For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ತಲೆನೋವೇ? ಚಿಂತೆ ಬಿಡಿ, ಈ ಜ್ಯೂಸ್ ಕುಡಿಯಿರಿ

By manu
|

ಸಾಮಾನ್ಯವಾದ ತಲೆನೋವೇ ಎಂತೆಂಥವರನ್ನೂ ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಅದರಲ್ಲೂ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಆವರಿಸಿದರಂತೂ ಜೀವನವೇ ಬೇಸರವಾಗುತ್ತದೆ. ಇದು ಯಾವುದೇ ಹೊತ್ತಿನಲ್ಲಿ ಆವರಿಸಬಹುದು. ಇದು ಸಾಮಾನ್ಯಮಟ್ಟದಿಂದ ಹಿಡಿದು ಯೋಚಿಸಲೂ ಅಸಾಧ್ಯವಾಗುವಷ್ಟು ಉಗ್ರರೂಪದಲ್ಲಿರಬಹುದು. ಈ ನೋವಿದ್ದಾಗ ವಾಂತಿ ಬರುವಂತಾಗುವುದು, ವಾಂತಿಯಾಗುವುದು, ಬೆಳಕು ಮತ್ತು ಶಬ್ದಗಳಿಗೆ ತೀರಾ ಸಂವೇದಿಯಾಗುವುದು, ದೃಷ್ಟಿಯ ಕೇಂದ್ರಭಾಗ ಮಾಯವಾಗುವುದು ಮೊದಲಾದವು ಇದರ ಪ್ರಮುಖ ಲಕ್ಷಣಗಳು.

One Drink Recipe To Get Relief From Migraine

ಎಂತೆಂತಹ ಕಾಯಿಲೆಗಳಿಗೆ ಔಷಧ ಕಂಡುಹಿಡಿದಿರುವ ವೈದ್ಯವಿಜ್ಞಾನದ ಬಳಿ ಈ ತಲೆನೋವಿಗೆ ಇದುವರೆಗೆ ಯಾವುದೇ ಸಮರ್ಥವಾದ ಔಷಧವಿಲ್ಲ. ವೈದ್ಯರು ನೀಡುತ್ತಿರುವ ಔಷಧಗಳೇನಿದ್ದರೂ ಈ ನೋವನ್ನು ಕಡಿಮೆ ಮಾಡದೇ ನೋವಿನ ಪ್ರಭಾವದ ಅರಿವಾಗದಂತೆ ಅರವಳಿಕೆ ನೀಡುವುದೇ ಆಗಿದೆ. ಬೆನ್ನುಬಿಡದೇ ಕಾಡುವ ಮೈಗ್ರೇನ್‌ನ 10 ಲಕ್ಷಣಗಳು ಯಾವುದು?

ಆದರೆ ಈ ನೋವನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳು ಲಭ್ಯವಿದ್ದು ಮೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ. ಇದಕ್ಕಾಗಿ ಹೆಚ್ಚು ಕಷ್ಟಪಡಬೇಕಾಗಿಲ್ಲ, ನಿಮ್ಮ ಅಡುಗೆಮನೆಯಲ್ಲಿರುವ ಸರಳ ಸಾಮಾಗ್ರಿಗಳೇ ಸಾಕು. ಅನಾನಾಸು, ಕೇಲ್ ಎಲೆಗಳು, ಹಸಿಶುಂಠಿ, ಸೌತೆ, ಸೆಲೆರಿ ಎಲೆಗಳು ಮತ್ತು ಲಿಂಬೆಹಣ್ಣು ಇಷ್ಟೇ ಸಾಕು. ಇದರ ಪ್ರಮುಖ ಸಾಮಾಗ್ರಿಯಾದ ಅನಾನಸ್ ಹಣ್ಣಿನಲ್ಲಿ ಬ್ರೋಮಿಲೈನ್ ಎಂಬ ಕಿಣ್ವವಿದ್ದು ನೋವನ್ನು ಕಡಿಮೆಗೊಳಿಸುವ ನೈಸರ್ಗಿಕ ಔಷಧಿಯಾಗಿದೆ. ಇನ್ನುಳಿದಂತೆ ಕೇಲ್ ಎಲೆಗಳು, ಸೌತೆ ಮತ್ತು ಸೆಲೆರಿ ಎಲೆಗಳಲ್ಲಿಯೂ ಉರಿಯೂತ ನಿವಾರಕಗಳಿದ್ದು ನೋವು ಕಡಿಮೆಗೊಳಿಸಲು ನೆರವಾಗುತ್ತದೆ.

ಹಸಿಶುಂಠಿ ಮತ್ತು ಲಿಂಬೆರಸಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳಿದ್ದು ವಿಶೇಷವಾಗಿ ಮೆದುಳಿನ ಜೀವಕೋಶಗಳು ಅನುಭವಿಸುತ್ತಿರುವ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಬನ್ನಿ ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: ಮೈಗ್ರೇನ್ ಉಪಶಮನಕ್ಕೆ ಮಾರ್ಗಗಳು

ಅಗತ್ಯವಿರುವ ಸಾಮಾಗ್ರಿಗಳು
*ಅರ್ಧ ಚೆನ್ನಾಗಿ ಹಣ್ಣಾದ ಅನಾನಸ್ ಹಣ್ಣು
*ನಾಲ್ಕರಿಂದ ಐದು ಕೇಲ್ ಎಲೆಗಳು
*ಅರ್ಧ ಇಂಚು ಹಸಿಶುಂಠಿ
*ಅರ್ಧ ಸೌತೆ ಕಾಯಿ
*ಅರ್ಧ ತುಂಡು ಸೆಲೆರಿ ಸೊಪ್ಪಿನ ದಂಟು
*2 ಚಿಕ್ಕ ಚಮಚ ಲಿಂಬೆರಸ

ತಯಾರಿಸುವ ವಿಧಾನ
1) ಅನಾನಸ್ ಹಣ್ಣಿನ ಸಿಪ್ಪೆ ಮತ್ತು ನಡುವಿನ ತಿರುಳು ತೆಗೆದು ಚಿಕ್ಕದಾಗಿ ತುಂಡರಿಸಿ.
2) ಸೌತೆಯನ್ನು ಸಿಪ್ಪೆ ಸಹಿತ ಚಿಕ್ಕದಾಗಿ ತುಂಡರಿಸಿ, ಶುಂಠಿಯನ್ನು ಸಹಾ ಚಿಕ್ಕದಾಗಿ ತುಂಡರಿಸಿ
3) ಅನಾನಸ್, ಸೌತೆ ಮತ್ತು ಶುಂಠಿಯನ್ನು ಜ್ಯೂಸರ್ ನ ಚಿಕ್ಕ ಜಾರ್‌ನಲ್ಲಿ ನುಣ್ಣಗೆ ಕಡೆಯಿರಿ
4) ಬಳಿಕ ಉಳಿದ ಸಾಮಾಗ್ರಿಗಳನ್ನು ಹಾಕಿ ಕೊಂಚ ನುಣ್ಣಗಾಗುವಷ್ಟು ಕಡೆಯಿರಿ. ಅಗತ್ಯ ಕಂಡರೆ ಕೊಂಚ ನೀರು ನೇರಿಸಬಹುದು.
5) ಬಳಿಕ ಇದರಿಂದ ದ್ರವವನ್ನು ಸೋಸಿ ಈ ದ್ರವವನ್ನು ತಕ್ಷಣ ಕುಡಿಯಿರಿ.

ಸೂಚನೆ: ಯಾವುದೇ ತಲೆನೋವಾದರೂ ಪ್ರಾರಂಭದ ಹಂತದಲ್ಲಿದ್ದಾಗ ಔಷಧಿ ತೆಗೆದುಕೊಂಡರೆ ಮಾತ್ರ ಫಲಕಾರಿಯಾಗಿದೆ. ಮೈಗ್ರೇನ್ ಸಹಾ ಅಷ್ಟೇ. ತಲೆನೋವು ಪ್ರಾರಂಭವಾಯಿತು ಎಂದಾಗಲೇ ಕುಡಿದರೆ ಅತ್ಯುತ್ತಮ ಪರಿಣಾಮ ದೊರಕುತ್ತದೆ.

English summary

One Drink Recipe To Get Relief From Migraine

A migraine is an intense, pounding headache that can strike you anywhere and anytime. The severity of pain in this headache disorder can range from mild to severe. This kind of headache is often accompanied by other symptoms like sensitivity to light, nausea, vomiting, etc. So, today at Boldsky, we're going to share with you a recipe of an incredibly simple drink that you can make at the comfort of your own home.
X
Desktop Bottom Promotion