For Quick Alerts
ALLOW NOTIFICATIONS  
For Daily Alerts

ಕಾಲ್ಬೆರಳ ಉಗುರು ಶಿಲೀಂಧ್ರಕ್ಕೆ ಫಲಪ್ರದ ಮನೆಮದ್ದು

By Arshad
|

ಮಳೆಗಾಲದಲ್ಲಿ ಎಲ್ಲೆಡೆ ಹರಡುವ ಕೆಸರಿನ ಕಾರಣದಿಂದ ಕಾಲುಬೆರಳುಗಳ ನಡುವೆ ಸೋಂಕು ಉಂಟಾಗುವುದು ಸಾಮಾನ್ಯವಾಗಿದೆ. ಹೊರಗಿನಿಂದ ಒದ್ದೆ ಪಾದಗಳಲ್ಲಿ ಒಳಬಂದ ಬಳಿಕ ಸರಿಯಾಗಿ ತೊಳೆದುಕೊಳ್ಳದೇ ಒದ್ದೆಯಾಗಿಯೇ ಇರಿಸಿದರೆ ಇದನ್ನು ಕಂಡ ಹಿರಿಯರು ಕೂಗಾಡುವುದು ಎಲ್ಲಾ ಮನೆಗಳಲ್ಲಿ ಸಾಮಾನ್ಯ. ಏಕೆಂದರೆ ಒದ್ದೆ ಪಾದಗಳು ಎಂದರೆ ಶಿಲೀಂಧ್ರಗಳಿಗೆ ತೆರೆಗೆ ಬಾಗಿಲಿನ ಸ್ವಾಗತ ಇದ್ದಂತೆ. ಒದ್ದೆಯಾಗಿದ್ದಷ್ಟೂ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಮಳೆಗಾಲದಲ್ಲಿ ಪಾದರಕ್ಷೆಗಳನ್ನು ಧರಿಸಿದರೂ ಬೆರಳುಗಳ ಸಂದಿಗಳಲ್ಲಿ ತೇವಾಂಶ ಉಳಿದೇ ಉಳಿಯುತ್ತದೆ. ಅದರಲ್ಲೂ ಕಾಲುಚೀಲ ಧರಿಸಿದವರಲ್ಲಿ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇನ್ನೂ ಕೆಲವರಿಗೆ ಮಳೆಗಾಲದಲ್ಲಿ ಹೊರಗಿನ ಕೆಸರಿನಲ್ಲಿ ಓಡಾಡುವುದೇ ಒಂದು ಉಲ್ಲಾಸ. ಆದರೆ ಮನೆಗೆ ಬಂದ ಬಳಿಕ ಸರಿಯಾಗಿ ಪಾದಗಳನ್ನು ತೊಳೆದುಕೊಳ್ಳದೇ ಇದ್ದರೆ ಮಾತ್ರ ಶಿಲಿಂಧ್ರದ ಸೋಂಕು ಖಚಿತ. ಕಾಲ್ಬೆರಳುಗಳ ಉಗುರಿನ ಫಂಗಸ್ ನಿವಾರಿಸಲು 8 ಮನೆ ಮದ್ದುಗಳು

ನಾವು ಬರೆ ಪಾದಗಳಿಗೆ ನೀರು ಹೊಯ್ದು ಒಂದಕ್ಕೊಂದು ಉಜ್ಜಿಕೊಂಡು ಸ್ವಚ್ಛಗೊಳಿಸಿ ಒರೆಸಿಕೊಂಡರೆ ಆಯ್ತು ಎಂದು ಕೊಳ್ಳುತ್ತೇವೆ. ಆದರೆ ಕಾಲುಬೆರಳುಗಳ ಸಂಧಿ ಮತ್ತು ಉಗುರುಗಳ ಅಂಚುಗಳಲ್ಲಿ ಅಂಟಿಕೊಂಡಿದ್ದ ಕೊಳೆಯಿಂದಾಗಿ ಈ ಸೋಂಕು ಶೀಘ್ರವಾಗಿ ಹರಡುತ್ತದೆ. ಉಗುರುಗಳ ಅಂಚುಗಳಲ್ಲಿ ಸೋಂಕು ಮೊದಲು ಪ್ರಾರಂಭವಾಗುತ್ತದೆ. ಉಗುರುಗಳು ಕೊಂಚ ಹಳದಿ ಬಣ್ಣಕ್ಕೆ ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ. ಇದು ಸೋಂಕಿನ ಪ್ರಥಮ ಲಕ್ಷಣವಾಗಿದೆ.

ಈ ಸಮಯದಲ್ಲಿ ಸರಿಯಾದ ಆರೈಕೆ ಮಾಡದೇ ಇದ್ದರೆ ಈ ಸೋಂಕು ಒಳಗಿನಿಂದ ಆವರಿಸಿ ಕಡೆಯ ಹಂತದಲ್ಲಿ ನೋವು ನೀಡಲು ಪ್ರಾರಂಭಿಸುತ್ತದೆ. ಒಳಗಿನಿಂದ ಕೀವು ತುಂಬಿಕೊಂಡು ಪಾದರಕ್ಷೆಗಳನ್ನು, ಅದರಲ್ಲೂ ಶೂ ಗಳನ್ನು ಧರಿಸಲು ಕಷ್ಟಕರವಾಗಿಸುತ್ತದೆ. ಒಡೆದ ಕೀವು ಅಸಾಧ್ಯ ದುರ್ವಾಸನೆಯನ್ನುಂಟುಮಾಡುತ್ತದೆ.

ಉಗುರುಗಳು ಸಡಿಲವಾಗಿ ಕೊಂಚವೇ ಒತ್ತಡ ಬಿದ್ದರೂ ಎದ್ದು ಬಂದು ಅಪಾರ ನೋವನ್ನುಂಟುಮಾಡುತ್ತವೆ. ಇದಕ್ಕಾಗಿ ಹಲವು ಮುಲಾಮು ಮತ್ತು ಮಾತ್ರೆಗಳು ಲಭ್ಯವಿವೆ. ಈ ಸೋಂಕಿಗೆ ಕೆಲವು ಆಯುರ್ವೇದೀಯ ಔಷಧಿಗಳೂ ಲಭ್ಯವಿದ್ದು ಪಾದಗಳ ಸೋಂಕಿಗೆ ಅತ್ಯುತ್ತಮ ಪರಿಹಾರ ಒದಗಿಸುತ್ತವೆ. ಇಂತಹ ಹತ್ತು ಸುಲಭ ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ...

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆ

ಒಂದು ಚಿಕ್ಕ ಹತ್ತಿಯುಂಡೆಯನ್ನು ಟೀ ಟ್ರೀ ಎಣ್ಣೆಯಲ್ಲಿ ಅದ್ದಿ ಬೆರಳುಗಳ ಸಂಧಿ ಮತ್ತು ಉಗುರುಗಳ ಮೇಲೆ, ವಿಶೇಷವಾಗಿ ಉಗುರುಗಳ ಅಂಚುಗಳಲ್ಲಿ ಇಳಿಯುವಂತೆ ಹಚ್ಚಬೇಕು. ಬೆಳಿಗ್ಗೆ ಸ್ನಾನದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡರೆ ಸೋಂಕು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಒಂದು ಚಿಕ್ಕಚಮಚ ಆಲಿವ್ ಎಣ್ಣೆ ಮತ್ತು ಕೆಲವು ಹನಿ ಒರೆಗಾನೋ ಅವಶ್ಯಕ ತೈಲವನ್ನು ಬೆರೆಸಿ ಈ ತೈಲವನ್ನು ಹತ್ತಿಯುಂಡೆಯ ಸಹಾಯದಿಂದ ಸೋಂಕಿಗೆ ಒಳಗಾದ ಭಾಗಕ್ಕೆ ಹಚ್ಚಿ. ಇದರಿಂದಲೂ ಸೋಂಕು ನಿಧಾನವಾಗಿ ದೂರವಾಗುತ್ತದೆ.

ಅರಿಶಿನ ಪುಡಿಯ ಲೇಪನ

ಅರಿಶಿನ ಪುಡಿಯ ಲೇಪನ

ಒಂದು ಚಿಕ್ಕಚಮಚ ಅರಿಶಿನ ಪುಡಿ ತೆಗೆದುಕೊಂಡು ಕೊಂಚ ನೀರಿನಲ್ಲಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಕಾಲಿನ ಬೆರಳಿನ ಸಂಧಿ ಮತ್ತು ಉಗುರುಗಳ ಅಂಚುಗಳಿಗೆ ಹಚ್ಚಿ. ಇದು ಪೂರ್ಣವಾಗಿ ಒಣಗಲಿ. ಬಳಿಕ ತಣ್ಣೀರಿನಿಂದ ತೊಳೆದುಕೊಂಡು ತಕ್ಷಣ ಸ್ವಚ್ಛವಾಗಿ ಒರೆಸಿ ಒಣಗಿಸಿಕೊಳ್ಳಿ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಒಂದು ಚಿಕ್ಕಚಮಚ ಲ್ಯಾವೆಂಡರ್ ಎಣ್ಣೆಗೆ ಸಮಪ್ರಮಾಣದಲ್ಲಿ ಟೀ ಟ್ರೀ ಎಣ್ಣೆ ಬೆರೆಸಿ ಕೆಲವು ಹನಿ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಸೋಂಕು ಇರುವಲ್ಲಿ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಲಿಂಬೆ ರಸ

ಲಿಂಬೆ ರಸ

ಒಂದು ಚಿಕ್ಕ ಚಮಚ ಈಗತಾನೇ ಹಿಂಡಿದ ಲಿಂಬೆಯ ರಸವನ್ನು ಹತ್ತಿಯುಂಡೆಯಲ್ಲಿ ಅದ್ದಿ ಸೋಂಕು ಇರುವ ಬೆರಳು ಸಂಧಿ ಮತ್ತು ಉಗುರುಗಳ ಅಂಚುಗಳಿಗೆ ಇಳಿಯುವಂತೆ ಹಚ್ಚಿ. ಶಿಲೀಂಧ್ರದ ಸೋಂಕು ಇದರಿಂದ ಶೀಘ್ರವೇ ಗುಣವಾಗುತ್ತದೆ.

ಬೇವಿನ ಎಲೆಗಳು

ಬೇವಿನ ಎಲೆಗಳು

ಕಹಿಬೇವಿನ ಎಲೆಗಳಲ್ಲಿ ಶಿಲೀಂಧ್ರ ನಿವಾರಕ ಗುಣದ ಸಹಿತ ಹಲವಾರು ಔಷಧೀಯ ಗುಣಗಳಿವೆ. ಕೆಲವು ಬೇವಿನ ಎಲೆಗಳನ್ನು ಕುದಿಯುವ ನೀರಿಗೆ ಹಾಕಿ ಕೆಲವು ನಿಮಿಷಗಳ ಕಾಲ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣಿದ ಬಳಿಕ ಇದರಿಂದ ಎಲೆಗಳನ್ನು ನಿವಾರಿಸಿ ಈ ನೀರಿಗೆ ಕೊಂಚ ಬೆಳ್ಳುಳ್ಳಿ ಎಣ್ಣೆ ಮತ್ತು ಟೀ ಟ್ರೀ ಎಣ್ಣೆ ಸೇರಿಸಿ. ಈ ನೀರನ್ನು ಹತ್ತಿಯುಂಡೆಯಲ್ಲಿ ಅದ್ದಿ ಸೋಂಕು ಇರುವ ಸ್ಥಳದಲ್ಲೆಲ್ಲಾ ಹಚ್ಚಿ.

ಸೇಡಾರ್ ವುಡ್ ಎಣ್ಣೆ (Cedarwood oil)

ಸೇಡಾರ್ ವುಡ್ ಎಣ್ಣೆ (Cedarwood oil)

ಈ ಎಣ್ಣೆಯಲ್ಲಿ ಪ್ರತಿಜೀವಕ ಮತ್ತು ಶಿಲೀಂಧ್ರನಿವಾರಕ ಗುಣಗಳಿವೆ. ಈ ಮರದ ಚೆಕ್ಕೆ ಅಥವಾ ಎಲೆಗಳನ್ನು ಕೊಂಚ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಒಂದು ವಾರದ ಕಾಲ ಮುಳುಗಿಸಿಡಿ. ಸಮಯ ಇದ್ದರೆ ಎರಡು ವಾರ ಇಟ್ಟರೆ ಇನ್ನೂ ಉತ್ತಮ. ಈ ಎಣ್ಣೆಯನ್ನು ಹತ್ತಿಯುಂಡೆಯ ಮೂಲಕ ಸೋಂಕು ಇರುವಲ್ಲೆಲ್ಲಾ ಹಚ್ಚಿ.

ಕ್ಯಾಲೆಂಡ್ಯುಲಾ

ಕ್ಯಾಲೆಂಡ್ಯುಲಾ

ನೋಡಲು ಸೇವಂತಿಗೆ ಹೂವಿನಂತಿರುವ ಕ್ಯಾಲೆಂಡುಲಾ ಹೂವಿನಲ್ಲಿಯೂ ಶಿಲೀಂಧ್ರಗಳನ್ನು ಕೊಲ್ಲುವ ಪೋಷಕಾಂಶಗಳಿವೆ.ಇದಕ್ಕಾಗಿ ಈ ಗಿಡದ ಎಲೆಗಳನ್ನು ಕುದಿಯುವ ನೀರಿನಲ್ಲಿ ಸುಮಾರು ಅರ್ಧ ಘಂಟೆ ಕಾಲ ಕುದಿಸಿ. ಈ ನೀರು ಕೊಂಚ ತಣಿದ ಬಳಿಕ ಪಾದಗಳನ್ನು ಈ ನೀರಿನಲ್ಲಿ ಮುಳುಗಿಸಿ ಕೊಂಚ ಹೊತ್ತು ಮುಳುಗಿಸಿ ಬಳಿಕ ಸ್ವಚ್ಛಬಟ್ಟೆಯಿಂದ ಒರೆಸಿಕೊಳ್ಳಿ.

ಕ್ಯಾಮೋಮೈಲ್

ಕ್ಯಾಮೋಮೈಲ್

ಅತಿ ಹಿಂದಿನ ಕಾಲದಿಂದಲೂ ಈ ಹೂವುಗಳು ಶಿಲೀಂಧ್ರನಿವಾರಕವಾಗಿ ಬಳಕೆಯಲ್ಲಿವೆ. ಈ ಗಿಡದ ಕೆಲವು ಎಲೆಗಳನ್ನು ಬಿಸಿನೀರಿನಲ್ಲಿರಿಸಿ ಸುಮಾರು ಒಂದು ಅಥವಾ ಎರಡು ಘಂಟೆ ನೆನೆಯಲು ಬಿಡಿ. ಬಳಿಕ ಪಾದಗಳನ್ನು ಈ ನೀರಿನಲ್ಲಿ ಕೊಂಚ ಹೊತ್ತು ಇರಿಸಿ. ಬಳಿಕ ಸ್ವಚ್ಛಬಟ್ಟೆಯಿಂದ ಒರೆಸಿಕೊಳ್ಳಿ.

ಯಷ್ಠಿಮಧು (ಲೈಕೋರೈಸ್ -Licorice)

ಯಷ್ಠಿಮಧು (ಲೈಕೋರೈಸ್ -Licorice)

ಇದೊಂದು ಬೇರು ಆಗಿದ್ದು ಇದರಲ್ಲಿಯೂ ಶಿಲೀಂಧ್ರನಾಶಕ ಗುಣವಿದೆ. ಉತ್ತಮ ಪರಿಣಾಮ ಪಡೆಯಲು ಈ ಬೇರಿನ ಕೆಲವು ತುಂಡುಗಳನ್ನು ನೀರಿನಲ್ಲಿ ಕೊಂಚ ಹೊತ್ತು ಕುದಿಸಿ ಬಳಿಕ ಅರ್ಧ ಘಂಟೆ ತಣಿಯಲು ಬಿಡಬೇಕು. ಈ ನೀರಿನಲ್ಲಿ ಹತ್ತಿಯ ಬಟ್ಟೆಯನ್ನು ಅದ್ದಿ ಈ ಬಟ್ಟೆಯಿಂದ ಸೋಂಕು ಇರುವ ಸಂಧಿ ಮತ್ತು ಉಗುರುಗಳ ಸಂಧಿಯಲ್ಲಿ ಹೆಚ್ಚು ನೀರು ಇಳಿಯುವಂತೆ ಒರೆಸಿಕೊಳ್ಳಬೇಕು.

English summary

Quick Ayurvedic Remedies For Toenail Fungal Infection

Like any other parts of the body, keeping up the hygiene of feet is also equally important. Often, we might have heard our parents shouting at us to keep our feet dry, especially during the monsoon season. We hardly realised the need and reasons for it at that point of time. Here are 10 quick Ayurvedic remedies for a toenail fungal infection. Have a look:
Story first published: Thursday, June 2, 2016, 20:26 [IST]
X
Desktop Bottom Promotion