For Quick Alerts
ALLOW NOTIFICATIONS  
For Daily Alerts

ಮೆದುಳು ಎಂಬ ಬ್ರಹ್ಮಾಂಡದಲ್ಲಿ ಅಚ್ಚರಿಯ ಸಂಗತಿ

By Manu
|

"ಏನೇನನ್ನು ಕಂಡುಹಿಡಿಯಬೇಕಾಗಿತ್ತೋ ಅದನ್ನೆಲ್ಲಾ ಕಂಡುಹಿಡಿದಾಗಿದೆ, ಇನ್ನು ಏನನ್ನೂ ಕಂಡುಹಿಡಿಯಬೇಕಾಗಿಲ್ಲ" ಈ ಮಾತನ್ನು ಹೇಳಿದವರು ಚಾರ್ಲ್ಸ್ ಹೆಚ್ ಡ್ಯೂಯೆಲ್, ಅದೂ 1899ರಲ್ಲಿ. ಆದರೆ ವಿಜ್ಞಾನ ಎಂದಿಗೂ ಒಂದು ಹಂತಕ್ಕೆ ತನ್ನ ಕೊನೆಯನ್ನು ಪ್ರಕಟಿಸುವುದಿಲ್ಲ. ನಿರಂತರವಾಗಿ ಹೊಸತನ್ನು, ಸುಲಭವಾದುದನ್ನು, ಊಹಿಸಲೂ ಅಸಾಧ್ಯಾವಾದ ಸಾಧ್ಯತೆಗಳನ್ನು ಮನುಕುಲಕ್ಕೆ ನೀಡುತ್ತಾ ಬಂದಿದೆ.

ಇಂದು ಎಲ್ಲಾ ಕ್ಷೇತ್ರಗಳಲ್ಲಿ ಬಹಳಷ್ಟು ಸಂಶೋಧನೆಗಳಾಗಿವೆ ಹಾಗೂ ಜನಸಾಮಾನ್ಯರ ಜೀವನಮಟ್ಟವನ್ನು ಬಹಳಷ್ಟು ಸುಧಾರಿಸಿದೆ. ಇಂದು ಪ್ರತಿದಿನವೂ ಒಂದಲ್ಲಾ ಒಂದು ಹೊಸತಾದ ಸಂಶೋಧನೆ ಅಥವಾ ಹಿಂದೆ ಆಗಿರುವ ಸಂಶೋಧನೆಯಲ್ಲಿ ಅಭಿವೃದ್ಧಿ ಹೊರಬರುತ್ತಲೇ ಇರುತ್ತದೆ. ಅವುಗಳಲ್ಲಿ ಬಹಳಷ್ಟು ಠುಸ್ ಎಂದು ಪಾತಾಳ ತಲುಪಿದರೆ ಇನ್ನು ಕೆಲವು ಇದರ ಹೊರತಾಗಿ ನಮ್ಮ ಜೀವನ ಇಷ್ಟು ದಿನ ಹೇಗೆ ನಡೆಯಿತು ಎಂದು ಅಚ್ಚರಿಪಡುವಷ್ಟು ಜನಪ್ರಿಯತೆ ಗಳಿಸುತ್ತವೆ.

ಅದು ಏನೇ ಇರಲಿ, ಆದರೆ ಇಷ್ಟೆಲ್ಲಾ ಕಾರ್ಯ ವೈಖರ್ಯಕ್ಕೆ ಕಾರಣವಾದ ಮಾನವನ ಮೆದುಳಿನ ಕಾರ್ಯವೈಖರಿಯನ್ನು ಅರಿಯುವಲ್ಲಿ ಕೂಡ ನಮ್ಮ ಸಂಶೋಧಕರು ಸಾಕಷ್ಟು ದುಡಿದಿದ್ದಾರೆ, ಅಲ್ಲದೆ ಮೆದುಳಿನ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ಕಲೆ ಹಾಕಿದ್ದಾರೆ, ಅವು ಯಾವುದು ಎಂಬುದನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಮೆದುಳಿನ ರಕ್ತನಾಳ

ಮೆದುಳಿನ ರಕ್ತನಾಳ

ಮೆದುಳಿನಲ್ಲಿ ಅತಿಸೂಕ್ಷ್ಮವಾದ ರಕ್ತನಾಳಗಳಿದ್ದು ಸತತವಾಗಿ ರಕ್ತವನ್ನು ಪೂರೈಸುತ್ತಾ ಇರುತ್ತದೆ. ರಕ್ತದ ಮೂಲಕ ಆಗಮಿಸಿದ ಆಮ್ಲಜನಕವನ್ನು ಮೆದುಳಿನ ಪ್ರತಿ ಜೀವಕೋಶಕ್ಕೆ ತಲುಪಿಸುವುದು ಇವುಗಳ ಕೆಲಸ.ಇವುಗಳನ್ನು ಒಂದು ವೇಳೆ ಬಿಡಿಸಿ ಒಂದೇ ನಾಳವನ್ನಾಗಿಸಿದರೆ ಅದರ ಉದ್ದ 150,000ಮೈಲುಗಳಾಗುತ್ತದೆ! ಅಲ್ಲದೇ ಈ ನಾಳಗಳು ಅತಿ ಬಲಿಷ್ಠವೂ ಆಗಿರುವುದರ ಜೊತೆಗೆ ರಕ್ತವನ್ನು ಪೂರೈಸುವ ವೇಗವೂ ಅತಿ ಹೆಚ್ಚಿರುತ್ತದೆ.

ಬಿಳಿದ್ರವ್ಯ ಮತ್ತು ಬೂದುದ್ರವ್ಯ

ಬಿಳಿದ್ರವ್ಯ ಮತ್ತು ಬೂದುದ್ರವ್ಯ

ಮೆದುಳಿನ ಚಟುವಟಿಕೆಯನ್ನು ಬಿಳಿದ್ರವ್ಯ ಮತ್ತು ಬೂದುದ್ರವ್ಯ ಎಂಬ ಎರಡು ವಿಧದ ದ್ರವ್ಯಗಳು (brain matter) ಗಳು ನಿಯಂತ್ರಿಸುತ್ತವೆ. ಬಿಳಿ ದ್ರವ್ಯ ಶೇಖಡಾ ಅರವತ್ತಿಷ್ಟದ್ದರೆ ಉಳಿದ ನಲವತ್ತು ಶೇಖಡಾ ಬೂದುದ್ರವ್ಯವಾಗಿದೆ. ಈ ಎರಡೂ ದ್ರವ್ಯಗಳು ಸತತವಾಗಿ ಸಂಕೇತಗಳನ್ನು ಕಳುಹಿಸುತ್ತಾ ಸ್ವೀಕರಿಸುತ್ತಾ ಇದ್ದು ದೇಹದ ವಿವಿಧ ಚಟುವಟಿಕೆಯನ್ನು ನಿಯಂತ್ರಿಸುತ್ತವೆ.

ಬಿಳಿದ್ರವ್ಯ ಮತ್ತು ಬೂದುದ್ರವ್ಯ

ಬಿಳಿದ್ರವ್ಯ ಮತ್ತು ಬೂದುದ್ರವ್ಯ

ಆದರೆ ಎರಡೂ ದ್ರವ್ಯಗಳು ಪ್ರತ್ಯೇಕ ಅಂಗಗಳನ್ನು ನಿಯಂತ್ರಿಸುತ್ತವೆ. ಇವರಡೂ ದ್ರವ್ಯಗಳಲ್ಲಿ ಬೂದುದ್ರವ್ಯ ಪ್ರಮುಖವಾದ ಚಟುವಟಿಕೆಗಳನ್ನು (ನಿರ್ಣಯ ಕೈಗೊಳ್ಳುವುದು, ಹೊಸ ವಿಷಯಗಳನ್ನು ಗ್ರಹಿಸುವುದು ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು) ನಿರ್ವಹಿಸಲು ನ್ಯೂರಾನ್ ಗಳನ್ನು ಬಳಸಿಕೊಳ್ಳುತ್ತದೆ. ಬಿಳಿದ್ರವ್ಯ ದೇಹದ ಐಚ್ಛಿಕ ಮತ್ತು ಅನೈಚ್ಛಿಕ ಕಾರ್ಯಗಳನ್ನು ನಿರ್ವಹಿಸುತ್ತದೆ.

ಮೆದುಳಿನ ಮೊತ್ತ ಮೊದಲ ಸಂವೇದನೆ ಸ್ಪರ್ಶವಾಗಿದೆ

ಮೆದುಳಿನ ಮೊತ್ತ ಮೊದಲ ಸಂವೇದನೆ ಸ್ಪರ್ಶವಾಗಿದೆ

ಮೆದುಳು ಕಲಿಯುವ ಮೊದಲ ಸಂವೇದನೆ ಎಂದರೆ ಸ್ಪರ್ಶ. ಆದರೆ ಇದನ್ನು ಪೂರ್ಣವಾಗಿ ಕಲಿಯಲು ಮೆದುಳಿಗೆ ಸುಮಾರು ಹನ್ನೆರಡು ವಾರ ಕಾಲಾವಕಾಶ ಬೇಕು. ಇದೇ ಕಾರಣದಿಂದ ನಮ್ಮ ದೇಹವನ್ನು ನಾವೇ ಮುಟ್ಟಿಕೊಂಡಾಗ ಆಗುವ ಅನುಭವಕ್ಕಿಂತ ಹೊಸತಾಗಿ ಯಾರಾದರೂ ಸ್ಪರ್ಶಿಸಿದರೆ ಬೇರೆಯೇ ಸಂವೇದನೆ ಹೊಂದುತ್ತೇವೆ. ಮಗುವನ್ನು ತಾಯಿ ಎತ್ತಿಕೊಂಡಾಗ ಅಳು ನಿಲ್ಲಿಸಲೂ ಇದೇ ಕಾರಣ.

ಮೆದುಳಿನ ಗಾತ್ರ

ಮೆದುಳಿನ ಗಾತ್ರ

ದೇಹದ ಗಾತ್ರಕ್ಕೆ ಹೋಲಿಸಿದರೆ ಮನುಷ್ಯರು ಅತಿ ದೊಡ್ಡ ಮೆದುಳನ್ನು ಹೊಂದಿದ್ದಾರೆ. ಭೂಜೀವಿಗಳಲ್ಲಿಯೇ ಅತಿದೊಡ್ಡದಾದ ಪ್ರಾಣಿಯಾದ ಆನೆಯ ಮೆದುಳು ದೊಡ್ಡಗಾತ್ರದಲ್ಲಿದ್ದರೂ ಆನೆಯ ಶರೀರಕ್ಕೆ ಹೋಲಿಸಿದರೆ ಮನುಷ್ಯರಿಗಿಂತ ಕೊಂಚ ಚಿಕ್ಕದಾಗಿದೆ. ಅತಿ ಚಿಕ್ಕ ಮೆದುಳು ಹೊಂದಿರುವ ಪ್ರಾಣಿ ಎಂದರೆ ಮೀನು (ಇದರ ಸ್ಮರಣ ಶಕ್ತಿ ಕೇವಲ ಒಂದು ಸೆಕೆಂಡುಗಳು ಮಾತ್ರ). ಮೆದುಳಿನ ಹೋಲಿಕೆಯ ಗಾತ್ರಕ್ಕೂ ಪ್ರಾಣಿಯ ಚಿಂತನಾ ಸಾಮರ್ಥ್ಯಕ್ಕೂ ನಿಕಟ ಸಂಬಂಧವಿದೆ.

ಮೆದುಳಿನ ಗಾತ್ರ

ಮೆದುಳಿನ ಗಾತ್ರ

ದೇಹದ ಇತರ ಅಂಗಗಳು ಒಂದು ವಿಧದ ಸ್ನಾಯು ಅಥವಾ ಜೀವಕೋಶಗಳಿಂದ ನಿರ್ಮಿಸಲ್ಪಟ್ಟಿವೆ. ಆದರೆ ಮೆದುಳಿನ ಸರಿಸುಮಾರು ಎಂಭತ್ತೈದು ಶೇಖಡಾ ಸೆರೆಬ್ರಮ್ (Cerebrum) ಎಂಬ ಕೋಶಗಳಿಂದ ನಿರ್ಮಿಸಲ್ಪಟ್ಟಿದೆ. ಇದು ಅತ್ತ ಪೂರ್ಣ ದ್ರವವೂ ಅಲ್ಲದ, ಇತ್ತ ಪೂರ್ಣ ಘನವೂ ಅಲ್ಲದ ರೂಪದಲ್ಲಿದೆ. ಈ ಎಂಭತ್ತೈದು ಶೇಖಡಾ ಭಾಗ ದೇಹದ ಪ್ರತಿ ಅಂಗದ ಚಲನೆಯನ್ನು ನಿಯಂತ್ರಿಸುತ್ತದೆ. ಸುಮಾರು ಎಂಟು ಸಾವಿರ ಮರಣೋತ್ತರ ಪರೀಕ್ಷೆಗಳಲ್ಲಿ ಮೆದುಳಿನ ತೂಕವನ್ನು ಅಳೆದಾಗ ವಯಸ್ಕ ಪುರುಷರ ಮೆದುಳು ಸರಾಸರಿ 1,336 ಗ್ರಾಂ ಹೊಂದಿದ್ದರೆ ಮಹಿಳೆಯರ ಮೆದುಳು 1,198 ಗ್ರಾಂ ಎಂದು ಕಂಡುಬಂದಿದೆ. (ಇನ್ನುಳಿದ ಭಾಗ ಮೊಣಕಾಲ ಕೆಳಗೆ ಹೋಯಿತೇ?). ಇನ್ನುಳಿದ ಭಾಗ ಮೆದುಳಿನಾದ್ಯಂತ ಹರಡಿರುವ ನರಗಳ ಮತ್ತು ನರತಂತುಗಳ ವ್ಯವಸ್ಥೆಯಾಗಿದೆ.

English summary

Facts You Never Knew About the Human Brain...

The human brain has amazed and baffled people throughout the ages. Some scientists and doctors have devoted their entire lives to learning how the brain works. It is no wonder that people enjoy learning facts about this incredible organ in the human body. Below, you will find facts about the brain including how it works, how it develops, what it controls, how it affects,and more, which may be helpful. When you finish reading about these fun facts, take this short brainpower quiz and see how much you learned about the human brain.
Story first published: Monday, April 11, 2016, 13:22 [IST]
X
Desktop Bottom Promotion