For Quick Alerts
ALLOW NOTIFICATIONS  
For Daily Alerts

'ಹೋಮಿಯೋಪತಿ' ನಿಧಾನವಾದರೂ ಹೆಚ್ಚು ಪವರ್‌ ಫುಲ್ ಚಿಕಿತ್ಸೆ

ಅಲೋಪತಿಯಲ್ಲಿ ಸಂಪೂರ್ಣವಾಗಿ ರಾಸಾಯನಿಕಗಳ ಬಳಕೆಯಾಗುತ್ತದೆ. ಆದರೆ ಹೋಮಿಯೋಪತಿ ಕೊಂಚ ಭಿನ್ನವಾಗಿ ಕೆಲಸ ಮಾಡುತ್ತದೆ... ಕೊಂಚ ನಿಧಾನವಾದರೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ....

By Arshad
|

ಮನುಷ್ಯರನ್ನು ಕಾಡುವಷ್ಟು ಕಾಯಿಲೆಗಳು ಬಹುಶಃ ಬೇರಾವ ಪ್ರಾಣಿಯನ್ನೂ ಕಾಡದಿರಬಹುದು. ಈ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವಿವಿಧ ಕಾಲಮಾನದಲ್ಲಿ ವಿವಿಧ ವೈದ್ಯಪದ್ಧತಿಗಳು ರೂಪುಗೊಂಡಿವೆ. ಭಾರತೀಯ ಆಯುರ್ವೇದ ಚಿಕಿತ್ಸೆ ಇದರಲ್ಲಿ ಅತ್ಯಂತ ಪುರಾತನ ಚಿಕಿತ್ಸಾ ವಿಧಿಯಾಗಿರಬಹುದು. ಆದರೆ ಇಂದಿನ ದಿನಗಳಲ್ಲಿ ಬೇಗನೇ ವಾಸಿಯಾಗುವ ಅಲೋಪತಿಗೇ ಹೆಚ್ಚಿನ ಜನರು ಒಲವು ತೋರುತ್ತಾರೆ.

ಈ ವಿಧಾನ ಕೆಲವು ಅಡ್ಡಪರಿಣಾಮಗಳನ್ನು ಹೊಂದಿದ್ದರೂ ಬೇಗನೇ ಕಾಯಿಲೆ ಗುಣವಾಗುವ ಕಾರಣ ವಿಶ್ವಮಾನ್ಯತೆ ಪಡೆದಿದೆ. ಇದರ ಜೊತೆಜೊತೆಗೇ ಪರಿಚಯಿಸಲ್ಪಟ್ಟ ಕೊಂಚ ಭಿನ್ನವಾದ ಚಿಕಿತ್ಸಾರೂಪವಾದ ಹೋಮಿಯೋಪತಿಯೂ ಅಲೋಪತಿಯಷ್ಟು ಅಲ್ಲದಿದ್ದರೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಆಯುರ್ವೇದ ಸಂಪೂರ್ಣವಾಗಿ ಗಿಡಮೂಲಿಕೆಗಳನ್ನು ಆಧರಿಸಿದ್ದರೆ ಯುನಾನಿಯೂ ಹೆಚ್ಚೂ ಕಡಿಮೆ ಗಿಡಮೂಲಿಕೆ ಮತ್ತು ಇತರ ರಾಸಾಯನಿಕಗಳನ್ನೂ ಬಳಸುತ್ತದೆ. ಅಲೋಪತಿಯಲ್ಲಿ ಸಂಪೂರ್ಣವಾಗಿ ರಾಸಾಯನಿಕಗಳ ಬಳಕೆಯಾಗುತ್ತದೆ. ಆದರೆ ಹೋಮಿಯೋಪತಿ ಕೊಂಚ ಭಿನ್ನವಾಗಿ ಕೆಲಸ ಮಾಡುತ್ತದೆ. ಹೋಮಿಯೋಪತಿ ಬಗ್ಗೆ ಕೆಲ ಮುನ್ನೆಚ್ಚರಿಕೆಗಳು

ಉದಾಹರಣೆಗೆ ತುರಿಕೆ ಇದ್ದ ಸ್ಥಳದಲ್ಲಿ ಇನ್ನಷ್ಟು ತುರಿಕೆ ಹೆಚ್ಚಿಸುವ ತುರಿಕೆಪುಡಿ ಬಳಸಿದರೆ ಹೇಗೆ? ಈಗ ದೇಹ ತನ್ನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಈ ತುರಿಕೆಯನ್ನು ಹತ್ತಿಕ್ಕುತ್ತದೆ. ಈ ವಿಧಾನವೇ ಹೋಮಿಯೋಪತಿಯ ಜೀವಾಳ. ಇದು ಒಂದು ಸ್ಥೂಲಪರಿಚಯವಷ್ಟೇ. ಹೋಮಿಯಪತಿಯಲ್ಲಿ ಇನ್ನೂ ಹಲವಾರು ಅಚ್ಚರಿಯ ವಿಷಯಗಳಿವೆ.... ಮುಂದೆ ಓದಿ....

ಮಾಹಿತಿ #1

ಮಾಹಿತಿ #1

ರೋಗದ ಗುಣಲಕ್ಷಣಗಳನ್ನು ಕಂಡುಕೊಂಡು ಇದಕ್ಕೆ ದೇಹವೇ ತನ್ನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಈ ತೊಂದರೆಯಿಂದ ಬಿಡುಗಡೆಗೊಳ್ಳಲು ಪ್ರಚೋದನೆ ನೀಡುವುದೇ ಹೋಮಿಯೋಪತಿಯ ಮುಖ್ಯ ಲಕ್ಷಣ.

ಮಾಹಿತಿ #2

ಮಾಹಿತಿ #2

ಹೆಚ್ಚಿನ ಹೋಮಿಯೋಪತಿ ಔಷಧಿಗಳಲ್ಲಿ ಒಂದು ನಿರ್ದಿಷ್ಟ ಕಾಯಿಲೆಗೆ ಮಾತವಲ್ಲದೇ ಇತರ ಕಾಯಿಲೆಗಳಿಗೂ ದೇಹವನ್ನು ಎದುರಿಸಲು ಸಜ್ಜುಗೊಳಿಸುತ್ತದೆ. ಅಂದರೆ ಒಂದೇ ಔಷಧಿಯ ಮೂಲಕ ಹಲವು ಕಾಯಿಲೆಗಳ ವಿರುದ್ಧ ದೇಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ.

ಮಾಹಿತಿ #3

ಮಾಹಿತಿ #3

ಸಾಮಾನ್ಯವಾಗಿ ಆಯುರ್ವೇದದಂತೆಯೇ ಹೋಮಿಯೋಪತಿಯನ್ನೂ ಜನರು 'ನಿಧಾನವಾಗಿ ಗುಣಪಡಿಸುತ್ತದೆ' ಎಂದು ದೂರುತ್ತಾರೆ. ಆದರೆ ವಾಸ್ತವದಲ್ಲಿ ಚರ್ಮರೋಗಗಳಾದ ಎಕ್ಸಿಮಾ, ಮೂಳೆಗಳಲ್ಲಿ ನೋವು ನೀಡುವ ಸಂಧಿವಾತ, ಅಸ್ತಮಾ ಮೊದಲಾದ ರೋಗಗಳು ಬೇರೆಯ ವಿಧಾನಕ್ಕಿಂತಲೂ ಬೇಗನೇ ಗುಣವಾಗಿರುವುದು ಖಚಿತವಾಗಿದೆ.

ಮಾಹಿತಿ #4

ಮಾಹಿತಿ #4

ಹೋಮಿಯೋಪತಿ ಕೇವಲ ಕೆಲವು ಚಿಕ್ಕಪುಟ್ಟ ರೋಗಗಳಿಗೆ ಮಾತ್ರ ಎಂದು ಹೆಚ್ಚಿನವರು ಬಲವಾಗಿ ನಂಬಿದ್ದಾರೆ. ಆದರೆ ಕೆಲವು ಪ್ರಮುಖ ರೋಗಗಳಾದ ನ್ಯುಮೋನಿಯಾ, ಟಾನ್ಸಿಲೈಟಿಸ್, ಹೆಪಟೈಟಿಸ್, ಸೈಸುನೈಟಿಸ್ ಮೊದಲಾದವುಗಳಿಗೆ ಇತರ ವಿಧಾನಕ್ಕಿಂತಲೂ ಉತ್ತಮವಾದ ಪರಿಣಾಮ ನೀಡಿದೆ.

ಮಾಹಿತಿ #5

ಮಾಹಿತಿ #5

ಕೆಲವು ಸೋಂಕುಕಾರಕ ರೋಗಗಳ ಚಿಕಿತ್ಸೆಯಲ್ಲಿ ಹೋಮಿಯೋಪತಿ ವಿಧಾನವೇ ಹೆಚ್ಚು ಸೂಕ್ತ ಎಂದು ಕೆಲವಾರು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಏಕೆಂದರೆ ಈ ವಿಧಾನದಲ್ಲಿ ಅತಿ ಸೂಕ್ಷ್ಮ ಕೀಟಾಣುಗಳನ್ನು ಔಷಧಿಗಳು ನಾಶಪಡಿಸುವುದರ ಬದಲು ದೇಹವೇ ಈ ರೋಗಾಣುಗಳನ್ನು ಸದೆಬಡಿಯಲು ಸಜ್ಜಾಗುವಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮುಂದೆ ಈ ರೋಗ ಬರದೇ ಇರಲು ಸಾಧ್ಯವಿದೆ.

ಮಾಹಿತಿ #6

ಮಾಹಿತಿ #6

ವೈದ್ಯರು ಔಷಧಿ ಎಂದು ಹೇಳಿ ನೀರನ್ನು ಕುಡಿಸಿದರೂ ಕೆಲವು ರೋಗಿಗಳಿಗೆ ಇದರಿಂದಲೇ ಗುಣವಾಗಿದೆ. ಏಕೆಂದರೆ ವೈದ್ಯರು ಕೊಟ್ಟಿದ್ದು ನಿಜವಾದ ಔಷಧಿಯೇ ಎಂದು ಮೆದುಳಿಗೆ ಕಟ್ಟಪ್ಪಣೆ ನೀಡಿರುವ ಕಾರಣ ಮೆದುಳು ರೋಗವನ್ನು ಒಳಗಿನಿಂದ ವಾಸಿಯಾಗಿಸಲು ಶ್ರಮಪಡುವ ಕಾರಣ ರೋಗ ನಿವಾರಣೆಯಾಗುತ್ತದೆ. ಇದಕ್ಕೆ ವೈದ್ಯರ ಕೈಗುಣ ಎಂದು ಜನರು ಕರೆಯುತ್ತಾರೆ.

ಮಾಹಿತಿ #6

ಮಾಹಿತಿ #6

"faith healing" ಅಥವಾ placebo effect ಎಂದು ಕರೆಯುವ ಈ ನಂಬಿಕೆಯೇ ಹೋಮಿಯೋಪತಿಯಲ್ಲಿಯೂ ಕೆಲಸ ಮಾಡುತ್ತದೆ ಎಂದು ಹೆಚ್ಚಿನವರು ಅಭಿಪ್ರಾಯ ಹೊಂದಿದ್ದಾರೆ. ಆದರೆ ವಾಸ್ತವವಾಗಿ ಹೋಮಿಯೋಪತಿ ಔಷಧಿಗಳು ಅಪಾರ ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ಸಿದ್ಧ ಪಡಿಸಿದ್ದೇ ಆಗಿದ್ದು ಇವು ನಿಜಕ್ಕೂ ಕಾಯಿಲೆ ವಾಸಿ ಮಾಡುವ ಔಷಧಿಗಳೇ ಆಗಿವೆ.

ಮಾಹಿತಿ #7

ಮಾಹಿತಿ #7

ಇನ್ನೊಂದು ಅತ್ಯಂತ ಪ್ರಮುಖ ಅಂಶವೆಂದರೆ ಹೋಮಿಯೋಪತಿ ಪದ್ಧತಿಯಲ್ಲಿ ಯಾವುದೇ ಅಡ್ಡಪರಿಣಾಮವಿರುವುದಿಲ್ಲ. ಏಕೆಂದರೆ ಈ ಔಷಧಿಗಳು ಬಹುತೇಕ ಸಸ್ಯಜನ್ಯವಾಗಿದ್ದು ಉಳಿದಂತೆ ಖನಿಜಗಳು ಮತ್ತು ನೈಸರ್ಗಿಕ ವಸ್ತುಗಳಿಂದಲೇ ತಯಾರಿಸಲ್ಪಟ್ಟಿವೆ. ಅಲ್ಲದೇ ಇವುಗಳ ಪ್ರಯೋಗದಲ್ಲಿಯೂ ಯಾವುದೇ ಪ್ರಾಣಿಗಳನ್ನು ಕೊಲ್ಲಲಾಗುವುದಿಲ್ಲ.

English summary

Interesting Facts You Never Knew About Homeopathy

Humans have invented various forms of medical sciences in an effort to find the best possible treatment for our ailments. Homeopathy is one such form of alternate medicine and there are a few interesting facts on homeopathy you must know. So, here are a few unknown facts about homeopathy that you must know, have a look.
X
Desktop Bottom Promotion