಯನ್ನು ಸಕ್ರಿಯವಾಗಿ ಚಟುವಟಿಕೆಯಿಂದ ಇರಿಸುವಲ್ಲಿ ಸಹಾಯ ಮಾಡುತ್ತದೆ.

ಒತ್ತಡವನ್ನು ಹತ್ತಿಕ್ಕಿ
ನಿಮ್ಮ ನರಗಳನ್ನು ಶಾಂತಗೊಳಿಸುವ ಮೂಲಕ ಹಾಗೂ ನಿರ್ದಿಷ್ಟ ಒತ್ತಡ ಚಟುವಟಿಕೆಗಳನ್ನು ನಿವಾರಿಸಿಕೊಳ್ಳುವುದರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಸುಧಾರಿಸಿ ಕೊಳ್ಳಬಹುದಾಗಿದೆ.

ಜೈವಿಕ ಆಹಾರಗಳನ್ನು ಸೇವಿಸಿ
ಮೊಸರಿನಂತ ಜೈವಿಕ ಆಹಾರಗಳನ್ನು ಸೇವಿಸುವುದರ ಮೂಲಕ ನೈಸರ್ಗಿಕವಾಗಿ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ, ಇದರಲ್ಲಿರುವ ಆರೋಗ್ಯಕಾರಿ ಬ್ಯಾಕ್ಟೀರಿಯಾ ನಿಮ್ಮ ಜ್ಞಾಪಕ ಶಕ್ತಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.

ಧ್ಯಾನ
ನಿಯಮಿತವಾಗಿ ಧ್ಯಾನವನ್ನು ಅಭ್ಯಾಸ ಮಾಡುವುದು ನಿಮ್ಮ ಸ್ಮರಣೆ ಶಕ್ತಿಯನ್ನು ನೈಸರ್ಗಿಕವಾಗಿ ವೃದ್ಧಿಸುವಲ್ಲಿ ಸಹಾಯಕವಾಗಿದೆ. ಆರೋಗ್ಯಕಾರಿ ಮೆದುಳಿನ ಕೋಶಗಳನ್ನು ಉತ್ಪನ್ನವನ್ನು ವರ್ಧಿಸಲು ಇದು ಉಪಯೋಗಕಾರಿಯಾಗಿದೆ.

ವ್ಯಾಯಮ
ವಿಶೇಷವಾಗಿ, ನಡೆದಾಡುವುದು ಮತ್ತು ಸೈಕ್ಲಿಂಗ್ ಮಾಡುವುದು ನಿಮ್ಮ ಮೆದುಳಿನ ಕೋಶಗಳನ್ನು ಸಕ್ರಿಯವಾಗಿಸುವಲ್ಲಿ ಸಹಕಾರಿಯಾಗಿದೆ ಮತ್ತು ನಿಮ್ಮ ಸ್ಮರಣೆಯನ್ನು ಸುಧಾರಿಸುತ್ತದೆ ಎಂಬುದಾಗಿ ಅಧ್ಯಯನವು ತಿಳಿಸಿದೆ.



Click it and Unblock the Notifications
